Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 3:4 - ಕನ್ನಡ ಸಮಕಾಲಿಕ ಅನುವಾದ

4 ಅದನ್ನು ನೀವು ಓದಿದರೆ ಕ್ರಿಸ್ತನ ರಹಸ್ಯದ ಕುರಿತಾಗಿ ನನಗಿರುವ ಒಳನೋಟವನ್ನು ನೀವೇ ಅರ್ಥಮಾಡಿಕೊಳ್ಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಬರೆದದ್ದನ್ನು ನೀವು ಓದಿ ನೋಡಿದರೆ ಕ್ರಿಸ್ತನ ವಿಷಯವಾದ ಮರ್ಮವನ್ನು ಕುರಿತು ನನಗಿರುವ ಗ್ರಹಿಕೆಯನ್ನು ನೀವು ತಿಳಿದುಕೊಳ್ಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಅದನ್ನು ಲಕ್ಷ್ಯವಿಟ್ಟು ಓದಿದರೆ, ಆಗ ಯೇಸುಕ್ರಿಸ್ತರ ರಹಸ್ಯವನ್ನು ಎಷ್ಟರಮಟ್ಟಿಗೆ ನಾನು ಮನಗಂಡಿದ್ದೇನೆ ಎಂದು ನಿಮಗೇ ತಿಳಿಯುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಅದನ್ನು ಕುರಿತು ನಾನು ಹಿಂದೆ ಸಂಕ್ಷೇಪವಾಗಿ ಬರೆದಿದ್ದೇನೆ; ಬರೆದದ್ದನ್ನು ನೀವು ಓದಿ ನೋಡಿದರೆ ಕ್ರಿಸ್ತನ ವಿಷಯವಾದ ಮರ್ಮವನ್ನು ಕುರಿತು ನನಗಿರುವ ಗ್ರಹಿಕೆಯನ್ನು ನೀವು ತಿಳುಕೊಳ್ಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನಾನು ಬರೆದಿರುವ ಈ ಸಂಗತಿಗಳನ್ನು ನೀವು ಓದಿದರೆ ಕ್ರಿಸ್ತನ ರಹಸ್ಯವಾದ ಸತ್ಯವನ್ನು ನಾನು ನಿಜವಾಗಿಯೂ ಅರ್ಥಮಾಡಿಕೊಂಡಿದ್ದೇನೆ ಎಂಬುದು ನಿಮಗೇ ತಿಳಿಯುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

4 ಅನಿ ಮಿಯಾ ಹೆ ಲಿವಲ್ಲೆ ತುಮಿ ವಾಚ್ಲ್ಯಾರ್ ಕ್ರಿಸ್ತಾಚ್ಯಾ ಗುಟ್ಟಾಚ್ಯಾ ವಿಶಯಾತ್ ಮಿಯಾ ಕಳ್ವುನ್ ಘೆಟಲ್ಲೆ ತುಮಿಬಿ ಶಿಕುಕ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 3:4
19 ತಿಳಿವುಗಳ ಹೋಲಿಕೆ  

ನಾವು ಕ್ರಿಸ್ತ ಯೇಸುವಿನ ರಹಸ್ಯವನ್ನು ಮಾತನಾಡುವಂತೆ ದೇವರು ನಮ್ಮ ಸಂದೇಶಕ್ಕೆ ಬಾಗಿಲನ್ನು ತೆರೆಯುವಂತೆ ನಮಗೋಸ್ಕರವೂ ಪ್ರಾರ್ಥಿಸಿರಿ. ಈ ಸೇವೆಗಾಗಿಯೇ ನಾನು ಸೆರೆಯಲ್ಲಿದ್ದೇನಲ್ಲಾ.


ಆದ್ದರಿಂದ ನೀವು ಈ ರೀತಿಯಾಗಿ ನಮ್ಮನ್ನು ಪರಿಗಣಿಸಬೇಕು: ನಾವು ಕ್ರಿಸ್ತ ಯೇಸುವಿನ ದಾಸರೆಂತಲೂ ದೇವರ ರಹಸ್ಯಗಳ ನಂಬಿಗಸ್ತ ನಿರ್ವಾಹಕರೆಂದೂ ಪರಿಗಣಿಸಿರಿ.


ನನ್ನ ಮಾತಿನಲ್ಲಿ ಚಾತುರ್ಯ ಇಲ್ಲದಿದ್ದರೂ ನನಗೆ ತಿಳುವಳಿಕೆಯಿದೆ. ಇದನ್ನು ನಾನು ಪ್ರತಿಯೊಂದು ಸಂದರ್ಭಗಳಲ್ಲಿಯೂ ಬಹಳ ಸ್ಪಷ್ಟಪಡಿಸಿರುತ್ತೇನೆ.


ಎಲ್ಲಾ ಪ್ರಶ್ನೆಗಳಿಂದ ಹೆಚ್ಚಾಗಿ ದೈವ ಭಕ್ತಿಯ ರಹಸ್ಯವು ದೊಡ್ಡದಾದದ್ದು ಅದು ಯಾವುದೆಂದರೆ: “ದೇವರು ಮನುಷ್ಯ ರೂಪದಲ್ಲಿ ಪ್ರತ್ಯಕ್ಷರಾದರು. ಆತ್ಮದಲ್ಲಿ ರುಜುಪಡಿಸಲಾದರು. ದೂತರಿಗೆ ಕಾಣಿಸಿಕೊಂಡರು, ಯೆಹೂದ್ಯರಲ್ಲದವರಿಗೆ ಸಾರಲಾದರು, ಲೋಕದಲ್ಲಿ ನಂಬಲಾದರು, ಮಹಿಮೆಗೆ ಒಯ್ಯಲಾದರು!”


ಅವರು ಹೃದಯದಲ್ಲಿ ಉತ್ತೇಜನಗೊಂಡು, ಪ್ರೀತಿಯಲ್ಲಿ ಒಂದಾಗಿ, ದೇವರ ರಹಸ್ಯವಾಗಿರುವ ಕ್ರಿಸ್ತ ಯೇಸುವನ್ನು ತಿಳಿದುಕೊಳ್ಳುವಂತೆ ಪೂರ್ಣಜ್ಞಾನದ ಸರ್ವ ಐಶ್ವರ್ಯವನ್ನು ದೃಢವಾಗಿ ಹೊಂದಬೇಕೆಂಬುದೇ ನನ್ನ ಗುರಿಯಾಗಿದೆ.


ನಾನು ಬಾಯಿ ತೆರೆಯುವಾಗ ಸುವಾರ್ತೆಯ ರಹಸ್ಯವನ್ನು ಧೈರ್ಯವಾಗಿ ತಿಳಿಯಪಡಿಸುವುದಕ್ಕೆ ಮಾತನ್ನು ನನಗೆ ದಯಪಾಲಿಸಬೇಕೆಂದು ಪ್ರಾರ್ಥಿಸಿರಿ.


ಈ ರಹಸ್ಯವು ಮಹತ್ತಾದದ್ದು. ಆದರೆ ನಾನು ಕ್ರಿಸ್ತನ ಹಾಗೂ ಸಭೆಯ ವಿಷಯವಾಗಿ ಮಾತನಾಡುತ್ತಿದ್ದೇನೆ.


ದೇವರು ಕ್ರಿಸ್ತನಲ್ಲಿ ಉದ್ದೇಶಮಾಡಿಕೊಂಡ ತಮ್ಮ ಚಿತ್ತದ ರಹಸ್ಯವನ್ನು ಸಂತೋಷದಿಂದ ನಮಗೆ ಪ್ರಕಟಿಸಿದರು,


ಅದಕ್ಕೆ ಯೇಸು, “ದೇವರ ರಾಜ್ಯದ ರಹಸ್ಯಗಳನ್ನು ತಿಳಿದುಕೊಳ್ಳುವುದಕ್ಕೆ ನಿಮಗೆ ಅನುಮತಿಸಲಾಗಿದೆ, ಆದರೆ ಉಳಿದವರಿಗೆ, “ ‘ಅವರು ಕಣ್ಣಾರೆ ನೋಡಿದರೂ ಕಾಣದಂತೆಯೂ; ಮತ್ತು ಕೇಳಿದರೂ ಗ್ರಹಿಸದಂತೆ ಸಾಮ್ಯಗಳಲ್ಲಿ ಮರೆಯಾಗಿವೆ.’


ನಂಬಿಕೆಯ ರಹಸ್ಯವನ್ನು ಶುದ್ಧಮನಸ್ಸಾಕ್ಷಿಯಿಂದ ಹಿಡಿದುಕೊಂಡವರಾಗಿರಬೇಕು.


ನನಗೆ ಪ್ರವಾದನ ವರವಿದ್ದರೂ ನಾನು ಎಲ್ಲಾ ರಹಸ್ಯಗಳನ್ನೂ, ಸಕಲ ವಿದ್ಯೆಯನ್ನು ತಿಳಿದಿದ್ದರೂ ಬೆಟ್ಟಗಳನ್ನು ಕದಲಿಸುವಷ್ಟು ನಂಬಿಕೆಯಿದ್ದರೂ ನನಗೆ ಪ್ರೀತಿಯಿಲ್ಲದಿದ್ದರೆ, ಶೂನ್ಯನಾಗಿದ್ದೇನೆ.


ಯೇಸು ಅದಕ್ಕೆ ಉತ್ತರವಾಗಿ ಹೇಳಿದ್ದು: “ಪರಲೋಕ ರಾಜ್ಯದ ರಹಸ್ಯಗಳನ್ನು ತಿಳಿದುಕೊಳ್ಳುವ ಜ್ಞಾನವು ನಿಮಗೆ ಕೊಡಲಾಗಿದೆ, ಆದರೆ ಅವರಿಗಲ್ಲ.


ಪ್ರಿಯರೇ, ನೀವು ಈ ಮರ್ಮದ ಬಗ್ಗೆ ಅಜ್ಞಾನಿಗಳಾಗಿರಬೇಕೆಂದು ನಾನು ಬಯಸುವುದಿಲ್ಲ. ಅದೇನೆಂದರೆ, ಯೆಹೂದ್ಯರಲ್ಲದವರು ಪೂರ್ಣಸಂಖ್ಯೆಯಲ್ಲಿ ದೇವರ ಬಳಿಗೆ ಬರುವವರೆಗೆ ಮಾತ್ರ ಇಸ್ರಾಯೇಲರು ತಮ್ಮ ಹೃದಯದ ಕಾಠಿಣ್ಯಕ್ಕೆ ತಾತ್ಕಾಲಿಕವಾಗಿ ಒಳಗಾಗಿರುವರು.


ನನ್ನ ಸುವಾರ್ತೆಯು ಹೇಳುವಂತೆಯೇ ನಿಮ್ಮನ್ನು ಬಲಪಡಿಸುವ ದೇವರಿಗೆ ಈಗ ಎಲ್ಲಾ ಮಹಿಮೆಯಾಗಲಿ. ಕ್ರಿಸ್ತ ಯೇಸುವಿನ ಕುರಿತಾಗಿರುವ ಈ ಸಂದೇಶವು ಆದಿಯಿಂದಲೂ ಗುಪ್ತವಾಗಿರುವ ರಹಸ್ಯದ ದೇವರ ಯೋಜನೆಯು ಯೆಹೂದ್ಯರಲ್ಲದವರಾದ ನಿಮಗಾಗಿ ಈಗ ಪ್ರಕಟವಾಗಿದೆ.


ಅವರು ರಹಸ್ಯವನ್ನು ಪ್ರಕಟನೆಯಿಂದ ನನಗೆ ತಿಳಿಸಿದರೆಂದು ನಾನು ನಿಮಗೆ ಮೊದಲೇ ಸಂಕ್ಷೇಪವಾಗಿ ಬರೆದಿದ್ದೇನೆ.


ಸಮಸ್ತವನ್ನೂ ಸೃಷ್ಟಿಸಿದ ದೇವರಲ್ಲಿ ಲೋಕಾದಿಯಿಂದ ಮರೆಯಾಗಿದ್ದ ಕಾರ್ಯಭಾರದ ರಹಸ್ಯವು ಏನೆಂಬುದನ್ನು ಎಲ್ಲರಿಗೂ ಸ್ಪಷ್ಟಪಡಿಸುವುದಕ್ಕಾಗಿಯೂ ಆಗಿರುತ್ತದೆ.


ಆ ರಹಸ್ಯವು ಹಿಂದಿನ ಯುಗಗಳಿಂದಲೂ ತಲತಲಾಂತರಗಳಿಂದಲೂ ಮರೆಯಾಗಿತ್ತು. ಆದರೂ ಈಗ ಅದು ಕರ್ತ ಯೇಸುವಿನ ಜನರಿಗೆ ಪ್ರಕಟವಾಗಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು