ಆಮೋಸ 5:27 - ಕನ್ನಡ ಸಮಕಾಲಿಕ ಅನುವಾದ27 ಆದ್ದರಿಂದ ದಮಸ್ಕದ ಆಚೆ ನಿಮ್ಮನ್ನು ಸೆರೆಯಾಳುಗಳಾಗಿ ಕಳುಹಿಸುವೆ, ಎಂದು ಸರ್ವಶಕ್ತರಾದ ದೇವರೆಂದು ಹೆಸರುಗೊಂಡ ಯೆಹೋವ ದೇವರು ಹೇಳುತ್ತಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ನಾನು ನಿಮ್ಮನ್ನು ದಮಸ್ಕದ ಆಚೆ ಸೆರೆಗೆ ಕಳುಹಿಸುವೆನು” ಸೇನಾಧೀಶ್ವರ ದೇವರೆಂಬ, ಯೆಹೋವನು ಇದನ್ನು ನುಡಿದಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)27 ಏಕೆಂದರೆ ನಾನು ನಿಮ್ಮನ್ನು ದಮಸ್ಕದಿಂದ ಆಚೆ ತಳ್ಳಿ, ಸೆರೆಯಾಳುಗಳನ್ನಾಗಿ ಕಳುಹಿಸುವೆನು.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)27 ನಾನು ನಿಮ್ಮನ್ನು ದಮಸ್ಕದ ಆಚೆ ಸೆರೆಗೆ ತಳ್ಳುವೆನು; ಸೇನಾಧೀಶ್ವರ ದೇವರೆಂಬ ಯೆಹೋವನು ಇದನ್ನು ನುಡಿದಿದ್ದಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 ಆದ್ದರಿಂದ ನಾನು ನಿನ್ನನ್ನು ದಮಸ್ಕದ ಆಚೆಗೆ ಸೆರೆಯಾಳಾಗಿ ಕಳುಹಿಸುವೆನು.” ಇದು ಯೆಹೋವನ ನುಡಿ. ಅಧ್ಯಾಯವನ್ನು ನೋಡಿ |
ಈಗಲೇ ಏನು ಆಗುವುದು? ನೀರಿನಲ್ಲಿರುವ ಆಪು ಹುಲ್ಲು ಅಲ್ಲಾಡುವ ಹಾಗೆ ಯೆಹೋವ ದೇವರು ಇಸ್ರಾಯೇಲನ್ನು ಹೊಡೆಯುವರು. ಇಸ್ರಾಯೇಲರು ಯೆಹೋವ ದೇವರಿಗೆ ಕೋಪವನ್ನು ಎಬ್ಬಿಸಲು, ತಮ್ಮ ವಿಗ್ರಹಾರಾಧನೆಗೋಸ್ಕರ ಅಶೇರ ಸ್ತಂಭಗಳನ್ನು ನಿಲ್ಲಿಸಿಕೊಂಡದ್ದರಿಂದ, ಯೆಹೋವ ದೇವರು ಅವರ ತಂದೆಗಳಿಗೆ ಕೊಟ್ಟ ಈ ಉತ್ತಮ ದೇಶದಲ್ಲಿಂದ ಅವರನ್ನು ನಿರ್ಮೂಲ ಮಾಡಿ, ಯೂಫ್ರೇಟೀಸ್ ನದಿಯ ಆಚೆಯಲ್ಲಿ ಅವರನ್ನು ಚದರುವಂತೆ ಮಾಡುವರು.