Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 8:13 - ಕನ್ನಡ ಸಮಕಾಲಿಕ ಅನುವಾದ

13 ಇಲ್ಲಿ ದೇವರು “ಹೊಸ ಒಡಂಬಡಿಕೆ” ಎಂದು ಹೇಳಿರುವಾಗ ಮೊದಲಿದ್ದದ್ದನ್ನು ಹಳೆಯದಾಗಿ ಮಾಡಿದ್ದಾರೆ. ಅದು ಹಳೆಯದಾಗುತ್ತಾ ಕ್ಷೀಣವಾಗಿ ಅಳಿದು ಹೋಗಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆತನು “ಹೊಸತು” ಎಂದು ಹೇಳಿದ್ದರಲ್ಲಿ ಮೊದಲಿದ್ದ ಒಡಂಬಡಿಕೆಯನ್ನು ಹಳೆಯದಾಗಿ ಮಾಡಿದ್ದಾನೆ. ಅದು ಹಳೆಯದಾಗುತ್ತಾ ಅಳಿದುಹೋಗುವುದಕ್ಕೆ ಸಮೀಪವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಇಲ್ಲಿ ‘ಹೊಸ ಒಡಂಬಡಿಕೆ’ ಎಂದು ಹೇಳಿ, ಹಿಂದಿನದನ್ನು ಹಳೆಯದಾಗಿಸಿದ್ದಾರೆ. ಹಳತಾದುದು ಹಾಗೂ ಮುದಿಯಾದುದು ಅಳಿದುಹೋಗುವಂಥಾದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಇಲ್ಲಿ ಹೊಸ ಒಡಂಬಡಿಕೆಯೆಂದು ಹೇಳಿದ್ದರಲ್ಲಿ ಮೊದಲಿದ್ದದ್ದನ್ನು ಹಳೇದಾಗಿ ಮಾಡಿದ್ದಾನೆ. ಆದರೆ ಹಳೇದಾಗುತ್ತಾ ಮುದಿಯಾಗುವಂಥದಕ್ಕೆ ಅಂತ್ಯವು ಸಮೀಪವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ದೇವರು ಇದನ್ನು ಹೊಸ ಒಡಂಬಡಿಕೆ ಎಂದು ಕರೆದನು. ಆದ್ದರಿಂದ ಮೊದಲನೆ ಒಡಂಬಡಿಕೆಯನ್ನು ದೇವರು ಹಳೆಯದಾಗಿ ಮಾಡಿದನು. ಯಾವುದು ಹಳೆಯದಾಗಿ ಉಪಯೋಗಕ್ಕೆ ಬಾರದಾಗುತ್ತದೋ ಅದು ಅದೃಶ್ಯವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

13 ದೆವಾನ್ ಹೆ ನ್ಹವೊ ಕರಾರ್ ಕನ್ನಾಬಿ ಮನುನ್ ಸಾಂಗ್ಲ್ಯಾನ್, ತಸೆ ಹೊವ್ನ್ ಅದ್ದಿಚೊ ಕರಾರ್ ಜಿರ್ನ್ ಹೊವ್ನ್ ನಸ್ಟ್ ಹೊತಾ .

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 8:13
15 ತಿಳಿವುಗಳ ಹೋಲಿಕೆ  

ಆದ್ದರಿಂದ ಯಾರಾದರೂ ಕ್ರಿಸ್ತ ಯೇಸುವಿನಲ್ಲಿದ್ದರೆ, ಅವರು ನೂತನ ಸೃಷ್ಟಿಯಾಗಿದ್ದಾರೆ: ಹಳೆಯದೆಲ್ಲವೂ ಹೋಗಿ ಅವರಿಗೆ ಹೊಸ ಸೃಷ್ಟಿಯು ಬರುವುದು.


ಈ ಕಾರಣದಿಂದ ಕರೆಯಲಾದವರು ವಾಗ್ದಾನವಾದ ನಿತ್ಯಬಾಧ್ಯತೆಯನ್ನು ಸ್ವೀಕರಿಸುವಂತೆ ಕ್ರಿಸ್ತ ಯೇಸು ಹೊಸ ಒಡಂಬಡಿಕೆಗೆ ಮಧ್ಯಸ್ಥರಾಗಿದ್ದಾರೆ. ಮೊದಲಿನ ಒಡಂಬಡಿಕೆಯ ಕೆಳಗೆ ಮಾಡಿದ ಪಾಪಗಳಿಂದ ಅವರನ್ನು ವಿಮೋಚಿಸಲು ಯೇಸು ಆಗಲೇ ಈಡಾಗಿ ತಮ್ಮ ಪ್ರಾಣಕೊಟ್ಟಿದ್ದಾರೆ.


ಪ್ರೀತಿಯು ಎಂದಿಗೂ ಅಳಿದುಹೋಗುವುದಿಲ್ಲ, ಪ್ರವಾದನೆಗಳಾದರೋ ಇಲ್ಲದಂತಾಗುವುವು, ಅನ್ಯ ಭಾಷೆಗಳು ಗತಿಸಿ ಹೋಗುವುವು, ವಿದ್ಯೆಯೋ ಇಲ್ಲದಂತಾಗುವುವು.


ಆಕಾಶಗಳ ಕಡೆಗೆ ನಿಮ್ಮ ಕಣ್ಣುಗಳನ್ನು ಎತ್ತಿರಿ ಮತ್ತು ಕೆಳಗಿರುವ ಭೂಮಿಯನ್ನು ನೋಡಿರಿ. ಏಕೆಂದರೆ ಆಕಾಶಗಳು ಹೊಗೆಯಂತೆ ಅಗೋಚರವಾಗುವುವು. ಭೂಮಿಯು ಹಳೆಯ ಬಟ್ಟೆಯಂತಾಗುವುದು ಮತ್ತು ಅದರಲ್ಲಿ ವಾಸಿಸುವವರು ಸೊಳ್ಳೆಗಳೋಪಾದಿಯಲ್ಲಿ ಸಾಯುವರು. ಆದರೆ ನನ್ನ ರಕ್ಷಣೆಯು ಶಾಶ್ವತವಾಗಿರುವುದು, ನನ್ನ ನೀತಿಯು ಎಂದಿಗೂ ರದ್ದಾಗದು.


ಭೂಮ್ಯಾಕಾಶಗಳು ಅಳಿದುಹೋಗುವುವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ.


ಅದೇ ಪ್ರಕಾರ, ಭೋಜನವಾದ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲಾಗುವ, ನನ್ನ ರಕ್ತದಿಂದಾದ ಹೊಸ ಒಡಂಬಡಿಕೆಯಾಗಿದೆ.


ದೇವರು ನಮಗೆ ಹೊಸ ಒಡಂಬಡಿಕೆಯ ಸೇವಕರಾಗುವಂತೆ ಸಾಮರ್ಥ್ಯವನ್ನು ನೀಡಿರುತ್ತಾರೆ. ಇದು ಲಿಖಿತ ನಿಯಮಕ್ಕೆ ಸೇರಿದ್ದಾಗಿರದೆ, ಪವಿತ್ರಾತ್ಮನ ನಿಯಮದ ಸೇವೆಯಾಗಿರುತ್ತದೆ. ಏಕೆಂದರೆ, ಲಿಖಿತವಾದದ್ದು ಮರಣವನ್ನುಂಟುಮಾಡುತ್ತದೆ. ದೇವರಾತ್ಮನಿಂದಾದದ್ದು ಜೀವವನ್ನು ಉಂಟುಮಾಡುತ್ತದೆ.


ಅವು ನಾಶವಾಗುವವು. ಆದರೆ ನೀವು ಸದಾಕಾಲವೂ ಜೀವಿಸುತ್ತೀರಿ. ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು.


ಇದರಿಂದಲೇ ಯೇಸು ಎಷ್ಟೋ ಉತ್ತಮವಾದ ಒಡಂಬಡಿಕೆಗೆ ಹೊಣೆಗಾರರಾದರು.


ಯೇಸುವಾದರೋ ಈಗ ಅದಕ್ಕಿಂತ ಶ್ರೇಷ್ಠ ಸೇವೆಯನ್ನು ಹೊಂದಿದವರಾಗಿದ್ದಾರೆ. ಅಷ್ಟೇ ಅಲ್ಲದೆ ಇವರು ಉತ್ತಮ ವಾಗ್ದಾನಗಳ ಮೇಲೆ ಸ್ಥಾಪಿತವಾದ ಒಡಂಬಡಿಕೆಗೆ ಸಹ ಮಧ್ಯಸ್ಥರಾಗಿದ್ದಾರೆ.


ಆದರೆ ದೇವರು ಜನರಲ್ಲಿ ತಪ್ಪನ್ನು ಕಂಡುಹಿಡಿದು ಹೀಗೆಂದರು, “ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೂದ ವಂಶದವರೊಂದಿಗೂ ಒಂದು ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು.


ಹೊಸ ಒಡಂಬಡಿಕೆಗೆ ಮಧ್ಯಸ್ಥರಾಗಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಉತ್ತಮವಾಗಿ ಮಾತನಾಡುವ, ಪ್ರೋಕ್ಷಿಸಿದ ರಕ್ತದ ಬಳಿಗೂ ಬಂದಿದ್ದೀರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು