Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 4:7 - ಕನ್ನಡ ಸಮಕಾಲಿಕ ಅನುವಾದ

7 ದೇವರು “ಈ ಹೊತ್ತೇ” ಎಂದು ಬೇರೊಂದು ದಿವಸವನ್ನು ಗೊತ್ತು ಮಾಡುತ್ತಾರೆ. ಈ ದಿನವನ್ನು ಕುರಿತೇ ಬಹುಕಾಲದ ನಂತರ ದಾವೀದನ ಮೂಲಕ ಮೊದಲೇ ಹೀಗೆ ಹೇಳಿದ್ದಾರೆ: “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ, ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಪುನಃ ಬಹುಕಾಲದ ನಂತರ ಆತನು ದಾವೀದನ ಮೂಲಕ ‘ಈ ಹೊತ್ತೇ’ ಎಂದು ಬೇರೊಂದು ದಿನವನ್ನು ಗೊತ್ತುಮಾಡಿದ್ದಾನೆ. ಹೇಗೆಂದರೆ, “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಡುವುದಾದರೆ, ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ!” ಎಂದು ಹೇಳುತ್ತಾನಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಈ ಕಾರಣದಿಂದಲೇ ದೇವರು, “ಇಂದು” ಎಂದು ಬೇರೊಂದು ದಿನವನ್ನು ಗೊತ್ತುಮಾಡುತ್ತಾರೆ. ಈ ದಿನವನ್ನು ಕುರಿತೇ ದೀರ್ಘಕಾಲದ ನಂತರ ದಾವೀದನ ಮುಖಾಂತರ : “ದೇವರ ದನಿಯನು ಕೇಳುವಿರಾದರೆ ನೀವಿಂದು ನಿಮ್ಮ ಪೂರ್ವಜರಂತೆ ಕಲ್ಲಾಗಿಸದಿರಿ ಹೃದಯವನು,” ಎಂದು ಹೇಳಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಬಹುಕಾಲ ಹೋದನಂತರ ಆತನು ದಾವೀದನ ಬಾಯಿಂದ ಮಾತಾಡಿ ಈಹೊತ್ತೇ ಎಂದು ಒಂದಾನೊಂದು ದಿವಸವನ್ನು ಗೊತ್ತು ಮಾಡುತ್ತಾನೆ; ಹೇಗಂದರೆ - ನೀವು ಈಹೊತ್ತು ದೇವರ ಶಬ್ದಕ್ಕೆ ಕಿವಿಗೊಟ್ಟರೆ ನಿಮ್ಮ ಹೃದಯಗಳನ್ನು ಕಠಿನಮಾಡಿಕೊಳ್ಳಬೇಡಿರಿ ಎಂದು ಮೇಲ್ಕಂಡ ವಚನದಲ್ಲಿ ಹೇಳುತ್ತಾನಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಆದ್ದರಿಂದ ಆತನು ಮತ್ತೊಂದು ವಿಶೇಷ ದಿನವನ್ನು ಯೋಜಿಸಿದನು. ಅದನ್ನು “ಈ ಹೊತ್ತು” ಎಂದು ಕರೆಯಲಾಗಿದೆ. ಆತನು ಆ ದಿನವನ್ನು ಕುರಿತು ಬಹುಕಾಲದ ನಂತರ ದಾವೀದನ ಮೂಲಕ ತಿಳಿಸಿದನು. ಪವಿತ್ರ ಗ್ರಂಥದ ಈ ಭಾಗವನ್ನು ನಾವು ಮೊದಲೊಮ್ಮೆ ನೋಡಿದೆವು: “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ, ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

7 ತಸೆ ಮನುನ್ ದೆವಾನ್ ಆಜ್ ಮನ್ತಲೊ ಅನಿ ಎಕ್ ದಿಸ್ ನೆಮ್ಸುನ್ ಥವ್ಲ್ಯಾನಾಯ್. ಕವ್ಡ್ಯಾಕಿ ವರ್ಸಾಂಚ್ಯಾ ಮಾನಾ ಹ್ಯಾಚ್ ದಿಸಾಚ್ಯಾ ವಿಶಯಾತ್ ದಾವಿದಾಚ್ಯಾ ತೊಂಡಾತ್ನಾ ಬೊಲುನ್ ಅದ್ದಿಚ್ ಸಾಂಗಲ್ಲ್ಯಾ ಗೊಸ್ಟಿ ಸಾರ್ಕೆಚ್ ದೆವ್ ಮನ್ತಾ, ಆಜ್ ತುಮಿ ತೆಚೊ ಧನ್ ಆಯಿಕ್ತ್ಯಾಶಿ ಹೊಲ್ಯಾರ್, ತುಮ್ಚಿ ಮನಾ ನಿಸ್ಟುರ್ ಕರುನಕಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 4:7
12 ತಿಳಿವುಗಳ ಹೋಲಿಕೆ  

ಅವರು ನಮ್ಮ ದೇವರು; ನಾವು ಅವರ ಹುಲ್ಲುಗಾವಲಿನ ಪ್ರಜೆಗಳಾಗಿದ್ದೇವೆ, ನಾವು ಅವರು ಪರಿಪಾಲಿಸುವ ಮಂದೆಯೂ ಆಗಿದ್ದೇವೆ. ನೀವು ಈ ಹೊತ್ತು ಅವರ ಸ್ವರಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೆಯದು.


ಈಗಲೇ ಹೇಳಿದಂತೆ: “ನೀವು ಈ ಹೊತ್ತು ದೇವರ ಸ್ವರವನ್ನು ಕೇಳಿದರೆ, ತಿರುಗಿಬಿದ್ದಾಗ ನಡೆದಂತೆ ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ.”


“ಹಾಗಾದರೆ ದಾವೀದನು ಆತ್ಮದಲ್ಲಿ ಆತನಿಗೆ, ‘ಕರ್ತನು’ ಎಂದು ಕರೆದು,


ಆದರೆ ಬೇರೆಯವರು ನಂಬಲಿಲ್ಲ. ಅವರು ತಮ್ಮತಮ್ಮಲ್ಲಿಯೇ ಭಿನ್ನಾಭಿಪ್ರಾಯ ಉಳ್ಳವರಾಗಿರಲು ಪೌಲನು ಅವರಿಗೆ, “ಪವಿತ್ರಾತ್ಮ ದೇವರು ನಿಮ್ಮ ಪಿತೃಗಳಿಗೆ ಪ್ರವಾದಿ ಯೆಶಾಯನ ಮುಖಾಂತರ ಈ ಮಾತುಗಳನ್ನು ಸರಿಯಾಗಿಯೇ ಹೇಳಿದ್ದಾರೆ:


ದಾವೀದನು ಕ್ರಿಸ್ತ ಯೇಸುವಿನ ಪುನರುತ್ಥಾನದ ಬಗ್ಗೆ ಮುಂಚಿತವಾಗಿಯೇ ನೋಡಿ, ಹೀಗೆ ಮಾತನಾಡಿದನು: ‘ಅವರನ್ನು ಪಾತಾಳದಲ್ಲಿಯೇ ಬಿಡಲಿಲ್ಲ; ಅವರ ದೇಹವು ಕೊಳೆಯುವ ಅವಸ್ಥೆಯನ್ನು ಕಾಣಲಿಲ್ಲ.’


ದಾವೀದನು ತಾನೇ ಕೀರ್ತನೆಗಳ ಗ್ರಂಥದಲ್ಲಿ ಹೀಗೆ ಹೇಳಿದ್ದಾನೆ: “ ‘ಕರ್ತದೇವರು ನನ್ನ ಕರ್ತದೇವರಿಗೆ: “ನಾನು ನಿನ್ನ ವಿರೋಧಿಗಳನ್ನು


ದಾವೀದನು ತಾನೇ ಪವಿತ್ರಾತ್ಮ ಪ್ರೇರಣೆಯಿಂದ ಹೇಳಿದ್ದೇನೆಂದರೆ: “ ‘ಕರ್ತದೇವರು ನನ್ನ ಕರ್ತದೇವರಿಗೆ ಹೇಳಿದ್ದಾರೆ: “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದದಡಿಯಲ್ಲಿ ಹಾಕುವವರೆಗೆ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು.” ’


ಇಸ್ರಾಯೇಲರು ಈಜಿಪ್ಟ್ ದೇಶದಿಂದ ಬಂದ ನಾನೂರ ಎಂಬತ್ತನೆಯ ವರುಷದಲ್ಲಿ ಇಸ್ರಾಯೇಲಿನ ಮೇಲೆ ಸೊಲೊಮೋನನ ಆಳಿಕೆಯ ನಾಲ್ಕನೆಯ ವರ್ಷದ, ಎರಡನೆಯ ತಿಂಗಳಾದ ಜಿವ್ ತಿಂಗಳಲ್ಲಿ ಅವನು ಯೆಹೋವ ದೇವರ ಆಲಯವನ್ನು ಕಟ್ಟಿಸಲು ಪ್ರಾರಂಭಿಸಿದನು.


“ಪ್ರಿಯರೇ, ಮೂಲಪಿತೃ ದಾವೀದನು ಮರಣಹೊಂದಿದನು; ಸಮಾಧಿಮಾಡಲಾಯಿತು. ಇಂದಿಗೂ ಅವನ ಸಮಾಧಿ ನಮ್ಮಲ್ಲಿದೆ ಎಂಬುದನ್ನು ನಾನು ನಿಮಗೆ ಧೈರ್ಯದಿಂದ ಹೇಳಬಲ್ಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು