22 ನೀವು ನನಗೆ ದಹನಬಲಿಗಳನ್ನೂ ಧಾನ್ಯ ಸಮರ್ಪಣೆಗಳನ್ನೂ ಅರ್ಪಿಸಿದರೂ, ನಾನು ಅವುಗಳನ್ನು ಅಂಗೀಕರಿಸುವುದಿಲ್ಲ. ನಿಮ್ಮ ಕೊಬ್ಬಿದ ಪ್ರಾಣಿಗಳ ಸಮಾಧಾನದ ಬಲಿಗಳನ್ನೂ ನಾನು ಲಕ್ಷಿಸುವುದಿಲ್ಲ.
22 ನೀವು ನನಗೆ ಸರ್ವಾಂಗಹೋಮಗಳನ್ನು ಮತ್ತು ಧಾನ್ಯನೈವೇದ್ಯಗಳನ್ನು ಅರ್ಪಿಸಿದರೂ, ನಾನು ಅದನ್ನು ಸ್ವೀಕರಿಸುವುದಿಲ್ಲ, ಸಮಾಧಾನದ ಯಜ್ಞವಾಗಿ ನೀವು ಒಪ್ಪಿಸಿದ ಕೊಬ್ಬಿದ ಪಶುಗಳನ್ನು ನೋಡುವುದಿಲ್ಲ.
22 ನೀವು ನನಗೆ ದಹನಬಲಿದಾನಗಳನ್ನು, ಧಾನ್ಯನೈವೇದ್ಯಗಳನ್ನು ಅರ್ಪಿಸುವುದಕ್ಕೆ ಬಂದರೂ ನಾನು ಅವುಗಳನ್ನು ಸ್ವೀಕರಿಸುವುದಿಲ್ಲ. ಸಮಾಧಾನದ ಯಜ್ಞವಾಗಿ ನೀವು ಒಪ್ಪಿಸುವ ಕೊಬ್ಬಿದ ಪಶುಗಳನ್ನು ನಾನು ಕಟಾಕ್ಷಿಸೆನು.
22 ನೀವು ಸರ್ವಾಂಗಹೋಮವನ್ನಾಗಲಿ ಧಾನ್ಯದ ಹೋಮವನ್ನಾಗಲಿ ಅರ್ಪಿಸಿದರೆ ನಾನು ಅದನ್ನು ಸ್ವೀಕರಿಸುವುದಿಲ್ಲ. ಸಮಾಧಾನಯಜ್ಞದಲ್ಲಿ ಕೊಬ್ಬಿದ ಪ್ರಾಣಿಗಳನ್ನು ಬಲಿಯರ್ಪಿಸಿದರೂ ನಾನು ಅದನ್ನು ಕಣ್ಣೆತ್ತಿ ನೋಡುವದಿಲ್ಲ.
ಎತ್ತನ್ನು ಕೊಂದುಹಾಕುವವನು ಮನುಷ್ಯನನ್ನು ಹತ್ಯೆ ಮಾಡುವವನ ಹಾಗಿದ್ದಾನೆ. ಕುರಿಮರಿಯನ್ನು ಬಲಿ ಕೊಡುವವನು, ನಾಯಿಯ ಕುತ್ತಿಗೆಯನ್ನು ಕಡಿಯುವವನ ಹಾಗಿದ್ದಾನೆ. ಕಾಣಿಕೆಯನ್ನು ಅರ್ಪಿಸುವವನು, ಹಂದಿಯ ರಕ್ತವನ್ನು ಅರ್ಪಿಸುವವನ ಹಾಗಿದ್ದಾನೆ. ಧೂಪವನ್ನು ಹಾಕುವವನು, ವಿಗ್ರಹವನ್ನು ಪೂಜಿಸುವವನ ಹಾಗಿದ್ದಾನೆ. ಹೀಗೆ, ಅವರು ಸ್ವಂತ ಮಾರ್ಗಗಳನ್ನು ಆಯ್ದುಕೊಂಡಿದ್ದಾರೆ. ಅವರ ಪ್ರಾಣವು ಅವರ ಅಸಹ್ಯಗಳಲ್ಲಿ ಹರ್ಷಿಸುತ್ತವೆ.
“ನೀವು ಲೆಕ್ಕವಿಲ್ಲದಷ್ಟು ಯಜ್ಞಗಳನ್ನು ನನಗೆ ಅರ್ಪಿಸುವ ಉದ್ದೇಶವೇನು?” ಎಂದು ಯೆಹೋವ ದೇವರು ನುಡಿಯುತ್ತಾರೆ. “ಟಗರುಗಳ ದಹನಬಲಿಗಳು, ಪುಷ್ಟಪಶುಗಳ ಕೊಬ್ಬು ಇದೆಲ್ಲಾ ನನಗೆ ಬೇಸರ. ಹೋರಿ, ಕುರಿ, ಹೋತಗಳ ರಕ್ತಕ್ಕೆ, ನಾನು ಸಂತೋಷಪಡುವುದಿಲ್ಲ.
ಯೆಹೋವ ದೇವರು ಈ ಜನರಿಗೆ ಹೀಗೆ ಹೇಳುತ್ತಾರೆ: “ಹೀಗೆ ತಿರುಗಾಡುವುದಕ್ಕೆ ಅವರು ಇಷ್ಟಪಡುತ್ತಾರೆ. ತಮ್ಮ ಕಾಲುಗಳನ್ನು ಹಿಂದೆಗೆಯುವುದಿಲ್ಲ. ಆದ್ದರಿಂದ ಯೆಹೋವ ದೇವರು ಅವರನ್ನು ಅಂಗೀಕರಿಸುವುದಿಲ್ಲ. ಈಗಲೇ ಅವರ ಅಕ್ರಮವನ್ನು ಜ್ಞಾಪಕಮಾಡಿಕೊಳ್ಳುವೆನು. ಅವರ ಪಾಪಗಳಿಗಾಗಿ ಅವರನ್ನು ದಂಡಿಸುವೆನು.”