ಆಮೋಸ 3:15 - ಕನ್ನಡ ಸಮಕಾಲಿಕ ಅನುವಾದ15 ಚಳಿಗಾಲದ ಮನೆಯನ್ನು ಬೇಸಿಗೆಯ ಮನೆಯ ಸಂಗಡ ಹೊಡೆದು ಹಾಕುವೆನು. ಆಗ ದಂತ ಮಂದಿರಗಳು ನಾಶವಾಗುವುವು. ದೊಡ್ಡ ಮನೆಗಳು ಕೊನೆಗಾಣುವುವು,” ಎಂದು ಯೆಹೋವ ದೇವರು ಹೇಳುತ್ತಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ನಾನು ಚಳಿಗಾಲದ ಅರಮನೆಯನ್ನೂ, ಬೇಸಿಗೆಯ ಅರಮನೆಯನ್ನೂ ಹೊಡೆದುಹಾಕುವೆನು. ದಂತಮಂದಿರಗಳು ಹಾಳಾಗುವವು ಮತ್ತು ದೊಡ್ಡಮನೆಗಳು ಕೊನೆಗಾಣುವವು” ಇದು ಯೆಹೋವನ ನುಡಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ಚಳಿಗಾಲ, ಬೇಸಿಗೆಕಾಲಗಳ ವಿಹಾರಗೃಹಗಳನ್ನು ವಿನಾಶಮಾಡುವೆನು. ದಂತನಿರ್ಮಿತ ಮಂದಿರಗಳು ಧ್ವಂಸವಾಗುವುವು. ಮಹಾಸೌಧಗಳು ನೆಲಸಮವಾಗುವುವು. ಸರ್ವೇಶ್ವರಸ್ವಾಮಿಯ ನುಡಿಯಿದು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ನಾನು ಚಳಿಗಾಲದ ಅರಮನೆಯನ್ನೂ ಬೇಸಿಗೆಯ ಅರಮನೆಯನ್ನೂ ಹೊಡೆದುಹಾಕುವೆನು; ದಂತಮಂದಿರಗಳು ಹಾಳಾಗುವವು, ಮಹಾಸೌಧಗಳು ಕೊನೆಗಾಣುವವು; ಇದು ಯೆಹೋವನ ನುಡಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್15 ಬೇಸಿಗೆ ಕಾಲದ ಅರಮನೆಯೊಂದಿಗೆ ಚಳಿಗಾಲದ ಅರಮನೆಯನ್ನೂ ನಾಶಮಾಡುವೆನು. ದಂತದ ಭವನಗಳನ್ನು ನಾಶಮಾಡುವೆನು, ಇತರ ಎಷ್ಟೋ ಮನೆಗಳು ನಾಶವಾಗುವವು.” ಇವು ಯೆಹೋವನ ನುಡಿಗಳು. ಅಧ್ಯಾಯವನ್ನು ನೋಡಿ |