Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 10:7 - ಕನ್ನಡ ಸಮಕಾಲಿಕ ಅನುವಾದ

7 ಆಗ ನಾನು ಹೀಗೆಂದೆನು, ‘ಓ, ದೇವರೇ, ಪವಿತ್ರ ವೇದದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದಿರುವಂತೆ ನಾನು ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ.’ ”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಆಗ ನಾನು, ಇಗೋ, ದೇವರೇ, ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದಿರುವ ಪ್ರಕಾರ ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ” ಎಂದು ಹೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಆಗ ಇಂತೆಂದೆ ನಾನು : ಗ್ರಂಥದ ಸುರುಳಿಯಲಿ ನನ್ನನ್ನು ಕುರಿತು ಬರೆದಿರುವಂತೆ, ಓ ದೇವಾ, ಇಗೋ ನಾ ಬಂದೆ ನಿನ್ನ ಚಿತ್ತವನು ನೆರವೇರಿಸಲೆಂದೇ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಆಗ ನಾನು - ಇಗೋ, ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವದಕ್ಕೆ ಬಂದಿದ್ದೇನೆ. ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ ಎಂದು ಹೇಳಿದೆನು ಅನ್ನುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಆಗ ನಾನು, ‘ದೇವರೇ, ನಾನು ಇಲ್ಲಿದ್ದೇನೆ. ಧರ್ಮಶಾಸ್ತ್ರದಲ್ಲಿ ನನ್ನ ಬಗ್ಗೆ ಬರೆದಿರುವಂತೆಯೇ ನಿನ್ನ ಚಿತ್ತಕ್ಕನುಸಾರವಾಗಿ ಮಾಡಲು ನಾನು ಬಂದಿದ್ದೇನೆ’ ಎಂದು ಹೇಳಿದೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

7 ತನ್ನಾ ಮಿಯಾ ಮಟ್ಲೊ ಅಬಕ್ ದೆವಾ ತುಜ್ಯಾ ಖಾಯ್ದ್ಯಾಂಚ್ಯಾ ಪುಸ್ತಕಾತ್ ಮಾಜ್ಯಾ ವಿಶಯಾತ್ ಲಿವಲ್ಲ್ಯಾ ಸಾರ್ಕೆ ತುಜ್ಯಾ ಮನಾಕ್ ಯೆಯ್ ಸಾರ್ಕೆ ಕರುಕ್ ಮಿಯಾ ಯೆತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 10:7
12 ತಿಳಿವುಗಳ ಹೋಲಿಕೆ  

ಯೇಸು ಅವರಿಗೆ, “ನನ್ನನ್ನು ಕಳುಹಿಸಿದ ತಂದೆಯ ಚಿತ್ತವನ್ನು ಮಾಡಿ ಅವರ ಕೆಲಸವನ್ನು ಪೂರೈಸುವುದೇ ನನ್ನ ಆಹಾರ.


ನಾನು ನನ್ನ ಚಿತ್ತವನ್ನು ಮಾಡುವುದಕ್ಕಲ್ಲ. ನನ್ನನ್ನು ಕಳುಹಿಸಿದ ತಂದೆಯ ಚಿತ್ತವನ್ನೇ ಮಾಡುವುದಕ್ಕೆ ಪರಲೋಕದಿಂದ ಬಂದೆನು.


ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು. ನಾನು ಕೇಳಿರುವಂತೆಯೇ ತೀರ್ಪು ಮಾಡುತ್ತೇನೆ. ನನ್ನ ತೀರ್ಪು ನ್ಯಾಯವಾದದ್ದು. ಏಕೆಂದರೆ ನಾನು ನನ್ನ ಚಿತ್ತವನ್ನಲ್ಲ, ನನ್ನನ್ನು ಕಳುಹಿಸಿದ ತಂದೆಯ ಚಿತ್ತವನ್ನೇ ನೆರವೇರಿಸಲು ಅಪೇಕ್ಷಿಸುತ್ತೇನೆ.


“ಗ್ರಂಥದ ಸುರುಳಿಯನ್ನು ತೆಗೆದುಕೊಂಡು ನಾನು ಇಸ್ರಾಯೇಲ್, ಯೆಹೂದ ಮತ್ತು ಸಕಲ ಜನಾಂಗಗಳ ವಿರೋಧವಾಗಿಯೂ ನಿನ್ನ ಸಂಗಡ ಮಾತನಾಡಿದ ದಿನದಿಂದ, ಯೋಷೀಯನ ದಿವಸಗಳು ಮೊದಲುಗೊಂಡು ಈ ದಿವಸದವರೆಗೂ ನಿನಗೆ ಹೇಳಿದ ವಾಕ್ಯಗಳನ್ನೆಲ್ಲಾ ಅದರಲ್ಲಿ ಬರೆ.


ನಾನು ನಿನಗೂ ಸ್ತ್ರೀಗೂ ನಿಮ್ಮ ಸಂತಾನಕ್ಕೂ ಆಕೆಯ ಸಂತಾನಕ್ಕೂ ವೈರತ್ವವನ್ನು ಇಡುವೆನು. ಆತನು ನಿನ್ನ ತಲೆಯನ್ನು ಜಜ್ಜುವನು ಮತ್ತು ನೀನು ಆತನ ಹಿಮ್ಮಡಿಯನ್ನು ಕಚ್ಚುವಿ.”


ಅವರ ಭೂಮಿಯ ವಾಸಸ್ಥಳದ ಭಾಗದಲ್ಲಿ ಸಂತೋಷಿಸುತ್ತಿದ್ದೆನು; ಮಾನವರೊಂದಿಗೆ ಆನಂದಿಸುತ್ತಿದ್ದೆನು.


ಮೇದ್ಯರ ದೇಶದಲ್ಲಿರುವ ಅಹ್ಮೆತಾ ರಾಜಧಾನಿಯಲ್ಲಿ ಜ್ಞಾಪಕಾರ್ಥದ ಒಂದು ಸುರುಳಿ ಸಿಕ್ಕಿತು. ಅದರಲ್ಲಿ ಹೀಗೆ ಬರೆಯಲಾಗಿತ್ತು:


ಸಾರ್ವಭೌಮ ಯೆಹೋವ ದೇವರು ನನ್ನ ಕಿವಿಯನ್ನು ತೆರೆದಿದ್ದಾರೆ, ನಾನು ಎದುರು ಬೀಳಲಿಲ್ಲ, ವಿಮುಖನಾಗಲೂ ಇಲ್ಲ.


ಇಗೋ, ನಾನು ನೋಡುತ್ತಿದ್ದಂತೆ ಒಂದು ಕೈ ನನ್ನ ಕಡೆಗೆ ಚಾಚಿತ್ತು. ಅದರಲ್ಲಿ ಗ್ರಂಥದ ಸುರುಳಿಯೊಂದು ಕಾಣಿಸಿತು.


ಇದಾದ ಮೇಲೆ ದೇವರು ನನಗೆ, “ಮನುಷ್ಯಪುತ್ರನೇ, ನಿನಗೆ ಸಿಕ್ಕಿದ್ದ ಈ ಸುರುಳಿಯನ್ನು ತಿಂದು, ಹೋಗಿ ಇಸ್ರಾಯೇಲಿನ ಜನರ ಸಂಗಡ ಮಾತನಾಡು,” ಎಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು