ಆದಿಕಾಂಡ 49:19 - ಕನ್ನಡ ಸಮಕಾಲಿಕ ಅನುವಾದ19 “ಗಾದನ ಮೇಲೆ ಸೈನ್ಯವು ದಾಳಿಮಾಡುವುದು, ಕೊನೆಗೆ ಅವನೇ ಅವರನ್ನು ಓಡಿಸಿಬಿಡುವನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಗಾದನ ಮೇಲೆ ಸುಲಿಗೆ ಮಾಡುವವರು ಬೀಳಲು, ಇವನು ಅವರನ್ನು ಹಿಮ್ಮಟ್ಟಿಕೊಂಡು ಹೋಗುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ಗಾದನು ಗುರಿಯಾಗುವನು ಸುಲಿಗೆಗಾರರಾಕ್ರಮಣಕೆ ಓಡುವನಾ ದರೋಡೆಗಾರರನ್ನು ಹಿಮ್ಮೆಟ್ಟಿಕೊಂಡೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಗಾದನ ಸಂಗತಿ - ಸುಲಿಗೆಮಾಡುವವರು ದಂಡೆತ್ತಿ ಅವನ ಮೇಲೆ ಬೀಳಲು ಇವನು ಅವರನ್ನು ಹಿಮ್ಮೆಟ್ಟಿಕೊಂಡು ಹೋಗುವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 “ಒಂದು ಕಳ್ಳರ ಗುಂಪು ಗಾದನ ಮೇಲೆ ಆಕ್ರಮಣ ಮಾಡುವುದು. ಆದರೆ ಗಾದನು ಅವರನ್ನು ಓಡಿಸಿ ಬಿಡುವನು.” ಅಧ್ಯಾಯವನ್ನು ನೋಡಿ |
ಆದಕಾರಣ ಇಸ್ರಾಯೇಲಿನ ದೇವರು ಅಸ್ಸೀರಿಯದ ಅರಸನಾದ ಪೂಲನ ಆತ್ಮವನ್ನೂ ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸರನ ಆತ್ಮವನ್ನೂ ಪ್ರೇರಿಸಿದ್ದರಿಂದ, ಅವರು ಅವರನ್ನು ಸೆರೆಯಾಗಿ ಒಯ್ದರು. ಆ ರೂಬೇನ್ಯರನ್ನೂ, ಗಾದ್ಯರನ್ನೂ, ಮನಸ್ಸೆಯ ಅರ್ಧ ಗೋತ್ರದವರನ್ನೂ ಹಲಹ, ಹಾಬೋರ್, ಹಾರ, ಎಂಬ ಪ್ರಾಂತಗಳಿಗೂ ಗೋಜಾನ್ ನದಿಯ ಪ್ರದೇಶಗಳಿಗೂ ತೆಗೆದುಕೊಂಡು ಹೋದರು. ಅವರು ಇಂದಿನವರೆಗೂ ಅಲ್ಲಿಯೇ ಇದ್ದಾರೆ.