Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 1:10 - ಕನ್ನಡ ಸಮಕಾಲಿಕ ಅನುವಾದ

10 ಆ ರಹಸ್ಯವೋ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಕಾಲವು ಪರಿಪೂರ್ಣಗೊಂಡಾಗ ಕ್ರಿಸ್ತನಲ್ಲಿ ಒಂದುಗೂಡಿಸುವುದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಕಾಲವು ಪರಿಪೂರ್ಣವಾದಾಗ, ಆತನು ಭೂಪರಲೋಕಗಳಲ್ಲಿರುವ ಸಮಸ್ತವನ್ನು ಕ್ರಿಸ್ತನಲ್ಲಿ ಒಂದುಗೂಡಿಸುವುದೇ ಆ ಸಂಕಲ್ಪವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಕಾಲವು ಸಂಪೂರ್ಣಗೊಂಡಾಗ ಇಹಪರಗಳಲ್ಲಿರುವ ಸಮಸ್ತವನ್ನು ಕ್ರಿಸ್ತಯೇಸುವಿನಲ್ಲಿ ಒಂದುಗೂಡಿಸುವುದೇ ಈ ಯೋಜನೆಯ ಇಂಗಿತ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಕಾಲವು ಪರಿಪೂರ್ಣವಾದಾಗ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದುಗೂಡಿಸಿ ಆತನಿಗೆ ಅಧೀನ ಪಡಿಸಬೇಕೆಂಬುದೇ ದೇವರ ಯೋಜನೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

10 ರಚನಾಕ್ನಿ ಅನಿ ಸರ್‍ಗಾತ್ ಅನಿ ಜಗಾತ್ಲೆ ಸಗ್ಳೆ ಎಕಾಕ್ಡೆ ಗೊಳಾ ಕರುನ್ ಕ್ರಿಸ್ತಾಚ್ಯಾ ಅದಿಕಾರಾಚ್ಯಾ ಖಾಯ್ಲ್ ಕರುಚೆ ಮನ್ತಲೊ ತೆಜೊ ಉದ್ದೆಶ್ ಹೊತ್ತೊ, ಹಿ ಯವ್ಜನ್ ದೆವ್ ಸಮಾ ಯೆಳ್ ಯೆಲ್ಲ್ಯಾ ತನ್ನಾ ಫುರಾ ಕರ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 1:10
29 ತಿಳಿವುಗಳ ಹೋಲಿಕೆ  

ಕ್ರಿಸ್ತ ಯೇಸು ಶಿಲುಬೆಯ ಮೇಲೆ ಸುರಿಸಿದ ರಕ್ತದ ಮೂಲಕವಾಗಿ, ದೇವರು ಸಮಾಧಾನವನ್ನು ಉಂಟುಮಾಡಿ, ಕ್ರಿಸ್ತನ ಮೂಲಕವೇ ಭೂಪರಲೋಕಗಳಲ್ಲಿರುವ ಎಲ್ಲವನ್ನೂ ತಮ್ಮೊಂದಿಗೆ ಸಂಧಾನಪಡಿಸಿಕೊಂಡರು.


ಆದರೆ ನಿಯಮಿತ ಕಾಲವು ಪರಿಪೂರ್ಣವಾದಾಗ, ದೇವರು ತಮ್ಮ ಮಗನನ್ನು ಸ್ತ್ರೀಯಿಂದ ಹುಟ್ಟಿದವನಾಗಿಯೂ ನಿಯಮಕ್ಕೆ ಒಳಗಾದವನನ್ನಾಗಿಯೂ ಕಳುಹಿಸಿಕೊಟ್ಟರು.


“ಆ ಅರಸರ ದಿವಸಗಳಲ್ಲಿ ಪರಲೋಕದ ದೇವರು ಎಂದಿಗೂ ನಾಶವಾಗದ ರಾಜ್ಯವನ್ನು ಸ್ಥಾಪಿಸುವರು. ಅದು ಬೇರೆ ಜನರಿಗೆ ಸೇರಿ ಹೋಗುವುದಿಲ್ಲ. ಅದು ಆ ರಾಜ್ಯಗಳನ್ನೆಲ್ಲಾ ಧ್ವಂಸಮಾಡಿ, ಮುಗಿಸಿ, ತಾನು ಎಂದೆಂದಿಗೂ ನಿಲ್ಲುವುದು.


“ಕಾಲವು ಪರಿಪೂರ್ಣವಾಗಿದೆ, ದೇವರ ರಾಜ್ಯವು ಸಮೀಪಿಸಿದೆ, ಪಶ್ಚಾತ್ತಾಪಪಟ್ಟು ಸುವಾರ್ತೆಯನ್ನು ನಂಬಿರಿ,” ಎಂದು ಹೇಳಿದರು.


ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ ತಮ್ಮ ಪುತ್ರ ಆಗಿರುವ ಕ್ರಿಸ್ತ ಯೇಸುವಿನ ಮುಖಾಂತರ ಮಾತನಾಡಿದ್ದಾರೆ. ಈ ಕ್ರಿಸ್ತ ಯೇಸುವನ್ನೇ ದೇವರು ಎಲ್ಲಕ್ಕೂ ಬಾಧ್ಯರನ್ನಾಗಿ ನೇಮಿಸಿದರು. ಇವರ ಮೂಲಕವೇ ಇಡೀ ವಿಶ್ವವನ್ನು ಉಂಟುಮಾಡಿದರು.


ಏಕೆಂದರೆ ಭೂಪರಲೋಕಗಳಲ್ಲಿರುವ ಕಾಣುವಂತವುಗಳಾಗಲಿ, ಕಾಣದಂತವುಗಳಾಗಲಿ ಸಮಸ್ತವು ಇವರ ಮೂಲಕವೇ ಸೃಷ್ಟಿಸಲಾಯಿತು. ಸಿಂಹಾಸನಗಳಾಗಲಿ, ಪ್ರಭುತ್ವಗಳಾಗಲಿ, ದೊರೆತನಗಳಾಗಲಿ, ಅಧಿಕಾರಗಳಾಗಲಿ ಕ್ರಿಸ್ತನಲ್ಲಿಯೇ ಸೃಷ್ಟಿಗೊಂಡವು. ಸರ್ವವೂ ಕ್ರಿಸ್ತರಿಂದಲೂ ಕ್ರಿಸ್ತರಿಗಾಗಿಯೂ ಸೃಷ್ಟಿಹೊಂದಿತು.


ಅವರು ಜಗದುತ್ಪತ್ತಿಗೆ ಮೊದಲೇ ನೇಮಕಗೊಂಡು ಈ ಅಂತ್ಯಕಾಲಗಳಲ್ಲಿ ನಿಮಗಾಗಿ ಪ್ರತ್ಯಕ್ಷರಾದರು.


ಅವರು ಹೊಸಹಾಡನ್ನು ಹಾಡುತ್ತಾ, “ನೀವು ಸುರುಳಿಯನ್ನು ತೆಗೆದುಕೊಂಡು ಅದರ ಮುದ್ರೆಗಳನ್ನು ಒಡೆಯುವುದಕ್ಕೆ ಯೋಗ್ಯರಾಗಿದ್ದೀರಿ. ಏಕೆಂದರೆ ನೀವು ವಧಿತರಾಗಿ, ನಿಮ್ಮ ರಕ್ತದಿಂದ ಸಕಲ ಕುಲ, ಭಾಷೆ, ಪ್ರಜೆ, ರಾಷ್ಟ್ರಗಳವರಿಂದ ಮನುಷ್ಯರನ್ನು ದೇವರಿಗಾಗಿ ಕೊಂಡುಕೊಂಡಿರುವಿರಿ.


ದೇವರು ಸಮಸ್ತವನ್ನೂ ಕ್ರಿಸ್ತನ ಪಾದಗಳ ಕೆಳಗೆ ಅಧೀನಮಾಡಿ, ಅವರನ್ನು ಎಲ್ಲದರ ಮೇಲೆ ಶಿರಸ್ಸಾಗಿರಲು ಸಭೆಗೋಸ್ಕರ ನೇಮಿಸಿದ್ದಾರೆ.


ಪ್ರತಿ ಪುರುಷನಿಗೂ ಕ್ರಿಸ್ತನು ಶಿರಸ್ಸು, ಸ್ತ್ರೀಗೆ ಪುರುಷನು ಶಿರಸ್ಸು ಮತ್ತು ಕ್ರಿಸ್ತನಿಗೆ ದೇವರು ಶಿರಸ್ಸಾಗಿದ್ದಾರೆ, ಎಂಬುದನ್ನು ನೀವು ತಿಳಿಯಬೇಕೆಂಬುದು ನನ್ನ ಅಪೇಕ್ಷೆ.


ಆ ದಿನದಲ್ಲಿ, ಬಿದ್ದುಹೋದ ದಾವೀದನ ಗುಡಾರವನ್ನು ನಾನು ನಿಲ್ಲಿಸಿ ಅದರ ಮುರಿದ ಗೋಡೆಗಳನ್ನು ಸರಿಪಡಿಸುತ್ತೇನೆ. ಮತ್ತು ಅದರ ಅವಶೇಷಗಳನ್ನು ಪುನಃಸ್ಥಾಪಿಸಿ ಮತ್ತು ಅದನ್ನು ಮೊದಲಿನಂತೆ ಪುನಃ ನಿರ್ಮಿಸುವೆನು.


ರಾಜದಂಡವನ್ನು ಹಿಡಿಯತಕ್ಕವನು ಶೀಲೋವಿನಿಂದ ಬರುವ ತನಕ, ಯೆಹೂದನ ಕೈಯಿಂದ ರಾಜದಂಡವಾಗಲೀ, ಆಡಳಿತಗಾರನ ಅಧಿಕಾರವಾಗಲೀ ಬಿಟ್ಟು ಹೋಗುವುದಿಲ್ಲ. ಎಲ್ಲಾ ಜನಾಂಗಗಳು ಅವನಿಗೆ ವಿಧೇಯವಾಗುವುವು.


ಏಕೆಂದರೆ ನಮ್ಮೊಂದಿಗೆ ಅವರು ಪರಿಪೂರ್ಣರಾಗಬೇಕೆಂದು ದೇವರು ನಮಗೋಸ್ಕರ ಉತ್ತಮವಾದದ್ದನ್ನು ಸಂಕಲ್ಪಿಸಿದ್ದಾರೆ.


ಯೆಹೂದ್ಯರು ಯೆಹೂದ್ಯರಲ್ಲದವರು, ಸುನ್ನತಿ ಹೊಂದಿದವರು, ಸುನ್ನತಿ ಹೊಂದದವರು, ನಾಗರಿಕ, ಅನಾಗರಿಕ, ಆಳು, ಸ್ವತಂತ್ರರು ಎಂಬ ಭೇದವಿಲ್ಲ. ಆದರೆ ಕ್ರಿಸ್ತ ಯೇಸುವೇ ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾರೆ.


ಹೀಗೆ ಕ್ರಿಸ್ತ ಯೇಸು ತಮ್ಮ ದೇಹವನ್ನು ಶಿಲುಬೆಯಲ್ಲಿ ಸಮರ್ಪಿಸಿದ್ದರಿಂದ ನಿಯಮದ ಆಜ್ಞೆಗಳುಳ್ಳ ಶಾಸನಗಳನ್ನು ರದ್ದುಗೊಳಿಸಿದರು. ಈ ರೀತಿಯಾಗಿ ಇವೆರಡೂ ಗುಂಪಿನವರಿಂದ ಒಬ್ಬ ನೂತನ ಮಾನವತ್ವವನ್ನು ತಮ್ಮಲ್ಲಿ ಸೃಷ್ಟಿಸಿ ಸಮಾಧಾನವನ್ನು ಉಂಟುಮಾಡಿದರು.


ಆ ಮನುಷ್ಯರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನಗಳಾಗಿವೆ, ಯುಗಾಂತ್ಯಕ್ಕೆ ಬಂದಿರುವ ನಮಗೆ ಎಚ್ಚರಿಕೆಯ ಮಾತುಗಳಾಗಿವೆ.


ನನ್ನ ಮುಂದೆ ಎಲ್ಲಾ ಜನಾಂಗದವರನ್ನು ಒಟ್ಟುಗೂಡಿಸಲಾಗುವುದು. ಆಗ ಕುರುಬನು ತನ್ನ ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸುವಂತೆಯೇ ನಾನು ಅವರನ್ನು ಪ್ರತ್ಯೇಕಿಸುವೆನು.


“ಇಗೋ, ನಾನು ನನ್ನ ದೂತನನ್ನು ಕಳುಹಿಸುತ್ತೇನೆ. ಅವನು ನನ್ನ ಮುಂದೆ ಮಾರ್ಗವನ್ನು ಸಿದ್ಧಮಾಡುವನು. ನೀವು ಹುಡುಕುವ ಕರ್ತರು ಫಕ್ಕನೆ ತಮ್ಮ ಆಲಯಕ್ಕೆ ಬರುವರು. ನೀವು ಇಷ್ಟಪಡುವ ಒಡಂಬಡಿಕೆಯ ದೂತನೇ, ಇಗೋ, ಬರುತ್ತಾನೆ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.


ಅವು ಅನ್ನಪಾನಾದಿಗಳಲ್ಲಿಯೂ ವಿವಿಧ ಸ್ನಾನಗಳಲ್ಲಿಯೂ ಮುಂತಾದ ಬಾಹ್ಯಾಚಾರದ ಕ್ರಮಗಳಾಗಿದ್ದವು. ಅವು ಹೊಸ ಕ್ರಮಕಾಲದವರೆಗೆ ಮಾತ್ರ ನೇಮಕವಾಗಿದ್ದವು.


ನಿಮಗೋಸ್ಕರವಾಗಿ ನನಗೆ ಕೊಡಲಾದ ದೇವರ ಕೃಪೆಯ ಕಾರ್ಯಭಾರವನ್ನು ನೀವು ಕೇಳಿದ್ದೀರಿ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು