Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 5:21 - ಕನ್ನಡ ಸಮಕಾಲಿಕ ಅನುವಾದ

21 ಇದಲ್ಲದೆ ಕ್ರಿಸ್ತನ ಭಯಭಕ್ತಿಯಲ್ಲಿ ಒಬ್ಬರಿಗೊಬ್ಬರು ಅಧೀನರಾಗಿ ನಡೆದುಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಕ್ರಿಸ್ತನಿಗೆ ಭಯಪಡುವವರಾಗಿದ್ದು, ಒಬ್ಬರಿಗೊಬ್ಬರು ವಿನಯವುಳ್ಳವರಾಗಿ ನಡೆದುಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಕ್ರಿಸ್ತಯೇಸುವಿನಲ್ಲಿ ಭಯಭಕ್ತಿಯುಳ್ಳವರಾಗಿದ್ದು, ಒಬ್ಬರಿಗೊಬ್ಬರು ನಮ್ರತೆಯಿಂದ ನಡೆದುಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಒಬ್ಬರಿಗೊಬ್ಬರು ವಿನಯವುಳ್ಳವರಾಗಿ ನಡೆದುಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ನೀವು ಒಬ್ಬರಿಗೊಬ್ಬರು ವಿಧೇಯರಾಗಿರಬೇಕು. ಏಕೆಂದರೆ ನೀವು ಕ್ರಿಸ್ತನಲ್ಲಿ ಭಯಭಕ್ತಿ ಉಳ್ಳವರಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

21 ತುಮಿ ಎಕಾಮೆಕಾಕ್ ಖಾಲ್ತಿ ಹೊವ್ನ್ ಚಲ್ತಲೆ ಹೊವ್ನ್ ರ್‍ಹಾವ್ಚೆ ಕಶ್ಯಾಕ್ ಮಟ್ಲ್ಯಾರ್, ತುಮಿ ಕ್ರಿಸ್ತಾಚೆ ಭ್ಹಿಂಯೆ ಅನಿ ದೆವಸ್ಪಾನ್ ಹೊತ್ತೆ ಹೊವ್ನ್ ರ್‍ಹಾವ್ಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 5:21
20 ತಿಳಿವುಗಳ ಹೋಲಿಕೆ  

ಸ್ವಾರ್ಥ ಉದ್ದೇಶದಿಂದಾಗಲಿ, ವ್ಯರ್ಥ ಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ ಪ್ರತಿಯೊಬ್ಬನೂ ದೀನತ್ವದಿಂದ ಮತ್ತೊಬ್ಬನನ್ನು ತನಗಿಂತಲೂ ಶ್ರೇಷ್ಠನೆಂದು ಎಣಿಸಲಿ.


ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮ ತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು.


ಹೆಂಡತಿಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.


ಅದೇ ರೀತಿಯಾಗಿ ಯೌವನಸ್ಥರೇ, ಹಿರಿಯರಿಗೆ ಅಧೀನರಾಗಿರಿ. ನೀವೆಲ್ಲರೂ ದೀನತೆಯೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಅಧೀನರಾಗಿರಿ. ಏಕೆಂದರೆ, “ದೇವರು ಅಹಂಕಾರಿಗಳನ್ನು ಎದುರಿಸುತ್ತಾರೆ, ದೀನರಿಗಾದರೋ ಕೃಪೆಯನ್ನು ಕೊಡುತ್ತಾರೆ!”


ನಿಮ್ಮ ನಾಯಕರಿಗೆ ವಿಧೇಯರಾಗಿದ್ದು, ಅವರಿಗೆ ಅಧೀನರಾಗಿರಿ. ಏಕೆಂದರೆ ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ಮನನೊಂದವರಾಗದೆ ಸಂತೋಷದಿಂದ ಇದನ್ನು ಮಾಡುವವರಾಗಲಿ. ಏಕೆಂದರೆ ಅವರು ಮನನೊಂದವರಾಗಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ.


ಎಲ್ಲರನ್ನು ಸನ್ಮಾನಿಸಿರಿ, ವಿಶ್ವಾಸಿಗಳ ಸಹೋದರತ್ವವನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ, ಅರಸನನ್ನು ಸನ್ಮಾನಿಸಿರಿ.


ಪೂರ್ಣ ಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವನಾಗಿರಬೇಕು.


ಪ್ರಿಯರೇ, ನೀವು ಸ್ವಾತಂತ್ರ್ಯಕ್ಕಾಗಿ ಕರೆಹೊಂದಿದವರು. ಆದರೆ ಆ ಸ್ವಾತಂತ್ರ್ಯವನ್ನು ಶಾರೀರಿಕ ಅನುಕೂಲಕ್ಕಾಗಿ ಉಪಯೋಗಿಸದೆ, ಪ್ರೀತಿಯಿಂದ ಒಬ್ಬರಿಗೊಬ್ಬರು ದೀನರಾಗಿ ಸೇವೆಮಾಡಿರಿ.


ಸ್ತ್ರೀಯು ಮೌನವಾಗಿದ್ದು ಎಲ್ಲಾ ಅಧೀನತೆಯನ್ನು ಕಲಿಯಬೇಕು.


ಪ್ರಿಯರೇ, ನೀವು ಇಂಥವರಿಗೂ ಈ ಸೇವೆಯಲ್ಲಿ ಅವರೊಂದಿಗೆ ಪ್ರಯಾಸಪಡುವವರಿಗೂ ವಿಧೇಯರಾಗಿರಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.


ಮಗನೇ, ಯೆಹೋವ ದೇವರಿಗೂ, ಅರಸನಿಗೂ ಭಯಪಡು; ತಿರುಗಿಬೀಳುವವರ ಸಹವಾಸ ಮಾಡಬೇಡ,


ಆದರೆ ನನಗಿಂತ ಮುಂಚೆ ಇದ್ದ ಅಧಿಪತಿಗಳು ಜನರಿಗೆ ಭಾರವಾಗಿದ್ದು, ನಾಲ್ವತ್ತು ಬೆಳ್ಳಿನಾಣ್ಯ ಮೌಲ್ಯದ ರೊಟ್ಟಿಯನ್ನೂ, ದ್ರಾಕ್ಷಾರಸವನ್ನೂ ತೆಗೆದುಕೊಳ್ಳುತ್ತಿದ್ದರು. ಅವರ ಸೇವಕರು ಸಹ ಜನರ ಮೇಲೆ ದೊರೆತನ ನಡೆಸುತ್ತಾ ಇದ್ದರು. ಆದರೆ ದೇವರ ಭಯದ ನಿಮಿತ್ತ ನಾನು ಹಾಗೆ ಮಾಡಲಿಲ್ಲ.


ಆದಕಾರಣ ಯೆಹೋವ ದೇವರ ಭಯವು ನಿಮ್ಮ ಮೇಲೆ ಇರಲಿ. ನೀವು ಜಾಗ್ರತೆಯಾಗಿದ್ದು ನಡೆಯಿರಿ. ಏಕೆಂದರೆ ನಮ್ಮ ದೇವರಾದ ಯೆಹೋವ ದೇವರ ಬಳಿಯಲ್ಲಿ ಅನ್ಯಾಯವಾದರೂ, ಮುಖದಾಕ್ಷಿಣ್ಯವಾದರೂ, ಲಂಚ ತೆಗೆದುಕೊಳ್ಳುವುದಾದರೂ ಇಲ್ಲ,” ಎಂದನು.


ಮನುಷ್ಯನ ಪ್ರತಿಯೊಂದು ನಿಯಮಗಳಿಗೂ ಕರ್ತದೇವರ ನಿಮಿತ್ತ ನೀವು ಅಧೀನರಾಗಿರಿ. ಅರಸನು ಸರ್ವಾಧಿಕಾರಿಯಾಗಿದ್ದು,


ಪ್ರಿಯರೇ, ಇಂಥಾ ವಾಗ್ದಾನಗಳು ನಮಗಿರುವುದರಿಂದ ನಮ್ಮ ದೇಹಾತ್ಮಗಳನ್ನು ಮಲಿನಗೊಳಿಸುವ ಎಲ್ಲಾ ವಿಷಯಗಳಿಂದ ನಮ್ಮನ್ನು ಶುದ್ಧಮಾಡಿ, ದೇವರ ಮೇಲಿನ ಭಯಭಕ್ತಿಯಿಂದ ನಮ್ಮ ಪವಿತ್ರತೆಯನ್ನು ಪರಿಪೂರ್ಣಗೊಳಿಸೋಣ.


ನಾನು ಅವರಿಗೆ, “ನೀವು ಮಾಡುವುದು ಒಳ್ಳೆಯದಲ್ಲ. ಇತರ ದೇಶದವರಾದ ನಮ್ಮ ಶತ್ರುಗಳ ನಿಂದೆಗೆ ಗುರಿಯಾಗದಂತೆ ನೀವು ನಮ್ಮ ದೇವರ ಭಯದಲ್ಲಿ ನಡೆಯಬೇಕಲ್ಲವೇ.


ಎಲ್ಲಾ ಪ್ರಧಾನರೂ, ಪರಾಕ್ರಮಶಾಲಿಗಳೂ, ಅರಸನಾದ ದಾವೀದನ ಸಮಸ್ತ ಪುತ್ರರೂ ಅರಸನಾದ ಸೊಲೊಮೋನನಿಗೆ ಅಧೀನರಾದರು.


ಯೆಹೋವ ದೇವರ ದೂತನು ಆಕೆಗೆ, “ನಿನ್ನ ಯಜಮಾನಿಯ ಬಳಿಗೆ ಹಿಂದಿರುಗಿ ಹೋಗಿ ಆಕೆಗೆ ಅಧೀನಳಾಗಿರು,” ಎಂದನು.


ಕರ್ತನ ಭಯಭಕ್ತಿಯನ್ನು ಅರಿತಿರುವ ಕಾರಣ, ಜನರ ಮನವೊಲಿಸಲು ನಾವು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲವರಾಗಿದ್ದಾರೆ. ಅದು ನಿಮ್ಮ ಮನಸ್ಸಾಕ್ಷಿಗೂ ತಿಳಿದಿದೆ ಎಂದು ನಾನು ನಂಬುತ್ತೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು