Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆಮೋಸ 6:8 - ಕನ್ನಡ ಸಮಕಾಲಿಕ ಅನುವಾದ

8 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಸರ್ವಶಕ್ತ ದೇವರಾದ ಯೆಹೋವ ದೇವರು ತಮ್ಮ ಮೇಲೆ ಆಣೆಯಿಟ್ಟುಕೊಂಡಿದ್ದಾರೆ: ನಾನು ಯಾಕೋಬಿನ ಅಹಂಕಾರವನ್ನು ಅಸಹ್ಯಿಸಿಕೊಂಡು, ಅವನ ಅರಮನೆಗಳನ್ನು ಹಗೆಮಾಡುತ್ತೇನೆ. ಆದಕಾರಣ ಪಟ್ಟಣವನ್ನೂ ಅದರಲ್ಲಿರುವ ಸಮಸ್ತವನ್ನೂ ನಾನು ಒಪ್ಪಿಸಿ ಬಿಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಸೇನಾಧೀಶ್ವರ ದೇವರಾದ ಯೆಹೋವನ ನುಡಿಯನ್ನು ಕೇಳಿರಿ ಕರ್ತನಾದ ಯೆಹೋವನು ತನ್ನ ಮೇಲೆ ಆಣೆಯಿಟ್ಟು ಹೀಗೆಂದಿದ್ದಾನೆ, “ನಾನು ಯಾಕೋಬಿನ ಅಟ್ಟಹಾಸಕ್ಕೆ ಅಸಹ್ಯಪಟ್ಟು; ಅದರ ಕೋಟೆಗಳನ್ನು ಹಗೆಮಾಡುತ್ತೇನೆ. ಆದುದರಿಂದ ನಾನು ರಾಜಧಾನಿಯನ್ನೂ, ಅದರ ಸಕಲ ಸಮೃದ್ಧಿಯನ್ನೂ ಆಪತ್ತಿಗೆ ಗುರಿಮಾಡುವೆನು”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಸೇನಾಧೀಶ್ವರ ದೇವರಾದ ಸರ್ವೇಶ್ವರಸ್ವಾಮಿ ಪ್ರಮಾಣಮಾಡಿ ಹೇಳಿದ್ದೇನೆಂದರೆ: “ಯಕೋಬ ವಂಶದವರ ಉದ್ಧಟತನವನ್ನು ದ್ವೇಷಿಸುತ್ತೇನೆ. ಅವರ ಮೋಜಿನ ಮಹಲುಗಳನ್ನು ತೃಣೀಕರಿಸುತ್ತೇನೆ. ಅವರ ರಾಜಧಾನಿಯನ್ನೂ ಅದರಲ್ಲಿರುವುದೆಲ್ಲವನ್ನೂ ಶತ್ರುವಶಕ್ಕೆ ಒಪ್ಪಿಸುತ್ತೇನೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಸೇನಾಧೀಶ್ವರದೇವರಾದ ಯೆಹೋವನ ನುಡಿಯನ್ನು ಕೇಳಿರಿ - ಕರ್ತನಾದ ಯೆಹೋವನು ತನ್ನ ಮೇಲೆ ಆಣೆಯಿಟ್ಟು ಹೀಗಂದಿದ್ದಾನೆ - ನಾನು ಯಾಕೋಬಿನ ಅಟ್ಟಹಾಸಕ್ಕೆ ಅಸಹ್ಯಪಟ್ಟು ಅದರ ಸೌಧಗಳನ್ನು ಹಗೆಮಾಡುತ್ತೇನೆ; ಆದದರಿಂದ ನಾನು ರಾಜಧಾನಿಯನ್ನೂ ಅದರ ಸಕಲಸಮೃದ್ಧಿಯನ್ನೂ ಆಪತ್ತಿಗೆ ಗುರಿಮಾಡುವೆನು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನನ್ನ ಒಡೆಯನಾದ ಯೆಹೋವನು ತನ್ನ ಹೆಸರಿನ ಮೇಲೆ ಆಣೆಯಿಟ್ಟು ಈ ಮಾತುಗಳನ್ನು ನುಡಿದಿದ್ದಾನೆ. ಸರ್ವಶಕ್ತನಾದ ಯೆಹೋವನ ನುಡಿಗಳಿವು: “ಯಾಕೋಬನು ಹೆಚ್ಚಳಪಡುವಂಥವುಗಳನ್ನು ನಾನು ದ್ವೇಷಿಸುತ್ತೇನೆ. ಅವನ ಬಲವಾದ ಬುರುಜುಗಳನ್ನು ದ್ವೇಷಿಸುತ್ತೇನೆ. ಆದ್ದರಿಂದ ಶತ್ರುಗಳು ಬಂದು ಪಟ್ಟಣವನ್ನೂ ಪಟ್ಟಣದಲ್ಲಿರುವದೆಲ್ಲವನ್ನೂ ಸೂರೆಮಾಡುವಂತೆ ಮಾಡುವೆನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆಮೋಸ 6:8
28 ತಿಳಿವುಗಳ ಹೋಲಿಕೆ  

“ದಿನಗಳು ಬರುವುವು. ಆಗ ನಿಮ್ಮನ್ನು ಕೊಂಡಿಗಳಿಂದ ಎಳೆದುಕೊಂಡು ಹೋಗುವರು. ನಿಮ್ಮಲ್ಲಿ ಅಳಿದುಳಿದವರನ್ನು ಗಾಳಕ್ಕೆ ಸಿಕ್ಕಿದ ಮೀನಿನಂತೆ ಸೆಳೆದೊಯ್ಯುವರು. ಎಂದು ಸಾರ್ವಭೌಮ ಯೆಹೋವ ದೇವರು ಇದನ್ನು ಆಣೆಯಿಟ್ಟು ನುಡಿದಿದ್ದಾರೆ.


ಸೇನಾಧೀಶ್ವರ ಯೆಹೋವ ದೇವರು ತಮ್ಮ ಮೇಲೆ ಆಣೆಯಿಟ್ಟು: ನಿಶ್ಚಯವಾಗಿ ನಾನು ಮಿಡತೆಗಳಷ್ಟು ಅಸಂಖ್ಯ ಜನರಿಂದ ನಿನ್ನನ್ನು ತುಂಬಿಸುತ್ತೇನೆಂದು ಅವರು ನಿನಗೆ ವಿರೋಧವಾಗಿ ಆರ್ಭಟವನ್ನು ಎತ್ತುವರು.


ಯೆಹೋವ ದೇವರು ಯಾಕೋಬಿನ ಅಹಂಕಾರದ ಮೇಲೆ ಆಣೆ ಇಟ್ಟುಕೊಂಡು ಹೇಳುವುದೇನೆಂದರೆ: “ನಿಶ್ಚಯವಾಗಿಯೂ ನಾನು ಎಂದೆಂದಿಗೂ ಅವರ ಯಾವ ಕ್ರಿಯೆಗಳನ್ನೂ ಮರೆಯುವುದಿಲ್ಲ.


ಅವರು ಪ್ರೀತಿಸುವ ಯಾಕೋಬಿನ ಘನತೆಯಾಗಿರುವ ನಮ್ಮ ಬಾಧ್ಯತೆಯನ್ನು ನಮಗಾಗಿ ಆಯ್ದುಕೊಂಡಿದ್ದಾರೆ.


ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ವಿರೋಧಿಯು ದೇಶದ ಸುತ್ತಲೂ ಇರುವನು. ನಿನ್ನ ಬಲವನ್ನು ತಗ್ಗಿಸುವನು. ನಿನ್ನ ಅರಮನೆಗಳು ಸೂರೆಯಾಗುವುವು.”


ಆದರೆ ನೀವು ಈ ವಾಕ್ಯಗಳನ್ನು ಕೇಳದೆ ಹೋದರೆ, ಈ ಅರಮನೆ ಹಾಳಾಗುವುದು ಎಂದು ನನ್ನ ಮೇಲೆ ಆಣೆ ಇಡುತ್ತೇನೆಂದು ಯೆಹೋವ ದೇವರು ಹೇಳುತ್ತಾರೆ.’ ”


ಆಗ ಯೆಹೋವ ದೇವರು ತಮ್ಮ ಜನರ ಮೇಲೆ ಬಹು ಬೇಸರಗೊಂಡರು. ದೇವರು ತಮ್ಮ ವಾರಸುದಾರರಾದ ಇಸ್ರಾಯೇಲರ ಮೇಲೆ ಅಸಂತೋಷಗೊಂಡು,


ಇದಲ್ಲದೆ, ಒಂದೇ ತಿಂಗಳಲ್ಲಿ ಮೂರು ಕುರುಬರನ್ನು ತೆಗೆದುಹಾಕಿದೆನು. ಮಂದೆಯು ನನ್ನನ್ನು ಅಸಹ್ಯಪಡಿಸಿತು, ಮತ್ತು ಅವುಗಳಿಂದ ನನಗೆ ಬೇಸರವಾಯಿತು.


ಇಸ್ರಾಯೇಲರ ಮನೆತನದವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ ಎಂದು ಹೇಳು: ಇಗೋ, ನಾನು ನನ್ನ ಪವಿತ್ರಾಲಯವನ್ನೂ, ನಿಮ್ಮ ಮುಖ್ಯಬಲವನ್ನೂ, ನಿಮ್ಮ ನೇತ್ರಾನಂದಕರವಾದದ್ದನ್ನೂ, ನಿಮ್ಮ ಮನಸ್ಸು ಅಭಿಲಾಷಿಸುವುದನ್ನೂ ನಾನು ಅಪವಿತ್ರಪಡಿಸುವೆನು; ನೀವು ಬಿಟ್ಟಿರುವ ನಿಮ್ಮ ಗಂಡು ಮತ್ತು ಹೆಣ್ಣುಮಕ್ಕಳು ಖಡ್ಗದಿಂದ ಬೀಳುವರು.


ಕರ್ತದೇವರು ಶತ್ರುವಿನಂತೆ ಆಗಿ, ಇಸ್ರಾಯೇಲನ್ನು ನುಂಗಿಬಿಟ್ಟಿದ್ದಾರೆ. ಕರ್ತದೇವರು ಅವನ ಭದ್ರವಾದ ಸ್ಥಾನಗಳನ್ನೆಲ್ಲಾ ನಾಶಮಾಡಿದ್ದಾರೆ. ಯೆಹೂದದ ದುಃಖವನ್ನೂ, ಪ್ರಲಾಪವನ್ನೂ ಹೆಚ್ಚಿಸಿದ್ದಾರೆ.


ದೇವರು ಇದನ್ನು ಕಂಡಾಗ, ಬೇಸರಗೊಂಡು ಇಸ್ರಾಯೇಲನ್ನು ಪರಿಪೂರ್ಣವಾಗಿ ತಿರಸ್ಕರಿಸಿಬಿಟ್ಟರು.


ನನಗೆ ಹಸಿವಾದರೆ ನಿಮಗೆ ಹೇಳಬೇಕಾಗಿಲ್ಲ, ಏಕೆಂದರೆ ಭೂಲೋಕವೂ ಅದರಲ್ಲಿರುವುದೆಲ್ಲವೂ ನನ್ನವೇ.


ಯೆಹೋವ ದೇವರು ಅದನ್ನು ನೋಡಿ ಬೇಸರದಿಂದ ತಮ್ಮ ಪುತ್ರಪುತ್ರಿಯರನ್ನು ದಂಡಿಸಿದರು.


ಇದಲ್ಲದೆ ನಾನು ನಿಮ್ಮ ಉನ್ನತ ಸ್ಥಳಗಳನ್ನು ಹಾಳು ಮಾಡಿ, ನಿಮ್ಮ ಧೂಪವೇದಿಗಳನ್ನು ಕಡಿದುಹಾಕಿ, ನಿಮ್ಮ ಹೆಣಗಳನ್ನು ನಿಮ್ಮ ವಿಗ್ರಹಗಳ ಮೇಲೆ ಹಾಕುವೆನು. ನಿಮ್ಮ ಬಗ್ಗೆ ನಾನು ಅಸಹ್ಯಪಡುವೆನು.


ಇದಲ್ಲದೆ ನಾನು ನನ್ನ ಗುಡಾರವನ್ನು ನಿಮ್ಮ ಮಧ್ಯದಲ್ಲಿ ಮಾಡಿಕೊಳ್ಳುವೆನು. ನನ್ನ ಪ್ರಾಣವು ನಿಮ್ಮನ್ನು ತಿರಸ್ಕರಿಸುವುದಿಲ್ಲ.


“ನೀನು ಈ ಕಾರ್ಯವನ್ನು ಮಾಡಿ, ನಿನ್ನ ಒಬ್ಬನೇ ಮಗನನ್ನು ಸಹ ನನಗೆ ಕೊಡುವುದಕ್ಕೆ ಹಿಂಜರಿಯದೆ ಇದ್ದುದರಿಂದ, ಯೆಹೋವ ದೇವರಾದ ನಾನು ನಿನಗೆ ಪ್ರಮಾಣವಾಗಿ ಹೇಳುವುದೇನಂದರೆ,


ನನ್ನ ಸೊತ್ತು ನನಗೆ ಅಡವಿಯಲ್ಲಿರುವ ಸಿಂಹದ ಹಾಗಾಯಿತು. ಅದು ನನಗೆ ವಿರೋಧವಾಗಿ ಕೂಗುತ್ತದೆ. ಆದ್ದರಿಂದ ಅದನ್ನು ಹಗೆ ಮಾಡಿದ್ದೇನೆ.


ಆದರೆ, ಈಜಿಪ್ಟ್ ದೇಶದಲ್ಲಿ ವಾಸವಾಗಿರುವ ಯೆಹೂದ್ಯರೇ, ನೀವೆಲ್ಲರೂ ಯೆಹೋವ ದೇವರ ವಾಕ್ಯವನ್ನು ಕೇಳಿರಿ: ‘ಇಗೋ, ನಾನು ನನ್ನ ಸ್ವಂತ ಹೆಸರಿನಿಂದ ಪ್ರಮಾಣ ಮಾಡಿದ್ದೇನೆ,’ ಎಂದು ಯೆಹೋವ ದೇವರು ಹೇಳುತ್ತಾರೆ, ‘ಈಜಿಪ್ಟ್‌ನಲ್ಲಿರುವ ಯಾವುದೇ ಯೆಹೂದದ ವ್ಯಕ್ತಿಯು ಪ್ರಮಾಣ ಮಾಡಲು ನನ್ನ ಶ್ರೇಷ್ಠ ಹೆಸರನ್ನು ಬಳಸಲು ಸಾಧ್ಯವಾಗುವುದಿಲ್ಲ. “ಸಾರ್ವಭೌಮ ಯೆಹೋವ ದೇವರ ಜೀವದಾಣೆ,” ಎಂದು ಮತ್ತೆಂದೂ ಅವರು ಹೇಳುವುದಿಲ್ಲ.


ಏಕೆಂದರೆ ಬೊಚ್ರವು ಹಾಳೂ ನಿಂದೆಯೂ ಅಡವಿಯೂ ಶಾಪವೂ ಆಗುವುದೆಂದೂ ಅದರ ಪಟ್ಟಣಗಳೆಲ್ಲಾ ಎಂದೆಂದಿಗೂ ಅಡವಿ ಸ್ಥಳಗಳಾಗುವುವೆಂದೂ, ನನ್ನ ಮೇಲೆ ಪ್ರಮಾಣ ಮಾಡಿಕೊಂಡಿದ್ದೇನೆ,” ಎಂದು ಯೆಹೋವ ದೇವರು ಅನ್ನುತ್ತಾರೆ.


ಅವರ ಪಟ್ಟಣಗಳಲ್ಲಿ ಖಡ್ಗವು ಹೊಳೆಯುವುದು. ಅದು ಅವರ ಸುಳ್ಳು ಪ್ರವಾದಿಗಳನ್ನು ನುಂಗಿಹಾಕುತ್ತದೆ. ಮತ್ತು ಅವರ ಯೋಜನೆಗಳನ್ನು ಕೊನೆಗೊಳಿಸುತ್ತದೆ.


“ತಮ್ಮ ಕೋಟೆಗಳಲ್ಲಿ ಬಲಾತ್ಕಾರವನ್ನೂ ಕೊಳ್ಳೆಯನ್ನೂ ನಿಕ್ಷೇಪವಾಗಿ ಕೂಡಿಸಿಕೊಂಡಿರುವವರಿಗೆ, ನ್ಯಾಯ ನೀತಿಯನ್ನು ಮಾಡುವುದಕ್ಕೆ ತಿಳಿಯುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.


ನಿಮ್ಮ ಹಬ್ಬಗಳನ್ನು ಹಗೆಮಾಡಿ ತುಚ್ಛೀಕರಿಸುತ್ತೇನೆ. ನಿಮ್ಮ ಸಭೆಗಳು ನನಗೆ ದುರ್ವಾಸನೆ ಇದ್ದಂತೆ.


“ಆ ದಿನದಲ್ಲಿ ದೇವಾಲಯದ ಹಾಡುಗಳು ವಿಲಾಪವಾಗುವುವು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. “ಎಲ್ಲಾ ಕಡೆಗಳಲ್ಲಿ ಅನೇಕ ಹೆಣಗಳು ಬಿದ್ದಿರುವುವು. ಮೌನವಾಗಿರಿ!”


ಕೆಟ್ಟದ್ದನ್ನು ಹಗೆ ಮಾಡುವುದೇ ಯೆಹೋವ ದೇವರ ಭಯವಾಗಿದೆ; ಗರ್ವ, ಅಹಂಕಾರ, ಕೆಟ್ಟನಡವಳಿಕೆ, ವಕ್ರ ಭಾಷಣಗಳನ್ನು ನಾನು ಹಗೆಮಾಡುತ್ತೇನೆ.


ಕುಡುಕರಿಂದ ಕೂಡಿದ ಎಫ್ರಾಯೀಮಿನ ಕಿರೀಟದಂತಿರುವ ನಗರಕ್ಕೆ ಕಷ್ಟ! ಒಮ್ಮೆ ಕುಡಿತಕ್ಕೆ ಸೋತು ಫಲವತ್ತಾದ ಕಣಿವೆಗೆ ಶ್ರೇಷ್ಠ ಶಿರೋಭೂಷಣವಾಗಿದ್ದು, ಈಗ ಬಾಡಿಹೋಗುತ್ತಿರುವ ಆ ಹೂವಿಗೆ ಕಷ್ಟ!


ಅವನು, ‘ನಾನು ವಿಸ್ತಾರವಾದ ಅರಮನೆಯನ್ನೂ, ವಿಶಾಲವಾದ ಕೊಠಡಿಗಳನ್ನೂ ಕಟ್ಟಿಸಿಕೊಳ್ಳುವೆನೆಂದು ಹೇಳಿ.’ ಕಿಟಕಿಗಳನ್ನು ಕೊರೆದು, ದೇವದಾರಿನ ಹಲಗೆಗಳನ್ನು ಹಾಕಿ, ಕೆಂಪು ಬಣ್ಣವನ್ನು ಹಚ್ಚುವವನಿಗೂ ಕಷ್ಟ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು