ಎಸ್ತೇರಳು 10:2 - ಕನ್ನಡ ಸಮಕಾಲಿಕ ಅನುವಾದ2 ಅವನ ಅಧಿಕಾರದ ಕ್ರಿಯೆಗಳೂ ಅವನ ಪರಾಕ್ರಮವೂ ಅರಸನು ಮೊರ್ದೆಕೈಯನ್ನು ಹೆಚ್ಚಿಸಿದ ಮಹತ್ತಿನ ಪ್ರಸಿದ್ಧಿಯೂ ಮೇದ್ಯ ಮತ್ತು ಪಾರಸಿಯ ಅರಸರ ಇತಿಹಾಸಗಳ ಗ್ರಂಥದಲ್ಲಿ ಬರೆದಿರುತ್ತವೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಅವನ ಬಲ ಪ್ರತಾಪಯುಕ್ತವಾದ ಕೃತ್ಯಗಳೂ, ಅವನ ಅನುಗ್ರಹದಿಂದ ಮೊರ್ದೆಕೈಗೆ ಪ್ರಾಪ್ತವಾದ ದೊಡ್ಡಸ್ತಿಕೆಯ ವಿವರಗಳು ಮೇದ್ಯ ಮತ್ತು ಪಾರಸಿಯ ರಾಜಕಾಲ ವೃತ್ತಾಂತಗ್ರಂಥದಲ್ಲಿ ಬರೆದಿರುತ್ತವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ಅವನ ಶಕ್ತಿಸಾಮರ್ಥ್ಯದ ಸಾಹಸಕಾರ್ಯಗಳೆಲ್ಲವು ಹಾಗೂ ಅರಸನು ಮೊರ್ದೆಕೈಯನ್ನು ಅತ್ಯುನ್ನತ ಗೌರವಸ್ಥಾನಕ್ಕೆ ಏರಿಸಿದ್ದನ್ನು ಕುರಿತ ಪೂರ್ಣ ವಿವರವು ಮೇದ್ಯ ಮತ್ತು ಪರ್ಷಿಯ ದೇಶಗಳ ಅರಸರ ವೃತ್ತಾಂತಗ್ರಂಥದಲ್ಲಿ ಬರೆಯಲಾಗಿವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಅವನ ಬಲ ಪ್ರತಾಪಯುಕ್ತವಾದ ಕೃತ್ಯಗಳೂ ಅವನ ಅನುಗ್ರಹದಿಂದ ಮೊರ್ದೆಕೈಗೆ ಪ್ರಾಪ್ತವಾದ ದೊಡ್ಡಸ್ತಿಕೆಯ ವಿವರವೂ ಮೇದ್ಯ ಮತ್ತು ಪಾರಸಿಯ ರಾಜಕಾಲ ವೃತ್ತಾಂತಗ್ರಂಥದಲ್ಲಿ ಬರೆದಿರುತ್ತವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 ಅಹಷ್ವೇರೋಷ್ ಅರಸನು ಮಾಡಿದ ಎಲ್ಲಾ ಮಹತ್ಕಾರ್ಯಗಳೂ ಕೃತ್ಯಗಳೂ ಮೇದ್ಯ, ಪರ್ಶಿಯ ಅರಸರ ರಾಜಕಾಲವೃತ್ತಾಂತ ಪುಸ್ತಕಗಳಲ್ಲಿ ಬರೆಯಲ್ಪಟ್ಟಿರುತ್ತವೆ; ಮೊರ್ದೆಕೈ ಮಾಡಿದ ವಿಷಯಗಳ ಬಗ್ಗೆಯೂ ಬರೆಯಲ್ಪಟ್ಟಿದೆ. ಮೊರ್ದೆಕೈಯನ್ನು ಅರಸನು ಬಹು ದೊಡ್ಡ ಪ್ರಭಾವಶಾಲಿ ವ್ಯಕ್ತಿಯನ್ನಾಗಿ ಮಾಡಿದನು. ಅಧ್ಯಾಯವನ್ನು ನೋಡಿ |