Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆಮೋಸ 5:10 - ಕನ್ನಡ ಸಮಕಾಲಿಕ ಅನುವಾದ

10 ಸಭೆಯಲ್ಲಿ ದೋಷವನ್ನು ಎತ್ತಿ ತೋರಿಸುವವನನ್ನು ನೀವು ದ್ವೇಷಿಸುತ್ತೀರಿ. ನಿಮ್ಮ ವಿಷಯವಾಗಿ ಸತ್ಯವನ್ನು ಹೇಳುವವನನ್ನೇ ಹೀನೈಸುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಕಂಡ ದೋಷವನ್ನು ಚಾವಡಿಯಲ್ಲಿ ಖಂಡಿಸುವವನ ಮೇಲೆ ಹಗೆತೋರಿಸುತ್ತೀರಿ, ಯಥಾರ್ಥರನ್ನು ದ್ವೇಷಿಸುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಕಂಡ ದೋಷವನ್ನು ಮಂಟಪದಲ್ಲಿ ಖಂಡಿಸುವವನನ್ನು ನೀವು ಹಗೆಮಾಡುತ್ತೀರಿ; ನ್ಯಾಯವಾದಿಗಳ ಮೇಲೆ ದ್ವೇಷ ಸಾಧಿಸುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಕಂಡ ದೋಷವನ್ನು ಚಾವಡಿಯಲ್ಲಿ ಖಂಡಿಸುವವನ ಮೇಲೆ ಹಗೆತೋರಿಸುತ್ತೀರಿ, ಯಥಾರ್ಥವಾದಿಯನ್ನು ದ್ವೇಷಿಸುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಪ್ರವಾದಿಗಳು ಸಾರ್ವಜನಿಕ ಸ್ಥಳಗಳಿಗೆ ಹೋಗಿ ಜನರು ಮಾಡುವ ದುಷ್ಕೃತ್ಯಗಳನ್ನು ಖಂಡಿಸುವರು. ಜನರು ಪ್ರವಾದಿಗಳನ್ನು ಹಗೆಮಾಡುವರು. ಪ್ರವಾದಿಗಳು ಒಳ್ಳೆಯದನ್ನು ಸರಳವಾದ ಸತ್ಯಗಳನ್ನು ಉಪದೇಶಿಸುವರು. ಆದರೆ ಜನರು ಅವರನ್ನು ದ್ವೇಷಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆಮೋಸ 5:10
24 ತಿಳಿವುಗಳ ಹೋಲಿಕೆ  

ಸುಳ್ಳುಸಾಕ್ಷಿ ಹೇಳಿ ತಪ್ಪುಹೊರಿಸುವವರು, ನ್ಯಾಯಸ್ಥಾನದಲ್ಲಿ ದೋಷವನ್ನು ಖಂಡಿಸುವವರಿಗೆ ಉರುಲೊಡ್ಡುವವರು, ನೀತಿವಂತನಿಗೆ ನ್ಯಾಯ ತಪ್ಪಿಸುವವರು ಹೀಗೆ ಅಧರ್ಮದಲ್ಲಿ ನಿರತರಾಗಿರುವ ಇವರೆಲ್ಲರು ನಿರ್ಮೂಲರಾಗುವರು.


ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ, “ನಾವು ಯೆಹೋವ ದೇವರನ್ನು ವಿಚಾರಿಸುವ ಹಾಗೆ ಇಮ್ಲನ ಮಗ ಮೀಕಾಯನೆಂಬ ಇನ್ನೊಬ್ಬನಿದ್ದಾನೆ. ಆದರೆ ನಾನು ಅವನನ್ನು ದ್ವೇಷ ಮಾಡುತ್ತೇನೆ. ಏಕೆಂದರೆ ಅವನು ನನ್ನನ್ನು ಕುರಿತು ಒಳ್ಳೆಯದನ್ನಲ್ಲ ಯಾವಾಗಲೂ ಕೆಟ್ಟದ್ದನ್ನು ಪ್ರವಾದಿಸುತ್ತಾನೆ,” ಎಂದನು. ಅದಕ್ಕೆ ಯೆಹೋಷಾಫಾಟನು, “ಅರಸನು ಹಾಗೆ ಅನ್ನದಿರಲಿ,” ಎಂದನು.


ಈ ಇಬ್ಬರು ಪ್ರವಾದಿಗಳು ಭೂನಿವಾಸಿಗಳನ್ನು ಪೀಡಿಸಿದ್ದರಿಂದ, ಇದರ ವಿಷಯವಾಗಿ ಭೂನಿವಾಸಿಗಳು ಸಂತೋಷಿಸಿ, ಹರ್ಷಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು.


ನೀವು ಲೋಕದವರಾಗಿದ್ದರೆ ಲೋಕವು ನಿಮ್ಮನ್ನು ಪ್ರೀತಿಸುತ್ತಿತ್ತು. ಆದರೆ ನೀವು ಲೋಕದವರಲ್ಲದೆ ಇರುವುದರಿಂದಲೂ ನಾನು ಲೋಕದೊಳಗಿಂದ ನಿಮ್ಮನ್ನು ಆರಿಸಿಕೊಂಡದ್ದರಿಂದಲೂ ಲೋಕವು ನಿಮ್ಮನ್ನು ದ್ವೇಷಿಸುತ್ತದೆ.


ಲೋಕವು ನಿಮ್ಮನ್ನು ದ್ವೇಷಿಸಲಾರದು. ಲೋಕದ ಕ್ರಿಯೆಗಳು ಕೆಟ್ಟವುಗಳಾಗಿವೆ ಎಂದು ಅದರ ವಿಷಯದಲ್ಲಿ ನಾನು ಸಾಕ್ಷಿ ಹೇಳುವುದರಿಂದ, ಅದು ನನ್ನನ್ನು ದ್ವೇಷಿಸುತ್ತದೆ.


ಕೇಡನ್ನು ಮಾಡುವವರು ಬೆಳಕನ್ನು ದ್ವೇಷಿಸುತ್ತಾರೆ ಮತ್ತು ಬೆಳಕಿಗೆ ಬರುವುದಿಲ್ಲ. ಏಕೆಂದರೆ ಅವರು ಮಾಡಿರುವ ಕೆಟ್ಟ ಕಾರ್ಯಗಳನ್ನೆಲ್ಲಾ ಬೆಳಕು ತೋರಿಸುತ್ತದೆ.


ಆದರೆ ಯೆಹೋವ ದೇವರ ಕೋಪವು ತಮ್ಮ ಜನರಿಗೆ ವಿರೋಧವಾಗಿ ಏಳುವವರೆಗೂ, ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ, ದೇವರ ವಾಕ್ಯಗಳನ್ನು ತಿರಸ್ಕರಿಸಿ, ದೇವರ ಪ್ರವಾದಿಗಳಿಗೆ ಅಪಹಾಸ್ಯ ಮಾಡಿದರು.


ಪ್ರವಾದಿಯು ಅರಸನ ಸಂಗಡ ಮಾತನಾಡುತ್ತಿರುವಾಗಲೇ ಅರಸನು ಅವನಿಗೆ, “ಅರಸನ ಆಲೋಚನಾ ಮಂತ್ರಿಯನ್ನಾಗಿ ನಿನ್ನನ್ನು ನೇಮಿಸಿದವರು ಯಾರು? ಸುಮ್ಮನಿರು! ನೀನು ಏಕೆ ಮರಣಹೊಂದಬೇಕೆಂದಿರುವೆ?” ಎಂದನು. ಆಗ ಪ್ರವಾದಿಯು, “ನೀನು ನನ್ನ ಯೋಚನೆಯನ್ನು ಕೇಳದೆ ಇದನ್ನು ಮಾಡಿದ್ದರಿಂದ, ದೇವರು ನಿನ್ನನ್ನು ನಾಶಮಾಡಲು ತೀರ್ಮಾನಿಸಿದ್ದಾರೆಂದು ನಾನು ಬಲ್ಲೆನು,” ಎಂದನು.


ಆಗ ಅಹಾಬನು ಎಲೀಯನಿಗೆ, “ನನ್ನ ಶತ್ರುವೇ, ನೀನು ನನ್ನನ್ನು ಕಂಡುಹಿಡಿದೆಯಾ,” ಎಂದನು. ಅದಕ್ಕೆ ಎಲೀಯನು, “ಕಂಡುಕೊಂಡೆನು, ನೀನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡುವಂತೆ ನಿನ್ನನ್ನು ಮಾರಿಕೊಂಡದ್ದರಿಂದ,


ಅಹಾಬನು ಎಲೀಯನನ್ನು ಕಂಡಾಗ ಅವನಿಗೆ, “ಇಸ್ರಾಯೇಲನ್ನು ಕಷ್ಟಕ್ಕೆ ಒಳಪಡಿಸುವವನು ನೀನಲ್ಲವೋ?” ಎಂದನು.


ಹೀಗಿರಲಾಗಿ ಸತ್ಯವನ್ನು ಹೇಳಿದ್ದರಿಂದ ನಾನು ನಿಮಗೆ ಶತ್ರುವಾಗಿಬಿಟ್ಟೆನೋ?


ಕುಚೋದ್ಯಗಾರನು ಬುದ್ಧಿವಾದವನ್ನು ದ್ವೇಷಿಸುತ್ತಾನೆ. ಅವನು ಜ್ಞಾನಿಗಳಿಂದ ದೂರವಿರುತ್ತಾನೆ.


ಸತ್ಯವು ಇಲ್ಲವೇ ಇಲ್ಲ, ಕೇಡನ್ನು ಬಿಟ್ಟವನು ಬೇಟೆಯಾಗುತ್ತಾನೆ. ಯೆಹೋವ ದೇವರು ಇದನ್ನು ನೋಡಿ ನ್ಯಾಯವಿಲ್ಲವಲ್ಲಾ ಎಂದು ವ್ಯಸನಗೊಂಡನು.


ಆಗ ಅರಸನು ಮನೆಯಲ್ಲಿರುವ ಕಂಚುಕಿಯಾದ ಕೂಷ್ಯನಾದ ಎಬೆದ್ಮೆಲೆಕನು ಅವರು ಯೆರೆಮೀಯನನ್ನು ಬಾವಿಯಲ್ಲಿ ಹಾಕಿದರೆಂದು ಕೇಳಿದಾಗ, ಅರಸನು ಬೆನ್ಯಾಮೀನನ ಬಾಗಿಲಲ್ಲಿ ಕೂತಿರಲಾಗಿ,


“ಆದರೂ ಯಾವನಾದರೂ ವಾದಿಸದಿರಲಿ ಇಲ್ಲವೆ ಬೇರೆಯವರನ್ನು ಖಂಡಿಸದಿರಲಿ. ಏಕೆಂದರೆ ನಿಮ್ಮ ಜನರೆಲ್ಲರೂ ಯಾಜಕನೊಂದಿಗೆ ವಾದಿಸುವವರಾಗಿದ್ದಾರೆ.


ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೆಯದನ್ನು ಪ್ರೀತಿಸಿರಿ, ಬಾಗಿಲಲ್ಲಿ ನ್ಯಾಯವನ್ನು ಸ್ಥಾಪಿಸಿರಿ. ಒಂದು ವೇಳೆ ಸರ್ವಶಕ್ತರಾದ ಯೆಹೋವ ದೇವರು ಯೋಸೇಫನ ಗೋತ್ರದಲ್ಲಿ ಉಳಿದವರಿಗೆ ಕನಿಕರಿಸಬಹುದು.


ಆಗ ಯಾಜಕನು ಅವನನ್ನು ಪರೀಕ್ಷಿಸಬೇಕು, ಆ ಬಾವು ಚರ್ಮದಲ್ಲಿ ಬೆಳ್ಳಗಿದ್ದು, ಅದರ ಕೂದಲು ಬೆಳ್ಳಗಾಗಿ ಹೋಗಿದ್ದರೆ ಮತ್ತು ಆ ಬಾವಿನಲ್ಲಿ ಹಸಿ ಮಾಂಸವು ಇದ್ದರೆ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು