Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 8:12 - ಕನ್ನಡ ಸಮಕಾಲಿಕ ಅನುವಾದ

12 ನಾನು ಅವರ ದುಷ್ಕೃತ್ಯಗಳನ್ನು ಕ್ಷಮಿಸುವೆನು ಮತ್ತು ಅವರ ಪಾಪಗಳನ್ನು ಇನ್ನೆಂದಿಗೂ ನನ್ನ ನೆನಪಿಗೆ ತಂದುಕೊಳ್ಳುವುದಿಲ್ಲ, ಎಂದು ಕರ್ತದೇವರು ನುಡಿಯುತ್ತಾರೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನಾನು ಅವರ ದುಷ್ಕೃತ್ಯಗಳನ್ನು ಕರುಣೆಯಿಂದ ಕ್ಷಮಿಸುವೆನು ಮತ್ತು ಅವರ ಪಾಪಗಳನ್ನು ಎಂದಿಗೂ ನೆನಪಿಗೆ ತಂದುಕೊಳ್ಳುವುದಿಲ್ಲ’” ಎಂದು ಕರ್ತನು ನುಡಿಯುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಅವರ ಪಾಪಗಳನ್ನು ಕ್ಷಮಿಸುವೆನು ಅವರ ತಪ್ಪುನೆಪ್ಪುಗಳನು ನೆನಪಿಗೆ ತಂದುಕೊಳ್ಳೆನು ಎಂದರು ಸರ್ವೇಶ್ವರ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನಾನು ಅವರ ದುಷ್ಕೃತ್ಯಗಳ ವಿಷಯವಾಗಿ ಕ್ಷಮೆಯುಳ್ಳವನಾಗಿರುವೆನು, ಅವರ ಪಾಪಗಳನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ ಎಂದು ಕರ್ತನು ನುಡಿಯುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಅವರು ನನ್ನ ವಿರುದ್ಧವಾಗಿ ಮಾಡುವ ಎಲ್ಲಾ ಕೆಟ್ಟಕಾರ್ಯಗಳನ್ನು ಕ್ಷಮಿಸುವೆನು; ಅವರ ಪಾಪಗಳನ್ನು ನೆನಪಿಗೆ ತಂದುಕೊಳ್ಳುವುದಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

12 ತೆನಿ ಮಾಕಾ ವಿರೊಧ್ ಹೊವ್ನ್ ಕರ್‍ತಲಿ ಬುರ್ಶಿ ಕಾಮಾ ಮಿಯಾ ಮಾಪ್ ಕರ್‍ತಾ, ತೆನಿ ಕರಲಿ ಚುಕ್ ಮಿಯಾ ಯಾದ್‍ಬಿ ಕರಿನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 8:12
17 ತಿಳಿವುಗಳ ಹೋಲಿಕೆ  

ನಾನು ಅವರ ಪಾಪಗಳನ್ನು ತೆಗೆದುಹಾಕುವಾಗ, ಅವರೊಂದಿಗೆ ನಾನು ಮಾಡಿಕೊಳ್ಳುವ ಒಡಂಬಡಿಕೆ ಇದೇ ಎಂದು ತಿಳಿದುಕೊಳ್ಳುವೆನು,” ಎಂಬುದೇ.


“ನಾನಾಗಿ ನಾನೇ, ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ. ನಿನ್ನ ಪಾಪಗಳನ್ನು ನನ್ನ ನೆನಪಿನಲ್ಲಿಡೆನು.


ಆತನು ತಿರುಗಿಕೊಂಡು ನಮ್ಮನ್ನು ಕನಿಕರಿಸುವನು; ನಮ್ಮ ಅಕ್ರಮಗಳನ್ನು ತುಳಿದುಬಿಡುವನು; ನಮ್ಮ ಪಾಪಗಳನ್ನೆಲ್ಲಾ ಸಮುದ್ರದ ಅಗಾಧಗಳಲ್ಲಿ ಹಾಕುವನು.


ಯೆಹೋವ ದೇವರು ಹೇಳುತ್ತಾರೆ, “ಆ ದಿವಸಗಳಲ್ಲಿಯೂ, ಆ ಕಾಲದಲ್ಲಿಯೂ ಇಸ್ರಾಯೇಲಿನ ಅಕ್ರಮವನ್ನು ಹುಡುಕಿದರೂ, ಅಲ್ಲಿ ಏನೂ ಇರದು; ಯೆಹೂದದ ಪಾಪಗಳನ್ನು ಹುಡುಕಿದರೂ ಅವು ಸಿಕ್ಕುವುದಿಲ್ಲ. ಏಕೆಂದರೆ ನಾನು ಉಳಿಸುವವರನ್ನು ಮನ್ನಿಸುತ್ತೇನೆ.


ಅವರು ಯಾವುದರಿಂದ ನನಗೆ ವಿರೋಧವಾಗಿ ಪಾಪ ಮಾಡಿದರೋ, ಆ ಅಕ್ರಮದಿಂದೆಲ್ಲಾ ಅವರನ್ನು ಶುದ್ಧಮಾಡುವೆನು. ಅವರು ಯಾವವುಗಳಿಂದ ನನಗೆ ವಿರೋಧವಾಗಿ ಪಾಪಮಾಡಿ ನನ್ನ ವಿಷಯದಲ್ಲಿ ದ್ರೋಹಿಗಳಾಗಿದ್ದಾರೋ, ಆ ಅಕ್ರಮಗಳನ್ನೆಲ್ಲಾ ಮನ್ನಿಸುವೆನು.


ನಾನು ನಿನ್ನ ದ್ರೋಹಗಳನ್ನು ಮೋಡದಂತೆ ಅಳಿಸಿಬಿಟ್ಟಿದ್ದೇನೆ. ನಿನ್ನ ಪಾಪಗಳನ್ನು ಮುಂಜಾನೆಯ ಮಂಜಿನಂತೆ ಹಾರಿಸಿದ್ದೇನೆ. ನನ್ನ ಕಡೆಗೆ ತಿರುಗಿಕೋ. ಏಕೆಂದರೆ ನಾನು ನಿನ್ನನ್ನು ವಿಮೋಚಿಸಿದ್ದೇನೆ.”


ಕ್ರಿಸ್ತ ಯೇಸುವಿನಲ್ಲಿಯೇ ನಮಗೆ ವಿಮೋಚನೆ ಉಂಟಾಯಿತು. ನಮ್ಮ ಪಾಪಗಳ ಕ್ಷಮೆಯೇ ಆ ವಿಮೋಚನೆಯಾಗಿರುತ್ತದೆ.


ದೇವರ ಕೃಪಾ ಐಶ್ವರ್ಯಕ್ಕೆ ಅನುಸಾರವಾಗಿ ಕ್ರಿಸ್ತನಲ್ಲಿ ನಮಗೆ ಅವರ ರಕ್ತದ ಮೂಲಕ ಪಾಪಗಳ ಕ್ಷಮಾಪಣೆಯಾಗಿ ವಿಮೋಚನೆಯಾಯಿತು.


ನಂಬಿಗಸ್ತ ಸಾಕ್ಷಿಯೂ ಸತ್ತವರೊಳಗಿಂದ ಪ್ರಥಮವಾಗಿ ಜೀವಂತವಾಗಿ ಎದ್ದು ಬಂದವರೂ ಭೂರಾಜರಿಗೆ ಒಡೆಯರೂ ಆಗಿರುವ ಕ್ರಿಸ್ತ ಯೇಸುವಿನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ಅವರೇ ನಮ್ಮನ್ನು ಪ್ರೀತಿಸುವವರೂ ತಮ್ಮ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದವರೂ ಆಗಿದ್ದಾರೆ.


ಯೆಹೋವ ದೇವರೇ, ನನ್ನ ಯೌವನದ ಪಾಪಗಳನ್ನೂ, ನನ್ನ ತಿರುಗಿ ಬೀಳುವಿಕೆಗಳನ್ನೂ ಜ್ಞಾಪಕ ಮಾಡಿಕೊಳ್ಳಬೇಡಿರಿ. ನೀವು ಒಳ್ಳೆಯವರಾಗಿರುವುದರಿಂದ ನಿಮ್ಮ ಪ್ರೀತಿಯ ಪ್ರಕಾರ ನನ್ನನ್ನು ಜ್ಞಾಪಕಮಾಡಿಕೊಳ್ಳಿರಿ.


ನಾವು ನಮ್ಮ ಪಾಪಗಳಿಂದ ತುಂಬಿಹೋಗಿರುವಾಗ ನೀವೇ ನಮ್ಮ ದ್ರೋಹಗಳಿಗಾಗಿ ದೋಷಪರಿಹಾರಕರು.


ಇದಲ್ಲದೆ ಪ್ರತಿಯೊಬ್ಬನು ತನ್ನ ನೆರೆಯವನಿಗೂ ತನ್ನ ಸಹೋದರನಿಗೂ, ‘ಯೆಹೋವ ದೇವರನ್ನು ಅರಿತುಕೊಳ್ಳಿರಿ,’ ಎಂದು ಬೋಧಿಸಬೇಕಾಗಿಲ್ಲ. ಏಕೆಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ನನ್ನನ್ನು ಅರಿತುಕೊಳ್ಳುವರು. ನಾನು ಅವರ ದುಷ್ಕೃತ್ಯಗಳನ್ನು ಕ್ಷಮಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. “ಅವರ ಪಾಪಗಳನ್ನು ಇನ್ನೆಂದಿಗೂ ನನ್ನ ನೆನಪಿಗೆ ತಂದುಕೊಳ್ಳುವುದಿಲ್ಲ.”


ಪಾಪಗಳನ್ನು ಮತ್ತು ಅಪರಾಧಗಳನ್ನು ಮನ್ನಿಸುವವನೂ, ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ಲಕ್ಷಿಸದವನೂ, ನಿನ್ನ ಹಾಗೆ ಇರುವ ದೇವರು ಯಾರು? ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವುದಿಲ್ಲ. ಏಕೆಂದರೆ ನೀವು ಕರುಣೆಯಲ್ಲಿ ಸಂತೋಷಪಡುತ್ತೀರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು