Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 6:19 - ಕನ್ನಡ ಸಮಕಾಲಿಕ ಅನುವಾದ

19 ನಾನು ಬಾಯಿ ತೆರೆಯುವಾಗ ಸುವಾರ್ತೆಯ ರಹಸ್ಯವನ್ನು ಧೈರ್ಯವಾಗಿ ತಿಳಿಯಪಡಿಸುವುದಕ್ಕೆ ಮಾತನ್ನು ನನಗೆ ದಯಪಾಲಿಸಬೇಕೆಂದು ಪ್ರಾರ್ಥಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ನಾನು ಮಾತನಾಡಲು ಬಾಯಿ ತೆರೆಯುವಾಗ ಪೂರ್ವಕಾಲದಲ್ಲಿ ಗುಪ್ತವಾಗಿದ್ದ ಸುವಾರ್ತಾಸತ್ಯಗಳನ್ನು ಭಯವಿಲ್ಲದೆ ತಿಳಿಸುವುದಕ್ಕೆ ಬೇಕಾದ ಮಾತುಗಳನ್ನು ದೇವರು ನನಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಶುಭಸಂದೇಶದ ಸತ್ಯಾರ್ಥವನ್ನು ನಿರ್ಭೀತನಾಗಿ ಸಾರಲು ಸೂಕ್ಷ್ಮವಾದ ಮಾತುಗಳನ್ನು ದೇವರು ನನಗೆ ದಯಪಾಲಿಸಲೆಂದು ನನಗೋಸ್ಕರ ಪ್ರಾರ್ಥಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ನನಗೋಸ್ಕರ ಸಹ ಪ್ರಾರ್ಥನೆಮಾಡಿರಿ. ನಾನು ಬಾಯಿ ತೆರೆಯುವಾಗ ಪೂರ್ವಕಾಲದಲ್ಲಿ ಗುಪ್ತವಾಗಿದ್ದ ಸುವಾರ್ತಾಸತ್ಯಾರ್ಥವನ್ನು ಭಯವಿಲ್ಲದೆ ತಿಳಿಸುವದಕ್ಕೆ ಬೇಕಾದ ಮಾತನ್ನು ದೇವರು ನನಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಅಲ್ಲದೆ ನನಗಾಗಿಯೂ ಪ್ರಾರ್ಥಿಸಿರಿ. ನಾನು ಮಾತಾಡುವಾಗ ಸುವಾರ್ತೆಯ ರಹಸ್ಯಸತ್ಯವನ್ನು ನಿರ್ಭಯದಿಂದ ತಿಳಿಸಲು ಬೇಕಾದ ಮಾತನ್ನು ದೇವರು ನನಗೆ ಅನುಗ್ರಹಿಸುವಂತೆ ಪ್ರಾರ್ಥಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

19 ಅನಿ ಮಾಜ್ಯಾ ಸಾಟ್ನಿಬಿ ಮಾಗ್ನೆ ಕರಾ, ಮಿಯಾ ಬೊಲ್ತಾನಾ ಬರ್‍ಯಾ ಖಬ್ರಿಯಾಂಚ್ಯಾ ಗುಟ್ಟಾಚೆ ಖರೆಪಾನ್ ಬಿಂಯೆ ನಸ್ತಾನಾ ಕಳ್ವುಕ್ ಪಾಜೆ ಹೊಲ್ಲೆ ಬೊಲ್ನೆ ದೆವಾಕ್ನಾ ಮಾಕಾ ಗಾಯ್ ಸಾರ್ಕೆ ಮಾಗ್ನೆ ಕರಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 6:19
34 ತಿಳಿವುಗಳ ಹೋಲಿಕೆ  

ನಾವು ಕ್ರಿಸ್ತ ಯೇಸುವಿನ ರಹಸ್ಯವನ್ನು ಮಾತನಾಡುವಂತೆ ದೇವರು ನಮ್ಮ ಸಂದೇಶಕ್ಕೆ ಬಾಗಿಲನ್ನು ತೆರೆಯುವಂತೆ ನಮಗೋಸ್ಕರವೂ ಪ್ರಾರ್ಥಿಸಿರಿ. ಈ ಸೇವೆಗಾಗಿಯೇ ನಾನು ಸೆರೆಯಲ್ಲಿದ್ದೇನಲ್ಲಾ.


ಕರ್ತದೇವರೇ, ಈಗ ಅವರ ಬೆದರಿಕೆಯನ್ನು ನೋಡಿರಿ; ಬಹುಧೈರ್ಯದಿಂದ ನಿಮ್ಮ ವಾಕ್ಯವನ್ನು ಹೇಳಲು ನಿಮ್ಮ ಸೇವಕರನ್ನು ಬಲಪಡಿಸಿರಿ.


ಕೊನೆಯದಾಗಿ ಪ್ರಿಯರೇ, ಕರ್ತ ಯೇಸುವಿನ ವಾಕ್ಯವು ನಿಮ್ಮಲ್ಲಿ ಹಬ್ಬಿದಂತೆ ಎಲ್ಲ ಕಡೆಗಳಲ್ಲಿಯೂ ಅತಿವೇಗದಿಂದ ಹಬ್ಬಿ ಹರಡುವಂತೆ ನಮಗಾಗಿ ಬೇಡಿಕೊಳ್ಳಿರಿ.


ಪ್ರಿಯರೇ, ನಮಗಾಗಿ ಪ್ರಾರ್ಥಿಸಿರಿ.


ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಶುದ್ಧಮನಸ್ಸಾಕ್ಷಿಯಿಂದ ಪ್ರತಿಯೊಂದರಲ್ಲಿಯೂ ಪ್ರಾಮಾಣಿಕವಾಗಿ ಇರಲು ಬಯಸುತ್ತೇವೆ.


ಹೀಗೆ ಪ್ರಾರ್ಥನೆ ಮಾಡಿದ ತರುವಾಯ ಅವರು ನೆರೆದಿದ್ದ ಸ್ಥಳವು ಕಂಪನಗೊಂಡಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ಧೈರ್ಯದಿಂದ ದೇವರ ವಾಕ್ಯವನ್ನು ಸಾರತೊಡಗಿದರು.


ಫಿಲಿಪ್ಪಿ ಪಟ್ಟಣದಲ್ಲಿ ಮುಂಚೆ ನಮಗೆ ಹಿಂಸೆ ಮತ್ತು ಅವಮಾನವು ಸಂಭವಿಸಿದ್ದನ್ನು ನೀವು ಬಲ್ಲಿರಿ. ಹಾಗಿದ್ದರೂ ನಾವು ನಮ್ಮ ದೇವರ ಸಹಾಯದಿಂದ ಧೈರ್ಯಗೊಂಡು ಬಹು ವಿರೋಧದ ನಡುವೆ ನಿಮಗೆ ಸುವಾರ್ತೆಯನ್ನು ತಿಳಿಸಿದೆವು.


ಹೇಗೆ ನೀವು ವಿಶ್ವಾಸ, ವಾಕ್ಚಾತುರ್ಯ, ತಿಳುವಳಿಕೆ, ಉತ್ಸಾಹ ಹಾಗೂ ನಮ್ಮ ಮೇಲೆ ನಿಮಗಿರುವ ಪ್ರೀತಿ, ಇವೆಲ್ಲವುಗಳಲ್ಲಿ ನೀವು ಸಮೃದ್ಧರಾಗಿದ್ದಂತೆ, ಈ ದಾನವೆಂಬ ಕೃಪಾಕಾರ್ಯದಲ್ಲಿಯೂ ಸಮೃದ್ಧರಾಗಿರಿ.


ದೇವರು ಕ್ರಿಸ್ತನಲ್ಲಿ ಉದ್ದೇಶಮಾಡಿಕೊಂಡ ತಮ್ಮ ಚಿತ್ತದ ರಹಸ್ಯವನ್ನು ಸಂತೋಷದಿಂದ ನಮಗೆ ಪ್ರಕಟಿಸಿದರು,


ಆದ್ದರಿಂದ ನೀವು ಈ ರೀತಿಯಾಗಿ ನಮ್ಮನ್ನು ಪರಿಗಣಿಸಬೇಕು: ನಾವು ಕ್ರಿಸ್ತ ಯೇಸುವಿನ ದಾಸರೆಂತಲೂ ದೇವರ ರಹಸ್ಯಗಳ ನಂಬಿಗಸ್ತ ನಿರ್ವಾಹಕರೆಂದೂ ಪರಿಗಣಿಸಿರಿ.


ಅವನು ಧೈರ್ಯದಿಂದ ಯಾವ ಅಡ್ಡಿ ಆತಂಕಗಳಿಲ್ಲದೇ ದೇವರ ರಾಜ್ಯವನ್ನು ಪ್ರಕಟಿಸುತ್ತಾ, ಕರ್ತ ಆಗಿರುವ ಯೇಸುಕ್ರಿಸ್ತರ ವಿಷಯವಾಗಿ ಉಪದೇಶ ಮಾಡುತ್ತಾ ಇದ್ದನು.


ಪೌಲನು ಸಭಾಮಂದಿರದೊಳಗೆ ಪ್ರವೇಶಿಸಿದನು. ಅಲ್ಲಿ ಮೂರು ತಿಂಗಳುಗಳ ಕಾಲ, ಧೈರ್ಯವಾಗಿ ಬೋಧನೆ ಮಾಡಿದನು. ದೇವರ ರಾಜ್ಯದ ಬಗ್ಗೆ ಅವರೊಡನೆ ಮನವೊಲಿಸುವಂತೆ ಚರ್ಚಿಸಿದನು.


ಆಗ ಪೌಲ, ಬಾರ್ನಬರು ಧೈರ್ಯದಿಂದ ಅವರಿಗೆ ಉತ್ತರಕೊಟ್ಟರು: “ದೇವರ ವಾಕ್ಯವನ್ನು ನಾವು ಮೊದಲು ನಿಮಗೆ ಹೇಳುವುದು ಅವಶ್ಯವಾಗಿತ್ತು. ಆದರೆ ನೀವು ಅದನ್ನು ತಳ್ಳಿಬಿಟ್ಟಿದ್ದರಿಂದಲೂ ನಿತ್ಯಜೀವಕ್ಕೆ ನೀವು ಅಯೋಗ್ಯರೆಂದು ತೀರ್ಮಾನಿಸಿಕೊಂಡಿದ್ದೀರಿ. ಆದುದರಿಂದ ಇಗೋ, ನಾವೀಗ ಯೆಹೂದ್ಯರಲ್ಲದ ಜನರ ಬಳಿಗೆ ಹೋಗುತ್ತೇವೆ.


ಇದಲ್ಲದೆ: ನಿಮ್ಮ ಪ್ರಾರ್ಥನೆಯ ದೆಸೆಯಿಂದ ನಾನು ಪುನಃ ನಿಮ್ಮ ಬಳಿಗೆ ಬರುತ್ತೇನೆಂದು ನನಗೆ ನಿರೀಕ್ಷೆ ಇರುವುದು. ಆದಕಾರಣ ನನಗಾಗಿ ಒಂದು ಅತಿಥಿ ಕೊಠಡಿಯನ್ನು ಸಿದ್ಧಮಾಡು.


ಅವರು ಹೃದಯದಲ್ಲಿ ಉತ್ತೇಜನಗೊಂಡು, ಪ್ರೀತಿಯಲ್ಲಿ ಒಂದಾಗಿ, ದೇವರ ರಹಸ್ಯವಾಗಿರುವ ಕ್ರಿಸ್ತ ಯೇಸುವನ್ನು ತಿಳಿದುಕೊಳ್ಳುವಂತೆ ಪೂರ್ಣಜ್ಞಾನದ ಸರ್ವ ಐಶ್ವರ್ಯವನ್ನು ದೃಢವಾಗಿ ಹೊಂದಬೇಕೆಂಬುದೇ ನನ್ನ ಗುರಿಯಾಗಿದೆ.


ಇಂಥಾ ನಿರೀಕ್ಷೆಯು ನಮಗಿರುವುದರಿಂದ ನಾವು ಬಹಳ ಧೈರ್ಯಶಾಲಿಗಳಾಗಿದ್ದೇವೆ.


ನೀವು ಕ್ರಿಸ್ತ ಯೇಸುವಿನಲ್ಲಿ ಜ್ಞಾನದಲ್ಲಿಯೂ ಮಾತುಗಳಲ್ಲಿಯೂ ಎಲ್ಲಾ ಸಮೃದ್ಧಿಯನ್ನು ಹೊಂದಿದ್ದೀರಿ.


ಆದ್ದರಿಂದ ಪೌಲ ಬಾರ್ನಬರು ಅಲ್ಲಿ ಬಹಳ ಸಮಯವಿದ್ದು ಕರ್ತ ಯೇಸುವಿನ ವಿಷಯದಲ್ಲಿ ಧೈರ್ಯದಿಂದ ಮಾತನಾಡುತ್ತಿದ್ದರು. ಆದ್ದರಿಂದ ಕರ್ತ ಯೇಸು ಅವರ ಕೈಗಳಿಂದ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡುವ ಶಕ್ತಿಯನ್ನು ಕೊಟ್ಟು ತಮ್ಮ ಕೃಪಾವಾಕ್ಯವನ್ನು ಖಚಿತಪಡಿಸಿದರು.


ಬಾರ್ನಬನು ಅವನನ್ನು ಕರೆದುಕೊಂಡು ಅಪೊಸ್ತಲರ ಬಳಿಗೆ ಬಂದನು. ಸೌಲನು ಪ್ರಯಾಣ ಮಾಡುತ್ತಿದ್ದಾಗ ಅವನಿಗೆ ಕರ್ತ ಯೇಸು ದರ್ಶನವಾದದ್ದನ್ನೂ ಕರ್ತ ಯೇಸು ಅವನೊಂದಿಗೆ ಮಾತನಾಡಿದ್ದನ್ನೂ ಯಾವ ಭಯವಿಲ್ಲದೆ ದಮಸ್ಕದಲ್ಲಿ ಯೇಸುವಿನ ಹೆಸರಿನಲ್ಲಿ ಅವನು ಬೋಧಿಸಿದ್ದನ್ನೂ ಬಾರ್ನಬನು ತಿಳಿಸಿದನು.


ಎಲ್ಲಾ ಪ್ರಶ್ನೆಗಳಿಂದ ಹೆಚ್ಚಾಗಿ ದೈವ ಭಕ್ತಿಯ ರಹಸ್ಯವು ದೊಡ್ಡದಾದದ್ದು ಅದು ಯಾವುದೆಂದರೆ: “ದೇವರು ಮನುಷ್ಯ ರೂಪದಲ್ಲಿ ಪ್ರತ್ಯಕ್ಷರಾದರು. ಆತ್ಮದಲ್ಲಿ ರುಜುಪಡಿಸಲಾದರು. ದೂತರಿಗೆ ಕಾಣಿಸಿಕೊಂಡರು, ಯೆಹೂದ್ಯರಲ್ಲದವರಿಗೆ ಸಾರಲಾದರು, ಲೋಕದಲ್ಲಿ ನಂಬಲಾದರು, ಮಹಿಮೆಗೆ ಒಯ್ಯಲಾದರು!”


ನಿಮ್ಮ ಮೇಲೆ ನನಗೆ ಪರಿಪೂರ್ಣ ಭರವಸೆ ಇದೆ. ನಿಮ್ಮ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ನಾನು ಬಹಳವಾಗಿ ಪ್ರೋತ್ಸಾಹ ಹೊಂದಿ, ನಮಗೆ ಬಂದಿದ್ದ ಎಲ್ಲಾ ಸಂಕಟಗಳಲ್ಲಿ ನಾವು ನಿಮ್ಮಿಂದ ಮಿತಿಯಿಲ್ಲದಷ್ಟು ಆನಂದಪಡುತ್ತಿದ್ದೇನೆ.


ನೀವು ನಿಮ್ಮ ಪ್ರಾರ್ಥನೆಯಿಂದ ನಮಗೆ ಸಹಾಯಮಾಡಿರಿ. ಹೀಗೆ, ಬಹಳ ಜನರ ಪ್ರಾರ್ಥನೆಗಳಿಗೆ ಉತ್ತರವಾಗಿ ನಮಗೆ ದೊರಕಿದ ಕೃಪೆಯ ಮೆಚ್ಚುಗೆಗಾಗಿ, ಅನೇಕರು ನಮ್ಮ ಪರವಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವರು.


ನಾವು ದೇವರ ರಹಸ್ಯ ಜ್ಞಾನವನ್ನು ಕುರಿತು ಮಾತನಾಡುತ್ತೇವೆ. ಅದು ದೇವರು ನಮ್ಮ ಮಹಿಮೆಗಾಗಿ ಯುಗಗಳ ಮುಂಚೆಯೇ ನೇಮಿಸಿ, ಮರೆಮಾಡಿದ ಜ್ಞಾನವೇ ಆಗಿರುತ್ತದೆ.


ಪ್ರಿಯರೇ, ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕವಾಗಿಯೂ ಪವಿತ್ರಾತ್ಮರ ಪ್ರೀತಿಯ ಮೂಲಕವಾಗಿಯೂ ನಾನು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನನಗೋಸ್ಕರ ದೇವರಲ್ಲಿ ಪ್ರಾರ್ಥಿಸಿ, ನನ್ನೊಂದಿಗೆ ಹೋರಾಡಿರಿ.


ಇವನು ಸಭಾಮಂದಿರದಲ್ಲಿ ಧೈರ್ಯದಿಂದ ಬೋಧಿಸಲು ಪ್ರಾರಂಭಿಸಿದನು. ಆಗ ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಅವನು ಮಾತನಾಡುವುದನ್ನು ಕೇಳಿ, ಅವನನ್ನು ತಮ್ಮ ಮನೆಗೆ ಆಮಂತ್ರಿಸಿದರು. ಅವರು ದೇವರ ಮಾರ್ಗವನ್ನು ಇನ್ನೂ ಹೆಚ್ಚಾದ ರೀತಿಯಲ್ಲಿ ಅಪೊಲ್ಲೋಸನಿಗೆ ವಿವರಿಸಿ ಹೇಳಿದರು.


ಪೇತ್ರ, ಯೋಹಾನರ ಧೈರ್ಯವನ್ನು ಅವರು ಕಂಡಾಗ, ಇವರು ವಿದ್ಯೆ ಕಲಿಯದ ಸಾಮಾನ್ಯ ಜನರೆಂದು ತಿಳಿದು ಬಹು ಆಶ್ಚರ್ಯಚಕಿತರಾಗಿ, ಇವರು ಯೇಸುವಿನೊಂದಿಗೆ ಇದ್ದವರು ಎಂಬುದನ್ನು ಗುರುತಿಸಿಕೊಂಡರು.


ಅವರೆಲ್ಲರೂ ಪವಿತ್ರಾತ್ಮಭರಿತರಾದರು. ಮಾತ್ರವಲ್ಲದೆ ಪವಿತ್ರಾತ್ಮ ದೇವರು ಕೊಟ್ಟ ಪ್ರೇರಣೆಯ ಪ್ರಕಾರ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಲು ಪ್ರಾರಂಭಿಸಿದರು.


ಗ್ರೀಕ್ ಮಾತನಾಡುವ ಯೆಹೂದ್ಯರೊಂದಿಗೆ ಅವನು ಮಾತನಾಡಿ ಚರ್ಚೆಮಾಡಿದಾಗ, ಅವರು ಅವನನ್ನು ಕೊಲ್ಲಲು ಪ್ರಯತ್ನಿಸಿದರು.


ನನ್ನ ಸುವಾರ್ತೆಯು ಹೇಳುವಂತೆಯೇ ನಿಮ್ಮನ್ನು ಬಲಪಡಿಸುವ ದೇವರಿಗೆ ಈಗ ಎಲ್ಲಾ ಮಹಿಮೆಯಾಗಲಿ. ಕ್ರಿಸ್ತ ಯೇಸುವಿನ ಕುರಿತಾಗಿರುವ ಈ ಸಂದೇಶವು ಆದಿಯಿಂದಲೂ ಗುಪ್ತವಾಗಿರುವ ರಹಸ್ಯದ ದೇವರ ಯೋಜನೆಯು ಯೆಹೂದ್ಯರಲ್ಲದವರಾದ ನಿಮಗಾಗಿ ಈಗ ಪ್ರಕಟವಾಗಿದೆ.


ಕೊರಿಂಥದವರೇ, ನಾವು ನಿಮ್ಮೊಂದಿಗೆ ಮುಚ್ಚುಮರೆಯಿಲ್ಲದೆ ಹೇಳಿಕೊಂಡೆವು, ನಮ್ಮ ಹೃದಯವನ್ನು ನಿಮ್ಮೊಂದಿಗೆ ವಿಶಾಲವಾಗಿ ತೆರೆದಿದ್ದೇವೆ.


ಸಮಸ್ತವನ್ನೂ ಸೃಷ್ಟಿಸಿದ ದೇವರಲ್ಲಿ ಲೋಕಾದಿಯಿಂದ ಮರೆಯಾಗಿದ್ದ ಕಾರ್ಯಭಾರದ ರಹಸ್ಯವು ಏನೆಂಬುದನ್ನು ಎಲ್ಲರಿಗೂ ಸ್ಪಷ್ಟಪಡಿಸುವುದಕ್ಕಾಗಿಯೂ ಆಗಿರುತ್ತದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು