Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 4:1 - ಕನ್ನಡ ಸಮಕಾಲಿಕ ಅನುವಾದ

1 ಆದ್ದರಿಂದ ನೀವು ಸ್ವೀಕರಿಸಿದ ನಿಮ್ಮ ಕರೆಯುವಿಕೆಗೆ ಯೋಗ್ಯರಾಗಿ ಬಾಳಬೇಕೆಂದು ಕರ್ತನ ಸೆರೆಯಾಳಾದ ನಾನು ನಿಮ್ಮನ್ನು ಪ್ರಬೋಧಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ನೀವು ದೇವರಿಂದ ಕರೆಯಲ್ಪಟ್ಟವರಾದ ಕಾರಣ ಆ ಕರೆಗೆ ಯೋಗ್ಯರಾಗಿ ಜೀವಿಸಬೇಕೆಂದು, ಕರ್ತನ ಸೇವೆಯಲ್ಲಿ ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಪ್ರಭುವಿನ ಸೇವೆಯ ನಿಮಿತ್ತ ಸೆರೆಯಾಳಾಗಿ ಇರುವ ನಾನು ನಿಮ್ಮಲ್ಲಿ ಬಿನ್ನವಿಸುವುದು ಏನೆಂದರೆ: ದೇವರ ಕರೆಗೆ ಅನುಗುಣವಾಗಿ ಯೋಗ್ಯ ಬಾಳುವೆ ನಡೆಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ನೀವು ದೇವರಿಂದ ಕರೆಯಲ್ಪಟ್ಟವರಾದ ಕಾರಣ ಯೋಗ್ಯರಾಗಿ ನಡೆದುಕೊಳ್ಳಬೇಕೆಂದು ಕರ್ತನ ಸೇವೆಯಲ್ಲಿ ಸೆರೆಯವನಾದ ನಾನು ನಿಮ್ಮನ್ನು ಪ್ರಬೋಧಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ನಾನು ಪ್ರಭುವಿಗೆ ಸೇರಿದವನಾದ್ದರಿಂದ ಸೆರೆಯಲ್ಲಿದ್ದೇನೆ. ನೀವು ದೇವರಿಂದ ಕರಯಲ್ಪಟ್ಟಿದ್ದೀರಿ. ಆದ್ದರಿಂದ ನಿಮ್ಮ ಕರೆಯುವಿಕೆಗೆ ತಕ್ಕಂತೆ ಯೋಗ್ಯವಾಗಿ ಜೀವಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

1 ತೆಚ್ಯಾ ಸಾಟ್ನಿ ಧನಿಯಾ ಸಾಟ್ನಿ ಬಂಧಿತ್ ಹೊತ್ತೊ ಮಿಯಾ ದೆವಾನ್ ತುಮ್ಕಾ ಬಲ್ವನಿಚ್ಯಾ ಮಟ್ಟಾಚೆ ಜಿವನ್ ತುಮಿ ಕರುಚೆ ಮನುನ್ ತುಮ್ಚ್ಯಾಕ್ಡೆ ಮಾಗ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 4:1
36 ತಿಳಿವುಗಳ ಹೋಲಿಕೆ  

ಕರ್ತ ಯೇಸುವಿಗೆ ಯೋಗ್ಯರಾಗಿ ಜೀವಿಸಿ ಎಲ್ಲಾ ವಿಧದಲ್ಲಿ ಅವರನ್ನೇ ಮೆಚ್ಚಿಸುವವರಾಗಿರಬೇಕೆಂತಲೂ ನೀವು ಸಕಲ ಸತ್ಕಾರ್ಯದಲ್ಲಿ ಫಲಕೊಡುತ್ತಾ ದೇವರ ತಿಳುವಳಿಕೆಯಲ್ಲಿ ವೃದ್ಧಿಯಾಗುತ್ತಿರಬೇಕೆಂತಲೂ


ಏನೇ ಸಂಭವಿಸಿದರೂ ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ. ಆಗ ನಾನು ಬಂದು ನಿಮ್ಮನ್ನು ನೋಡಿದರೂ ಸರಿ, ದೂರದಲ್ಲಿದ್ದು ನಿಮ್ಮ ವಿಷಯವಾಗಿ ಕೇಳಿದರೂ ಸರಿ, ನೀವು ಒಂದೇ ಆತ್ಮದಲ್ಲಿ ದೃಢವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗಾಗಿ ಒಂದೇ ಮನಸ್ಸಿನಿಂದ ಒಟ್ಟಿಗೆ ಹೋರಾಡುವವರಾಗಿದ್ದೀರೆಂದು ನಾನು ತಿಳಿದುಕೊಳ್ಳುವೆನು.


ನಿಮಗೆ ಬುದ್ಧಿ ಹೇಳುತ್ತಾ ಸಂತೈಸುತ್ತಾ ಬಂದೆವು. ಹೀಗೆ ದೇವರ ಹಾಗೂ ಅವರ ರಾಜ್ಯದ ಮಹಿಮೆಗಾಗಿ ಕರೆದಾತನಿಗೆ ನೀವು ಯೋಗ್ಯರಾಗಿ ನಡೆಯಬೇಕೆಂದು ಸಾಕ್ಷಿ ಹೇಳಿದೆವೆಂಬುದು ನಿಮಗೆ ತಿಳಿದಿದೆ.


ದೇವರು ತಮ್ಮ ಸ್ವಂತ ಮಹಿಮೆಗಾಗಿಯೂ ಸದ್ಗುಣಕ್ಕಾಗಿಯೂ ನಮ್ಮನ್ನು ಕರೆದಿದ್ದಾರೆ. ಏಕೆಂದರೆ, ದೇವರ ತಿಳುವಳಿಕೆಯ ಮೂಲಕವಾಗಿ ಜೀವಕ್ಕೂ, ಭಕ್ತಿಗೂ ಬೇಕಾದದ್ದೆಲ್ಲವುಗಳನ್ನು ದೇವರ ಶಕ್ತಿಯು ನಮಗೆ ಕೊಡಲಾಗಿದೆ.


ದೇವರು ನಮ್ಮ ಕ್ರಿಯೆಗಳಿಗನುಸಾರವಾಗಿ ಅಲ್ಲ, ತಮ್ಮ ಸ್ವಂತ ಸಂಕಲ್ಪ ಮತ್ತು ಕೃಪೆಯ ಪ್ರಕಾರ ನಮ್ಮನ್ನು ರಕ್ಷಿಸಿ ಪರಿಶುದ್ಧವಾದ ಜೀವಿತಕ್ಕೆ ನಮ್ಮನ್ನು ಕರೆದರು. ಈ ಕೃಪೆಯು ಕಾಲದ ಆರಂಭಕ್ಕೆ ಮುಂಚೆಯೇ ಕ್ರಿಸ್ತ ಯೇಸುವಿನಲ್ಲಿ ನಮಗೆ ಕೊಡಲಾಯಿತು.


ಆದ್ದರಿಂದ ನೀವು ನನ್ನನ್ನು ಅನುಕರಣೆ ಮಾಡುವವರಾಗಿ ಇರಬೇಕು ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.


ನಮ್ಮ ದೇವರು ನೀಡಿರುವ ಕರೆಯುವಿಕೆಗೆ ನಿಮ್ಮನ್ನು ಯೋಗ್ಯರೆಂದು ಎಣಿಸಿ, ಒಳಿತನ್ನು ಮಾಡಲು ನಿಮ್ಮ ಎಲ್ಲಾ ಇಷ್ಟಾರ್ಥವನ್ನೂ ವಿಶ್ವಾಸದಿಂದ ಆಗಿರುವ ನಿಮ್ಮ ಎಲ್ಲಾ ಕಾರ್ಯಗಳನ್ನೂ ದೇವರು ತಮ್ಮ ಶಕ್ತಿಯಿಂದ ಪರಿಪೂರ್ಣಗೊಳಿಸುವಂತೆ ನಾವು ಯಾವಾಗಲೂ ನಿಮಗೋಸ್ಕರ ಪ್ರಾರ್ಥನೆ ಮಾಡುತ್ತೇವೆ.


ಆದ್ದರಿಂದ, ಯೆಹೂದ್ಯರಲ್ಲದವರು ವ್ಯರ್ಥ ಆಲೋಚನೆಯುಳ್ಳವರಾಗಿ ಬಾಳುವ ರೀತಿಯಲ್ಲಿ ನೀವು ಇನ್ನು ಮೇಲೆ ಬಾಳದಂತೆ, ಕರ್ತನಲ್ಲಿ ನಾನು ನಿಮಗೆ ಸಾಕ್ಷಿಕೊಟ್ಟು ಹೇಳುತ್ತೇನೆ.


ಅಬ್ರಾಮನು ತೊಂಬತ್ತೊಂಬತ್ತು ವರ್ಷದವನಾದಾಗ, ಯೆಹೋವ ದೇವರು ಅಬ್ರಾಮನಿಗೆ ಕಾಣಿಸಿಕೊಂಡು, “ನಾನೇ ಸರ್ವಶಕ್ತ ದೇವರು. ನೀನು ನನ್ನ ಸನ್ನಿಧಿಯಲ್ಲಿಯೇ ನಡೆಯುತ್ತಾ ದೋಷವಿಲ್ಲದವನಾಗಿರು.


ಆದ್ದರಿಂದ, ಪ್ರಿಯರೇ ದೇವರ ಕರುಣೆಯಿಂದ ಬೇಡಿಕೊಳ್ಳುವುದೇನೆಂದರೆ, ನೀವು ನಿಮ್ಮ ದೇಹಗಳನ್ನು ದೇವರಿಗೆ ಪರಿಶುದ್ಧವೂ ಮೆಚ್ಚುಗೆಯೂ ಆಗಿರುವ ಸಜೀವ ಯಜ್ಞವಾಗಿ ಸಮರ್ಪಿಸಿರಿ. ಇದೇ ನಿಮ್ಮ ವಿವೇಕ ಪೂರ್ವಕವಾದ ಆರಾಧನೆಯು.


ಆದ್ದರಿಂದ ನೀವು ಕ್ರಿಸ್ತ ಯೇಸುವನ್ನು ಕರ್ತ ಎಂದು ಅಂಗೀಕರಿಸಿದಂತೆಯೇ ಅವರಲ್ಲಿ ಬಾಳಿರಿ.


ಅಪಕಾರಕ್ಕೆ ಅಪಕಾರವನ್ನೂ ನಿಂದೆಗೆ ನಿಂದೆಯನ್ನೂ ಮಾಡದೆ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದರಲ್ಲವೇ? ಹೀಗೆ ಮಾಡುವವರಾದ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರೆಂದು ನಿಮಗೆ ತಿಳಿದಿದೆಯಲ್ಲಾ.


ನೀವು ಹೊಂದಿರುವ ದೇವರ ಕೃಪೆಯನ್ನು ವ್ಯರ್ಥಮಾಡಿಕೊಳ್ಳಬೇಡಿರೆಂದು ದೇವರ ಜೊತೆಕೆಲಸದವರಾದ ನಾವು ನಿಮ್ಮಲ್ಲಿ ಬೇಡಿಕೊಳ್ಳುತ್ತೇವೆ,


ಅಮ್ಮನವರೇ, ನಾನು ಹೊಸ ಆಜ್ಞೆಯನ್ನು ನಿನಗೆ ಬರೆಯದೆ ಮೊದಲಿನಿಂದಲೂ ನಮಗೆ ಇದ್ದ ಆಜ್ಞೆಯನ್ನು ನಿನಗೆ ಬರೆಯುವವನಾಗಿ ನಾವು ಒಬ್ಬರನ್ನೊಬ್ಬರು ಪ್ರೀತಿಸುವವರಾಗಿರಬೇಕೆಂದು ನಿನ್ನನ್ನು ಕೇಳಿಕೊಳ್ಳುತ್ತೇನೆ.


ಕ್ರಿಸ್ತ ಯೇಸುವಿನ ಮೂಲಕ ನಿಮ್ಮನ್ನು ತಮ್ಮ ನಿತ್ಯ ಪ್ರಭಾವಕ್ಕೆ ಕರೆದ ಕೃಪಾಪೂರ್ಣ ಆಗಿರುವ ದೇವರು ನೀವು ಸ್ವಲ್ಪಕಾಲ ಬಾಧೆಪಟ್ಟ ಮೇಲೆ ತಾವೇ ನಿಮ್ಮನ್ನು ಪರಿಪೂರ್ಣಮಾಡಿ, ಸ್ಥಿರಪಡಿಸಿ, ಬಲಪಡಿಸಿ ನೆಲೆಗೊಳಿಸುವರು.


ಪ್ರಿಯರೇ, ಈ ಲೋಕದಲ್ಲಿ ಪರದೇಶಸ್ಥರೂ ಪ್ರವಾಸಿಗಳೂ ಆಗಿರುವ ನೀವು ನಿಮ್ಮ ಆತ್ಮಕ್ಕೆ ವಿರೋಧವಾಗಿ ಯುದ್ಧಮಾಡುವ ಶಾರೀರಿಕ ದುರಾಶೆಗಳಿಗೆ ದೂರವಾಗಿರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.


ನೀವು ದೇವರ ಚಿತ್ತಾನುಸಾರವಾಗಿ ಎಲ್ಲವನ್ನೂ ಮಾಡುವಂತೆ ನಿಮ್ಮನ್ನು ಸನ್ನದ್ಧರಾಗಿ ಮಾಡಲಿ. ಕ್ರಿಸ್ತ ಯೇಸುವಿನ ಶಕ್ತಿಯ ಮೂಲಕವಾಗಿ ಪ್ರತಿಯೊಂದು ಸತ್ಕಾರ್ಯಗಳನ್ನು ತಮಗೆ ಮೆಚ್ಚಿಕೆಯಾಗುವಂತೆ ನಿಮ್ಮ ಮೂಲಕವಾಗಿ ನೆರವೇರಿಸಲಿ. ಯುಗಯುಗಾಂತರಗಳಲ್ಲಿಯೂ ಯೇಸುವಿಗೆ ಮಹಿಮೆ ಉಂಟಾಗಲಿ. ಆಮೆನ್.


ಹೀಗೆ ನಾನು ಕ್ರಿಸ್ತ ಯೇಸುವಿನಲ್ಲಿ ದೇವರ ಸ್ವರ್ಗೀಯ ಕರೆಯ ಬಹುಮಾನದ ಗುರಿಯೆಡೆಗೆ ಮುಂದೆ ಸಾಗುತ್ತಾ ಇದ್ದೇನೆ.


ಕ್ರಿಸ್ತ ಯೇಸು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತಮ್ಮನ್ನೇ ದೇವರಿಗೆ ಸುಗಂಧ ಕಾಣಿಕೆಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಸಹ ಪ್ರೀತಿಯಿಂದ ಬಾಳಿರಿ.


ಒಂದೇ ನಿರೀಕ್ಷೆಗೆ ನೀವು ಕರೆಹೊಂದಿದಂತೆಯೇ ದೇಹವು ಒಂದೇ, ಪವಿತ್ರಾತ್ಮರು ಒಬ್ಬರೇ,


ಈ ಕಾರಣದಿಂದ ಯೆಹೂದ್ಯರಲ್ಲದವರಾಗಿರುವ ನಿಮ್ಮ ನಿಮಿತ್ತ ಕ್ರಿಸ್ತ ಯೇಸುವಿನ ಸೆರೆಯಾಳಾಗಿರುವ ಪೌಲನೆಂಬ ನಾನು ಹೇಳುವುದೇನೆಂದರೆ:


ಪ್ರಿಯರೇ, ನಾನು ನಿಮ್ಮ ಹಾಗೆ ಆದ್ದರಿಂದ ನೀವು ನನ್ನ ಹಾಗೆ ಆಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ನನಗೆ ಯಾವ ಕೇಡನ್ನೂ ಮಾಡಲಿಲ್ಲ.


ದೇವರೊಂದಿಗೆ ನಂಬಿಗಸ್ತನಾಗಿ ನಡೆಯುತ್ತಿದ್ದ ಹನೋಕನನ್ನು ದೇವರು ತೆಗೆದುಕೊಂಡು ಹೋದದ್ದರಿಂದ ಅವನು ಕಾಣಲಿಲ್ಲ.


ಆದ್ದರಿಂದ ಪರಿಶುದ್ಧರಾದ ಪ್ರಿಯರೇ, ಪರಲೋಕದ ಕರೆಯುವಿಕೆಯಲ್ಲಿ ಪಾಲುಗಾರರೇ, ನಾವು ಅರಿಕೆಮಾಡುವ ಅಪೊಸ್ತಲರೂ ಮಹಾಯಾಜಕರೂ ಆಗಿರುವ ಯೇಸುವನ್ನೇ ಆಲೋಚಿಸಿರಿ.


ನಾನು ನಿಮ್ಮ ಬಳಿಯಲ್ಲಿ ಮುಖಾಮುಖಿಯಾಗಿ ಮಾತನಾಡುವಾಗ, “ಮೃದುವಾಗಿಯೂ” ನಿಮ್ಮಿಂದ ದೂರವಿರುವಾಗ “ಕಠಿಣನಾಗಿಯೂ ವರ್ತಿಸುವವನು” ಎಂತಲೂ ನೀವು ತಿಳಿದಿದ್ದೀರಿ. ಅಂಥ ಪೌಲನೆಂಬ, ನಾನು ಕ್ರಿಸ್ತ ಯೇಸುವಿನ ದೀನತ್ವದಿಂದಲೂ ಸಾತ್ವಿಕತೆಯಿಂದಲೂ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ:


ಆದರೆ ಯೆರೆಮೀಯನು, “ಅವರು ನಿನ್ನನ್ನು ಒಪ್ಪಿಸುವುದಿಲ್ಲ” ನಾನು ನಿನಗೆ ಹೇಳುವ ಯೆಹೋವ ದೇವರ ವಾಕ್ಯವನ್ನು ಮಾತ್ರ ಕೇಳು; ಆಗ ನಿನಗೆ ಒಳ್ಳೆಯದಾಗುವುದು. ನಿನ್ನ ಪ್ರಾಣ ಬದುಕುವುದು.


ಯಾವುದನ್ನೂ ಕದ್ದಿಟ್ಟುಕೊಳ್ಳದೆ, ನಮ್ಮ ರಕ್ಷಕರಾದ ದೇವರ ಉಪದೇಶವನ್ನು ಎಲ್ಲಾ ವಿಷಯಗಳಲ್ಲಿಯೂ ಅಲಂಕರಿಸುವಂತೆ, ಒಳ್ಳೆಯ ನಂಬಿಗಸ್ತರೆಂದು ಎಲ್ಲದರಲ್ಲಿಯೂ ತೋರಿಸಬೇಕೆಂದು ಅವರನ್ನು ಉಪದೇಶಿಸು.


ನಿಮ್ಮಲ್ಲಿ ಒಬ್ಬನೂ ಕ್ರಿಸ್ತ ಯೇಸುವಿನ ದಾಸನೂ ಆಗಿರುವ ಎಪಫ್ರನು ನಿಮಗೆ ವಂದನೆ ಹೇಳುತ್ತಾನೆ. ನೀವು ದೇವರ ಚಿತ್ತದ ಬಗ್ಗೆ ಪರಿಪಕ್ವರಾಗಿ, ಪೂರ್ಣ ನಿಶ್ಚಯವುಳ್ಳವರಾಗಿ ನಿಂತು, ಎಲ್ಲಾ ವಿಷಯಗಳಲ್ಲಿ ನಿಮಗೋಸ್ಕರ ಆಸಕ್ತಿಯಿಂದ ಪ್ರಾರ್ಥನೆಗಳಲ್ಲಿ ಯಾವಾಗಲೂ ಹೋರಾಡುತ್ತಾನೆ.


ಆದ್ದರಿಂದ ನಾವು ಕ್ರಿಸ್ತ ಯೇಸುವಿನ ರಾಯಭಾರಿಗಳಾಗಿದ್ದೇವೆ. ದೇವರೇ ನಮ್ಮ ಮೂಲಕ ನಿಮಗೆ ಕರೆ ನೀಡುತ್ತಾರೆ. ಆದ್ದರಿಂದ ಕ್ರಿಸ್ತ ಯೇಸುವಿನ ಪರವಾಗಿ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ: ದೇವರೊಡನೆ ಸಮಾಧಾನ ಮಾಡಿಕೊಳ್ಳಿರಿ.


ಆ ಸಮಯದಲ್ಲಿ ಯೂದಾಯ, ಗಲಿಲಾಯ, ಸಮಾರ್ಯದಲ್ಲೆಲ್ಲಾ ಇದ್ದ ಸಭೆಯು ಸಮಾಧಾನ ಹೊಂದಿತು. ಸಭೆ ಬಲಗೊಂಡು ಪವಿತ್ರಾತ್ಮರಿಂದ ಧೈರ್ಯಹೊಂದಿ ಸಂಖ್ಯೆಯಲ್ಲಿ ವೃದ್ಧಿಸುತ್ತಾ, ಕರ್ತ ಯೇಸುವಿನ ಭಯದಲ್ಲಿ ಮುನ್ನಡೆಯಿತು.


ದೇವರು ಕೊಡುವ ವರಗಳನ್ನು, ಕರೆಗಳನ್ನು ಅವರು ಎಂದಿಗೂ ಹಿಂತೆಗೆದುಕೊಳ್ಳುವವರಲ್ಲ.


ನಾವು ಕ್ರಿಸ್ತ ಯೇಸುವಿನಲ್ಲಿ ಸತ್ಕ್ರಿಯೆಗಳನ್ನು ಮಾಡುವುದಕ್ಕಾಗಿಯೇ ಸೃಷ್ಟಿಸಲಾದ ದೇವರ ಕಲಾಕೃತಿಯಾಗಿದ್ದೇವೆ. ಸತ್ಕ್ರಿಯೆಗಳನ್ನು ಮಾಡುತ್ತಾ ಬಾಳಬೇಕೆಂದು ದೇವರು ನಮ್ಮನ್ನು ಮುಂಚಿತವಾಗಿ ನೇಮಿಸಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು