Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಜ್ರ 3:4 - ಕನ್ನಡ ಸಮಕಾಲಿಕ ಅನುವಾದ

4 ಇದಲ್ಲದೆ ದೇವರ ನಿಯಮದಲ್ಲಿ ಬರೆದಿರುವಂತೆ ಅವರು ಗುಡಾರಗಳ ಹಬ್ಬವನ್ನು ಆಚರಿಸಿ ಪ್ರತಿದಿನದ ಕಾರ್ಯಕ್ಕೆ ತಕ್ಕ ನೇಮಕದ ಹಾಗೆ ಲೆಕ್ಕದಿಂದ ಪ್ರತಿದಿನದ ದಹನಬಲಿಗಳನ್ನು ಅರ್ಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಇದಲ್ಲದೆ ಶಾಸ್ತ್ರದಲ್ಲಿ ಬರೆದಿರುವಂತೆ ಅವರು ಪರ್ಣಶಾಲೆಗಳ ಜಾತ್ರೆಯನ್ನು ಆಚರಿಸಿ, ಪ್ರತಿದಿನ ನಿಗದಿಪಡಿಸಿದ ವಿಧಿಗನುಸಾರವಾದ ಸರ್ವಾಂಗಹೋಮಗಳನ್ನು ಅರ್ಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಇದಲ್ಲದೆ ಶಾಸ್ತ್ರದಲ್ಲಿ ಬರೆದಿರುವಂತೆ ಅವರು ಪರ್ಣಕುಟೀರಗಳ ಜಾತ್ರೆಯನ್ನು ಆಚರಿಸಿ, ದಿನಕ್ಕೆ ಇಷ್ಟಿಷ್ಟೆಂಬ ವಿಧಿಗನುಸಾರವಾಗಿ ಪ್ರತಿದಿನವೂ ದಹನಬಲಿಗಳನ್ನರ್ಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಇದಲ್ಲದೆ ಶಾಸ್ತ್ರದಲ್ಲಿ ಬರೆದಿರುವಂತೆ ಅವರು ಪರ್ಣಶಾಲೆಗಳ ಜಾತ್ರೆಯನ್ನು ಆಚರಿಸಿ ದಿನಕ್ಕೆ ಇಷ್ಟಿಷ್ಟೆಂಬ ವಿಧಿಗನುಸಾರವಾಗಿ ಪ್ರತಿದಿನವೂ ಸರ್ವಾಂಗಹೋಮಗಳನ್ನರ್ಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಇದಲ್ಲದೆ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ ಪರ್ಣಶಾಲೆಗಳ ಹಬ್ಬವನ್ನು ಆಚರಿಸಿದರು. ಹಬ್ಬದ ಪ್ರತಿ ದಿವಸಗಳಲ್ಲಿ ನೇಮಿತ ಸರ್ವಾಂಗಹೋಮಗಳನ್ನು ಅರ್ಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಜ್ರ 3:4
14 ತಿಳಿವುಗಳ ಹೋಲಿಕೆ  

“ನೀವು ಬಿತ್ತಿದ ಹೊಲದಲ್ಲಿ ಪ್ರಥಮ ಫಲವು ದೊರೆತಾಗ ಸುಗ್ಗಿ ಹಬ್ಬವನ್ನು ಆಚರಿಸಬೇಕು. “ಹೊಲತೋಟಗಳ ಬೆಳೆಯನ್ನು ಕೂಡಿಸುವಾಗ ಅಂದರೆ, ವರ್ಷದ ಕೊನೆಯಲ್ಲಿ ಫಲಸಂಗ್ರಹದ ಹಬ್ಬವನ್ನು ಆಚರಿಸಬೇಕು.


ಹಬ್ಬದ ಆ ಮಹಾದಿವಸವಾದ ಕಡೆಯ ದಿನದಲ್ಲಿ ಯೇಸು ನಿಂತುಕೊಂಡು, “ಯಾರಿಗಾದರೂ ಬಾಯಾರಿಕೆಯಾಗಿದ್ದರೆ ಅವರು ನನ್ನ ಬಳಿಗೆ ಬಂದು ಕುಡಿಯಲಿ.


ಆಗ ಯೆಹೂದ್ಯರ ಗುಡಾರಗಳ ಹಬ್ಬವು ಹತ್ತಿರವಾಗಿತ್ತು.


ಅವನ ಜೀವಿತ ಕಾಲವೆಲ್ಲಾ ಸಾಯುವ ತನಕ, ಅವನಿಗೆ ಬೇಕಾಗಿದ್ದ ಎಲ್ಲಾ ಪದಾರ್ಥಗಳು ಬಾಬಿಲೋನಿನ ಅರಸನಿಂದಲೇ ಪ್ರತಿನಿತ್ಯವೂ ದೊರಕುತ್ತಿದ್ದವು.


“ಬಲಿಪೀಠದ ಮೇಲೆ ನೀನು ಅರ್ಪಿಸಬೇಕಾದದ್ದು ಇದೇ: ಒಂದು ವರ್ಷದ ಎರಡು ಕುರಿಮರಿಗಳನ್ನು ಪ್ರತಿದಿನ ಬಿಟ್ಟುಬಿಡದೆ ದಹನಬಲಿಯಾಗಿ ಅರ್ಪಿಸಬೇಕು.


ಇದಲ್ಲದೆ ಬಿಟ್ಟಿಕೆಲಸ ಮಾಡಿಸುವವರು, “ಹುಲ್ಲು ಇದ್ದಾಗ ನಿಮ್ಮ ಕೆಲಸಗಳನ್ನು ಮಾಡಿದಂತೆಯೇ, ಪ್ರತಿಯೊಂದು ದಿನದಲ್ಲಿ, ಆ ದಿನದ ಕೆಲಸವನ್ನು ತೀರಿಸಿಬಿಡಬೇಕು,” ಎಂದು ಹೇಳಿ ಅವರನ್ನು ತ್ವರೆಪಡಿಸಿದರು.


ಪ್ರತಿದಿನದ ಅವಶ್ಯಕತೆಗಳಿಗೆ ಅನುಗುಣವಾಗಿ ನಿಯಮಿತವಾಗಿ ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ಸೇವೆ ಸಲ್ಲಿಸಲು ದಾವೀದನು ಆಸಾಫ್ ಮತ್ತು ಅವನ ಸಹಚರರನ್ನು ನೇಮಿಸಿದನು.


ವಂಶಾವಳಿಯ ದಾಖಲೆಯ ಪ್ರಕಾರ ಮೂರು ವರ್ಷ ಪ್ರಾಯ ಮೊದಲ್ಗೊಂಡು ಮೇಲಿರುವ ಗಂಡು ಮಕ್ಕಳು ಹೊರತಾಗಿ ಯೆಹೋವ ದೇವರ ಆಲಯದಲ್ಲಿ ಪ್ರವೇಶಿಸುವವರೆಲ್ಲರಿಗೆ ಅವರ ಕೆಲಸಗಳಲ್ಲಿ ಅವರ ಸರತಿಗಳ ಪ್ರಕಾರ ಅವರ ಸೇವೆಗೆ ಅವರವರ ದಿನದ ಭಾಗವನ್ನು ಕೊಡುವುದಕ್ಕೂ,


ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,


“ ‘ಇದಲ್ಲದೆ ನಿಮ್ಮ ಹರಕೆಯನ್ನೂ ನಿಮ್ಮ ಉಚಿತವಾದ ಬಲಿಗಳನ್ನೂ ನಿಮ್ಮ ದಹನಬಲಿಗಳನ್ನೂ ನಿಮ್ಮ ಧಾನ್ಯಪಾನ ಅರ್ಪಣೆಗಳನ್ನೂ ನಿಮ್ಮ ಸಮಾಧಾನ ಬಲಿಗಳನ್ನೂ ನೀವು ನಿಮ್ಮ ಹಬ್ಬಗಳಲ್ಲಿ ಯೆಹೋವ ದೇವರಿಗೆ ಮಾಡತಕ್ಕೆ ಸಮರ್ಪಣೆಗಳು ಇವೇ.’ ”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು