Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 7:23 - ಕನ್ನಡ ಸಮಕಾಲಿಕ ಅನುವಾದ

23 ಒಂದು ಕಡೆ ಆ ಯಾಜಕರು ಮುಂದುವರಿಯದಂತೆ ಮರಣವು ಅಡ್ಡಿಯಾದದ್ದರಿಂದ ಅನೇಕರು ಯಾಜಕರಾಗಬೇಕಾಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಲೇವಿಯರು ಶಾಶ್ವತವಾಗಿ ಉದ್ಯೋಗನಡಿಸುವುದಕ್ಕೆ ಮರಣವು ಅಡ್ಡಿಯಾಗಿರುವುದರಿಂದ ಅವರಲ್ಲಿ ಅನೇಕರು ಯಾಜಕರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಲೇವಿಯರ ಯಾಜಕಸೇವೆಯನ್ನು ಮರಣವು ಮೊಟಕುಗೊಳಿಸುತ್ತಿದ್ದುದರಿಂದ ಅನೇಕರು ಯಾಜಕರಾಗಬೇಕಾಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಲೇವಿಯರು ಶಾಶ್ವತವಾಗಿ ಉದ್ಯೋಗ ನಡಿಸುವದಕ್ಕೆ ಮರಣವು ಅಡ್ಡಿಯಾದದರಿಂದ ಅವರಲ್ಲಿ ಯಾಜಕರಾದವರು ಅನೇಕರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಇದಲ್ಲದೆ ಇತರ ಯಾಜಕರಲ್ಲಿ ಮರಣದ ಕಾರಣದಿಂದ ಒಬ್ಬನೇ ಶಾಶ್ವತವಾಗಿ ಯಾಜಕನಾಗಿ ಮುಂದುವರೆಯಲಾಗಲಿಲ್ಲ. ಆದ್ದರಿಂದ ಅಲ್ಲಿ ಅನೇಕ ಮಂದಿ ಯಾಜಕರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

23 ಅನಿ ಹುರಲ್ಲ್ಯಾ ಯಾಜಕಾತ್ನಿ ಮರಾನ್ ಯೆಲ್ಲ್ಯಾಸಾಟ್ನಿ ಎಕ್ಲೊಚ್ ಯಾಜಕ್ ರ್‍ಹಾವ್ನ್ ಅಪ್ಲೆ ಕಾಮ್ ಪುರಾ ಚಾಲ್ವುನ್ ಘೆವ್ನ್ ಜಾವ್ಕ್ ಹೊವ್ಕ್ ನಾ, ಕಶ್ಯಾಕ್ ಮಟ್ಲ್ಯಾರ್, ಸದಾಸರ್ವತಾಕ್ ಝಿತ್ತೊ ರಾತಲೊ ಅಪ್ಲೆ ಯಾಜಕಾಚೆ ಕಾಮ್ ಕನ್ನಾಬಿ ಇಸ್ರಿನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 7:23
7 ತಿಳಿವುಗಳ ಹೋಲಿಕೆ  

ಇಲ್ಲಿ ದಶಮಭಾಗಗಳನ್ನು ತೆಗೆದುಕೊಳ್ಳುತ್ತಿರುವ ಲೇವಿಯರು ಕೇವಲ ಮರ್ತ್ಯ ಮಾನವರು. ಆದರೆ ಅಲ್ಲಿ ತೆಗೆದುಕೊಳ್ಳುವ ಮೆಲ್ಕಿಜೆದೇಕನು ಜೀವಿಸುತ್ತಿದ್ದಾನೆಂದು ಸಾಕ್ಷಿ ಹೊಂದಿರುವವನು.


ಆದರೆ ಯೋಹಾನನು ಅದಕ್ಕೆ ಅಡ್ಡಿ ಮಾಡುತ್ತಾ, “ನಾನೇ ನಿಮ್ಮಿಂದ ದೀಕ್ಷಾಸ್ನಾನ ಪಡೆಯಬೇಕಾಗಿರುವಲ್ಲಿ, ನೀವು ನನ್ನ ಬಳಿಗೆ ಬರಬಹುದೇ?” ಎಂದು ಕೇಳಿದನು.


ಆದರೆ ಯೇಸು ದೇವರ ಆಣೆಯಿಂದಲೇ ಯಾಜಕರಾದರು. ಹೀಗೆ ದೇವರು ಹೇಳಿದ್ದೇನೆಂದರೆ: “ ಕರ್ತ ಆಗಿರುವ ನಾನು ಆಣೆಯಿಟ್ಟು ಹೇಳಿದ್ದೇನೆ. ನಾನು ಎಂದಿಗೂ ಮನಸ್ಸನ್ನು ಬದಲಾಯಿಸುವುದಿಲ್ಲ. ‘ನೀನು ಸದಾಕಾಲವೂ ಯಾಜಕನಾಗಿದ್ದೀ.’ ”


ಇದರಿಂದಲೇ ಯೇಸು ಎಷ್ಟೋ ಉತ್ತಮವಾದ ಒಡಂಬಡಿಕೆಗೆ ಹೊಣೆಗಾರರಾದರು.


ಇನ್ನೊಂದು ಕಡೆ ಯೇಸುವಾದರೋ ಸದಾಕಾಲ ಇರುವುದರಿಂದ ನಿರಂತರವಾಗಿ ತಮ್ಮ ಯಾಜಕತ್ವವನ್ನು ಹೊಂದಿದವರಾಗಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು