ಎಜ್ರ 2:1 - ಕನ್ನಡ ಸಮಕಾಲಿಕ ಅನುವಾದ1 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ, ಬಾಬಿಲೋನಿಗೆ ಸೆರೆಯಾಗಿ ಹೋಗಿ, ಅನಂತರ ಬಂಧನದಿಂದ ಬಿಡುಗಡೆಯಾಗಿ ಯೆರೂಸಲೇಮಿಗೂ, ಯೆಹೂದಕ್ಕೂ, ತಮ್ಮ ತಮ್ಮ ಪಟ್ಟಣಗಳಿಗೂ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಬಾಬಿಲೋನಿಗೆ ಸೆರೆ ಒಯ್ಯಲ್ಪಟ್ಟವರಲ್ಲಿ ಯೆರೂಸಲೇಮಿಗೂ ಯೆಹೂದ ಪ್ರಾಂತ್ಯದ ಸ್ವಂತ ಪಟ್ಟಣಗಳಿಗೂ ಸೆರೆಯಿಂದ ಹಿಂತಿರುಗಿ ಬಂದ (ಯೆಹೂದ) ಸಂಸ್ಥಾನದವರ ಜನಗಣತಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಸೆರೆಯಿಂದ ಮರಳಿ ಬಂದ ಯೆಹೂದ್ಯ ಸಮಾಜದವರ ಅಂಕೆಸಂಖ್ಯೆ ಹೀಗಿದೆ: ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಬಾಬಿಲೋನಿನ ಸೆರೆಯಲ್ಲಿ ಬಂಧಿಸಿದ್ದವರಲ್ಲಿ ಬಿಡುಗಡೆ ಹೊಂದಿ ಹಿಂತಿರುಗಿದವರು ಇವರು: ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಸೆರೆಯಿಂದ ತಿರಿಗಿ ಬಂದ [ಯೆಹೂದ] ಸಂಸ್ಥಾನದವರ ಖಾನೇಷುಮಾರಿ. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಂದ ಬಾಬೆಲಿಗೆ ಸೆರೆಯೊಯ್ಯಲ್ಪಟ್ಟವರಲ್ಲಿ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಸೆರೆಯಿಂದ ಮರಳಿಬಂದ ಸಂಸ್ಥಾನದವರ ವಿವರ, ಬಹಳ ವರ್ಷಗಳ ಹಿಂದೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಇವರನ್ನು ಸೆರೆಹಿಡಿದು ಬಾಬಿಲೋನಿಗೆ ಒಯ್ದಿದ್ದನು. ಇವರು ಜೆರುಸಲೇಮಿಗೆ ಹಿಂತಿರುಗಿ ಬಂದು ಎಲ್ಲರೂ ತಮ್ಮತಮ್ಮ ಸ್ವಂತ ಊರುಗಳಿಗೆ ಹೊರಟು ಹೋದರು. ಅಧ್ಯಾಯವನ್ನು ನೋಡಿ |
ಆಗ ಮೂರನೆಯ ತಿಂಗಳಾದ ಸಿವಾನ್ ಎಂಬ ಮಾಸದ ಇಪ್ಪತ್ತಮೂರನೆಯ ದಿನದಲ್ಲಿ ಅರಸನ ಲೇಖಕರನ್ನು ಕರೆಯಲಾಯಿತು. ಮೊರ್ದೆಕೈ ಆಜ್ಞಾಪಿಸಿದ ಎಲ್ಲಾದರ ಪ್ರಕಾರ, ಸಕಲ ಯೆಹೂದ್ಯರಿಗೂ ಹಿಂದೂ ದೇಶ ಮೊದಲುಗೊಂಡು ಇಥಿಯೋಪಿಯ ದೇಶದವರೆಗೂ ಇರುವ ನೂರ ಇಪ್ಪತ್ತೇಳು ಪ್ರಾಂತಗಳ ಉಪರಾಜರಿಗೂ, ದೇಶಾಧಿಪತಿಗಳಿಗೂ, ಅಧಿಕಾರಿಗಳಿಗೂ, ಅವರವರ ಪ್ರಾಂತದ ಲಿಪಿಯಲ್ಲಿಯೂ, ಅವರವರ ಭಾಷೆಯಲ್ಲಿಯೂ ಪತ್ರಗಳನ್ನು ಬರೆಯಲಾಯಿತು.