ಎಜ್ರ 8:35 - ಕನ್ನಡ ಸಮಕಾಲಿಕ ಅನುವಾದ35 ಸೆರೆಯಿಂದ ಮರಳಿ ಬಂದವರು ಇಸ್ರಾಯೇಲ್ ದೇವರಿಗೆ ದಹನಬಲಿಗಳನ್ನು ಅರ್ಪಿಸಿದರು. ಸಮಸ್ತ ಇಸ್ರಾಯೇಲರಿಗೋಸ್ಕರ ಹನ್ನೆರಡು ಹೋರಿಗಳನ್ನೂ, ತೊಂಬತ್ತಾರು ಟಗರುಗಳನ್ನೂ, ಎಪ್ಪತ್ತೇಳು ಕುರಿಮರಿಗಳನ್ನೂ, ದೋಷಪರಿಹಾರಕ್ಕಾಗಿ ಹನ್ನೆರಡು ಹೋತಗಳನ್ನೂ ಅರ್ಪಿಸಿದರು. ಇವೆಲ್ಲಾ ಯೆಹೋವ ದೇವರಿಗೆ ದಹನಬಲಿಯಾಗಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201935 ದೇಶಾಂತರದ ಸೆರೆಯಿಂದ ಹಿಂತಿರುಗಿ ಬಂದವರು ಇಸ್ರಾಯೇಲರ ದೇವರಿಗೆ ತೊಂಭತ್ತಾರು ಟಗರುಗಳನ್ನೂ, ಎಪ್ಪತ್ತೇಳು ಕುರಿಮರಿಗಳನ್ನೂ, ಸಮಸ್ತ ಇಸ್ರಾಯೇಲರ ನಿಮಿತ್ತವಾಗಿ ಹನ್ನೆರಡು ಹೋತಗಳನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದರು. ಇವೆಲ್ಲಾ ಯೆಹೋವನಿಗೆ ಸರ್ವಾಂಗಹೋಮವೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)35 ದೇಶಾಂತರದ ಸೆರೆಯಿಂದ ಮರಳಿ ಬಂದವರು ಇಸ್ರಯೇಲ್ ದೇವರಿಗೆ ತೊಂಬತ್ತಾರು ಟಗರುಗಳನ್ನು, ಎಪ್ಪತ್ತೇಳು ಕುರಿಮರಿಗಳನ್ನು, ಸಮಸ್ತ ಇಸ್ರಯೇಲರ ಪರವಾಗಿ ಹನ್ನೆರಡು ಹೋರಿಗಳನ್ನು ಹಾಗು ದೋಷಪರಿಹಾರಾರ್ಥವಾಗಿ ಹನ್ನೆರಡು ಹೋತಗಳನ್ನು ದಹನಬಲಿಗಾಗಿ ಸಮರ್ಪಿಸಿದರು. ಅಂತೆಯೇ ಇವೆಲ್ಲವೂ ಸರ್ವೇಶ್ವರನಿಗೆ ದಹನಬಲಿಯಾಗಿ ಸಮರ್ಪಿತವಾದುವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)35 ದೇಶಾಂತರದ ಸೆರೆಯಿಂದ ತಿರಿಗಿ ಬಂದವರು ಇಸ್ರಾಯೇಲ್‍ದೇವರಿಗೆ ತೊಂಭತ್ತಾರು ಟಗರುಗಳನ್ನೂ ಎಪ್ಪತ್ತೇಳು ಕುರಿ ಮರಿಗಳನ್ನೂ ಸಮಸ್ತ ಇಸ್ರಾಯೇಲ್ಯರ ನಿವಿುತ್ತವಾಗಿ ಹನ್ನೆರಡು ಹೋರಿಗಳನ್ನೂ ದೋಷಪರಿಹಾರಾರ್ಥವಾಗಿ ಹನ್ನೆರಡು ಹೋತಗಳನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದರು. ಇವೆಲ್ಲಾ ಯೆಹೋವನಿಗೆ ಸರ್ವಾಂಗ ಹೋಮವೇ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್35 ಆಮೇಲೆ ಸೆರೆಯಿಂದ ಹಿಂತಿರುಗಿಬಂದ ಯೆಹೂದ್ಯರು ಇಸ್ರೇಲ್ ದೇವರಿಗೆ ಇಸ್ರೇಲರ ಎಲ್ಲಾ ಕುಲಗಳವರಿಗಾಗಿ ಹನ್ನೆರಡು ಹೋರಿಗಳನ್ನು, ತೊಂಭತ್ತಾರು ಟಗರುಗಳನ್ನು, ಎಪ್ಪತ್ತೇಳು ಗಂಡು ಕುರಿಗಳನ್ನು ಮತ್ತು ಹನ್ನೆರಡು ಗಂಡು ಆಡುಗಳನ್ನು ಸರ್ವಾಂಗಹೋಮ ಯಜ್ಞವನ್ನಾಗಿಯೂ ಮತ್ತು ಪಾಪಪರಿಹಾರಕ ಯಜ್ಞವನ್ನಾಗಿಯೂ ಸಮರ್ಪಿಸಿದರು. ಅಧ್ಯಾಯವನ್ನು ನೋಡಿ |