ಎಸ್ತೇರಳು 10:3 - ಕನ್ನಡ ಸಮಕಾಲಿಕ ಅನುವಾದ3 ಯೆಹೂದ್ಯನಾದ ಮೊರ್ದೆಕೈ ಅರಸನಾದ ಅಹಷ್ವೇರೋಷನಿಗೆ ಎರಡನೆಯವನೂ ಯೆಹೂದ್ಯರಲ್ಲಿ ಸನ್ಮಾನಿತನೂ ತನ್ನ ಸಹೋದರರ ಸಮೂಹದಲ್ಲಿ ಹೆಚ್ಚಿನ ಗೌರವ ಪಾತ್ರನೂ ತನ್ನ ಜನರ ಹಿತಚಿಂತಕನೂ ತನ್ನ ಸಂತಾನದವರಿಗೆ ಕ್ಷೇಮಾಭಿವೃದ್ಧಿಯನ್ನು ಮಾತನಾಡುವವನೂ ಆಗಿದ್ದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಯೆಹೂದ್ಯನಾದ ಮೊರ್ದೆಕೈಯಾದರೋ ರಾಜ್ಯದಲ್ಲಿ ಅರಸನಾದ ಅಹಷ್ವೇರೋಷನ ದ್ವಿತೀಯ ಸ್ಥಾನದವನೂ, ಯೆಹೂದ್ಯರಲ್ಲಿ ಸನ್ಮಾನಿತನೂ, ತನ್ನ ಬಂಧುಬಳಗಕ್ಕೆ ಪ್ರೀತಿಪಾತ್ರನೂ, ಸ್ವಜನರ ಹಿತಚಿಂತಕನೂ ಮತ್ತು ಸ್ವಕುಲದವರೆಲ್ಲರಿಗೂ ಶಾಂತಿದೂತನೂ, ಪ್ರಾರ್ಥನಾಪರನೂ ಆಗಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಯೆಹೂದ್ಯನಾದ ಮೊರ್ದೆಕೈಯಾದರೋ ಅರಸ ಅಹಷ್ವೇರೋಷನಿಗೆ ದ್ವಿತೀಯಸ್ಥಾನದವನೂ ಯೆಹೂದ್ಯರಲ್ಲಿ ಸನ್ಮಾನಿತನೂ ತನ್ನ ಬಂಧುಬಳಗದವರಲ್ಲಿ ಪ್ರೀತಿಪಾತ್ರನೂ ಸ್ವಜನರ ಹಿತಚಿಂತಕನೂ ಸ್ವಕುಲದವರೆಲ್ಲರಿಗೆ ಶಾಂತಿದೂತನೂ ಆಗಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಯೆಹೂದ್ಯನಾದ ಆ ಮೊರ್ದೆಕೈಯಾದರೋ ರಾಜ್ಯದಲ್ಲಿ ಅರಸನಾದ ಅಹಷ್ವೇರೋಷನಿಗೆ ದ್ವಿತೀಯಸ್ಥಾನದವನೂ ಯೆಹೂದ್ಯರಲ್ಲಿ ಸನ್ಮಾನಿತನೂ ತನ್ನ ಬಂಧುಜನ ಸಮೂಹಕ್ಕೆ ಪ್ರೀತಿಪಾತ್ರನೂ ಸ್ವಜನರ ಹಿತಚಿಂತಕನೂ ಸ್ವಕುಲದವರೆಲ್ಲರಿಗೋಸ್ಕರ ಸುಖಪ್ರಾರ್ಥನಾಪರನೂ ಆಗಿದ್ದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಅರಸನ ನಂತರ ರಾಜ್ಯದಲ್ಲಿ ಯೆಹೂದಿಯಾದ ಮೊರ್ದೆಕೈಯೇ ಮುಖ್ಯ ವ್ಯಕ್ತಿಯಾಗಿದ್ದನು. ರಾಜ್ಯದಲ್ಲಿ ಅವನಿಗೆ ಎರಡನೇ ಸ್ಥಾನವಿತ್ತು. ಯೆಹೂದ್ಯರೊಳಗೆ ಅವನು ಪ್ರಮುಖ ವ್ಯಕ್ತಿಯಾಗಿದ್ದನು. ಯೆಹೂದ್ಯರೆಲ್ಲರೂ ಅವನನ್ನು ಬಹಳವಾಗಿ ಗೌರವಿಸುತ್ತಿದ್ದರು. ತನ್ನ ಜನರ ಒಳಿತಿಗಾಗಿ (ಜನರಿಗೋಸ್ಕರವಾಗಿ) ಮೊರ್ದೆಕೈ ಬಹಳವಾಗಿ ಪ್ರಯಾಸಪಟ್ಟಿದ್ದರಿಂದ ಜನರು ಅವನನ್ನು ಸನ್ಮಾನಿಸಿದರು; ಮೊರ್ದೆಕೈ ಯೆಹೂದ್ಯರೆಲ್ಲರಿಗೆ ಸಮಾಧಾನವನ್ನು ತಂದನು. ಅಧ್ಯಾಯವನ್ನು ನೋಡಿ |
ಈಗ ನೀನು ಅರ್ಥಗಳನ್ನು ವಿವರಿಸಿ, ಕಷ್ಟಕರವಾದ ಸಮಸ್ಯೆಗಳನ್ನು ಬಗೆಹರಿಸಲು ಸಮರ್ಥನೆಂದು ನಾನು ನಿನ್ನ ವಿಷಯವಾಗಿ ಕೇಳಿದ್ದೇನೆ. ಹೀಗಾದರೆ ಈ ಬರಹವನ್ನು ಓದುವುದಕ್ಕೂ, ಅದರ ಅರ್ಥವನ್ನು ತಿಳಿಸುವುದಕ್ಕೂ ನಿನ್ನಿಂದ ಸಾಧ್ಯವಾದರೆ, ನಿನಗೆ ಧೂಮ್ರವಸ್ತ್ರವನ್ನು ಹೊದಿಸಿ, ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ರಾಜ್ಯದ ಮೂರನೆಯ ಅಧಿಕಾರಿಯನ್ನಾಗಿ ನೇಮಿಸುವೆನು,” ಎಂದು ಹೇಳಿದನು.