ಎಜ್ರ 3:3 - ಕನ್ನಡ ಸಮಕಾಲಿಕ ಅನುವಾದ3 ಸುತ್ತಮುತ್ತಲಿನ ಜನರ ಭಯವಿದ್ದರೂ, ಅವರು ಬಲಿಪೀಠವನ್ನು ಅದರ ಅಸ್ತಿವಾರದ ಮೇಲೆ ಕಟ್ಟಿದರು. ಅದರ ಮೇಲೆ ಯೆಹೋವ ದೇವರಿಗೆ ದಹನಬಲಿಗಳನ್ನು ಉದಯದಲ್ಲಿಯೂ, ಸಾಯಂಕಾಲದಲ್ಲಿಯೂ ಅರ್ಪಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಅವರು ಸುತ್ತಣ ಪ್ರಾಂತ್ಯಗಳ ಜನರಿಗೆ ಹೆದರಿಕೊಂಡಿದ್ದರಿಂದ ವೇದಿಯನ್ನು ಅದರ ಸ್ಥಳದಲ್ಲಿ ಕಟ್ಟಿ, ಅದರ ಮೇಲೆ ಯೆಹೋವನಿಗೋಸ್ಕರ ಮುಂಜಾನೆಯ ಹಾಗು ಸಾಯಂಕಾಲಗಳ ಸರ್ವಾಂಗಹೋಮಗಳನ್ನು ಅರ್ಪಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಸುತ್ತಮುತ್ತಲಿನ ಜನರಿಗೆ ಅವರು ಹೆದರಿದರು. ಈ ಕಾರಣ ಪೀಠವನ್ನು ಅದರ ಸ್ಥಳದಲ್ಲೇ ಕಟ್ಟಿ, ಅದರ ಮೇಲೆ ಸರ್ವೇಶ್ವರನಿಗೆ, ಬೆಳಿಗ್ಗೆ ಹಾಗು ಸಂಜೆ ವೇಳೆಯ ದಹನಬಲಿ ದಾನಗಳನ್ನು ಅರ್ಪಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಅವರು ಸುತ್ತಣ ಪ್ರಾಂತಗಳ ಜನರಿಗೆ ಹೆದರಿಕೊಂಡಿದ್ದರಿಂದ ವೇದಿಯನ್ನು ಅದರ ಸ್ಥಳದಲ್ಲಿ ಕಟ್ಟಿ ಅದರ ಮೇಲೆ ಯೆಹೋವನಿಗೋಸ್ಕರ ಪ್ರಾತಃಸ್ಸಾಯಂಕಾಲಗಳ ಸರ್ವಾಂಗಹೋಮಗಳನ್ನು ಅರ್ಪಿಸಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ತಮ್ಮ ಸುತ್ತಲು ವಾಸಿಸುವ ಅನ್ಯಜನರಿಗೆ ಅವರು ಭಯಪಟ್ಟರೂ ಹಳೆಯ ಅಸ್ತಿವಾರದ ಮೇಲೆ ವೇದಿಕೆಯನ್ನು ಕಟ್ಟಿದರು. ಅವರು ಹಾಗೆ ಮಾಡುವುದನ್ನು ನಿಲ್ಲಿಸಲಿಲ್ಲ. ಕಟ್ಟಿ ಮುಗಿಸಿದ ಬಳಿಕ ಬೆಳಿಗ್ಗೆ, ಸಾಯಂಕಾಲ ಹೋಮಯಜ್ಞಾದಿಗಳನ್ನು ಸಮರ್ಪಿಸಿದರು. ಅಧ್ಯಾಯವನ್ನು ನೋಡಿ |