Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆಮೋಸ 6:1 - ಕನ್ನಡ ಸಮಕಾಲಿಕ ಅನುವಾದ

1 ಚೀಯೋನಿನಲ್ಲಿ ಹಾಯಾಗಿರುವವರಿಗೂ, ಸಮಾರ್ಯ ಬೆಟ್ಟದಲ್ಲಿ ಸುಭದ್ರವಾಗಿರುವವರಿಗೂ, ಇಸ್ರಾಯೇಲಿನ ಮನೆತನದವರು ಯಾರ ಬಳಿಗೆ ಬರುತ್ತಾರೋ, ಆ ಪ್ರಮುಖ ಜನಾಂಗದಲ್ಲಿ ಹೆಸರುಗೊಂಡವರಿಗೂ ಕಷ್ಟ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಅಯ್ಯೋ! ಚೀಯೋನಿನಲ್ಲಿ ನೆಮ್ಮದಿಯಾಗಿರುವವರ ಗತಿಯನ್ನು ಏನೆಂದು ಹೇಳಲಿ, ಪ್ರಮುಖ ಜನಾಂಗದಲ್ಲಿ ಹೆಸರುಗೊಂಡು ಇಸ್ರಾಯೇಲರ ನ್ಯಾಯವಿಚಾರಕರಾಗಿ, ಸಮಾರ್ಯದ ಬೆಟ್ಟದಲ್ಲಿ ನಿಶ್ಚಿಂತರಾಗಿರುವವರ, ಗತಿಯನ್ನು ಏನೆಂದು ಹೇಳಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಇಸ್ರಯೇಲಿನ ಜನರು ನಿಮ್ಮ ಸಹಾಯ ಕೋರಿ ನಿಮ್ಮನ್ನು ಹುಡುಕಿಕೊಂಡು ಬರುವಷ್ಟು ಪ್ರತಿಭಾವಂತರಾಗಿರುವವರೇ, ನಿಮಗೆ ಧಿಕ್ಕಾರ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಅಯ್ಯೋ, ಚೀಯೋನಿನಲ್ಲಿ ನೆಮ್ಮದಿಯಾಗಿರುವವರ ಗತಿಯನ್ನು ಏನೆಂದು ಹೇಳಲಿ! ಪ್ರಮುಖಜನಾಂಗದಲ್ಲಿ ಹೆಸರುಗೊಂಡು ಇಸ್ರಾಯೇಲ್ಯರ ನ್ಯಾಯ ವಿಚಾರಕರಾಗಿ ಸಮಾರ್ಯದ ಬೆಟ್ಟದಲ್ಲಿ ನಿಶ್ಚಿಂತರಾಗಿರುವವರ ಪಾಡನ್ನು ಎಂಥದೆನ್ನಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಚೀಯೋನಿನಲ್ಲಿ ಸುಖದಿಂದಿರುವ ಜನರಿಗೂ ಸಮಾರ್ಯದ ಪರ್ವತಗಳ ಮೇಲೆ ಸುರಕ್ಷಿತರಾಗಿರುವ ಜನರಿಗೂ ಕೇಡು ಸಂಭವಿಸುವದು. ನೀವು ವಿಶೇಷವಾದ ದೇಶದ ವಿಶೇಷ ನಾಯಕರು. ಇಸ್ರೇಲಿನ ಮನೆತನವು ಸಲಹೆಗಾಗಿ ನಿಮ್ಮ ಹತ್ತಿರ ಬರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆಮೋಸ 6:1
26 ತಿಳಿವುಗಳ ಹೋಲಿಕೆ  

ಭೂಲೋಕದಲ್ಲಿ ನೀವು ಭೋಗಿಗಳಾಗಿ ಮನಸ್ಸಿಗೆ ಬಂದಂತೆ ಜೀವಿಸಿದ್ದೀರಿ. ವಧೆಯ ದಿವಸಕ್ಕಾಗಿಯೋ ಎಂಬಂತೆ ನಿಮ್ಮ ಹೃದಯಗಳನ್ನು ಪೋಷಿಸಿಕೊಂಡಿದ್ದೀರಿ.


ಸಮಾರ್ಯ ಬೆಟ್ಟದಲ್ಲಿರುವ ಬಾಷಾನಿನ ಹಸುಗಳಂತಿರುವ ಮಹಿಳೆಯರೇ, ನೀವು ಬಡವರನ್ನು ಹಿಂಸಾಚಾರ ಮಾಡಿ, ದರಿದ್ರರನ್ನು ಜಜ್ಜಿ, ನಿಮ್ಮ ಪತಿಗಳಿಗೆ, “ಪಾನವನ್ನು ತರಿಸಿರಿ, ಕುಡಿಯೋಣ,” ಎಂದು ಹೇಳುವವರೇ, ಈ ವಾಕ್ಯವನ್ನು ಕೇಳಿರಿ.


ಆ ಕಾಲದಲ್ಲಿ, ನಾನು ಯೆರೂಸಲೇಮನ್ನು ದೀಪಗಳಿಂದ ಹುಡುಕಿಬಿಡುವೆನು. ‘ಯೆಹೋವ ದೇವರು ಒಳ್ಳೆಯದನ್ನಾದರೂ ಕೆಟ್ಟದ್ದನ್ನಾದರೂ ಮಾಡುವುದಿಲ್ಲ’ ಎಂದುಕೊಂಡು ಮಡ್ಡಿಯ ಮೇಲೆ ಮಂದವಾಗಿರುವ ದ್ರಾಕ್ಷಾರಸಕ್ಕೆ ಸಮಾನರಾದ ಜನರನ್ನೂ ದಂಡಿಸುವೆನು.


ಆಗ ಆ ಐದು ಮಂದಿಯು ಹೊರಟು ಲಯಿಷಿಗೆ ಹೋಗಿ, ಅದರಲ್ಲಿ ವಾಸಿಸಿರುವ ಆ ಜನರನ್ನು ನೋಡುವಾಗ, ಅವರು ನಿರ್ಭೀತರಾಗಿಯೂ, ಸೀದೋನ್ಯರ ಹಾಗೆ ನೆಮ್ಮದಿಯಾಗಿಯೂ, ಸುರಕ್ಷಿತವಾಗಿಯೂ ಇದ್ದರು. ಅವರಿಗೆ ಯಾವ ಕೊರತೆಯು ಇರಲಿಲ್ಲ. ಅವರು ಸಮೃದ್ಧಿಯಲ್ಲಿದ್ದರು. ಸೀದೋನ್ಯರಿಂದ ದೂರವಾಗಿ ಜೀವಿಸುತ್ತಿದ್ದರು. ಬೇರೆ ಯಾರೊಂದಿಗೂ ಸಂಬಂಧವನ್ನು ಬೆಳೆಸಿರಲಿಲ್ಲ.


ತಂದೆಯು ತಮ್ಮ ಚಿತ್ತದ ಪ್ರಕಾರ ಸತ್ಯವಾಕ್ಯದಿಂದ ನಮ್ಮನ್ನು ಹುಟ್ಟಿಸಲಾಗಿ ನಾವು ಅವರ ಸರ್ವ ಸೃಷ್ಟಿಗಳಲ್ಲಿ ಪ್ರಥಮ ಫಲವಾದೆವು.


“ಏಳಿರಿ, ಭದ್ರವಾಗಿ ವಾಸಿಸುವ ಸುಖವುಳ್ಳ ಜನಾಂಗದ ಬಳಿಗೆ ಹೋಗಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ. “ಅದಕ್ಕೆ ಬಾಗಿಲುಗಳು ಇಲ್ಲ; ಅಗುಳಿಗಳು ಇಲ್ಲ; ಅದರ ಜನರು ಅಪಾಯದಿಂದ ದೂರ ವಾಸಿಸುತ್ತಾರೆ.


ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಭಯದಿಂದ ಕಪಟಿಗಳು ಆಶ್ಚರ್ಯಕ್ಕೊಳಗಾಗಿ ಹೀಗೆ ಎಂದುಕೊಳ್ಳುವರು, “ನಮ್ಮಲ್ಲಿ ಯಾರು ನುಂಗುವ ಅಗ್ನಿಯ ಸಂಗಡ ವಾಸಿಸಬಲ್ಲರು? ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ವಾಸಿಸಬಲ್ಲರು?”


ನಿಮ್ಮ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿರಿ. ಅವರು ನಿಮಗೋಸ್ಕರ ಚಿಂತಿಸುತ್ತಾರೆ.


ಅವರು ಸಮಾರ್ಯದ ಪಾಪದ ಮೇಲೆ ಆಣೆ ಇಟ್ಟುಕೊಂಡು, ದಾನೇ, ನಿನ್ನ ದೇವರ ಜೀವದಾಣೆ ಎಂದೂ, ಬೇರ್ಷೆಬದ ಮಾರ್ಗದ ಜೀವದಾಣೆ ಎಂದೂ ಹೇಳುವರು. ಅವರು ಬಿದ್ದು ಮತ್ತೆ ಮೇಲೆ ಏಳಲಾರರು.”


“ಇವುಗಳೇ ಯೆಹೋವ ದೇವರ ದೇವಾಲಯ, ಯೆಹೋವ ದೇವರ ದೇವಾಲಯ, ಯೆಹೋವ ದೇವರ ದೇವಾಲಯ,” ಎಂದು ಹೇಳುವ ಮೋಸಕರ ಮಾತುಗಳಲ್ಲಿ ನಂಬಿಕೆ ಇಡಬೇಡಿರಿ.


ಅವನು ಶೆಮೆರ್ ಎಂಬವನಿಗೆ ಆರು ಸಾವಿರ ಬೆಳ್ಳಿ ನಾಣ್ಯಗಳನ್ನು ಕೊಟ್ಟು ಸಮಾರಿಯ ಎಂಬ ಬೆಟ್ಟವನ್ನು ಕೊಂಡುಕೊಂಡನು. ಆ ಬೆಟ್ಟದ ಮೇಲೆ ಒಂದು ಪಟ್ಟಣವನ್ನು ಕಟ್ಟಿಸಿ, ಅದಕ್ಕೆ ಆ ಜಮೀನಿನ ಯಜಮಾನನಾಗಿದ್ದ ಶೆಮೆರನ ಜ್ಞಾಪಕಾರ್ಥವಾಗಿ ತಾನು ಕಟ್ಟಿಸಿದ ಪಟ್ಟಣಕ್ಕೆ ಸಮಾರ್ಯ ಎಂದು ಹೆಸರಿಟ್ಟನು.


ಜನಭರಿತವಾಗಿದ್ದ ನಗರಿಯು ಹೇಗೆ ಬರಿದಾಗಿ ಹೋಗಿದೆ! ಜನಾಂಗಗಳಲ್ಲಿ ಶ್ರೇಷ್ಠಳಾದವಳೂ, ಈಗ ಹೇಗೆ ವಿಧವೆಯಾಗಿದ್ದಾಳೆ! ಸಂಸ್ಥಾನಗಳಲ್ಲಿ ರಾಜಕುಮಾರಿಯಾಗಿದ್ದವಳೂ, ಹೇಗೆ ಈಗ ದಾಸಿಯಂತಾಗಿದ್ದಾಳೆ!


“ಮೋವಾಬು ತನ್ನ ಚಿಕ್ಕಂದಿನಿಂದ ಸುಖವಾಗಿತ್ತು; ಅದು ತನ್ನ ಮಡ್ಡಿಯ ಮೇಲೆ ನಿಂತಿರುವ ದ್ರಾಕ್ಷಾರಸದಂತೆ ಸುಮ್ಮನೆ ಇತ್ತು; ಒಂದು ಪಾತ್ರೆಯೊಳಗಿಂದ ಮತ್ತೊಂದು ಪಾತ್ರೆಗೆ ಹೊಯ್ಯಲಾಗುವುದಿಲ್ಲ; ಸೆರೆಗೆ ಹೋಗಲಿಲ್ಲ; ಆದ್ದರಿಂದ ಅದರ ರುಚಿ ಅದರಲ್ಲಿ ಉಂಟು; ಅದರ ವಾಸನೆ ಬೇರೆ ಆಗಲಿಲ್ಲ.


ನಾವು ಸುಖಭೋಗಿಗಳ ಗೇಲಿಯನ್ನೂ ಗರ್ವಿಷ್ಠರಿಂದ ತಿರಸ್ಕಾರವನ್ನೂ ಅನುಭವಿಸಿದ್ದೇವೆ.


“ಭೂಮಿಯ ಎಲ್ಲಾ ಕುಟುಂಬಗಳಲ್ಲಿ ನಿಮ್ಮನ್ನು ಮಾತ್ರವೇ ಆರಿಸಿಕೊಂಡಿದ್ದೇನೆ. ಆದ್ದರಿಂದ ನಾನು ನಿಮ್ಮ ಎಲ್ಲಾ ಪಾಪಗಳಿಗಾಗಿ ಶಿಕ್ಷಿಸುತ್ತೇನೆ.”


ಅಷ್ಡೋದಿನ ಕೋಟೆಗಳಲ್ಲಿ ಮತ್ತು ಈಜಿಪ್ಟ್ ದೇಶದ ಕೋಟೆಗಳಲ್ಲಿ ಹೀಗೆ ಸಾರಿ ಹೇಳಿರಿ: “ಸಮಾರ್ಯ ಬೆಟ್ಟಗಳ ಮೇಲೆ ನೀವೆಲ್ಲರೂ ಕೂಡಿಕೊಂಡು, ಅದರ ಮಧ್ಯದಲ್ಲಿರುವ ದೊಡ್ಡ ಗದ್ದಲವನ್ನೂ ಅದರೊಳಗಿರುವ ಹೆಚ್ಚಾದ ಹಿಂಸೆಯನ್ನೂ ನೋಡಿರಿ.”


ಆದ್ದರಿಂದ ದಮಸ್ಕದ ಆಚೆ ನಿಮ್ಮನ್ನು ಸೆರೆಯಾಳುಗಳಾಗಿ ಕಳುಹಿಸುವೆ, ಎಂದು ಸರ್ವಶಕ್ತರಾದ ದೇವರೆಂದು ಹೆಸರುಗೊಂಡ ಯೆಹೋವ ದೇವರು ಹೇಳುತ್ತಾರೆ.


ಮುಗ್ಧರ ದಾರಿತಪ್ಪುವಿಕೆಯು ಅವರನ್ನು ಕೊಲ್ಲುವುದು. ಜ್ಞಾನಹೀನರ ನಿಶ್ಚಿಂತೆಯು ಅವರನ್ನು ನಾಶಮಾಡುವುದು.


ಇಸ್ರಾಯೇಲು ಯೆಹೋವ ದೇವರಿಗೆ ಪರಿಶುದ್ಧವೂ, ಆತನ ಹುಟ್ಟುವಳಿಯ ಪ್ರಥಮ ಫಲವೂ ಆಗಿದೆ ಅವಳನ್ನು ತಿಂದು ಬಿಟ್ಟವರೆಲ್ಲರೂ ಅಪರಾಧಿಗಳಾಗುವರು. ಅವರಿಗೆ ಕೇಡು ಬರುವುದು,’ ” ಎಂದು ಯೆಹೋವ ದೇವರು ಹೇಳುತ್ತಾರೆ.


ನಾನು ನಾಯಕರ ಬಳಿಗೆ ಹೋಗಿ, ಅವರ ಸಂಗಡ ಮಾತನಾಡುವೆನು. ಏಕೆಂದರೆ, ಅವರು ಯೆಹೋವ ದೇವರ ಮಾರ್ಗವನ್ನೂ ತಮ್ಮ ದೇವರ ನ್ಯಾಯವಿಧಿಗಳನ್ನೂ ತಿಳಿದಿದ್ದಾರೆ,” ಆದರೆ ಇವರು ಕೂಡ ಒಮ್ಮತವಾಗಿ ನೊಗವನ್ನು ಮುರಿದು, ಬಂಧನಗಳನ್ನು ಹರಿದುಬಿಟ್ಟಿದ್ದಾರೆ.


ಕೇಡು ನಮ್ಮನ್ನು ಹಿಂದಟ್ಟದು ಮತ್ತು ನಮ್ಮನ್ನು ತಡೆಯುವದೂ ಇಲ್ಲ, ಎನ್ನುವ ನನ್ನ ಜನರಲ್ಲಿರುವ ಪಾಪಿಗಳೆಲ್ಲರೂ ಖಡ್ಗದಿಂದ ಸಾಯುವರು.


ಆಗ ನಾನು, “ಯಾಕೋಬಿನ ಮುಖ್ಯಸ್ಥರೇ, ಇಸ್ರಾಯೇಲಿನ ಮನೆತನದ ಪ್ರಧಾನರೇ, ಈಗ ಕೇಳಿರಿ. ನೀವು ನ್ಯಾಯವನ್ನು ಪ್ರೀತಿಸಬಾರದೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು