Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆಮೋಸ 3:12 - ಕನ್ನಡ ಸಮಕಾಲಿಕ ಅನುವಾದ

12 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಹೇಗೆ ಕುರುಬನು ಸಿಂಹದ ಬಾಯಿಯಿಂದ ಎರಡು ಕಾಲಿನ ಎಲಬುಗಳನ್ನು ಅಥವಾ ಕಿವಿಯ ಒಂದು ತುಂಡನ್ನು ರಕ್ಷಿಸಲು ಪ್ರಯತ್ನಿಸುತ್ತಾನೋ ಹಾಗೆಯೇ ಸಮಾರ್ಯದಲ್ಲಿ ವಾಸಿಸುವ ಇಸ್ರಾಯೇಲರು ಹಾಸಿಗೆಯ ತಲೆ ಮತ್ತು ಮಂಚದ ಬಟ್ಟೆಯ ತುಂಡುಗಳೊಂದಿಗೆ ಸಂರಕ್ಷಣೆ ಹೊಂದುತ್ತಾರೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಯೆಹೋವನು ಇಂತೆನ್ನುತ್ತಾನೆ: “ಸಿಂಹದ ಬಾಯೊಳಗಿಂದ ಕುರುಬನು ತನ್ನ ಕುರಿಗಳ ಎರಡು ಕಾಲನ್ನೂ, ಅಥವಾ ಕಿವಿಯ ಒಂದು ತುಂಡನ್ನೂ, ಹೇಗೆ ರಕ್ಷಿಸುವನೋ, ಹಾಗೆಯೇ ಸಮಾರ್ಯದೊಳಗೆ ಹಾಸಿಗೆಯ ಮೂಲೆಯಲ್ಲಿಯೂ, ಮಂಚದ ಪಟ್ಟೇದಿಂಬುಗಳಲ್ಲಿಯೂ, ಒರಗಿಕೊಳ್ಳುವ ಇಸ್ರಾಯೇಲರ ಸ್ವಲ್ಪ ಭಾಗ ಮಾತ್ರ ರಕ್ಷಿಸಲ್ಪಡುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ಸಿಂಹದ ಬಾಯಿಗೆ ಸಿಕ್ಕಿದ ಕುರಿಯ ಅಂಗಗಳಲ್ಲಿ ಕಿವಿಕಾಲು ಮಾತ್ರ ಕುರುಬನಿಗೆ ದಕ್ಕೀತು. ಅಂತೆಯೇ ಸಮಾರ್ಯದ ಸುಖಾಸನಗಳಲ್ಲೂ ಸುಪ್ಪತ್ತಿಗೆ ಮೇಲೂ ಹಾಯಾಗಿ ಒರಗಿಕೊಂಡಿರುವ ಇಸ್ರಯೇಲರಲ್ಲಿ ಕೆಲವೇ ಕೆಲವರು ಮಾತ್ರ ಉಳಿಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಯೆಹೋವನು ಇಂತೆನ್ನುತ್ತಾನೆ - ಸಿಂಹದ ಬಾಯೊಳಗಿಂದ ಎರಡು ಕಾಲುಗಳಾಗಲಿ ಕಿವಿಯ ತುಂಡಾಗಲಿ ಹೇಗೆ ಕುರುಬನಿಂದ ರಕ್ಷಿಸಲ್ಪಡುವದೋ ಹಾಗೆಯೇ ಸಮಾರ್ಯದೊಳಗೆ ಗದ್ದುಗೆಯ ಮೂಲೆಯಲ್ಲಿಯೂ ಮಂಚದ ಪಟ್ಟೇದಿಂಬುಗಳಲ್ಲಿಯೂ ಒರಗಿಕೊಳ್ಳುವ ಇಸ್ರಾಯೇಲ್ಯರ [ಸ್ವಲ್ಪಭಾಗ ಮಾತ್ರ] ರಕ್ಷಿಸಲ್ಪಡುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಯೆಹೋವನು ಹೇಳುವುದೇನೆಂದರೆ, “ಒಂದುವೇಳೆ ಸಿಂಹವು ಒಂದು ಕುರಿಮರಿಯ ಮೇಲೆ ಎರಗಿದರೆ ಕುರುಬನು ಅದನ್ನು ರಕ್ಷಿಸಲು ಪ್ರಯತ್ನಿಸಾನು. ಆದರೆ ಕುರುಬನು ಆ ಕುರಿಮರಿಯ ಒಂದು ಭಾಗವನ್ನು ಮಾತ್ರ ಕಾಪಾಡಿಯಾನು. ಸಿಂಹದ ಬಾಯಿಂದ ಕುರಿಯ ಎರಡು ಕಾಲುಗಳನ್ನೋ ಕಿವಿಯ ಒಂದು ಭಾಗವನ್ನೋ ಎಳೆದು ರಕ್ಷಿಸಿಯಾನು. ಅದೇ ರೀತಿಯಲ್ಲಿ ಬಹುತೇಕ ಇಸ್ರೇಲರು ರಕ್ಷಿಸಲ್ಪಡುವದಿಲ್ಲ. ಸಮಾರ್ಯದಲ್ಲಿರುವ ಜನರು ತಮ್ಮ ಹಾಸಿಗೆಯ ಒಂದು ಮೂಲೆಯನ್ನಾಗಲಿ ಅಥವಾ ಮಂಚದ ಮೇಲಿನ ಬಟ್ಟೆಯ ಒಂದು ತುಂಡನ್ನಾಗಲಿ ಉಳಿಸಿಕೊಳ್ಳುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆಮೋಸ 3:12
16 ತಿಳಿವುಗಳ ಹೋಲಿಕೆ  

ಯೆಹೋವ ದೇವರು ನನಗೆ ಹೀಗೆ ಹೇಳಿದ್ದಾನೆ: ಸಿಂಹವು, ಪ್ರಾಯದ ಸಿಂಹವು ಬೇಟೆಯ ಮೇಲೆ ಬಿದ್ದು ಗುರುಗುಟ್ಟುತ್ತಿರುವಾಗ, ಕಾವಲುಗಾರನ ಕೂಗನ್ನು ಕೇಳಿ, ಕುರುಬರ ಗುಂಪು ಅದಕ್ಕೆ ವಿರುದ್ಧವಾಗಿ ಕೂಡಿ ಬಂದರೂ, ಹೇಗೆ ಅವರ ಶಬ್ದಕ್ಕೆ ಭಯಪಡದೆ ಇಲ್ಲವೆ ಅವರ ಗದ್ದಲಕ್ಕೆ ಕುಂದಿಹೋಗದೆ ಇರುವುದೋ, ಹಾಗೆಯೇ ಸೇನಾಧೀಶ್ವರ ಯೆಹೋವ ದೇವರು ಚೀಯೋನ್ ಪರ್ವತಕ್ಕೋಸ್ಕರವೂ, ಅದರ ಗುಡ್ಡಕ್ಕೋಸ್ಕರವೂ ಯುದ್ಧಮಾಡಲು ಇಳಿದು ಬರುವರು.


ಆಗ ಅಸ್ಸೀರಿಯದ ಅರಸನು ಅವನ ಮಾತು ಕೇಳಿ, ದಮಸ್ಕಕ್ಕೆ ಹೋಗಿ, ಅದನ್ನು ಮುತ್ತಿಗೆ ಹಾಕಿ, ಅದರ ನಿವಾಸಿಗಳನ್ನು ಕೀರ್ ಪ್ರಾಂತಕ್ಕೆ ಸೆರೆಯಾಗಿ ತಂದು, ರೆಚೀನನನ್ನು ಕೊಂದುಹಾಕಿದನು.


ಅದಕ್ಕೆ ಮೀಕಾಯನು, “ಇಗೋ, ನಿನ್ನನ್ನು ಬಚ್ಚಿಟ್ಟುಕೊಳ್ಳಲು ಒಳಕೊಠಡಿಗೆ ನೀನು ಹೋಗುವ ದಿವಸದಲ್ಲಿ ನೋಡುವೆ,” ಎಂದನು.


ಆಗ ಬೆನ್ಹದದನು ಅವನಿಗೆ, “ನನ್ನ ತಂದೆಯು ನಿನ್ನ ತಂದೆಯಿಂದ ತೆಗೆದುಕೊಂಡ ಪಟ್ಟಣಗಳನ್ನು ತಿರುಗಿಕೊಡುತ್ತೇನೆ. ನನ್ನ ತಂದೆ ಸಮಾರ್ಯದಲ್ಲಿ ಮಾಡಿದ ಹಾಗೆಯೇ, ದಮಸ್ಕದಲ್ಲಿ ನೀನು ನಿನಗಾಗಿ ಬೀದಿಗಳನ್ನು ಮಾಡಿಸಬೇಕು,” ಎಂದನು. ಅದಕ್ಕೆ ಅಹಾಬನು, “ಈ ಒಡಂಬಡಿಕೆಯ ಪ್ರಕಾರವೇ ನಿನ್ನನ್ನು ಕಳುಹಿಸಿಬಿಡುತ್ತೇನೆ,” ಎಂದನು. ಹೀಗೆಯೇ ಅಹಾಬನು ಬೆನ್ಹದದನ ಸಂಗಡ ಒಡಂಬಡಿಕೆಯನ್ನು ಮಾಡಿ, ಅವನನ್ನು ಕಳುಹಿಸಿಬಿಟ್ಟನು.


ಮಿಕ್ಕಾದವರು ಅಫೇಕೆಂಬ ಪಟ್ಟಣದೊಳಗೆ ಓಡಿಹೋದರು. ಅಲ್ಲಿ ಒಂದು ಗೋಡೆ ಉಳಿದುಕೊಂಡವರಲ್ಲಿ ಇಪ್ಪತ್ತೇಳು ಸಾವಿರ ಮಂದಿಯ ಮೇಲೆ ಬಿದ್ದಿತ್ತು. ಆದರೆ ಬೆನ್ಹದದನು ಪಟ್ಟಣಕ್ಕೆ ಓಡಿಬಂದು ಒಳ ಕೊಠಡಿಯಲ್ಲಿ ಬಚ್ಚಿಟ್ಟುಕೊಂಡನು.


ದಂತದ ಮಂಚಗಳ ಮೇಲೆ ಮಲಗಿಕೊಳ್ಳುತ್ತೀರಿ. ತಮ್ಮ ಹಾಸಿಗೆಗಳ ಮೇಲೆ ಹಾಯಾಗಿ ಒರಗಿಕೊಳ್ಳುತ್ತೀರಿ. ಮಂದೆಯೊಳಗಿಂದ ಕುರಿಮರಿಗಳನ್ನೂ ಹಟ್ಟಿಯ ಮಂದೆಯೊಳಗಿಂದ ಕರುಗಳನ್ನೂ ತಿನ್ನುತ್ತೀರಿ.


ಏಕೆಂದರೆ ಆ ಮಗುವು, ‘ಅಪ್ಪಾ’ ಅಥವಾ ‘ಅಮ್ಮಾ’ ಎಂದು ಕೂಗಬಲ್ಲವನಾಗುವುದಕ್ಕಿಂತ ಮುಂಚೆ ಅಸ್ಸೀರಿಯದ ಅರಸನು ದಮಸ್ಕದ ಆಸ್ತಿಯನ್ನೂ ಸಮಾರ್ಯದ ಸೂರೆಯನ್ನೂ ತೆಗೆದುಕೊಂಡು ಹೋಗುವನು” ಎಂದರು.


ಅಲ್ಲಿ ಬಿಳಿ ಕಲ್ಲಿನ ಕಂಬಗಳಿಗೆ ಬೆಳ್ಳಿಯ ಉಂಗುರಗಳಿಂದಲೂ ರಕ್ತವರ್ಣದ ನಯವಾದ ನಾರು ಹಗ್ಗಗಳಿಂದಲೂ ತೂಗು ಹಾಕಲಾಗಿದ್ದವು. ಬಿಳಿ ಹಸಿರೂ ನೀಲವರ್ಣವೂ ಆದ ತೆರೆಗಳಿದ್ದವು. ಮಂಚಗಳು ಬೆಳ್ಳಿ ಬಂಗಾರದವುಗಳಾಗಿ ಕೆಂಪು, ನೀಲಿ, ಬಿಳಿ, ಕಪ್ಪು ಬಣ್ಣಗಳ ಅಮೃತಶಿಲೆಗಳಿಂದ ರಚಿತವಾದ ನೆಲದ ಮೇಲೆ ಇಡಲಾಗಿದ್ದವು.


ಅರಸನು ಅರಮನೆಯ ತೋಟದಿಂದ ದ್ರಾಕ್ಷಾರಸದ ಔತಣ ಸ್ಥಳಕ್ಕೆ ಹಿಂದಿರುಗಿ ಬಂದಾಗ, ಹಾಮಾನನು ಎಸ್ತೇರಳು ಕುಳಿತಿರುವ ಹಾಸಿಗೆಯ ಮೇಲೆ ಬಿದ್ದಿದ್ದನು. ಆಗ ಅರಸನು, “ನನ್ನ ಮುಂದೆಯೇ ಇವನು ರಾಣಿಯನ್ನು ಬಲಾತ್ಕಾರ ಮಾಡಬೇಕೆಂದಿರುವನೋ?” ಎಂದನು. ಆ ಮಾತು ಅರಸನ ಬಾಯಿಂದ ಹೊರಟ ಕೂಡಲೆ ಸೇವಕರು ಹಾಮಾನನ ಮುಖದ ಮೇಲೆ ಮುಸುಕನ್ನು ಹಾಕಿದರು.


“ಯೆಹೋವ ದೇವರಿಗೆ ಒಂದು ಸ್ಥಳವನ್ನೂ, ಯಾಕೋಬನ ದೇವರಿಗೆ ನಿವಾಸವನ್ನೂ ಕಟ್ಟುವವರೆಗೆ ನಿಶ್ಚಯವಾಗಿ,


“ಸಾರ್ವಭೌಮ ಯೆಹೋವ ದೇವರ ಕಣ್ಣುಗಳು ಪಾಪವುಳ್ಳ ರಾಜ್ಯದ ಮೇಲೆ ಇವೆ. ನಾನು ಅದನ್ನು ಭೂಮಿಯ ಮೇಲಿನಿಂದ ನಾಶಮಾಡುವೆನು. ಆದರೆ ಯಾಕೋಬಿನ ಮನೆತನದವರನ್ನು ನಾನು ನಿಜವಾಗಿ ನಾಶಮಾಡುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.


ಆ ದಿನದಲ್ಲಿ ಜನರು ತಮ್ಮನ್ನು ಉಂಟುಮಾಡಿದವರ ಮೇಲೆ ದೃಷ್ಟಿಯಿಡುವರು ಮತ್ತು ಇಸ್ರಾಯೇಲಿನ ಪರಿಶುದ್ಧರ ಕಡೆಗೆ ತಿರುಗಿಕೊಳ್ಳುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು