Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 47:16 - ಕನ್ನಡ ಸಮಕಾಲಿಕ ಅನುವಾದ

16 ಆಗ ಯೋಸೇಫನು, “ನಿಮ್ಮ ಪಶುಗಳನ್ನು ತೆಗೆದುಕೊಂಡು ಬನ್ನಿರಿ, ಹಣ ತೀರಿದ್ದೇಯಾದರೆ, ನಿಮ್ಮ ಪಶುಗಳಿಗೆ ಬದಲಾಗಿ ಧಾನ್ಯವನ್ನು ಕೊಡುತ್ತೇನೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಅದಕ್ಕೆ ಯೋಸೇಫನು, “ನಿಮ್ಮ ಕುರಿದನಗಳನ್ನು ತೆಗೆದುಕೊಂಡು ಬನ್ನಿರಿ; ಹಣವಿಲ್ಲದಿದ್ದರೆ ಕುರಿದನಗಳನ್ನು ತೆಗೆದುಕೊಂಡು, ಧಾನ್ಯವನ್ನು ನಿಮಗೆ ಕೊಡುತ್ತೇನೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಜೋಸೆಫನು, “ನಿಮ್ಮ ದನಕರುಗಳನ್ನು ತನ್ನಿ, ಹಣವಿಲ್ಲದಿದ್ದರೆ ದನಕರುಗಳನ್ನು ತೆಗೆದುಕೊಂಡು ಧಾನ್ಯ ಕೊಡಿಸುತ್ತೇನೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಅದಕ್ಕೆ ಯೋಸೇಫನು - ನಿಮ್ಮ ದನಗಳನ್ನು ತನ್ನಿರಿ; ಹಣವಿಲ್ಲದಿದ್ದರೆ ದನಗಳನ್ನು ತೆಗೆದುಕೊಂಡು ಧಾನ್ಯವನ್ನು ಕೊಡಿಸುತ್ತೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಅದಕ್ಕೆ ಯೋಸೇಫನು, “ನಿಮ್ಮ ದನಕರುಗಳನ್ನು ನನಗೆ ಕೊಡಿರಿ, ನಾನು ನಿಮಗೆ ಆಹಾರವನ್ನು ಕೊಡುತ್ತೇನೆ” ಎಂದು ಉತ್ತರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 47:16
7 ತಿಳಿವುಗಳ ಹೋಲಿಕೆ  

ಪ್ರತಿಯೊಂದು ಅವಕಾಶವನ್ನೂ ಸದುಪಯೋಗ ಮಾಡಿಕೊಂಡು ಹೊರಗಿನವರೊಂದಿಗೆ ಜಾಣತನದಿಂದ ನಡೆದುಕೊಳ್ಳಿರಿ.


ಕಡೆಯದಾಗಿ ಪ್ರಿಯರೇ, ಯಾವುದು ಸತ್ಯವೂ ಯಾವುದು ಮಾನ್ಯವೂ ಯಾವುದು ನ್ಯಾಯವೂ ಯಾವುದು ಶುದ್ಧವೂ ಯಾವುದು ಪ್ರೀತಿಕರವೂ ಯಾವುದು ಮನೋಹರವೂ ಯಾವುದು ಉತ್ತಮವಾದದ್ದೋ ಯಾವುದು ಕೀರ್ತಿಗೆ ಯೋಗ್ಯವೋ ಅವೆಲ್ಲವುಗಳನ್ನೇ ಆಲೋಚಿಸಿರಿ.


ಯೆಹೂದ್ಯರಿಗಾಗಲಿ, ಗ್ರೀಕರಿಗಾಗಲಿ, ದೇವರ ಸಭೆಗಾಗಲಿ ವಿಘ್ನವಾಗಬೇಡಿರಿ.


ಒಬ್ಬ ಪ್ರಾಮಾಣಿಕ ಸಾಕ್ಷಿ ಸತ್ಯವನ್ನು ಹೇಳುತ್ತಾನೆ, ಆದರೆ ಸುಳ್ಳುಸಾಕ್ಷಿಯು ಸುಳ್ಳನ್ನು ಹೇಳುತ್ತಾನೆ.


ಈಜಿಪ್ಟ್ ದೇಶದಲ್ಲಿಯೂ, ಕಾನಾನ್ ದೇಶದಲ್ಲಿಯೂ ಹಣವು ಮುಗಿದಾಗ, ಈಜಿಪ್ಟಿನವರೆಲ್ಲರೂ ಯೋಸೇಫನ ಬಳಿಗೆ ಬಂದು, “ನಮಗೆ ಆಹಾರವನ್ನು ಕೊಡು, ನಾವು ನಿನ್ನ ಮುಂದೆ ಏಕೆ ಸಾಯಬೇಕು? ಏಕೆಂದರೆ ಹಣವೆಲ್ಲಾ ತೀರಿತು,” ಎಂದರು.


ಅವರು ತಮ್ಮ ಪಶುಗಳನ್ನೆಲ್ಲಾ ಯೋಸೇಫನ ಬಳಿಗೆ ತಂದರು. ಅವುಗಳ ಬದಲಾಗಿ ಅವನು ಆಹಾರ ಧಾನ್ಯ ಕೊಟ್ಟನು. ಅವರ ಕುದುರೆಗಳನ್ನೂ ಕುರಿಗಳನ್ನೂ ಆಡುಗಳನ್ನೂ ದನಗಳನ್ನೂ ಕತ್ತೆಗಳನ್ನೂ ಬದಲಾಗಿ ತೆಗೆದುಕೊಂಡನು. ಆ ವರ್ಷ ಅವರು ಆಹಾರಕ್ಕಾಗಿ ತಮ್ಮ ಎಲ್ಲಾ ಪಶುಪ್ರಾಣಿಗಳನ್ನು ಮಾರಿಕೊಂಡರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು