Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಜ್ರ 5:16 - ಕನ್ನಡ ಸಮಕಾಲಿಕ ಅನುವಾದ

16 “ಆಗ ಶೆಷ್ಬಚ್ಚರನು ಬಂದು, ಯೆರೂಸಲೇಮಿನಲ್ಲಿರುವ ದೇವರ ಆಲಯಕ್ಕೆ ಅಸ್ತಿವಾರವನ್ನು ಹಾಕಿದನು. ಅಂದಿನಿಂದ ಇಂದಿನವರೆಗೂ ಕಟ್ಟುವ ಕೆಲಸ ನಡೆಯುತ್ತಾ ಇದೆ, ಇನ್ನೂ ಮುಗಿಯಲಿಲ್ಲ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಆಗ ಆ ಶೆಷ್ಬಚ್ಚರನು ಬಂದು ಯೆರೂಸಲೇಮಿನ ದೇವಾಲಯದ ಅಸ್ತಿವಾರವನ್ನು ಹಾಕಿಸಿದನು. ಅಂದಿನಿಂದ ಇಂದಿನ ವರೆಗೂ ಕಟ್ಟುವ ಕೆಲಸವು ನಡೆಯುತ್ತಿರುತ್ತದೆ. ಇನ್ನೂ ಮುಗಿದಿರುವುದಿಲ್ಲ’ ಎಂಬುದಾಗಿ ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಆಗ ಆ ಶೆಷ್ಬಚ್ಚರನು ಬಂದು ಜೆರುಸಲೇಮಿನ ದೇವಾಲಯದ ಅಸ್ತಿವಾರವನ್ನು ಹಾಕಿದನು. ಅಂದಿನಿಂದ ಇಂದಿನವರೆಗೂ ಕಟ್ಟುವ ಕೆಲಸ ನಡೆಯುತ್ತಾ ಇದೆ. ಇನ್ನೂ ಮುಗಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಆಗ ಆ ಶೆಷ್ಬಚ್ಚರನು ಬಂದು ಯೆರೂಸಲೇವಿುನ ದೇವಾಲಯದ ಅಸ್ತಿವಾರವನ್ನು ಹಾಕಿದನು. ಅಂದಿನಿಂದ ಇಂದಿನವರೆಗೂ ಕಟ್ಟುವ ಕೆಲಸವು ನಡೆಯುತ್ತಿರುತ್ತದೆ. ಇನ್ನೂ ತೀರಲಿಲ್ಲ ಎಂಬದಾಗಿ ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಹೀಗೆ ಶೆಷ್ಬಚ್ಚರನು (ಜೆರುಬ್ಬಾಬೆಲ್), ಜೆರುಸಲೇಮಿನಲ್ಲಿ ದೇವರ ಆಲಯಕ್ಕೆ ಅಸ್ತಿವಾರವನ್ನು ಹಾಕಿದನು. ಅಂದಿನಿಂದ ಇಂದಿನ ತನಕ ಕೆಲಸವು ಮುಂದುವರಿಯುತ್ತಲೇ ಇದೆ. ಆದರೆ ಅದು ಇನ್ನೂ ಸಂಪೂರ್ಣವಾಗಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಜ್ರ 5:16
11 ತಿಳಿವುಗಳ ಹೋಲಿಕೆ  

ಅರಸನಾದ ದಾರ್ಯಾವೆಷನ ಆಳಿಕೆಯ ಆರನೆಯ ವರ್ಷದ ಆಡಾರ್ ತಿಂಗಳ, ಮೂರನೆಯ ದಿವಸದಲ್ಲಿ ಈ ಆಲಯವನ್ನು ಕಟ್ಟಿ ಮುಗಿಸಲಾಯಿತು.


ಕಟ್ಟುವವರು ಯೆಹೋವ ದೇವರ ಮಂದಿರಕ್ಕೆ ಅಸ್ತಿವಾರ ಹಾಕಿದಾಗ ಇಸ್ರಾಯೇಲಿನ ಅರಸನಾದ ದಾವೀದನ ಕಟ್ಟಳೆಯ ಪ್ರಕಾರ ಯೆಹೋವ ದೇವರನ್ನು ಸ್ತುತಿಸುವುದಕ್ಕೆ ವಸ್ತ್ರಗಳನ್ನು ಧರಿಸಿಕೊಂಡವರಾಗಿ ತುತೂರಿಗಳನ್ನೂದುವ ಯಾಜಕರನ್ನೂ, ತಾಳಗಳನ್ನು ಬಡಿಯುವ ಆಸಾಫನ ಮಕ್ಕಳಾದ ಲೇವಿಯರನ್ನೂ ಸಿದ್ಧಪಡಿಸಿದರು.


ಅವರು ಯೆರೂಸಲೇಮಿನಲ್ಲಿದ್ದ ದೇವರ ಆಲಯಕ್ಕೆ ಬಂದ ಎರಡನೆಯ ವರ್ಷದ, ಎರಡನೆಯ ತಿಂಗಳಲ್ಲಿ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲನೂ, ಯೋಚಾದಾಕನ ಮಗ ಯೇಷೂವನೂ, ಉಳಿದ ಅವರ ಸಹೋದರರಾದ ಯಾಜಕರೂ, ಲೇವಿಯರೂ ಸೆರೆಯಿಂದ ಯೆರೂಸಲೇಮಿಗೆ ಬಂದ ಎಲ್ಲರೂ, ಕೆಲಸವನ್ನು ಪ್ರಾರಂಭಿಸಿ ಇಪ್ಪತ್ತು ವರ್ಷ ಪ್ರಾಯಕ್ಕೆ ಹೆಚ್ಚಿದ ಲೇವಿಯರನ್ನು ಯೆಹೋವ ದೇವರ ಆಲಯದ ಕೆಲಸ ಮಾಡುವವರ ಮೇಲೆ ಮೇಲ್ವಿಚಾರಕರನ್ನಾಗಿ ನೇಮಿಸಿದರು.


“ಆ ಏಳು ದೀಪಗಳು ಭೂಮಿಯಲ್ಲೆಲ್ಲಾ ಅತ್ತಿತ್ತ ಓಡಾಡುವ ಯೆಹೋವ ದೇವರ ಕಣ್ಣುಗಳು. ಜನರು ನೂಲುಗುಂಡನ್ನು ಜೆರುಬ್ಬಾಬೆಲನ ಕೈಯಲ್ಲಿ ನೋಡುವಾಗ ಸಂತೋಷಪಡುವರು. ಹೀಗಿರುವುದರಿಂದ ಅಲ್ಪ ಕಾರ್ಯಗಳ ದಿನವನ್ನು ತಿರಸ್ಕರಿಸಿದವರು ಯಾರು?”


ಚೆನ್ನಾಗಿ ನೆನಪಿಗೆ ತಂದುಕೊಳ್ಳಿರಿ. ಇಂದಿನಿಂದ ಇದಕ್ಕೆ ಮುಂಚೆ ಒಂಬತ್ತನೆಯ ತಿಂಗಳಿನ, ಇಪ್ಪತ್ನಾಲ್ಕನೆಯ ದಿವಸದಲ್ಲಿ, ಯೆಹೋವ ದೇವರ ಮಂದಿರದ ಅಸ್ತಿವಾರವು ಹಾಕಲಾದ ದಿನದಿಂದ ಸೂಕ್ಷ್ಮವಾಗಿ ಯೋಚಿಸಿಕೊಳ್ಳಿರಿ.


ಆಗ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲನೂ, ಯೋಚಾದಾಕನ ಮಗ ಯೇಷೂವನೂ ಎದ್ದು ಯೆರೂಸಲೇಮಿನಲ್ಲಿರುವ ದೇವರ ಆಲಯವನ್ನು ಪುನಃ ಕಟ್ಟಿಸಲು ಪ್ರಾರಂಭಿಸಿದರು. ಅವರಿಗೆ ಸಹಾಯಕರಾಗಿ ದೇವರ ಪ್ರವಾದಿಗಳು ಅವರ ಸಂಗಡ ಇದ್ದರು.


ಅದಕ್ಕೆ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟುವುದಕ್ಕೆ ನಲವತ್ತಾರು ವರ್ಷಗಳಾದವು. ನೀನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆಯೋ?” ಎಂದರು.


ಇದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನಲ್ಲಿರುವ ದೇವಾಲಯದಿಂದ ತೆಗೆದುಕೊಂಡು, ಬಾಬಿಲೋನಿನ ಮಂದಿರಕ್ಕೆ ತಂದ ದೇವಸ್ಥಾನದ ಬೆಳ್ಳಿಬಂಗಾರದ ಸಾಮಗ್ರಿಗಳನ್ನು ಅರಸನಾದ ಕೋರೆಷನು ಬಾಬಿಲೋನಿನ ಮಂದಿರದಿಂದ ತೆಗೆದುಕೊಂಡು, ತಾನು ನೇಮಿಸಿದ ಅಧಿಪತಿಯಾದ ಶೆಷ್ಬಚ್ಚರನಿಗೆ ಒಪ್ಪಿಸಿಕೊಟ್ಟನು.


ಅವನಿಗೆ, ‘ಈ ಸಾಮಗ್ರಿಗಳನ್ನು ತೆಗೆದುಕೊಂಡು ಯೆರೂಸಲೇಮಿನಲ್ಲಿರುವ ದೇವಾಲಯಕ್ಕೆ ತೆಗೆದುಕೊಂಡು ಹೋಗು. ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟು,’ ಎಂದು ಆಜ್ಞಾಪಿಸಿದನು.


“ಜೆರುಬ್ಬಾಬೆಲನ ಕೈಗಳು ಈ ಆಲಯದ ಅಸ್ತಿವಾರವನ್ನು ಹಾಕಿವೆ, ಅವನ ಕೈಗಳೇ ಅದನ್ನು ಪೂರೈಸುವುವು. ಆಗ ಸರ್ವಶಕ್ತರಾದ ಯೆಹೋವ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆಂದು ತಿಳಿಯುವಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು