ಇಬ್ರಿಯರಿಗೆ 4:13 - ಕನ್ನಡ ಸಮಕಾಲಿಕ ಅನುವಾದ13 ನಾವು ಲೆಕ್ಕ ಒಪ್ಪಿಸಬೇಕಾಗಿರುವ ದೇವರ ದೃಷ್ಟಿಗೆ ಸಮಸ್ತವೂ ಬಹಿರಂಗವಾದದ್ದಾಗಿಯೂ ಬಯಲಾದದ್ದಾಗಿಯೂ ಆಗಿದೆ. ಎಲ್ಲಾ ಸೃಷ್ಟಿಯಲ್ಲಿ ದೇವರ ದೃಷ್ಟಿಗೆ ಮರೆಯಾದದ್ದು ಯಾವುದೂ ಇಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಆತನ ದೃಷ್ಟಿಗೆ ಮರೆಯಾಗಿರುವ ಒಂದು ಸೃಷ್ಟಿಯೂ ಇಲ್ಲ. ಆತನ ಕಣ್ಣಿಗೆ ಮರೆಯಾದದ್ದು ಒಂದೂ ಇಲ್ಲ ಎಲ್ಲವೂ ನಗ್ನವಾಗಿಯೂ ಬಟ್ಟಬಯಲಾಗಿಯೂ ಇದೆ. ಅಂಥವನಿಗೆ ನಾವು ಲೆಕ್ಕಕೊಡಬೇಕಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ನಾವು ಯಾರಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ, ಅವರ ಕಣ್ಣಿಗೆ ಮುಚ್ಚುಮರೆಯಾದುದು ಯಾವುದೂ ಇಲ್ಲ. ಅವರ ದೃಷ್ಟಿಗೆ ಎಲ್ಲವೂ ಬಟ್ಟಬಯಲು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ. ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ದೇವರ ದೃಷ್ಟಿಗೆ ಯಾವುದೂ ಮುಚ್ಚುಮರೆಯಾಗಿಲ್ಲ. ಆತನ ಕಣ್ಣೆದುರಿನಲ್ಲಿ ಪ್ರತಿಯೊಂದೂ ತೆರೆಯಲ್ಪಟ್ಟು ಬಟ್ಟಬಯಲಾಗಿವೆ. ನಾವು ನಮ್ಮ ಜೀವಿತದ ಬಗ್ಗೆ ಲೆಕ್ಕ ಒಪ್ಪಿಸಬೇಕಾಗಿರುವುದು ಆತನಿಗೇ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್13 ರಚುನ್ ಹೊಲ್ಲ್ಯಾ ಸಗ್ಳ್ಯಾತ್ ದೆವಾಚ್ಯಾ ದಿಸ್ಟಿತ್ನಾ ನಿಪುನ್ ಅಸಲ್ಲೆ ಕಾಯ್ಬಿ ನಾ. ಸಗ್ಳೆ ತೆಚ್ಯಾ ಇದ್ರಾಕ್ ಉಗಡಲ್ಲೆ, ಅನಿ ದೊಳ್ಯಾಂಚ್ಯಾ ಇದ್ರಾಕ್ ಸೊಡ್ವುನ್ ಚಿತ್ತಾರ್ ಕಾಡುನ್ ಥವಲ್ಲ್ಯಾ ಸಾರ್ಕೆ ಹಾಯ್, ಅಮಿ ಕರಲ್ಲ್ಯಾ ಕಾಮಾಂಚೊ ಲೆಕ್ಕ್ ಅಮಿ ತ್ಯಾಚ್ ದೆವಾಕ್ ದಿತಲೊ ಹಾಯ್. ಅಧ್ಯಾಯವನ್ನು ನೋಡಿ |
“ಇದಲ್ಲದೆ ನನ್ನ ಮಗ ಸೊಲೊಮೋನನೇ, ನೀನು ನಿನ್ನ ತಂದೆಯ ದೇವರನ್ನು ಅರಿತುಕೊಂಡು, ಪೂರ್ಣಹೃದಯದಿಂದಲೂ, ಪೂರ್ಣಮನಸ್ಸಿನಿಂದಲೂ ದೇವರನ್ನು ಸೇವಿಸು. ಏಕೆಂದರೆ, ಯೆಹೋವ ದೇವರು ಸಕಲ ಹೃದಯಗಳನ್ನು ಪರಿಶೋಧಿಸಿ, ಯೋಚನೆಗಳ ಕಲ್ಪನೆಯನ್ನೆಲ್ಲಾ ತಿಳಿದಿದ್ದಾರೆ. ನೀನು ದೇವರನ್ನು ಹುಡುಕಿದರೆ, ದೇವರು ನಿನಗೆ ಸಿಕ್ಕುವರು. ನೀನು ದೇವರನ್ನು ಬಿಟ್ಟುಬಿಟ್ಟರೆ, ದೇವರು ಸಹ ನಿನ್ನನ್ನು ಎಂದೆಂದಿಗೂ ತೊರೆದುಬಿಡುವರು.
ಯೇಸು ಮೂರನೆಯ ಸಾರಿ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನ ಮೇಲೆ ಮಮತೆ ಇಟ್ಟಿದ್ದೀಯೋ?” ಎಂದು ಕೇಳಿದರು. ಯೇಸು ಮೂರನೆಯ ಸಾರಿ, “ನೀನು ನನ್ನ ಮೇಲೆ ಮಮತೆ ಇಟ್ಟಿದ್ದೀಯೋ?” ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು, “ಕರ್ತನೇ, ನಿಮಗೆ ಎಲ್ಲವೂ ತಿಳಿದಿದೆ. ನಾನು ನಿಮ್ಮ ಮೇಲೆ ಎಷ್ಟು ಮಮತೆ ಇಟ್ಟಿದ್ದೇನೆಂದು ನಿಮಗೆ ತಿಳಿದಿದೆ,” ಎಂದನು. ಆಗ ಯೇಸು ಪೇತ್ರನಿಗೆ, “ನನ್ನ ಕುರಿಗಳನ್ನು ಮೇಯಿಸು,” ಎಂದರು.