Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆಮೋಸ 9:11 - ಕನ್ನಡ ಸಮಕಾಲಿಕ ಅನುವಾದ

11 ಆ ದಿನದಲ್ಲಿ, ಬಿದ್ದುಹೋದ ದಾವೀದನ ಗುಡಾರವನ್ನು ನಾನು ನಿಲ್ಲಿಸಿ ಅದರ ಮುರಿದ ಗೋಡೆಗಳನ್ನು ಸರಿಪಡಿಸುತ್ತೇನೆ. ಮತ್ತು ಅದರ ಅವಶೇಷಗಳನ್ನು ಪುನಃಸ್ಥಾಪಿಸಿ ಮತ್ತು ಅದನ್ನು ಮೊದಲಿನಂತೆ ಪುನಃ ನಿರ್ಮಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 “ಆ ದಿನದಲ್ಲಿ ನಾನು ದಾವೀದನ ಬಿದ್ದುಹೋಗಿರುವ ಗುಡಾರವನ್ನು ಎತ್ತಿ, ಅದರ ಬಿರುಕುಗಳನ್ನು ಮುಚ್ಚುವೆನು, ಹಾಳಾದದ್ದನ್ನು ಎಬ್ಬಿಸಿ, ಹಿಂದಿನ ದಿನಗಳಲ್ಲಿ ಮಾಡಿದ ಹಾಗೆ ಕಟ್ಟುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಸರ್ವೇಶ್ವರ ಇಂತೆನ್ನುತ್ತಾರೆ: “ದಿನ ಬರಲಿದೆ. ಅಂದು ಬಿದ್ದುಹೋಗಿರುವ ದಾವೀದನ ಗುಡಾರವನ್ನು ಮರಳಿ ಎಬ್ಬಿಸುವೆನು. ಅದರ ಬಿರುಕುಗಳನ್ನು ಮುಚ್ಚುವೆನು. ಹಾಳಾದದ್ದನ್ನು ಎತ್ತಿ ನಿಲ್ಲಿಸುವೆನು. ಮೊದಲು ಇದ್ದಂತೆಯೇ ಪುನಃ ನಿರ್ಮಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಆ ದಿನದಲ್ಲಿ ನಾನು ದಾವೀದನ ಬಿದ್ದು ಹೋಗಿರುವ ಗುಡಿಸಲನ್ನು ಎತ್ತಿ ಅದರ ಕಂಡಿಗಳನ್ನು ಮುಚ್ಚುವೆನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 “ದಾವೀದನ ಗುಡಾರವು ಕುಸಿದುಬಿದ್ದಿದೆ. ಆದರೆ ಆ ದಿವಸಗಳಲ್ಲಿ ತಿರುಗಿ ಅದನ್ನು ಮೇಲಕ್ಕೆತ್ತುವೆನು. ಗೋಡೆಯಲ್ಲಿರುವ ರಂಧ್ರಗಳನ್ನು ನಾನು ಸರಿಪಡಿಸುವೆನು. ಬಿದ್ದುಹೋದ ಕಟ್ಟಡಗಳನ್ನು ತಿರುಗಿ ಕಟ್ಟುವೆನು. ಮುಂಚೆ ಹೇಗಿತ್ತೋ ಹಾಗೆಯೇ ಇರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆಮೋಸ 9:11
37 ತಿಳಿವುಗಳ ಹೋಲಿಕೆ  

ಪ್ರೀತಿಯಲ್ಲಿ ಸಿಂಹಾಸನವು ಸ್ಥಾಪಿತವಾಗುವುದು. ನ್ಯಾಯತೀರಿಸುವವನೂ, ನ್ಯಾಯವನ್ನು ಹುಡುಕುವವನೂ, ನೀತಿಗೋಸ್ಕರ ತ್ವರೆಪಡುವವನೂ, ದಾವೀದನ ಗುಡಾರದಲ್ಲಿ ಅದರ ಮೇಲೆ ನಂಬಿಗಸ್ತಿಕೆಯಲ್ಲಿ ಕೂತುಕೊಳ್ಳುವನು.


ಮಾರ್ಗದಲ್ಲಿ ಹಾದುಹೋಗುವವರೆಲ್ಲರು ಅದನ್ನು ಕೀಳುವ ಹಾಗೆ ಏಕೆ ಅದರ ಬೇಲಿಗಳನ್ನು ನೀವು ಮುರಿದುಬಿಟ್ಟಿದ್ದೀರಿ?


ಆಗ ಆತನು ಪೂರ್ವಕಾಲದ ದಿವಸಗಳನ್ನೂ, ಮೋಶೆಯನ್ನೂ, ಅವನ ಜನರನ್ನೂ ಜ್ಞಾಪಕಮಾಡಿಕೊಂಡು “ಅವರನ್ನು ತನ್ನ ಮಂದೆಯ ಕುರುಬನ ಸಂಗಡ ಸಮುದ್ರದೊಳಗಿಂದ ಸುರಕ್ಷಿತವಾಗಿ ಮೇಲಕ್ಕೆ ಬರಮಾಡಿದವನು ಎಲ್ಲಿ? ಅವರ ಮಧ್ಯದಲ್ಲಿ ತನ್ನ ಪರಿಶುದ್ಧಾತ್ಮನನ್ನು ಇಟ್ಟವನು ಎಲ್ಲಿ?


ಆಮೇಲೆ ಇಸ್ರಾಯೇಲರು ತಿರುಗಿಕೊಂಡು ಅವರ ದೇವರಾದ ಯೆಹೋವ ದೇವರನ್ನು ಮತ್ತು ಅವರ ಅರಸನಾದ ದಾವೀದನನ್ನು ಹುಡುಕಿಕೊಂಡು, ಅಂತ್ಯ ದಿವಸಗಳಲ್ಲಿ ಯೆಹೋವ ದೇವರನ್ನೂ, ಆತನ ಒಳ್ಳೆಯತನವನ್ನೂ ಭಯಭಕ್ತಿಯಿಂದ ಪಡೆಯುವರು.


ನಾನು ನಿಮ್ಮ ಮೇಲೆ ಮನುಷ್ಯರನ್ನೂ ಮೃಗಗಳನ್ನೂ ವೃದ್ಧಿಮಾಡುವೆನು. ಅವು ಹೆಚ್ಚಾಗಿ ನಿಮಗೆ ಫಲವನ್ನು ತರುವುವು. ನಾನು ನಿಮ್ಮನ್ನು ಮೊದಲಿನ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ತರುವೆನು; ಆಗ ನಾನೇ ಯೆಹೋವ ದೇವರೆಂದು ನೀವು ತಿಳಿಯುವಿರಿ.


ಯೆಹೋವ ದೇವರಾದ ನಾನು ಎತ್ತರವಾದ ಮರವನ್ನು ತಗ್ಗಿಸಿ, ತಗ್ಗಾದದ್ದನ್ನು ಎತ್ತರ ಪಡಿಸಿ, ಹಸುರಾಗಿರುವುದನ್ನು ಒಣಗಿಸಿ, ಒಣಗಿದ್ದನ್ನು ಚಿಗುರಿಸಿದ್ದೇನೆ, ಎಂದು ಅರಣ್ಯದ ಸಕಲ ವೃಕ್ಷಗಳು ತಿಳಿಯುವುದು. “ ‘ಯೆಹೋವ ದೇವರಾದ ನಾನೇ ಮಾತನಾಡಿ, ಅದನ್ನು ನಡೆಸಿದ್ದೇನೆ.’ ”


ಯೆಹೋವ ದೇವರೇ, ನಾವು ನಿಮ್ಮ ಕಡೆ ಹಿಂದಿರುಗುವಂತೆ, ನಮ್ಮನ್ನು ನಿಮ್ಮ ಕಡೆಗೆ ಪುನಃ ಸ್ಥಾಪಿಸಿಕೊಳ್ಳಿ. ನಮ್ಮ ದಿನಗಳನ್ನು ಹಿಂದಿನಂತೆಯೇ ನವೀಕರಿಸಿರಿ.


ಅವರ ಪ್ರಾಣವನ್ನೂ ಹುಡುಕುವವರ ಕೈಯಲ್ಲಿಯೂ, ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿಯೂ, ಅವನ ಸೇವಕರ ಕೈಯಲ್ಲಿಯೂ ಅವರನ್ನು ನಾನು ಒಪ್ಪಿಸಿಬಿಡುವೆನು. ಅದರ ತರುವಾಯ ಅದು ಪೂರ್ವದ ಕಾಲಗಳಂತೆ ನಿವಾಸವಾಗುವುದೆಂದು ಯೆಹೋವ ದೇವರು ಹೇಳುತ್ತಾರೆ.


ನನ್ನ ದ್ರಾಕ್ಷಿ ತೋಟಕ್ಕೆ ನಾನು ಮಾಡುವುದು ಏನೆಂದು ನಾನು ನಿಮಗೆ ತಿಳಿಸುತ್ತೇನೆ. ನಾನು ಅದರ ಬೇಲಿಯನ್ನು ತೆಗೆದುಹಾಕುವೆನು. ಆಗ ದನಕರುಗಳು ಅದನ್ನು ಮೇಯ್ದುಬಿಡುವುದು. ಅದರ ಗೋಡೆಯನ್ನು ಕೆಡವಿಬಿಡುವೆನು, ಆಗ ಅದು ತುಳಿದಾಟಕ್ಕೆ ಈಡಾಗುವುದು.


ನೀವು ಅವನಿಗೂ ಅವನ ಮನೆಗೂ ಅವನಲ್ಲಿ ಇರುವ ಎಲ್ಲವುಗಳ ಸುತ್ತಲು ಬೇಲಿ ಹಾಕಿದ್ದೀರಲ್ಲಾ? ಅವನು ಕೈಹಾಕಿದ ಕೆಲಸವನ್ನು ನೀವು ಆಶೀರ್ವದಿಸಿದ್ದೀರಿ, ಆದ್ದರಿಂದ ಅವನ ಕುರಿದನಗಳ ಹಿಂಡುಗಳು ಭೂಮಿಯ ಮೇಲೆಲ್ಲಾ ಹರಡುತ್ತಾ ಬಂದಿದೆ.


ನಿನ್ನ ಜನರನ್ನೂ ಏಕಾಂತವಾಗಿ ಅಡವಿಯಲ್ಲಿ ಕರ್ಮೆಲಿನ ನಡುವೆ ವಾಸವಾಗಿರುವ ನಿನ್ನ ಬಾಧ್ಯತೆಯ ಮಂದೆಯನ್ನೂ ನಿನ್ನ ಕೋಲಿನಿಂದ ಮೇಯಿಸು. ಅವರು ಪೂರ್ವದ ದಿವಸಗಳಲ್ಲಾದ ಹಾಗೆ ಬಾಷಾನಿನಲ್ಲಿಯೂ ಗಿಲ್ಯಾದಿನಲ್ಲಿಯೂ ಮೇಯಲಿ.


ಆದರೆ ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಗೋತ್ರಗಳಲ್ಲಿ ಸಣ್ಣದಾಗಿದ್ದರೂ ಇಸ್ರಾಯೇಲಿನಲ್ಲಿ ದೊರೆತನ ಮಾಡತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು. ಆತನ ಮೂಲವು ಪೂರ್ವದಿಂದಲೂ ಅನಾದಿ ಕಾಲದಿಂದಲೂ ಆದದ್ದು.


ಆದರೆ ಅವರು ತಮ್ಮ ದೇವರಾದ ಯೆಹೋವ ದೇವರಿಗೂ, ನಾನು ಅವರಿಗೋಸ್ಕರ ಎಬ್ಬಿಸುವ ಅವರ ಅರಸನಾದ ದಾವೀದನಿಗೂ ಸೇವೆಮಾಡುವರು.


ಪೂರ್ವಕಾಲದ ದಿವಸಗಳನ್ನು ಜ್ಞಾಪಕಮಾಡಿಕೊಂಡು, ನಿಮ್ಮ ಎಲ್ಲಾ ಕ್ರಿಯೆಗಳಲ್ಲಿ ಧ್ಯಾನಮಾಡಿ, ನಿಮ್ಮ ಕೈಕೆಲಸವನ್ನು ಆಲೋಚಿಸುತ್ತೇನೆ.


ಅವನ ಗೋಡೆಗಳನ್ನೆಲ್ಲಾ ಮುರಿದು, ಅವನ ಕೋಟೆಗಳನ್ನು ಹಾಳುಮಾಡಲು ಅನುಮತಿಸಿದ್ದೀರಿ.


ಎದೋಮು ಸ್ವಾಧೀನವಾಗುವುದು; ಸೇಯೀರನವರು ತನ್ನ ಶತ್ರುಗಳಿಗೆ ಸ್ವಾಧೀನವಾಗುವುದು; ಇಸ್ರಾಯೇಲು ಪರಾಕ್ರಮ ಕಾರ್ಯಮಾಡುವುದು,


ಆಗ ನಿನ್ನವರು ಪುರಾತನ ಕಾಲದ ಹಾಳಾದ ಸ್ಥಳಗಳನ್ನು ಕಟ್ಟುವರು. ತಲತಲಾಂತರಗಳಿಂದ ಹಾಳುಬಿದ್ದಿರುವ ಅಸ್ತಿವಾರಗಳನ್ನು ನೀನು ಎಬ್ಬಿಸುವೆ. ಬಿದ್ದ ಗೋಡೆಯನ್ನು ಎಬ್ಬಿಸುವ ದೇಶ ಎಂದೂ, ನಿವಾಸಿಗಳಿಗಾಗಿ ನಡೆದಾಡಲು ಹಾದಿಗಳನ್ನು ಉಂಟುಮಾಡುವ ದೇಶ ಎಂದೂ ನಿನಗೆ ಬಿರುದು ಬರುವುದು.


ಯಾಕೋಬಿನೊಳಗಿಂದ ಒಂದು ಸಂತಾನವನ್ನೂ, ಯೆಹೂದದೊಳಗಿಂದ ನನ್ನ ಪರ್ವತಗಳಿಗೆ ಬಾಧ್ಯಸ್ಥನಾಗಿರುವವನನ್ನು ಹೊರಗೆ ಬರಮಾಡುವೆನು. ನಾನು ಆಯ್ದುಕೊಂಡವರು ಅದನ್ನು ಸ್ವಾಧೀನಮಾಡಿಕೊಳ್ಳುವರು. ನನ್ನ ಸೇವಕರು ಅದರಲ್ಲಿ ವಾಸವಾಗುವರು.


ಇದಲ್ಲದೆ ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿಯೂ ಒಂದು ರಾಜ್ಯದ ವಿಷಯವಾಗಿಯೂ ಅದನ್ನು ಕಟ್ಟುವುದಕ್ಕೂ, ನೆಡುವುದಕ್ಕೂ ಮಾತನಾಡುತ್ತೇನೋ,


ಆದರೆ ಚೀಯೋನ್ ಪರ್ವತದಲ್ಲಿ ಬಿಡುಗಡೆ ಇರುವುದು. ಅದು ಪರಿಶುದ್ಧವಾಗಿರುವುದು. ಯಾಕೋಬನ ಮನೆತನದವರು ತಮ್ಮ ಸೊತ್ತನ್ನು ಮರಳಿ ಅನುಭವಿಸುವರು.


ನನ್ನ ಶತ್ರುವೇ, ನನ್ನ ಮೇಲೆ ಸಂತೋಷ ಪಡಬೇಡ, ನಾನು ಬಿದ್ದಿದ್ದರೂ ತಿರುಗಿ ಏಳುವೆನು. ನಾನು ಕತ್ತಲೆಯಲ್ಲಿ ಕುಳಿತುಕೊಂಡರೂ ಯೆಹೋವ ದೇವರೇ ನನಗೆ ಬೆಳಕಾಗಿರುವರು.


ನಿನ್ನ ಗೋಡೆಗಳು ಪುನಃ ಕಟ್ಟುವ ಆ ದಿವಸ ಬರುವುದು. ಮತ್ತು ನಿಮ್ಮ ಮಿತಿಗಳನ್ನು ಹೆಚ್ಚಿಸುವ ದಿನ ಬರುತ್ತದೆ.


ಅವನಿಗೆ ಹೇಳತಕ್ಕದ್ದೇನೆಂದರೆ: ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ರೆಂಬೆ,’ ಎಂದು ಹೆಸರುಳ್ಳ ಮನುಷ್ಯನು, ತನ್ನ ಸ್ಥಳದೊಳಗಿಂದ ರೆಂಬೆಯನ್ನು ತೆಗೆದುಹಾಕಿ, ಯೆಹೋವ ದೇವರ ಆಲಯವನ್ನು ಕಟ್ಟುವನು.


“ಇದಲ್ಲದೆ ದಾವೀದನ ಮನೆಯ ಘನತೆಯೂ, ಯೆರೂಸಲೇಮಿನ ನಿವಾಸಿಗಳ ಗೌರವವೂ ಯೆಹೂದಕ್ಕೆ ವಿರೋಧವಾಗಿ ಹೆಚ್ಚಳ ಪಡದ ಹಾಗೆ, ಯೆಹೋವ ದೇವರು ಮೊದಲು ಯೆಹೂದದ ಗುಡಾರಗಳನ್ನು ರಕ್ಷಿಸುವರು.


ಗೆಬ ಮೊದಲುಗೊಂಡು ಯೆರೂಸಲೇಮಿನ ದಕ್ಷಿಣದಲ್ಲಿರುವ ರಿಮ್ಮೋನಿನವರೆಗೂ ದೇಶವೆಲ್ಲಾ ಅರಾಬಾದ ಹಾಗೆ ಮಾರ್ಪಡುವುದು. ಯೆರೂಸಲೇಮ್ ತನ್ನ ಸ್ಥಳದಲ್ಲಿ ಬೆನ್ಯಾಮೀನನ ಬಾಗಿಲು ಮೊದಲುಗೊಂಡು, ಮೊದಲನೆಯ ಬಾಗಿಲಿನ ಸ್ಥಳದವರೆಗೂ, ಮೂಲೆ ಬಾಗಿಲಿನವರೆಗೂ, ಹನನೇಲನ ಗೋಪುರ ಮೊದಲುಗೊಂಡು ಅರಸನ ದ್ರಾಕ್ಷಿ ಆಲೆಗಳವರೆಗೂ ಎತ್ತರದಲ್ಲಿ ನಿವಾಸವಾಗುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು