Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 6:5 - ಕನ್ನಡ ಸಮಕಾಲಿಕ ಅನುವಾದ

5 ದೇವರ ವಾಕ್ಯದ ಒಳ್ಳೆತನವನ್ನೂ ಬರುವ ಲೋಕದ ಶಕ್ತಿಯನ್ನೂ ರುಚಿ ನೋಡಿದವರು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ದೇವರ ವಾಕ್ಯದ ಶ್ರೇಷ್ಠತೆಯನ್ನೂ ಮುಂದಣ ಯುಗದ ಶಕ್ತಿಯನ್ನೂ ಅನುಭವಿಸಿದವರು ಅದರಿಂದ ಹಿಂಜಾರಿಹೋದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ದೇವರ ವಾಕ್ಯದ ಸವಿಯುಂಡು, ಬರಲಿರುವ ಯುಗದ ವೈಭವವನ್ನು ಮನಗಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಪವಿತ್ರಾತ್ಮವರದಲ್ಲಿ ಪಾಲುಗಾರರಾಗಿ ದೇವರ ವಾಕ್ಯದ ಶ್ರೇಷ್ಠತೆಯನ್ನೂ ಮುಂದಣ ಯುಗದ ಮಹತ್ವವನ್ನೂ ಅನುಭವಿಸಿದವರು ಭ್ರಷ್ಟರಾದರೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

5 ಅನಿ ದೆವಾಚ್ಯಾ ಗೊಸ್ಟಿಯಾಂಚೆ ಬರೆಪಾನ್ ಅನ್ಬೊಗ್ ಕರ್ಲಾತ್, ಅನಿ ಫಿಡ್ಲ್ಯಾ ಜಗಾಚಿ ಬಳ್ ಅನುಭೊಗ್ ಕರ್ಲಾತ್,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 6:5
13 ತಿಳಿವುಗಳ ಹೋಲಿಕೆ  

ಬೀಜ ಬಿದ್ದ ಕಲ್ಲುಭೂಮಿಯು ಯಾರೆಂದರೆ ವಾಕ್ಯವನ್ನು ಕೇಳಿದಾಗ ಸಂತೋಷದಿಂದ ಸ್ವೀಕರಿಸುವವರು, ಆದರೆ ಇವರು ಬೇರಿಲ್ಲದಿರುವುದರಿಂದ, ಸ್ವಲ್ಪಕಾಲ ನಂಬಿ, ಶೋಧನೆ ಬಂದಾಗ ಬಿದ್ದುಹೋಗುವವರು.


ಏಕೆಂದರೆ ಕರ್ತದೇವರು ಒಳ್ಳೆಯವರೆಂದು ನೀವು ರುಚಿ ನೋಡಿದ್ದೀರಲ್ಲಾ.


ನಮಗೆ ಕರ್ತ ಹಾಗೂ ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ವಿಷಯವಾದ ಜ್ಞಾನಹೊಂದಿ ಲೋಕದ ಮಾಲಿನ್ಯಗಳನ್ನು ತಪ್ಪಿಸಿಕೊಂಡವರು ತಿರುಗಿ ಅವುಗಳಲ್ಲಿ ಸಿಕ್ಕಿಕೊಂಡು ಸೋತುಹೋದರೆ ಅವನ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು.


ನಾವು ಸಾರುತ್ತಿರುವ ಮುಂದಣ ಲೋಕವನ್ನು ದೇವರು ತಮ್ಮ ದೂತರಿಗೆ ಅಧೀನ ಮಾಡಲಿಲ್ಲವಲ್ಲ.


ಏಕೆಂದರೆ, ಯೋಹಾನನು ನೀತಿವಂತನು ಮತ್ತು ಪವಿತ್ರ ಮನುಷ್ಯನು ಎಂದು ತಿಳಿದು ಹೆರೋದನು ಭಯಪಟ್ಟು ಅವನನ್ನು ಸುರಕ್ಷಿತವಾಗಿಟ್ಟಿದ್ದನು. ಯೋಹಾನನು ಹೇಳಿದ್ದನ್ನು ಹೆರೋದನು ಕೇಳಿದಾಗಲೆಲ್ಲಾ ಅವನಿಗೆ ಗಲಿಬಿಲಿಯಾಗುತ್ತಿತ್ತು. ಆದರೂ ಅವನ ಮಾತನ್ನು ಕೇಳಲು ಇಷ್ಟಪಡುತ್ತಿದ್ದನು.


ಯೆಹೋವ ದೇವರು ಒಳ್ಳೆಯವರೆಂದು ರುಚಿಸಿ ನೋಡಿರಿ; ಅವರನ್ನು ಆಶ್ರಯಿಸುವ ಮನುಷ್ಯನು ಭಾಗ್ಯವಂತನು.


ಯಾರಾದರೂ ಮನುಷ್ಯಪುತ್ರನಾದ ನನಗೆ ವಿರೋಧವಾಗಿ ಮಾತನಾಡುವ ಪ್ರತಿಯೊಬ್ಬರಿಗೂ ಕ್ಷಮಾಪಣೆಯಾಗುವುದು, ಆದರೆ ಪವಿತ್ರಾತ್ಮನಿಗೆ ವಿರೋಧವಾಗಿ ಮಾತನಾಡಿದರೆ, ಈ ಯುಗದಲ್ಲೇ ಆಗಲಿ ಬರುವ ಯುಗದಲ್ಲೇ ಆಗಲಿ ಅದಕ್ಕಾಗಿ ಅವರಿಗೆ ಕ್ಷಮೆ ದೊರಕುವುದಿಲ್ಲ.


ಇದಲ್ಲದೆ ರಕ್ಷಣೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಳ್ಳಿರಿ. ದೇವರ ವಾಕ್ಯವೆಂಬ ಪವಿತ್ರಾತ್ಮರ ಖಡ್ಗವನ್ನು ಎತ್ತಿ ಹಿಡಿಯಿರಿ.


ಯಾಕೆಂದರೆ ದೇವರ ವಾಕ್ಯವು ಸಜೀವವಾದದ್ದು, ಕ್ರಿಯಾತ್ಮಕವಾದದ್ದು, ಇಬ್ಬಾಯಿ ಕತ್ತಿಗಿಂತಲೂ ಹರಿತವಾದದ್ದು, ಪ್ರಾಣ ಮತ್ತು ಆತ್ಮಗಳ ಕೀಲು ಮಜ್ಜೆಗಳನ್ನು ವಿಭಾಗಿಸುವಷ್ಟರ ಮಟ್ಟಿಗೆ ಛೇದಿಸುವಂಥದ್ದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸಿ ತೀರ್ಪು ನೀಡುವಂಥದ್ದು ಆಗಿದೆ.


ವಿಶ್ವವು ದೇವರ ವಾಕ್ಯದಿಂದ ಉಂಟಾದವೆಂದೂ ಕಾಣುವಂತವುಗಳು ಕಾಣದವುಗಳಿಂದ ಉಂಟಾದವು ಎಂಬುದನ್ನು ನಾವು ನಂಬಿಕೆಯಿಂದ ತಿಳಿದುಕೊಂಡದ್ದರಿಂದ ಗ್ರಹಿಸುತ್ತೇವೆ.


ಕರ್ತದೇವರ ವಾಕ್ಯವಾದರೋ ಸದಾಕಾಲ ಇರುವುದು.” ಇದೇ ನಿಮಗೆ ಸಾರಲಾದ ಸುವಾರ್ತಾವಾಕ್ಯವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು