Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 47:29 - ಕನ್ನಡ ಸಮಕಾಲಿಕ ಅನುವಾದ

29 ಇಸ್ರಾಯೇಲನ ಮರಣದ ಸಮಯವು ಸಮೀಪಿಸಿದಾಗ, ಅವನು ತನ್ನ ಮಗ ಯೋಸೇಫನನ್ನು ಕರೆಯಿಸಿ ಅವನಿಗೆ, “ಈಗ ನಿನ್ನ ಸಮ್ಮುಖದಲ್ಲಿ ನಾನು ದಯೆ ಹೊಂದಿದ್ದೇಯಾದರೆ, ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಟ್ಟು, ನನಗೆ ಉಪಕಾರವನ್ನೂ, ನಂಬಿಗಸ್ತಿಕೆಯನ್ನೂ ತೋರಿಸು. ಈಜಿಪ್ಟಿನಲ್ಲಿ ನನ್ನನ್ನು ಹೂಳಿಡಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಇಸ್ರಾಯೇಲನಿಗೆ ಮರಣಕಾಲ ಸಮೀಪಿಸಿದಾಗ ಅವನು ತನ್ನ ಮಗನಾದ ಯೋಸೇಫನನ್ನು ಕರೆಯಿಸಿ, “ಈಗ ನಿನ್ನ ದೃಷ್ಟಿಯಲ್ಲಿ ನಾನು ದಯೆ ಹೊಂದ್ದಿದೆಯಾದ್ದರೆ ಪದ್ದತಿಯ ಪ್ರಕಾರ ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಟ್ಟು ನನಗೆ ಉಪಕಾರವನ್ನು ನಂಬಿಗಸ್ತಿಕೆಯಿಂದ ತೋರಿಸು. ನನ್ನನ್ನು ಐಗುಪ್ತದೇಶದಲ್ಲಿ ಸಮಾಧಿ ಮಾಡಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಯಕೋಬನಿಗೆ ಅಂತಿಮಕಾಲ ಹತ್ತಿರ ಆದಾಗ ಅವನು ತನ್ನ ಮಗ ಜೋಸೆಫನನ್ನು ಕರೆಸಿ, “ನನ್ನ ಮೇಲೆ ನಿನಗೆ ಪ್ರೀತಿಯಿದ್ದರೆ ನೀನು ನನ್ನ ಮಾತನ್ನು ಪ್ರೀತಿಯಿಂದಲೂ ಪ್ರಾಮಾಣಿಕತೆಯಿಂದಲೂ ನಡೆಸಿಕೊಡಬೇಕು. ಅದೇನೆಂದರೆ; ನನ್ನನ್ನು ಈಜಿಪ್ಟ್ ದೇಶದಲ್ಲಿ ಸಮಾಧಿ ಮಾಡಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಇಸ್ರಾಯೇಲನಿಗೆ ಅವಸಾನಕಾಲ ಸಮೀಪಿಸಿದಾಗ ಅವನು ತನ್ನ ಮಗನಾದ ಯೋಸೇಫನನ್ನು ಕರಸಿ - ನಿನಗೆ ನನ್ನ ಮೇಲೆ ಪ್ರೀತಿಯಿದ್ದರೆ ನೀನು ನಂಬಿಕೆಯಿಂದಲೂ ಪ್ರೀತಿಯಿಂದಲೂ ನನ್ನ ಮಾತನ್ನು ನಡಿಸಬೇಕು; ಏನಂದರೆ, ನನಗೆ ಐಗುಪ್ತ ದೇಶದಲ್ಲಿ ಸಮಾಧಿಮಾಡಬೇಡವೆಂದು ಕೇಳಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಇಸ್ರೇಲನು ಸಾಯುವ ಕಾಲ ಸಮೀಪಿಸಿತು. ಅವನಿಗೆ ತಾನು ಸಾಯುತ್ತೇನೆಂದು ತಿಳಿದು ಬಂದಾಗ, ತನ್ನ ಮಗನಾದ ಯೋಸೇಫನನ್ನು ಕರೆಯಿಸಿ, “ನೀನು ನನ್ನನ್ನು ಪ್ರೀತಿಸುವುದಾದರೆ, ನಿನ್ನ ಕೈಯನ್ನು ನನ್ನ ತೊಡೆಯ ಕೆಳಗಿಟ್ಟು ಪ್ರಮಾಣಮಾಡು. ನಾನು ಹೇಳಿದ್ದನ್ನು ನಡೆಸುವುದಾಗಿಯೂ ನನಗೆ ನಂಬಿಗಸ್ತನಾಗಿರುವುದಾಗಿಯೂ ಪ್ರಮಾಣ ಮಾಡು. ನಾನು ಸತ್ತಾಗ, ನನ್ನನ್ನು ಈಜಿಪ್ಟಿನಲ್ಲಿ ಸಮಾಧಿ ಮಾಡಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 47:29
28 ತಿಳಿವುಗಳ ಹೋಲಿಕೆ  

ಇದಲ್ಲದೆ ಯೆಹೋವ ದೇವರು ಮೋಶೆಗೆ, “ಇಗೋ, ನೀನು ಸಾಯುವ ದಿನಗಳು ಸಮೀಪವಾದವು. ಯೆಹೋಶುವನನ್ನು ಕರೆದು ನೀವು ದೇವದರ್ಶನ ಗುಡಾರದಲ್ಲಿ ನಿಂತುಕೊಳ್ಳಿರಿ. ಆಗ ಅವನಿಗೆ ಅಧಿಕಾರ ಕೊಡುವೆನು,” ಎಂದರು. ಆ ಪ್ರಕಾರವೆ ಮೋಶೆಯೂ, ಯೆಹೋಶುವನೂ ಹೋಗಿ ದೇವದರ್ಶನ ಗುಡಾರದಲ್ಲಿ ನಿಂತುಕೊಂಡರು.


ಆದ್ದರಿಂದ ನೀವು ನನ್ನ ಯಜಮಾನನಿಗೆ ದಯೆಯಿಂದಲೂ ನಂಬಿಗಸ್ತಿಕೆಯಿಂದಲೂ ವರ್ತಿಸುವುದಾದರೆ ನನಗೆ ತಿಳಿಸಿರಿ. ಇಲ್ಲದಿದ್ದರೂ ನನಗೆ ತಿಳಿಸಿರಿ. ಆಗ ನಾನು ಬಲಗಡೆಯಾದರೂ, ಎಡಗಡೆಯಾದರೂ ತಿರುಗಿಕೊಂಡುಹೋಗುವೆನು,” ಎಂದನು.


ಅಬ್ರಹಾಮನು ತನಗೆ ಇದ್ದವುಗಳ ಮೇಲೆಲ್ಲಾ ಆಡಳಿತ ಮಾಡುವ ತನ್ನ ಮನೆಯ ಹಿರಿಯ ಸೇವಕನಿಗೆ, “ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಡು,


ಆದರೆ ದಾವೀದನ ಸಾಯುವ ಕಾಲ ಸಮೀಪಿಸಿದ್ದರಿಂದ ಅವನು ತನ್ನ ಮಗ ಸೊಲೊಮೋನನಿಗೆ ಆಜ್ಞಾಪಿಸಿದ್ದೇನೆಂದರೆ,


ನಂಬಿಕೆಯಿಂದಲೇ ಯೋಸೇಫನು ಸಾಯುವಾಗ ಇಸ್ರಾಯೇಲರು ಹೊರಡುವುದನ್ನು ಕುರಿತು ಮಾತನಾಡಿ ತನ್ನ ಎಲುಬುಗಳ ವಿಷಯದಲ್ಲಿ ಅಪ್ಪಣೆಕೊಟ್ಟನು.


ಒಂದೇ ಸಾರಿ ಸಾಯುವುದೂ ತರುವಾಯ ನ್ಯಾಯತೀರ್ಪು ಪಡೆಯುವುದೂ ಮನುಷ್ಯರಿಗಾಗಿ ನೇಮಕವಾಗಿದೆ.


ಮರಣವನ್ನು ಕಾಣದೆ ಬದುಕುವಂಥವರು ಯಾರು? ಸಮಾಧಿಯ ಶಕ್ತಿಯಿಂದ ಪ್ರಾಣವನ್ನು ತಪ್ಪಿಸಿಕೊಳ್ಳುವಂಥವರು ಯಾರು?


ಮನುಷ್ಯರು ಮರಣ ನಾಶವನ್ನು ಕಾಣದೆ, ಶಾಶ್ವತವಾಗಿ ಬದುಕುವಂತೆ ಮಾಡಲು ಯಾರಿಗೂ ಸಾಧ್ಯವಿಲ್ಲ.


ಯಾರೂ ಇನ್ನೊಬ್ಬರ ಜೀವವನ್ನು ವಿಮೋಚಿಸಲಾರರು; ಅಥವಾ ಇತರರಿಗಾಗಿ ಯಾರೂ ದೇವರಿಗೆ ಈಡು ಕೊಡಲಾರರು.


ಸತ್ತವರಲ್ಲಿ ನಿಮ್ಮನ್ನು ಸ್ಮರಿಸುವವರಿಲ್ಲ. ಪಾತಾಳದಲ್ಲಿ ನಿಮ್ಮನ್ನು ಸ್ತುತಿಸುವವರು ಯಾರು?


ದೇವರೇ, ನೀವು ನನ್ನನ್ನು ಎಲ್ಲಾ ಜೀವಿಗಳಿಗೆ ನೇಮಕವಾದ ಮನೆಯೆಂಬ ಮರಣಕ್ಕೆ, ಸೇರಿಸುವಿರಿ ಎಂದು ನನಗೆ ಗೊತ್ತಿದೆ.


ಒಬ್ಬ ಮನುಷ್ಯನು ಸತ್ತರೆ ಅವನು ತಿರುಗಿ ಬದುಕುವನೋ? ಆದರೂ ನನಗೆ ನೇಮಕ ಮಾಡಿದ ಪರಿಶ್ರಮದ ದಿನವೆಲ್ಲಾ, ನನಗೆ ಬಿಡುಗಡೆಯಾಗುವವರೆಗೆ ನಾನು ಕಾದುಕೊಂಡಿರುವೆನು.


“ಮನುಷ್ಯರಿಗೆ ಭೂಮಿಯಲ್ಲಿ ಕಠಿಣ ದುಡಿತ ಇಲ್ಲವೇ? ಮಾನವನ ದಿನಗಳು ಜೀತದಾಳಿನ ದಿನಗಳ ಹಾಗಲ್ಲವೋ?


ನಾವೆಲ್ಲರೂ ಸಾಯುವುದು ಅವಶ್ಯವೇ. ನಾವು ನೆಲದ ಮೇಲೆ ಚೆಲ್ಲಿ ತಿರುಗಿ ತುಂಬಿಕೊಳ್ಳಲಾಗದ ನೀರಿನ ಹಾಗೆ ಇದ್ದೇವೆ. ಆದರೆ ದೇವರು ಹಾಗೆ ಯಾರ ಪ್ರಾಣವನ್ನೂ ತೆಗೆಯ ಬಯಸುವವರಲ್ಲ. ಅದಕ್ಕೆ ಬದಲಾಗಿ ಬಹಿಷ್ಕಾರವಾದವವರನ್ನು ತಿರುಗಿ ತಮ್ಮ ಬಳಿಗೆ ಬರುವಂತೆ ದೇವರು ಸದುಪಾಯಗಳನ್ನು ಕಲ್ಪಿಸುವವರಾಗಿದ್ದಾರೆ.


ನಿನ್ನ ಆಯುಷ್ಕಾಲವು ಮುಗಿದ ಮೇಲೆ ನೀನು ನಿನ್ನ ಪಿತೃಗಳ ಜೊತೆ ವಿಶ್ರಮಿಸುವಾಗ, ನಾನು ನಿನ್ನ ಸಂತತಿಯಲ್ಲಿ ಒಬ್ಬನನ್ನು ನಿನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಿ, ಅವನ ರಾಜ್ಯವನ್ನು ಸ್ಥಿರಮಾಡುವೆನು.


ಯಾಕೋಬನು ಫರೋಹನಿಗೆ, “ನಾನು ಲೋಕದಲ್ಲಿ ಸಂಚಾರಮಾಡಿದ್ದು ನೂರಮೂವತ್ತು ವರುಷಗಳೇ. ನನ್ನ ವರ್ಷಗಳು ಕಡಿಮೆಯಾದರೂ ಕಠಿಣವಾದವುಗಳು ಆಗಿವೆ. ಅವು ನನ್ನ ಪಿತೃಗಳ ಪ್ರಯಾಣದ ವರ್ಷಗಳಿಗೆ ಸಮವಾಗಿಲ್ಲ,” ಎಂದನು.


ನೀನು ಪುನಃ ಮಣ್ಣಿಗೆ ಸೇರುವ ತನಕ, ಬೆವರಿಡುತ್ತಾ ಆಹಾರವನ್ನು ಉಣ್ಣುವೆ. ನೀನು ಮಣ್ಣಿನಿಂದ ತೆಗೆದವನಾಗಿರುವುದರಿಂದ ನೀನು ಮಣ್ಣೇ. ನೀನು ಪುನಃ ಮಣ್ಣಿಗೆ ಸೇರತಕ್ಕವನು.”


ಆಗ ಇಸಾಕನು, “ಇಗೋ, ಈಗ ನಾನು ಮುದುಕನಾಗಿದ್ದೇನೆ. ನನ್ನ ಸಾವಿನ ದಿನವನ್ನು ಅರಿಯೆನು.


‘ನನಗೆ ನನ್ನ ತಂದೆ, “ನಾನು ಸಾಯುತ್ತೇನೆ, ನಾನು ಕಾನಾನ್ ದೇಶದಲ್ಲಿ ನನಗೋಸ್ಕರ ಅಗೆದ ನನ್ನ ಸಮಾಧಿಯಲ್ಲಿಯೇ ನನ್ನನ್ನು ಸಮಾಧಿಮಾಡಬೇಕು,” ಎಂದು ನನ್ನಿಂದ ಪ್ರಮಾಣ ಮಾಡಿಸಿದ್ದಾನೆ.’ ಹೀಗಿರುವುದರಿಂದ ನಾನು ಹೋಗಿ ನನ್ನ ತಂದೆಯನ್ನು ಹೂಳಿ, ತಿರುಗಿ ಬರುವ ಹಾಗೆ ಅಪ್ಪಣೆಯಾಗಬೇಕು,” ಎಂದನು.


ಇದಲ್ಲದೆ ಇನ್ನೂ ದಾವೀದನು, “ಯೆಹೋವ ದೇವರ ಜೀವದಾಣೆ, ಯೆಹೋವ ದೇವರೇ ಅವನನ್ನು ಹೊಡೆಯುವರು, ಇಲ್ಲವೆ ಅವನ ಕಾಲ ಬಂದು ಅವನು ಸಾಯುವನು, ಇಲ್ಲವೆ ಯುದ್ಧಕ್ಕೆ ಹೋಗಿ ನಾಶವಾಗುವನು.


ಅವರು ಅಸಾಯೇಲನನ್ನು ಎತ್ತಿಕೊಂಡು ಬೇತ್ಲೆಹೇಮಿನಲ್ಲಿರುವ ಅವನ ತಂದೆಯ ಸಮಾಧಿಯಲ್ಲಿ ಹೂಳಿಟ್ಟರು. ಯೋವಾಬನೂ, ಅವನ ಜನರೂ ರಾತ್ರಿಯೆಲ್ಲಾ ನಡೆದು ಉದಯವಾದಾಗ ಹೆಬ್ರೋನಿಗೆ ಬಂದರು.


ಆಗ ಇಸ್ರಾಯೇಲನು ಯೋಸೇಫನಿಗೆ, “ನಾನು ಸಾಯುತ್ತೇನೆ, ಆದರೆ ದೇವರು ನಿಮ್ಮ ಸಂಗಡವಿದ್ದು, ನಿಮ್ಮನ್ನು ನಿಮ್ಮ ಪಿತೃಗಳ ದೇಶಕ್ಕೆ ಮತ್ತೆ ಸೇರಿಸುವರು.


ಯಾಕೋಬನು ತನ್ನ ಪುತ್ರರಿಗೆ ಆಜ್ಞಾಪಿಸಿದ ಪ್ರಕಾರ ಅವನಿಗೆ ಮಾಡಿದರು.


ಆಗ ಯೆಹೋವ ದೇವರು ಮೋಶೆಗೆ, “ನೀನು ಮೃತನಾಗಿ, ನಿನ್ನ ಪಿತೃಗಳ ಸಂಗಡ ಸೇರುವಿ. ಈ ಜನರು ದೇವದ್ರೋಹಿಗಳಾಗಿ, ಅವರು ಪ್ರವೇಶಿಸುವ ದೇಶದ ಅನ್ಯದೇವರುಗಳನ್ನು ಅನುಸರಿಸಿ ಪೂಜೆ ಮಾಡಿ, ನನ್ನನ್ನು ಬಿಟ್ಟು ನಾನು ಅವರ ಸಂಗಡ ಮಾಡಿದ ಒಡಂಬಡಿಕೆಯನ್ನು ಮೀರುವರು.


ಆಗ ಅವರು ಆಕೆಗೆ, “ನೀನು ಈ ನಮ್ಮ ಕಾರ್ಯವನ್ನು ಬಹಿರಂಗ ಮಾಡದೆ ಇದ್ದರೆ, ನಾವು ನಿಮ್ಮ ಪ್ರಾಣಕ್ಕೆ ಹೊಣೆಯಾಗಿ ಇರುವೆವು. ಯೆಹೋವ ದೇವರು ನಮಗೆ ದೇಶವನ್ನು ಕೊಟ್ಟಾಗ, ಸತ್ಯದಿಂದಲೂ, ದಯೆಯಿಂದಲೂ ನಡೆದುಕೊಳ್ಳುವೆವು,” ಎಂದರು.


“ಭೂನಿವಾಸಿಗಳೆಲ್ಲರು ಹೋಗುವ ಮಾರ್ಗವಾಗಿ ಇಂದು ನಾನು ಹೋಗಬೇಕಾಗಿದೆ. ನಿಮ್ಮ ದೇವರಾದ ಯೆಹೋವ ದೇವರು ನಿಮಗೋಸ್ಕರ ಹೇಳಿದ ಎಲ್ಲಾ ಒಳ್ಳೆಯ ವಾಗ್ದಾನಗಳಲ್ಲಿ ಒಂದೂ ತಪ್ಪಲಿಲ್ಲವೆಂದು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಪ್ರಾಣದಿಂದಲೂ ಅರಿತಿದ್ದೀರಿ. ಅವುಗಳಲ್ಲಿ ಒಂದು ಮಾತಾದರೂ ತಪ್ಪದೆ ಅವೆಲ್ಲಾ ನಿಮಗೆ ಸಂಭವಿಸಿದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು