Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 49:31 - ಕನ್ನಡ ಸಮಕಾಲಿಕ ಅನುವಾದ

31 ಅಲ್ಲಿ ಅಬ್ರಹಾಮನನ್ನೂ, ಅವನ ಹೆಂಡತಿ ಸಾರಳನ್ನೂ ಹೂಳಿದರು. ಅಲ್ಲಿ ಇಸಾಕನನ್ನೂ, ಅವನ ಹೆಂಡತಿ ರೆಬೆಕ್ಕಳನ್ನೂ ಹೂಳಿಟ್ಟರು. ಅಲ್ಲಿ ನಾನು ಲೇಯಳನ್ನೂ ಹೂಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಅಲ್ಲಿ ಅಬ್ರಹಾಮನಿಗೂ ಅವನ ಪತ್ನಿಯಾದ ಸಾರಳಿಗೂ ಸಮಾಧಿಯಾಯಿತು. ಅಲ್ಲೇ ಇಸಾಕನಿಗೂ ಅವನ ಹೆಂಡತಿಯಾದ ರೆಬೆಕ್ಕಳಿಗೂ ಸಮಾಧಿಯಾಯಿತು. ಅಲ್ಲಿ ನಾನು ಲೇಯಳನ್ನು ಸಮಾಧಿಮಾಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಅಲ್ಲೇ ಅಬ್ರಹಾಮನಿಗೂ ಅವನ ಪತ್ನಿ ಸಾರಳಿಗೂ ಸಮಾಧಿಯಾಯಿತು. ಅಲ್ಲೇ ಇಸಾಕನಿಗೂ ಅವನ ಮಡದಿ ರೆಬೆಕ್ಕಳಿಗೂ ಸಮಾಧಿ ಆಯಿತು. ಲೇಯಳನ್ನೂ ನಾನು ಅಲ್ಲಿ ಸಮಾಧಿಮಾಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಅಲ್ಲಿ ಅಬ್ರಹಾಮನಿಗೂ ಅವನ ಪತ್ನಿಯಾದ ಸಾರಳಿಗೂ ಸಮಾಧಿಯಾಯಿತು; ಅಲ್ಲಿ ಇಸಾಕನಿಗೂ ಅವನ ಹೆಂಡತಿಯಾದ ರೆಬೆಕ್ಕಳಿಗೂ ಸಮಾಧಿಯಾಯಿತು; ಅಲ್ಲಿ ನಾನು ಲೇಯಳನ್ನೂ ಹೂಣಿಟ್ಟೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಅಬ್ರಹಾಮನನ್ನು ಮತ್ತು ಅವನ ಹೆಂಡತಿಯಾದ ಸಾರಳನ್ನು ಆ ಗವಿಯಲ್ಲಿ ಸಮಾಧಿ ಮಾಡಲಾಗಿದೆ. ಇಸಾಕನನ್ನು ಮತ್ತು ರೆಬೆಕ್ಕಳನ್ನು ಅಲ್ಲಿ ಸಮಾಧಿ ಮಾಡಲಾಗಿದೆ. ನನ್ನ ಹೆಂಡತಿಯಾದ ಲೇಯಳನ್ನು ನಾನು ಅಲ್ಲಿ ಸಮಾಧಿ ಮಾಡಿದ್ದೇನೆ. ಬೆನ್ಯಾಮೀನ

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 49:31
10 ತಿಳಿವುಗಳ ಹೋಲಿಕೆ  

ಇಸಾಕನು ಮುದುಕನಾಗಿಯೂ, ತುಂಬಾ ಆಯುಷ್ಯವುಳ್ಳವನಾಗಿಯೂ ಮರಣಹೊಂದಿ ತನ್ನ ಪಿತೃಗಳೊಂದಿಗೆ ಸೇರಿದನು. ಅವನ ಮಕ್ಕಳಾದ ಏಸಾವನೂ, ಯಾಕೋಬನೂ ಅವನನ್ನು ಸಮಾಧಿಮಾಡಿದರು.


ಅವನ ಪುತ್ರರಾದ ಇಸಾಕನೂ, ಇಷ್ಮಾಯೇಲನೂ ಮಮ್ರೆಗೆ ಎದುರಾಗಿರುವ ಹಿತ್ತಿಯನಾದ ಚೋಹರನ ಮಗ ಎಫ್ರೋನನ ಹೊಲದಲ್ಲಿರುವ ಮಕ್ಪೇಲ ಎಂಬ ಗವಿಯಲ್ಲಿ ಅವನನ್ನು ಹೂಳಿಟ್ಟರು.


ಅವರ ಮೃತಶರೀರವನ್ನು ಶೇಕೆಮಿಗೆ ತಂದರು. ಅಲ್ಲಿ ಹಮೋರನ ಮಕ್ಕಳಿಂದ ಅಬ್ರಹಾಮನು ಕ್ರಯಕೊಟ್ಟು ಕೊಂಡುಕೊಂಡಿದ್ದ ಸಮಾಧಿಯಲ್ಲಿ ಇಟ್ಟರು.


ಅವನ ಪುತ್ರರು ಅವನನ್ನು ಕಾನಾನ್ ದೇಶಕ್ಕೆ ತೆಗೆದುಕೊಂಡುಹೋಗಿ, ಅಬ್ರಹಾಮನು ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನಿನಿಂದ ಕೊಂಡುಕೊಂಡಿದ್ದ ಮಮ್ರೆಗೆ ಎದುರಾಗಿರುವಂಥ ಮಕ್ಪೇಲ ಹೊಲದ ಗವಿಯಲ್ಲಿ ಹೂಳಿದರು.


ನನ್ನ ತಂದೆಯ ಸಂಗಡ ನಾನು ಮಲಗಬೇಕು. ಈಜಿಪ್ಟಿನಿಂದ ನನ್ನನ್ನು ತೆಗೆದುಕೊಂಡುಹೋಗಿ, ಅವರ ಸಮಾಧಿಯ ಸ್ಥಳದಲ್ಲಿ ನನ್ನನ್ನು ಹೂಳಿಡು,” ಎಂದನು. ಅದಕ್ಕವನು, “ನಿನ್ನ ಮಾತಿನ ಪ್ರಕಾರ ನಾನು ಮಾಡುತ್ತೇನೆ,” ಎಂದನು.


ಆಗ ಅಬ್ರಹಾಮನು ತನ್ನ ಹೆಂಡತಿಯ ಶವದ ಬಳಿಯಿಂದ ಎದ್ದು, ಹಿತ್ತಿಯರ ಬಳಿಗೆ ಬಂದು, ಅವರಿಗೆ,


ಆ ಹೊಲವೂ, ಅದರಲ್ಲಿರುವ ಗವಿಯೂ ಹಿತ್ತಿಯರಿಂದ ಕೊಂಡುಕೊಂಡದ್ದು,” ಎಂದನು.


ಅಬ್ರಹಾಮನು ಅದನ್ನು ಹಿತ್ತಿಯರಿಂದ ಕೊಂಡುಕೊಂಡಿದ್ದನು. ಅಬ್ರಹಾಮನಿಗೂ, ಅವನ ಹೆಂಡತಿ ಸಾರಳಿಗೂ ಒಂದೇ ಸ್ಥಳದಲ್ಲಿ ಸಮಾಧಿ ಆಯಿತು.


ಲಾಬಾನನಿಗೆ ಇಬ್ಬರು ಪುತ್ರಿಯರಿದ್ದರು. ದೊಡ್ಡವಳ ಹೆಸರು ಲೇಯಳು, ಚಿಕ್ಕವಳ ಹೆಸರು ರಾಹೇಲಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು