Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಜ್ರ 8:1 - ಕನ್ನಡ ಸಮಕಾಲಿಕ ಅನುವಾದ

1 ಅರಸನಾದ ಅರ್ತಷಸ್ತನ ಆಳಿಕೆಯಲ್ಲಿ ಬಾಬಿಲೋನಿನಿಂದ ನನ್ನ ಸಂಗಡ ಹೊರಟು ಬಂದವರ ಕುಟುಂಬಗಳಲ್ಲಿ ಮುಖ್ಯಸ್ಥರು ಯಾರೆಂದರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಅರ್ತಷಸ್ತ ರಾಜನ ಆಳ್ವಿಕೆಯಲ್ಲಿ ನನ್ನೊಂದಿಗೆ ಬಾಬಿಲೋನಿನಿಂದ ಹೊರಟ ಗೋತ್ರಪ್ರಧಾನರ ಮತ್ತು ಅವರ ಸಂತಾನದವರ ವಿವರಣೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಅರ್ತಷಸ್ತನ ಆಳ್ವಿಕೆಯಲ್ಲಿ ನನ್ನೊಂದಿಗೆ ಬಾಬಿಲೋನಿನಿಂದ ಹೊರಟ ಗೋತ್ರಪ್ರಧಾನರ ಮತ್ತು ಅವರ ಸಂತಾನದವರ ವಿವರ ಹೀಗಿದೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಅರ್ತಷಸ್ತನ ಆಳಿಕೆಯಲ್ಲಿ ನನ್ನೊಂದಿಗೆ ಬಾಬೆಲಿನಿಂದ ಹೊರಟ ಗೋತ್ರಪ್ರಧಾನರ ಮತ್ತು ಅವರ ಸಂತಾನದವರ ವಿವರಣೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಬಾಬಿಲೋನಿನಿಂದ ಜೆರುಸಲೇಮಿಗೆ ನನ್ನೊಂದಿಗೆ (ಎಜ್ರ) ಹೊರಟ ಇಸ್ರೇಲರ ಕುಲಪ್ರಧಾನರ ಮತ್ತು ಇತರ ಜನರ ವಿವರಗಳು ಹೀಗಿದೆ. ಅರಸನಾದ ಅರ್ತಷಸ್ತನ ಆಳ್ವಿಕೆಯ ಕಾಲದಲ್ಲಿ ನಾವು ಜೆರುಸಲೇಮಿಗೆ ಬಂದು ಸೇರಿದೆವು. ಬಂದವರ ಹೆಸರುಗಳು ಹೀಗಿವೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಜ್ರ 8:1
16 ತಿಳಿವುಗಳ ಹೋಲಿಕೆ  

ಅವನ ಸಂಗಡ ಇಸ್ರಾಯೇಲರಲ್ಲಿಯೂ ಯಾಜಕರಲ್ಲಿಯೂ ಲೇವಿಯರಲ್ಲಿಯೂ ಹಾಡುಗಾರರಲ್ಲಿಯೂ ದ್ವಾರಪಾಲಕರಲ್ಲಿಯೂ ದೇವಾಲಯದ ಸೇವಕರಲ್ಲಿಯೂ ಕೆಲವರು ಅರಸನಾದ ಅರ್ತಷಸ್ತನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಯೆರೂಸಲೇಮಿಗೆ ಹೋದರು.


ನನ್ನ ರಾಜ್ಯದಲ್ಲಿರುವ ಇಸ್ರಾಯೇಲರಲ್ಲಿ, ಯಾಜಕರಲ್ಲಿ ಹಾಗು ಲೇವಿಯರಲ್ಲಿ ಯಾರಿಗೆ ಯೆರೂಸಲೇಮಿಗೆ ಹೋಗುವುದಕ್ಕೆ ಮನಸ್ಸಿದೆಯೋ, ಅವರೆಲ್ಲರು ನಿನ್ನೊಂದಿಗೆ ಹೋಗಬಹುದೆಂದು ಅಪ್ಪಣೆ ಮಾಡುತ್ತೇನೆ.


ಇವರು ತಮ್ಮ ವಂಶಾವಳಿಯ ದಾಖಲಾತಿಗಳಲ್ಲಿ ತಮ್ಮ ಹೆಸರುಗಳನ್ನು ಹುಡುಕಿದರು, ಆದರೆ ಅವು ಸಿಕ್ಕದೆ ಹೋದದ್ದರಿಂದ ಅವರು ಅಶುದ್ಧರೆಂದು ಪರಿಗಣಿಸಿ ಯಾಜಕ ಉದ್ಯೋಗದಿಂದ ಬಹಿಷ್ಕಾರವಾದರು.


ಆಗ ಯೆಹೂದ ಹಾಗೂ ಬೆನ್ಯಾಮೀನ್ ಕುಟುಂಬಗಳ ಮುಖ್ಯಸ್ಥರೂ, ಯಾಜಕರೂ, ಲೇವಿಯರೂ, ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯವನ್ನು ಕಟ್ಟುವುದಕ್ಕೆ ಹೋಗಲು ಯೆಹೋವ ದೇವರಿಂದ ಪ್ರೇರಿತರಾದವರೆಲ್ಲರೂ ಎದ್ದರು.


ಪರಾಕ್ರಮಶಾಲಿಗಳಲ್ಲಿ ಕುಟುಂಬಗಳ ಮುಖ್ಯಸ್ಥರ ಲೆಕ್ಕವು 2,600 ಮಂದಿ.


ಇದಲ್ಲದೆ ಬಲವುಳ್ಳವರಾದ ಯೆರೀಯನ ಸಹೋದರರು ಎರಡು ಸಾವಿರದ ಏಳು ನೂರು ಮಂದಿ ಕುಟುಂಬಗಳ ಮುಖ್ಯಸ್ಥರಾಗಿದ್ದರು. ಅರಸನಾದ ದಾವೀದನು ಇವರನ್ನು ದೇವರ ಸಮಸ್ತ ಕಾರ್ಯಗಳ ನಿಮಿತ್ತವಾಗಿಯೂ ರೂಬೇನ್ಯರ ಮೇಲೆಯೂ, ಗಾದ್ಯರ ಮೇಲೆಯೂ, ಮನಸ್ಸೆಯ ಅರ್ಧ ಗೋತ್ರದ ಮೇಲೆಯೂ ಅಧಿಪತಿಗಳಾಗಿ ಮಾಡಿದನು.


ಇವರು ಹಾಗೆಯೇ ಅರಸನಾದ ದಾವೀದನ ಸಮ್ಮುಖದಲ್ಲಿಯೂ, ಚಾದೋಕನು, ಅಹೀಮೆಲೆಕನು, ಯಾಜಕರ ಮತ್ತು ಲೇವಿಯರ ಪಿತೃಗಳ ಮುಖ್ಯಸ್ಥರು, ಇವರ ಸಮ್ಮುಖದಲ್ಲಿಯೂ, ಆರೋನನ ಪುತ್ರರಾದ ತಮ್ಮ ಸಹೋದರರಿಗೆ ಎದುರಾಗಿ ಮುಖ್ಯಸ್ಥರಾದ ಪಿತೃಗಳು ತಮ್ಮ ಕಿರಿಯ ಸಹೋದರರಿಗೆದುರಾಗಿ ಚೀಟುಗಳನ್ನು ಹಾಕಿದರು.


ಲೇವಿಯರ ಕುಟುಂಬಗಳಲ್ಲಿ ಮುಖ್ಯಸ್ಥರಾದ ಇವರು ತಮ್ಮ ವಂಶಗಳಲ್ಲಿ ಮುಖ್ಯಸ್ಥರಾಗಿದ್ದು ಯೆರೂಸಲೇಮಿನಲ್ಲಿ ವಾಸವಾಗಿದ್ದರು.


ಇಸ್ರಾಯೇಲಿನ ಎಲ್ಲಾ ಜನರನ್ನು ಅವರ ಕುಟುಂಬಗಳಿಗೆ ಅನುಗುಣವಾಗಿ ಪಟ್ಟಿಮಾಡಲಾಗಿದೆ. ಈ ಮಾಹಿತಿ ಇಸ್ರಾಯೇಲಿನ ಅರಸರ ಪುಸ್ತಕದಲ್ಲಿ ದಾಖಲಾಗಿದೆ. ಯೆಹೂದ್ಯರು ದ್ರೋಹಿಗಳಾದದರಿಂದ ಬಾಬೆಲಿಗೆ ಸೆರೆಯವರಾಗಿ ಹೋಗಬೇಕಾಯಿತು.


ಇದಲ್ಲದೆ ಆ ಪಟ್ಟಣಗಳ ಸುತ್ತಲಿದ್ದ ಊರುಗಳು ಬಾಳ್ ಪಟ್ಟಣದವರೆಗೆ ವಾಸವಾಗಿದ್ದರು. ಇವೇ ಅವರು ವಾಸವಾಗಿರುವ ಸ್ಥಳಗಳೂ, ಅವರ ವಂಶಾವಳಿಗಳೂ:


ಅರಸನ ಮುಂದೆಯೂ, ಅವನ ಸಲಹೆಗಾರರ ಮುಂದೆಯೂ, ಅರಸನ ಪರಾಕ್ರಮವುಳ್ಳ ಪ್ರಧಾನರ ಮುಂದೆಯೂ ನನಗೆ ಕೃಪೆತೋರಿಸಿದ್ದಾರೆ. ಹೀಗೆಯೇ ನನ್ನ ದೇವರಾಗಿರುವ ಯೆಹೋವ ದೇವರ ಹಸ್ತವು ನನ್ನ ಮೇಲೆ ಇದ್ದುದರಿಂದ, ನಾನು ಧೈರ್ಯಗೊಂಡು ಇಸ್ರಾಯೇಲಿನೊಳಗಿಂದ ಮುಖ್ಯಸ್ಥರನ್ನು ನನ್ನ ಸಂಗಡ ಹೋಗಲು ಕೂಡಿಸಿಕೊಂಡೆನು,” ಎಂದನು.


ಫೀನೆಹಾಸನ ವಂಶಜರಲ್ಲಿ ಗೇರ್ಷೋಮನೂ, ಈತಾಮಾರನ ವಂಶಜರಲ್ಲಿ ದಾನಿಯೇಲನೂ; ದಾವೀದನ ವಂಶಜರಲ್ಲಿ ಹಟ್ಟೂಷನೂ.


ಜೆರುಬ್ಬಾಬೆಲನ ಸಂಗಡ ಹಿಂದಿರುಗಿದವರು ಯಾರೆಂದರೆ: ಯೇಷೂವ, ನೆಹೆಮೀಯ, ಸೆರಾಯ, ರೆಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಹಾಗೂ ಬಾಣ. ಇಸ್ರಾಯೇಲ್ ಜನಾಂಗದ ಪುರುಷರ ಸಂಖ್ಯೆ:


ಈ ಎಜ್ರನು ಬಾಬಿಲೋನಿನಿಂದ ಬಂದನು, ಅವನು ಇಸ್ರಾಯೇಲ್ ದೇವರಾಗಿರುವ ಯೆಹೋವ ದೇವರು ಕೊಟ್ಟ ಮೋಶೆಯ ನಿಯಮದಲ್ಲಿ ಪಾಂಡಿತ್ಯ ಪಡೆದ ನಿಯಮಶಾಸ್ತ್ರಿ ಆಗಿದ್ದನು. ಅವನ ಮೇಲೆ ಅವನ ದೇವರಾಗಿರುವ ಯೆಹೋವ ದೇವರ ಕೈ ಇದ್ದುದರಿಂದ, ಅವನು ಕೇಳಿದ್ದನ್ನೆಲ್ಲಾ ಅರಸನು ಕೊಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು