Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 9:12 - ಕನ್ನಡ ಸಮಕಾಲಿಕ ಅನುವಾದ

12 ಕ್ರಿಸ್ತ ಯೇಸು ಹೋತಗಳ ಮತ್ತು ಕರುಗಳ ರಕ್ತವನ್ನು ತೆಗೆದುಕೊಳ್ಳದೆ ತಮ್ಮ ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ ನಿತ್ಯವಿಮೋಚನೆಯನ್ನು ಸಂಪಾದಿಸಿಕೊಂಡವರಾಗಿ ಒಂದೇ ಸಾರಿ ಮಹಾ ಪವಿತ್ರ ಸ್ಥಳದೊಳಗೆ ಪ್ರವೇಶಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಹೋತಗಳ ಮತ್ತು ಹೋರಿಕರುಗಳ ರಕ್ತದ ಮೂಲಕವಲ್ಲ ತನ್ನ ಸ್ವಂತ ರಕ್ತದ ಮೂಲಕ ಒಂದೇ ಸಾರಿ ಎಲ್ಲರಿಗೋಸ್ಕರ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿ ನಿತ್ಯ ವಿಮೋಚನೆಯನ್ನು ಸಾಧಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಇಂಥ ಗರ್ಭಗುಡಿಯನ್ನು ಅವರು ಒಮ್ಮೆಗೇ ಶಾಶ್ವತವಾಗಿ ಪ್ರವೇಶಿಸಿದ್ದಾರೆ. ಹೋತಗಳ ಅಥವಾ ಹೋರಿಕರುಗಳ ರಕ್ತವನ್ನು ತೆಗೆದುಕೊಂಡು ಅವರು ಪ್ರವೇಶಿಸಲಿಲ್ಲ. ತಮ್ಮ ಸ್ವಂತ ರಕ್ತವನ್ನೇ ತೆಗೆದುಕೊಂಡು ಪ್ರವೇಶಿಸಿ ನಮಗೆ ಶಾಶ್ವತ ಜೀವೋದ್ಧಾರವು ದೊರಕುವಂತೆ ಮಾಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಹೋತಗಳ ಮತ್ತು ಹೋರಿಕರಗಳ ರಕ್ತವನ್ನು ತೆಗೆದುಕೊಳ್ಳದೆ ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ ನಿತ್ಯವಿಮೋಚನೆಯನ್ನು ಸಂಪಾದಿಸಿಕೊಂಡವನಾಗಿ ಒಂದೇ ಸಾರಿ ದೇವರ ಸನ್ನಿಧಾನಕ್ಕೆ ಪ್ರವೇಶಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆತನು ಒಂದೇ ಒಂದು ಸಾರಿ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿದನು. ಆತನು ಹೋತಗಳ ಮತ್ತು ಹೋರಿಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತದಿಂದಲೇ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿ ನಮಗೆ ನಿತ್ಯಸ್ವಾತಂತ್ರ್ಯವನ್ನು ತಂದುಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

12 ತೊ ಎಕುಚ್ ಎಗ್ದಾ ಆಗ್ದಿ ಪವಿತ್ರ್ ಜಾಗ್ಯಾರ್ ಗುಸ್ಲೊ, ತೆನಿ ಪಾಲ್ವ್ಯಾಂಚೆ ಅನಿ ಪಾಡ್ಕ್ಯಾಂಚೆ ರಗಾತ್ ಘೆವ್ನ್ ಜಾಯ್ ನಸ್ತಾನಾ ಅಪ್ಲೆ ಸ್ವತಾಚೆ ರಗಾತ್ ಘೆವ್ನ್ ಆಗ್ದಿ ಪವಿತ್ರ್ ಜಾಗ್ಯಾರ್ ಜಾವ್ನ್ ಅಮ್ಕಾ ಪಾಪಾಚ್ಯಾ ಶಾಶ್ವತ್ ಗುಲಾಮ್ ಗಿರಿತ್ನಾ ಸುಟ್ಕಾ ಕರ್ಲ್ಯಾನ್ .

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 9:12
32 ತಿಳಿವುಗಳ ಹೋಲಿಕೆ  

ಏಕೆಂದರೆ ಹೋರಿಗಳ ಮತ್ತು ಹೋತಗಳ ರಕ್ತವು ಪಾಪಗಳನ್ನು ತೆಗೆದುಹಾಕುವುದು ಅಸಾಧ್ಯ.


ಈ ಕಾರಣದಿಂದ ಕರೆಯಲಾದವರು ವಾಗ್ದಾನವಾದ ನಿತ್ಯಬಾಧ್ಯತೆಯನ್ನು ಸ್ವೀಕರಿಸುವಂತೆ ಕ್ರಿಸ್ತ ಯೇಸು ಹೊಸ ಒಡಂಬಡಿಕೆಗೆ ಮಧ್ಯಸ್ಥರಾಗಿದ್ದಾರೆ. ಮೊದಲಿನ ಒಡಂಬಡಿಕೆಯ ಕೆಳಗೆ ಮಾಡಿದ ಪಾಪಗಳಿಂದ ಅವರನ್ನು ವಿಮೋಚಿಸಲು ಯೇಸು ಆಗಲೇ ಈಡಾಗಿ ತಮ್ಮ ಪ್ರಾಣಕೊಟ್ಟಿದ್ದಾರೆ.


ದೇವರ ಕೃಪಾ ಐಶ್ವರ್ಯಕ್ಕೆ ಅನುಸಾರವಾಗಿ ಕ್ರಿಸ್ತನಲ್ಲಿ ನಮಗೆ ಅವರ ರಕ್ತದ ಮೂಲಕ ಪಾಪಗಳ ಕ್ಷಮಾಪಣೆಯಾಗಿ ವಿಮೋಚನೆಯಾಯಿತು.


ಹೀಗೆ ಯೇಸು ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ನಿರಂತರವಾಗಿ ರಕ್ಷಣೆಗೆ ಕಾರಣರಾದರು.


ನಂಬಿಗಸ್ತ ಸಾಕ್ಷಿಯೂ ಸತ್ತವರೊಳಗಿಂದ ಪ್ರಥಮವಾಗಿ ಜೀವಂತವಾಗಿ ಎದ್ದು ಬಂದವರೂ ಭೂರಾಜರಿಗೆ ಒಡೆಯರೂ ಆಗಿರುವ ಕ್ರಿಸ್ತ ಯೇಸುವಿನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ಅವರೇ ನಮ್ಮನ್ನು ಪ್ರೀತಿಸುವವರೂ ತಮ್ಮ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದವರೂ ಆಗಿದ್ದಾರೆ.


ಆದ್ದರಿಂದ ಪ್ರಿಯರೇ, ಯೇಸುವಿನ ರಕ್ತದಿಂದ ಅವರ ದೇಹವೆಂಬ ಪರದೆಯ ಮೂಲಕ ನಮಗೆ ತೆರೆಯಲಾದ


ಅದರಂತೆಯೇ ಕ್ರಿಸ್ತ ಯೇಸು ಬಹುಜನರ ಪಾಪಗಳನ್ನು ಹೊತ್ತುಕೊಳ್ಳುವುದಕ್ಕೋಸ್ಕರ ಒಂದೇ ಸಾರಿ ಸಮರ್ಪಿತರಾದರು. ತಮಗಾಗಿ ಕಾದಿರುವವರಿಗೆ ರಕ್ಷಣೆ ಕೊಡಲು ಕ್ರಿಸ್ತ ಯೇಸು ಎರಡನೆಯ ಸಲ ಕಾಣಿಸಿಕೊಳ್ಳುವರು. ಆಗ ಪಾಪ ಹೊತ್ತುಕೊಳ್ಳುವುದಕ್ಕಾಗಿ ಬರುವುದಿಲ್ಲ.


ಮೊದಲು ತನ್ನ ಸ್ವಂತ ಪಾಪಗಳಿಗಾಗಿಯೂ ಯಜ್ಞಾರ್ಪಣೆ ಮಾಡುವ ಆ ಮಹಾಯಾಜಕರಂತೆ ಯೇಸು ಪ್ರತಿದಿನವೂ ಬಲಿ ಸಮರ್ಪಿಸಬೇಕಾದ ಅವಶ್ಯವಿಲ್ಲ. ಏಕೆಂದರೆ ಇವರು ತಮ್ಮನ್ನೇ ಬಲಿಯಾಗಿ ಸಮರ್ಪಿಸಿಕೊಂಡಾಗ ಅದನ್ನು ಒಂದೇ ಸಾರಿ ಮಾಡಿ ಮುಗಿಸಿದರು.


ಅದಾದ ಮೇಲೆ ಆರೋನನು ಜನರಿಗಾಗಿ ಅರ್ಪಿಸಿದ ಬಲಿಯನ್ನು ತಂದು, ಹೋತವನ್ನು ತೆಗೆದುಕೊಂಡು, ಜನರಿಗಾಗಿ ಪಾಪ ಪರಿಹಾರದ ಬಲಿಯಾಗಿರುವುದನ್ನು ವಧಿಸಿ, ಮೊದಲನೆಯದರ ಹಾಗೆ ಅದನ್ನು ಸಮರ್ಪಿಸಿದನು.


ಹೋತ ಹೋರಿಗಳ ರಕ್ತವನ್ನೂ ಅಶುದ್ಧರಾದವರ ಮೇಲೆ ಚಿಮುಕಿಸಲಾಯಿತು. ಯಜ್ಞಪಶುಗಳ ಬೂದಿಯನ್ನೂ ಅವರ ಮೇಲೆ ತೂರಲಾಯಿತು. ಇದು ಅವರ ದೇಹವನ್ನು ಶುದ್ಧೀಕರಿಸಿತು.


ಈ ಕ್ರಿಸ್ತ ಯೇಸುವೇ ದೇವರ ಮಹಿಮೆಯ ಪ್ರಕಾಶವೂ ಅವರ ವ್ಯಕ್ತಿತ್ವದ ಪ್ರತಿರೂಪವಾಗಿರುವ ದೇವಪುತ್ರ ಆಗಿದ್ದಾರೆ. ಈ ಕ್ರಿಸ್ತ ಯೇಸುವೇ ತಮ್ಮ ಶಕ್ತಿಯುತ ವಾಕ್ಯದಿಂದ ಸಮಸ್ತಕ್ಕೂ ಆಧಾರವಾಗಿದ್ದಾರೆ. ಕ್ರಿಸ್ತ ಯೇಸು ತಾವಾಗಿಯೇ ನಮ್ಮ ಪಾಪಗಳನ್ನು ಶುದ್ಧಿಮಾಡಿ ಉನ್ನತದೊಳಗೆ ಮಹೋನ್ನತ ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾರೆ.


ಇದಲ್ಲದೆ, ದೇವರು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ ತಮ್ಮ ಪುತ್ರರಾಗಿರುವ ಯೇಸು ಮುಂದೆ ಬರುವ ಕೋಪದಿಂದ ನಮ್ಮನ್ನು ಬಿಡಿಸುವವರೂ ಆಗಿದ್ದಾರೆ. ಈ ಯೇಸುವನ್ನೇ ಪರಲೋಕದಿಂದ ಬರುವುದನ್ನು ನೀವು ಎದುರು ನೋಡುತ್ತಿದ್ದೀರಿ ಎಂಬುದನ್ನೂ ಅವರು ನಮಗೆ ವಿವರಿಸಿದರು.


ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡು. ಆ ಒಂದು ಕಲ್ಲಿನ ಮೇಲೆ ಏಳು ಕಣ್ಣುಗಳು ಇರುವಂತೆ ನಾನು ಅದರ ಮೇಲೆ ಒಂದು ಶಾಸನವನ್ನು ಕೆತ್ತಿಸುವೆನು. ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. ಆ ದೇಶದ ಅಪರಾಧವನ್ನು ಒಂದೇ ದಿವಸದಲ್ಲಿ ತೊಲಗಿಸುವೆನು.


“ಅಕ್ರಮಗಳನ್ನು ಮುಗಿಸುವುದಕ್ಕೂ, ಪಾಪಗಳನ್ನು ಮುಚ್ಚುವುದಕ್ಕೂ, ಅಪರಾಧಗಳಿಗೆ ಪ್ರಾಯಶ್ಚಿತ್ತ ಮಾಡುವುದಕ್ಕೂ, ನಿತ್ಯವಾದ ನೀತಿಯನ್ನು ಬರಮಾಡುವುದಕ್ಕೂ, ಆ ದರ್ಶನಕ್ಕೂ, ಪ್ರವಾದಿಯ ನುಡಿಗೆ ಮುದ್ರೆಹಾಕುವುದಕ್ಕೂ, ಮಹಾಪರಿಶುದ್ಧ ಸ್ಥಳವನ್ನು ಅಭಿಷೇಕ ಮಾಡುವುದಕ್ಕೂ ನಿನ್ನ ಜನರ ಮೇಲೆಯೂ, ನಿನ್ನ ಪರಿಶುದ್ಧ ಪಟ್ಟಣದ ಮೇಲೆಯೂ ಎಪ್ಪತ್ತು ವಾರಗಳು ಕಳೆಯಬೇಕು ಎಂದು ನಿಷ್ಕರ್ಷೆಯಾಗಿದೆ.


ಕ್ರಿಸ್ತ ಯೇಸುವಿನಲ್ಲಿಯೇ ನಮಗೆ ವಿಮೋಚನೆ ಉಂಟಾಯಿತು. ನಮ್ಮ ಪಾಪಗಳ ಕ್ಷಮೆಯೇ ಆ ವಿಮೋಚನೆಯಾಗಿರುತ್ತದೆ.


ದೇವರು ತಮ್ಮ ರಕ್ತದಿಂದ ಕೊಂಡುಕೊಂಡ ಸಭೆಗೆ ನೀವು ಕುರುಬರಾಗಿರುವುದಕ್ಕಾಗಿ ಪವಿತ್ರಾತ್ಮರು ನಿಮ್ಮನ್ನೇ ಮಂದೆಯಲ್ಲಿ ಮೇಲ್ವಿಚಾರಕರನ್ನಾಗಿ ಇಟ್ಟಿರುವುದರಿಂದ, ನಿಮ್ಮ ವಿಷಯದಲ್ಲಿಯೂ ಇಡೀ ಮಂದೆಯ ವಿಷಯದಲ್ಲಿಯೂ ಎಚ್ಚರವಾಗಿರಿ.


ಆದರೆ ಪವಿತ್ರಾತ್ಮರನ್ನು ದೂಷಿಸುವವನಿಗೆ ಎಂದಿಗೂ ಕ್ಷಮಾಪಣೆ ದೊರೆಯುವುದಿಲ್ಲ. ಅವನು ನಿತ್ಯ ಪಾಪದ ಅಪರಾಧಿಯಾಗಿದ್ದಾನೆ,” ಎಂದರು.


ಅವರು ಹೊಸಹಾಡನ್ನು ಹಾಡುತ್ತಾ, “ನೀವು ಸುರುಳಿಯನ್ನು ತೆಗೆದುಕೊಂಡು ಅದರ ಮುದ್ರೆಗಳನ್ನು ಒಡೆಯುವುದಕ್ಕೆ ಯೋಗ್ಯರಾಗಿದ್ದೀರಿ. ಏಕೆಂದರೆ ನೀವು ವಧಿತರಾಗಿ, ನಿಮ್ಮ ರಕ್ತದಿಂದ ಸಕಲ ಕುಲ, ಭಾಷೆ, ಪ್ರಜೆ, ರಾಷ್ಟ್ರಗಳವರಿಂದ ಮನುಷ್ಯರನ್ನು ದೇವರಿಗಾಗಿ ಕೊಂಡುಕೊಂಡಿರುವಿರಿ.


ಕ್ರಿಸ್ತ ಯೇಸು ನಮ್ಮನ್ನು ಎಲ್ಲಾ ದುಷ್ಟತನದಿಂದ ವಿಮೋಚಿಸಿ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಂತ ಜನರನ್ನು ತಮಗಾಗಿ ಪರಿಶುದ್ಧ ಮಾಡುವಂತೆ ನಮಗೋಸ್ಕರ ತಮ್ಮನ್ನು ತಾವೇ ಒಪ್ಪಿಸಿಕೊಟ್ಟರು.


“ಆರೋನನನ್ನೂ, ಅವನೊಂದಿಗೆ ಅವನ ಪುತ್ರರನ್ನೂ, ಉಡುಪುಗಳನ್ನೂ, ಅಭಿಷೇಕ ತೈಲವನ್ನೂ, ಪಾಪ ಪರಿಹಾರದ ಬಲಿಗಾಗಿ ಹೋರಿಯನ್ನೂ ಎರಡು ಟಗರುಗಳನ್ನೂ ಹುಳಿಯಿಲ್ಲದ ರೊಟ್ಟಿಯ ಬುಟ್ಟಿಯನ್ನೂ ತೆಗೆದುಕೋ.


ಆದರೆ ಎರಡನೆಯ ಭಾಗದೊಳಗೆ ಮಹಾಯಾಜಕನೊಬ್ಬನೇ ವರ್ಷಕ್ಕೆ ಒಂದೇ ಸಾರಿ ಪ್ರವೇಶಿಸುತ್ತಿದ್ದನು. ಅವನು ರಕ್ತವನ್ನು ತೆಗೆದುಕೊಳ್ಳದೆ ಎಂದಿಗೂ ಹೋಗುತ್ತಿರಲಿಲ್ಲ. ಬಲಿಯ ರಕ್ತವನ್ನು ತನಗೋಸ್ಕರವೂ ಜನರು ತಿಳಿಯದೆ ಮಾಡಿದ ಪಾಪಗಳಿಗೋಸ್ಕರವೂ ಸಮರ್ಪಿಸುತ್ತಿದ್ದನು.


“ ‘ಅಭಿಷಿಕ್ತನಾದ ಯಾಜಕನು ಪಾಪಮಾಡಿ ಜನರ ಮೇಲೆ ಅಪರಾಧವನ್ನು ತಂದರೆ, ತಾನು ಮಾಡಿದ ಪಾಪಕ್ಕಾಗಿ ಕಳಂಕರಹಿತವಾದ ಒಂದು ಎಳೆಯ ಹೋರಿಯನ್ನು ದೋಷಪರಿಹಾರಕ ಬಲಿಯಾಗಿ ಯೆಹೋವ ದೇವರಿಗೆ ಸಮರ್ಪಿಸಬೇಕು.


“ತರುವಾಯ ಅವನು ಜನರಿಗೋಸ್ಕರ ಪಾಪ ಪರಿಹಾರದ ಬಲಿಯಾಗಿರುವ ಹೋತವನ್ನು ವಧಿಸಿ, ಅದರ ರಕ್ತವನ್ನು ತೆರೆಯ ಒಳಗಡೆ ತಂದು, ಹೋರಿಯ ರಕ್ತದಿಂದ ಮಾಡಿದಂತೆಯೇ ಕರುಣಾಸನದ ಮೇಲೆಯೂ, ಕರುಣಾಸನದ ಮುಂದೆಯೂ ಚಿಮುಕಿಸಬೇಕು.


“ಇಸ್ರಾಯೇಲಿನ ಕರ್ತದೇವರಿಗೆ ಸ್ತೋತ್ರವಾಗಲಿ, ದೇವರು ತಮ್ಮ ಜನರನ್ನು ಸಂಧಿಸಿ ಅವರನ್ನು ವಿಮೋಚಿಸಿದ್ದಾರೆ.


ನಿತ್ಯಾತ್ಮರಿಂದ ತಮ್ಮನ್ನು ತಾವೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿಕೊಂಡ ಕ್ರಿಸ್ತ ಯೇಸುವಿನ ರಕ್ತವು ಎಷ್ಟೋ ಹೆಚ್ಚಾಗಿ ನಿರ್ಜೀವ ಕ್ರಿಯೆಗಳಿಂದ ನಮ್ಮನ್ನು ಬಿಡಿಸಿ ಜೀವವುಳ್ಳ ದೇವರನ್ನು ಆರಾಧಿಸುವಂತೆ ನಮ್ಮ ಮನಸ್ಸಾಕ್ಷಿಯನ್ನು ಶುದ್ಧೀಕರಿಸುವುದಲ್ಲವೇ?


ಮೋಶೆಯು ಪ್ರತಿಯೊಂದು ಆಜ್ಞೆಯನ್ನು ನಿಯಮದ ಪ್ರಕಾರ ಜನರೆಲ್ಲರಿಗೆ ಹೇಳಿದ ಮೇಲೆ ಅವನು ನೀರು, ಕೆಂಪು ಉಣ್ಣೆ, ಹಿಸ್ಸೋಪು ಇವುಗಳೊಂದಿಗೆ ಕರುಗಳ ಮತ್ತು ಹೋತಗಳ ರಕ್ತವನ್ನು ತೆಗೆದುಕೊಂಡು ಸುರುಳಿಗಳ ಮೇಲೆಯೂ ಎಲ್ಲಾ ಜನರ ಮೇಲೆಯೂ ಚಿಮುಕಿಸಿದನು.


ಅದರಂತೆ ಯೇಸು ಸಹ ತಮ್ಮ ಸ್ವಂತ ರಕ್ತದಿಂದ ಜನರನ್ನು ಪವಿತ್ರಪಡಿಸುವುದಕ್ಕೋಸ್ಕರ ಊರ ಹೊರಗೆ ಬಾಧೆಪಟ್ಟರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು