Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆಮೋಸ 5:16 - ಕನ್ನಡ ಸಮಕಾಲಿಕ ಅನುವಾದ

16 ಆದ್ದರಿಂದ ಸರ್ವಶಕ್ತ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಎಲ್ಲಾ ಬೀದಿಗಳಲ್ಲೂ ವಿಲಾಪಗಳು, ಎಲ್ಲಾ ಸಾರ್ವಜನಿಕ ಚೌಕದಲ್ಲಿ ದುಃಖದ ಗೋಳಾಟಗಳು ಎನ್ನುವರು. ರೈತರನ್ನು ಕಣ್ಣೀರಿಡುವುದಕ್ಕೂ ಶೋಕವೃತ್ತಿಯವರನ್ನು, ಗೋಳಾಡುವುದಕ್ಕೂ ಕರೆಯಲಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಸೇನಾಧೀಶ್ವರ ದೇವರಾದ, ಯೆಹೋವನು ಇಂತೆನ್ನುತ್ತಾನೆ: “ಎಲ್ಲಾ ಚೌಕಗಳಲ್ಲಿ ಕಿರುಚಾಟವಾಗುವುದು ಮತ್ತು ಸಕಲ ಬೀದಿಗಳಲ್ಲಿ, ‘ಅಯ್ಯೋ! ಅಯ್ಯೋ!’ ಎಂದು ಅರಚಿಕೊಳ್ಳುವರು. ರೈತರನ್ನು ಪ್ರಲಾಪಿಸುವುದಕ್ಕೂ ಗೋಳಾಟದವರನ್ನು ಗೋಳಾಡುವುದಕ್ಕೂ ಕರೆಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಸೇನಾಧೀಶ್ವರ ದೇವರಾದ ಸರ್ವೇಶ್ವರಸ್ವಾಮಿ ಇಂತೆನ್ನುತ್ತಾರೆ: “ಬೀದಿ ಚೌಕಗಳಲ್ಲೆಲ್ಲ ಗೋಳಾಟ ಇರುವುದು. ಹಾದಿಬೀದಿಗಳಲ್ಲೆಲ್ಲ ‘ಅಯ್ಯಯ್ಯೋ’ ಎಂದು ಜನರು ಪ್ರಲಾಪಿಸುವರು. ರೈತರನ್ನು ಕಣ್ಣೀರಿಡುವುದಕ್ಕೂ ಶೋಕವೃತ್ತಿಯವರನ್ನು ಗೋಳಾಡುವುದಕ್ಕೂ ಕರೆಯಲಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಸೇನಾಧೀಶ್ವರದೇವರಾದ ಯೆಹೋವಕರ್ತನು ಇಂತೆನ್ನುತ್ತಾನೆ - ಎಲ್ಲಾ ಚೌಕಗಳಲ್ಲಿ ಕಿರಿಚಾಟವಾಗುವದು, ಸಕಲ ಬೀದಿಗಳಲ್ಲಿ ಅಯ್ಯಯ್ಯೋ ಎಂದು ಅರಚಿಕೊಳ್ಳುವರು; ರೈತರನ್ನು ಪ್ರಲಾಪಿಸುವದಕ್ಕೂ ಗೋಳಾಟದವರನ್ನು ಗೋಳಿಡುವದಕ್ಕೂ ಕರೆಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ನನ್ನ ಒಡೆಯನಾದ ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಸಾರ್ವಜನಿಕ ಸ್ಥಳಗಳಲ್ಲಿ ಜನರು ಗೋಳಾಡುವರು. ರಸ್ತೆ ಬದಿಗಳಲ್ಲಿ ಜನರು ಗೋಳಾಡುವರು. ಪಟ್ಟಣದ ನಿವಾಸಿಗಳು ತಮ್ಮೊಂದಿಗೆ ಗೋಳಾಡಲು ರೈತರನ್ನು ಆಹ್ವಾನಿಸುವರು. ಅಳುವವರನ್ನು ಬಾಡಿಗೆಗೆ ಕರೆದುಕೊಂಡು ಬರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆಮೋಸ 5:16
23 ತಿಳಿವುಗಳ ಹೋಲಿಕೆ  

ರೈತರೇ, ರೋದಿಸಿರಿ, ತೋಟಗಾರರೇ, ಪರಿತಪಿಸಿರಿ; ಗೋಧಿ ಮತ್ತು ಜವೆಗೋಧಿಗಾಗಿ ದುಃಖಿಸಿ; ಏಕೆಂದರೆ ಹೊಲದ ಬೆಳೆ ನಾಶವಾಗಿದೆ.


ಬೆಟ್ಟಗಳಿಗೋಸ್ಕರ ನಾನು ಅಳುವಿಕೆಯನ್ನೂ, ದುಃಖವನ್ನೂ, ಮರುಭೂಮಿಯ ಸ್ಥಳಗಳಿಗೋಸ್ಕರ ಗೋಳಾಟವನ್ನೂ ಎತ್ತುವೆನು. ಅವುಗಳ ಮೂಲಕ ಹಾದುಹೋಗದಂತೆ ಅವು ಸುಟ್ಟುಹೋಗಿದೆ. ದನಗಳ ಕೂಗು ಕಿವಿಗೆ ಬೀಳುವುದಿಲ್ಲ. ಆಕಾಶದ ಪಕ್ಷಿಗಳೂ, ಮೃಗಗಳೂ ಸಹ ಓಡಿ ಹೋಗಿವೆ.


ಆಗ ಅವರು ತಮ್ಮ ತಲೆಯ ಮೇಲೆ ಧೂಳನ್ನು ಸುರಿದುಕೊಂಡು ಅಳುತ್ತಾ ದುಃಖಿಸುತ್ತಾ ಹೀಗೆ ಕೂಗುವರು: “ ‘ಅಯ್ಯೋ! ಅಯ್ಯೋ! ದುಃಖಭರಿತ ಮಹಾನಗರಿಯೇ, ಸಮುದ್ರದ ಮೇಲೆ ಹಡಗುಗಳನ್ನು ಹೊಂದಿದವರೆಲ್ಲರೂ ಆಕೆಯ ವೈಭವದಿಂದಲೇ ಐಶ್ವರ್ಯವಂತರಾದರಲ್ಲಾ! ಒಂದು ತಾಸಿನಲ್ಲಿ ಆಕೆ ಹಾಳಾದಳಲ್ಲಾ?’


ಆಕೆಯ ಯಾತನೆಯ ದೆಸೆಯಿಂದ ಹೆದರಿ, ದೂರದಲ್ಲಿ ನಿಂತು: “ ‘ಅಯ್ಯೋ! ಅಯ್ಯೋ! ಮಹಾನಗರಿಯೇ, ಬಲಿಷ್ಠನಗರಿ ಬಾಬಿಲೋನೇ! ಒಂದೇ ತಾಸಿನಲ್ಲಿ ನಿನಗೆ ತೀರ್ಪಾಯಿತಲ್ಲಾ?’ ಎಂದು ಶೋಕಿಸುವರು.


ಆ ದಿನದಲ್ಲಿ ಜನರು ನಿಮ್ಮನ್ನು ಅಪಹಾಸ್ಯ ಮಾಡುವರು. ‘ನಾವು ಸಂಪೂರ್ಣವಾಗಿ ಹಾಳಾಗಿದ್ದೇವೆ. ನನ್ನ ಪ್ರಜೆಗಳ ಆಸ್ತಿ ವಿಭಾಗವಾಗಿದೆ. ಆತನು ಅದನ್ನು ನನ್ನಿಂದ ತೆಗೆದುಕೊಳ್ಳುವನು. ಆತನು ನಮ್ಮ ಹೊಲಗಳನ್ನು ದ್ರೋಹಿಗಳಿಗೆ ಹಂಚಿಕೊಟ್ಟಿದ್ದಾನೆ,’ ” ಎಂಬ ದುಃಖದಾಯಕ ಸಂಗೀತದಿಂದ ಹಾಸ್ಯಮಾಡುವರು.


ಆದ್ದರಿಂದ ನಾನು ಗೋಳಾಡಿ ಅರಚುವೆನು. ಬರಿಗಾಲಿನಲ್ಲಿಯೂ ಬೆತ್ತಲೆಯಾಗಿಯೂ ಹೋಗುವೆನು. ನರಿಗಳ ಹಾಗೆ ಕೂಗುವೆನು, ಉಷ್ಟ್ರಪಕ್ಷಿಯಂತೆ ನರಳುವೆನು.


ನಿಮ್ಮ ಹಬ್ಬಗಳನ್ನು ದುಃಖಕ್ಕೂ, ನಿಮ್ಮ ಹಾಡುಗಳನ್ನೆಲ್ಲಾ ಗೋಳಾಟಕ್ಕೂ ಬದಲಾಯಿಸುವೆನು. ಎಲ್ಲರೂ ಸೊಂಟಗಳಿಗೆ ಗೋಣಿತಟ್ಟನ್ನು ಕಟ್ಟಿಕೊಂಡು, ತಲೆಗಳನ್ನು ಬೋಳಿಸಿಕೊಳ್ಳುವಂತೆ ಮಾಡುವೆನು. ಒಬ್ಬನೇ ಮಗನಿಗಾಗಿ ಗೋಳಾಡುವ ಸಮಯದಂತೆ ಮಾಡುವೆನು. ಅದರ ಅಂತ್ಯವು ಕಹಿಯಾದ ದಿನದಂತಿರುವುದು.


ಆದ್ದರಿಂದ ದಮಸ್ಕದ ಆಚೆ ನಿಮ್ಮನ್ನು ಸೆರೆಯಾಳುಗಳಾಗಿ ಕಳುಹಿಸುವೆ, ಎಂದು ಸರ್ವಶಕ್ತರಾದ ದೇವರೆಂದು ಹೆಸರುಗೊಂಡ ಯೆಹೋವ ದೇವರು ಹೇಳುತ್ತಾರೆ.


ಸರ್ವಶಕ್ತ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ: “ನೀವು ಕೇಳಿ, ಯಾಕೋಬಿನ ಮನೆತನದವರಿಗೆ ವಿರುದ್ಧವಾಗಿ ಸಾಕ್ಷಿ ಕೊಡಿರಿ.”


ಪವಿತ್ರ ಉಪವಾಸವನ್ನು ಘೋಷಿಸಿರಿ. ಪವಿತ್ರ ಸಭೆಯನ್ನು ಕರೆಯಿರಿ. ಹಿರಿಯರನ್ನೂ ದೇಶದ ನಿವಾಸಿಗಳೆಲ್ಲರನ್ನೂ ನಿಮ್ಮ ಯೆಹೋವ ದೇವರ ಆಲಯದಲ್ಲಿ ಕೂಡಿಸಿ, ಯೆಹೋವ ದೇವರಿಗೆ ಮೊರೆಯಿಡಿರಿ.


ಯೌವನದ ಗಂಡನಿಗೋಸ್ಕರ ಗೋಣಿತಟ್ಟು ಧರಿಸಿ, ಕನ್ಯೆಯ ಹಾಗೆ ಪ್ರಲಾಪಿಸು.


ಏಕೆಂದರೆ ಪ್ರಸವವೇದನೆ ಪಡುವವಳಂತೆ, ಚೊಚ್ಚಲನ್ನು ಹೆರುವವಳ ಸಂಕಟಕ್ಕೆ ಸಮಾನವಾಗಿರುವ ಚೀಯೋನಿನ ಮಗಳ ಕಿರಿಚುವ ಕೂಗನ್ನು ಕೇಳಿದ್ದೇನೆ. ಆಕೆಯು ಗೋಳಾಡುತ್ತಾಳೆ, ಕೈಗಳನ್ನು ಚಾಚಿ, “ಅಯ್ಯೋ, ನನಗೀಗ ಕಷ್ಟ! ಕೊಲೆಗಾರರ ನಿಮಿತ್ತ ನನ್ನ ಪ್ರಾಣವು ಬೇಸರಗೊಳ್ಳುತ್ತದೆ,” ಎಂದು ಅರಚಿಕೊಳ್ಳುತ್ತಾಳೆ.


ಆ ದಿವಸದಲ್ಲಿ ಅತ್ತು, ದುಃಖಿಸಿ, ತಲೆ ಬೋಳಿಸಿಕೊಂಡು, ಗೋಣಿತಟ್ಟನ್ನು ಸುತ್ತಿಕೊಳ್ಳಬೇಕೆಂದು ಸರ್ವಶಕ್ತ ದೇವರಾದ ಯೆಹೋವ ದೇವರು ನಿಮ್ಮನ್ನು ಕರೆದರು.


ಅವರ ಕೂಗಾಟವು ಮೋವಾಬಿನ ಎಲೆಗಳ ತನಕ ಹಬ್ಬಿದೆ. ಅದರ ಕಿರಿಚಾಟ ಎಗ್ಲಯಿಮ್ ಹಾಗೂ ಬೆಯೆರ್ ಏಲೀಮ್ ಊರುಗಳ ತನಕ ವ್ಯಾಪಿಸಿದೆ.


ಯೆರೆಮೀಯನು ಯೋಷೀಯನಿಗೋಸ್ಕರ ದುಃಖ ಗೀತವನ್ನು ಬರೆದನು. ಹಾಡುಗಾರರೂ, ಹಾಡುಗಾರ್ತಿಯರೂ ಯೋಷೀಯನನ್ನು ಇದುವರೆಗೂ ತಮ್ಮ ಗೋಳಾಟ ಪದ್ಯಗಳಲ್ಲಿ ಸ್ಮರಿಸಿಕೊಳ್ಳುತ್ತಾರೆ. ಇದು ಇಸ್ರಾಯೇಲಿನಲ್ಲಿ ಸಂಪ್ರದಾಯವಾಯಿತು ಮತ್ತು ಈ ಗೀತೆಗಳು ಪ್ರಲಾಪಗಳಲ್ಲಿ ಬರೆದಿರುತ್ತವೆ.


“ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ನಾವು ನಡುಗುವಿಕೆಯ ಮತ್ತು ಭಯದ ಧ್ವನಿಯನ್ನು ಕೇಳಿದ್ದೇವೆಯೇ ಹೊರತು, ಸಮಾಧಾನದ್ದಲ್ಲ.


ಆದ್ದರಿಂದ ದೇಶವು ದುಃಖಪಡುತ್ತಿದೆ. ಅದರಲ್ಲಿ ವಾಸಿಸುವ ಪ್ರತಿಯೊಬ್ಬನು ಕುಗ್ಗಿಹೋಗಿದ್ದಾನೆ. ಅಡವಿಯ ಮೃಗಗಳೂ ಆಕಾಶದ ಪಕ್ಷಿಗಳೂ, ಸಮುದ್ರ ಮೀನುಗಳು ನಶಿಸಿ ಹೋಗುತ್ತಿವೆ.


ಆ ದಿನ ಭಯಂಕರವಾದದ್ದು! ಏಕೆಂದರೆ ಯೆಹೋವ ದೇವರ ದಿವಸವು ಸಮೀಪವಾಗಿದೆ. ಸರ್ವಶಕ್ತರ ಕಡೆಯಿಂದ ಇದು ನಾಶವಾದಂತೆ ಬರುವುದು.


“ಆ ದಿನದಲ್ಲಿ ದೇವಾಲಯದ ಹಾಡುಗಳು ವಿಲಾಪವಾಗುವುವು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. “ಎಲ್ಲಾ ಕಡೆಗಳಲ್ಲಿ ಅನೇಕ ಹೆಣಗಳು ಬಿದ್ದಿರುವುವು. ಮೌನವಾಗಿರಿ!”


ಅವರಿಗೂ, ಅವರ ತಂದೆಗಳಿಗೂ ತಿಳಿಯದ ಇತರ ಜನಾಂಗಗಳಲ್ಲಿ ಅವರನ್ನು ಚದರಿಸುವೆನು. ಅವರನ್ನು ತೀರಿಸುವವರೆಗೆ ಖಡ್ಗವನ್ನು ಅವರ ಹಿಂದೆ ಕಳುಹಿಸುವೆನು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು