Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆಮೋಸ 9:9 - ಕನ್ನಡ ಸಮಕಾಲಿಕ ಅನುವಾದ

9 ಧಾನ್ಯವನ್ನು ಜರಡಿಯಲ್ಲಿ ಜಾಲಿಸುವಂತೆ ನಾನು ಇಸ್ರಾಯೇಲರನ್ನು ಎಲ್ಲಾ ಜನಾಂಗಗಳಲ್ಲಿ ಹಾಕಿ ಜಾಲಿಸಬೇಕೆಂದು ಆಜ್ಞಾಪಿಸುವೆನು. ಆದರೂ ಒಂದು ಕಾಳಾದರೂ ನೆಲಕ್ಕೆ ಬೀಳುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 “ಇಗೋ, ಧಾನ್ಯವನ್ನು ಜರಡಿಯಲ್ಲಿ ಜಾಲಿಸುವ ಪ್ರಕಾರ, ಇಸ್ರಾಯೇಲರನ್ನು ಸಕಲ ಜನಾಂಗಗಳಲ್ಲಿ ಹಾಕಿ ಜಾಲಿಸಬೇಕು” ಆದರೂ ಒಂದು ಕಾಳಾದರೂ ನೆಲಕ್ಕೆ ಬೀಳುವುದಿಲ್ಲ, ಎಂದು ಅಪ್ಪಣೆ ಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 “ಇಗೋ, ಧಾನ್ಯವನ್ನು ಜರಡಿಯಲ್ಲಿ ಜಾಲಿಸುವಂತೆ ಇಸ್ರಯೇಲರನ್ನು ಸಕಲ ಜನಾಂಗಗಳೊಡನೆ ಸೇರಿಸಿ ಜಾಲಿಸಬೇಕೆಂದು ಆಜ್ಞಾಪಿಸುವೆನು. ಹೀಗೆ ಕಾಳನ್ನೂ ಜೊಳ್ಳನ್ನೂ ಬೇರ್ಪಡಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಇಗೋ, ಧಾನ್ಯವನ್ನು ಜರಡಿಯಲ್ಲಿ ಜಾಲಿಸುವ ಪ್ರಕಾರ ಇಸ್ರಾಯೇಲ್ಯರನ್ನು ಸಕಲ ಜನಾಂಗಗಳಲ್ಲಿ ಹಾಕಿ ಜಾಲಿಸಬೇಕೆಂದು ಅಪ್ಪಣೆಕೊಡುವೆನು; ಹೀಗಾದರೂ ಒಂದು ಕಾಳೂ ನೆಲಕ್ಕೆಬೀಳದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಇಸ್ರೇಲನ್ನು ನಾಶನ ಮಾಡುವದಕ್ಕಾಗಿ ಆಜ್ಞಾಪಿಸುವೆನು. ಇಸ್ರೇಲರನ್ನು ನಾನು ಪರದೇಶಗಳಲ್ಲಿ, ಚದರಿಸಿಬಿಡುವೆನು. ಒಬ್ಬನು ಜಾಳಿಗೆಯಲ್ಲಿ ಹಿಟ್ಟನ್ನು ಜಾಳಿಸುವಂತೆ ಇರುವುದು. ಒಳ್ಳೆಯ ಹಿಟ್ಟು ಜಾಳಿಗೆಯ ರಂಧ್ರದ ಮೂಲಕ ಕೆಳಗೆ ಬಿದ್ದರೆ, ಹಿಟ್ಟಿನ ಗಂಟುಗಳು ಜಾಳಿಗೆಯ ಮೇಲೆ ಸಿಕ್ಕಿಕೊಳ್ಳುವವು. ಯಾಕೋಬನ ಕುಟುಂಬಕ್ಕೆ ಇದೇ ರೀತಿಯಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆಮೋಸ 9:9
14 ತಿಳಿವುಗಳ ಹೋಲಿಕೆ  

“ಸೀಮೋನನೇ, ಸೀಮೋನನೇ, ಇಗೋ, ಸೈತಾನನು ನಿಮ್ಮೆಲ್ಲರನ್ನೂ ಗೋಧಿಯಂತೆ ತೂರಬೇಕೆಂದು ಅಪ್ಪಣೆ ಕೇಳಿದ್ದಾನೆ.


ಇದಲ್ಲದೆ ಯೆಹೋವ ದೇವರು ನಿಮ್ಮನ್ನು ಭೂಮಿಯ ಈ ಮೇರೆಯಿಂದ ಆ ಮೇರೆಯವರೆಗೂ ಎಲ್ಲಾ ಜನಾಂಗಗಳಲ್ಲಿ ಚದರಿಸುವರು. ಅಲ್ಲಿ ನೀವೂ ನಿಮ್ಮ ಪಿತೃಗಳು ತಿಳಿಯದಂಥ ಮರವೂ ಕಲ್ಲೂ ಆಗಿರುವಂಥ ಬೇರೆ ದೇವರುಗಳನ್ನು ಆರಾಧಿಸುವಿರಿ.


ಆತನ ಶ್ವಾಸವು ತುಂಬುತ್ತಾ, ಕಂಠದವರೆಗೂ ಏರುವ ತೊರೆಯಂತಿದೆ. ಜನಾಂಗಗಳನ್ನು ಏನೂ ಉಳಿಸದ ಜರಡಿಯಿಂದ ಜಾಲಿಸುವುದಕ್ಕೆ ಬರುತ್ತಾನೆ. ದಾರಿತಪ್ಪಿಸುವ ಕಡಿವಾಣವು ಜನಗಳ ದವಡೆಗಳಲ್ಲಿರುವುದು.


ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ, ನಿಮ್ಮ ಹಿಂದೆ ಖಡ್ಗವನ್ನು ಬೀಸುವೆನು. ನಿಮ್ಮ ಭೂಮಿ ಹಾಳಾಗಿರುವುದು, ನಿಮ್ಮ ಪಟ್ಟಣಗಳು ನಾಶವಾಗಿರುವುವು.


“ಈ ನಿಯಮಗಳು ನನ್ನ ಸನ್ನಿಧಿಯಿಂದ ಯಾವಾಗ ಇಲ್ಲದೆ ಹೋಗುವುವೋ, ಆಗ ಇಸ್ರಾಯೇಲಿನ ಸಂತಾನವು ಸಹ ಸದಾಕಾಲ ನನ್ನ ಮುಂದೆ ಜನಾಂಗವಾಗಿರದ ಹಾಗೆ ನಿಂತುಹೋಗುವುದು,” ಎಂದು ಯೆಹೋವ ದೇವರು ಹೇಳುತ್ತಾರೆ.


ನನ್ನ ಸೇವಕನಾದ ಯಾಕೋಬನೇ, ನೀನು ಭಯಪಡಬೇಡ,” ಎಂದು ಯೆಹೋವ ದೇವರು ಹೇಳುತ್ತಾರೆ. “ಏಕೆಂದರೆ ನಾನೇ ನಿನ್ನ ಸಂಗಡ ಇದ್ದೇನೆ; ನಾನು ನಿನ್ನನ್ನು ಎಲ್ಲಿ ಓಡಿಸಿದೆನೋ, ಆ ಜನಾಂಗಗಳನ್ನೆಲ್ಲಾ ಸಂಪೂರ್ಣವಾಗಿ ಮುಗಿಸಿಬಿಡುತ್ತೇನೆ; ಆದರೆ ನಿನ್ನನ್ನು ಸಂಪೂರ್ಣವಾಗಿ ಮುಗಿಸಿಬಿಡುವುದಿಲ್ಲ; ನ್ಯಾಯದಿಂದಲೇ ನಿನ್ನನ್ನು ಶಿಕ್ಷಿಸುತ್ತೇನೆ; ಆದರೂ ನಿನ್ನನ್ನು ಶಿಕ್ಷಿಸದೆ ಬಿಡುವುದಿಲ್ಲ.”


ಆಕಾಶದ ನಾಲ್ಕು ದಿಕ್ಕುಗಳಿಂದ ಏಲಾಮಿನ ಮೇಲೆ ನಾಲ್ಕು ಗಾಳಿಗಳನ್ನು ತಂದು, ಅವರನ್ನು ಆ ಎಲ್ಲಾ ದಿಕ್ಕುಗಳ ಕಡೆಗೆ ಚದರಿಸುವೆನು; ಏಲಾಮಿನಿಂದ ಓಡಿಸಲಾದವರು ಸೇರದ ಜನಾಂಗವು ಇರುವುದಿಲ್ಲ.


ಆದ್ದರಿಂದ ನಿಮ್ಮ ಮಧ್ಯದಲ್ಲಿ ತಂದೆಗಳೇ ಮಕ್ಕಳನ್ನು ತಿನ್ನುವರು. ಮಕ್ಕಳು ಅವರ ತಂದೆಗಳನ್ನು ತಿನ್ನುವರು. ಹೀಗೆ ನಿಮ್ಮಲ್ಲಿ ನ್ಯಾಯತೀರ್ಪನ್ನು ನಡಿಸುವೆನು. ನಿಮ್ಮಲ್ಲಿ ಉಳಿದವರನ್ನೆಲ್ಲಾ ಗಾಳಿ ಬೀಸುವ ಎಲ್ಲಾ ದಿಕ್ಕಿಗೂ ಚದರಿಸುವೆನು.


ನಿನ್ನಲ್ಲಿಯ ಮೂರನೆಯ ಒಂದು ಪಾಲು ಜನರು ವ್ಯಾಧಿಗಳಿಂದ ಸಾಯುವರು, ಕ್ಷಾಮದಿಂದ ನಿಮ್ಮಲ್ಲಿ ಅವರು ನಾಶವಾಗುವರು. ಮೂರನೆಯ ಒಂದು ಪಾಲು ನಿಮ್ಮ ಸುತ್ತಲೂ ಖಡ್ಗ ಹಿಡಿದು ಬೀಳುವರು. ಮೂರನೆಯ ಒಂದು ಪಾಲನ್ನು ಎಲ್ಲಾ ದಿಕ್ಕುಗಳಿಗೆ ಗಾಳಿಗೆ ತೂರಿ ಚದರಿಸಿ, ಅವರ ಮೇಲೆ ಖಡ್ಗವನ್ನು ಬೀಸುವೆನು.


ತಿರುಗಿಬಿದ್ದವರನ್ನೂ ನನಗೆ ವಿರೋಧವಾಗಿ ಅಪರಾಧ ಮಾಡಿದವರನ್ನೂ ನಿಮ್ಮೊಂದಿಗೆ ಶುದ್ಧಮಾಡುತ್ತೇನೆ. ಅವರು ಪ್ರವಾಸಿಗಳಾಗಿದ್ದ ದೇಶದೊಳಗಿಂದ ಅವರನ್ನು ಹೊರಗೆ ತರುತ್ತೇನೆ. ಆದರೆ ಅವರು ಇಸ್ರಾಯೇಲ್ ದೇಶದೊಳಗೆ ಹೋಗದ ಹಾಗೆ ಮಾಡಿ, ನಾನೇ ಯೆಹೋವ ದೇವರೆಂಬುದನ್ನು ಅವರಿಗೆ ತಿಳಿಸುತ್ತೇನೆ.


ನಾನು ಅವರನ್ನು ಜನಾಂಗಗಳಲ್ಲಿ ಚದರಿಸಿದೆನು. ಅವರು ಆ ದೇಶಗಳಲ್ಲಿ ಚದರಿಹೋದರು. ಅವರ ದುರ್ಮಾರ್ಗ ದುರಾಚಾರಗಳಿಗೆ ಅನುಸಾರವಾಗಿ ಅವರನ್ನು ನ್ಯಾಯತೀರಿಸಿದೆನು.


ಇಸ್ರಾಯೇಲರೇ, ಯೆಹೋವ ದೇವರು ಯೂಫ್ರೇಟೀಸ್ ನದಿ ಮೊದಲುಗೊಂಡು ಈಜಿಪ್ಟ್ ದೇಶದ ನದಿಯವರೆಗೆ ಹೊಡೆಯುವರು, ಆಗ ನಿಮ್ಮನ್ನು ಒಬ್ಬೊಬ್ಬರನ್ನಾಗಿ ಕೂಡಿಸುವರು.


ರೊಟ್ಟಿಗಾಗಿ ಗೋಧಿಯ ಕಾಳನ್ನು ಪುಡಿಮಾಡಬೇಕು; ಯಾವಾಗಲೂ ಅದನ್ನು ಒಕ್ಕುತ್ತಿರುವುದಿಲ್ಲ. ಅವನ ಬಂಡಿಯ ಚಕ್ರದಿಂದ ಅದರ ಮೇಲೆ ಒಡೆಯುವುದಿಲ್ಲ ಅವನ ಕುದುರೆ ಸವಾರದಿಂದ ಒಕ್ಕುತ್ತಿರುವುದಿಲ್ಲ.


ನಾನು ಅವರನ್ನು ಜನಾಂಗಗಳೊಳಗಿಂದ ಸೆರೆಹೋಗುವಂತೆ ಮಾಡಿ, ಆಮೇಲೆ ಅವರಲ್ಲಿ ಒಬ್ಬರನ್ನಾದರೂ ಉಳಿಸದೆ ಒಟ್ಟುಗೂಡಿಸಿ ಸ್ವದೇಶಕ್ಕೆ ಬರಮಾಡಿದುದರಿಂದ ನಾನೇ ಅವರ ಯೆಹೋವ ದೇವರೆಂದು ಅವರು ತಿಳಿಯುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು