Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 45:22 - ಕನ್ನಡ ಸಮಕಾಲಿಕ ಅನುವಾದ

22 ಅವರೆಲ್ಲರಿಗೆ ಬದಲು ವಸ್ತ್ರಗಳನ್ನೂ, ಬೆನ್ಯಾಮೀನನಿಗೆ ಮುನ್ನೂರು ಬೆಳ್ಳಿಯ ನಾಣ್ಯಗಳನ್ನೂ, ಐದು ಬದಲು ವಸ್ತ್ರಗಳನ್ನೂ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಇದಲ್ಲದೆ ಪ್ರತಿಯೊಬ್ಬನಿಗೂ ಶ್ರೇಷ್ಠ ವಸ್ತ್ರಗಳನ್ನು ಕೊಟ್ಟನು. ಬೆನ್ಯಾಮೀನನಿಗೋ ಮುನ್ನೂರು ಬೆಳ್ಳಿ ನಾಣ್ಯಗಳನ್ನೂ ಹಾಗೂ ಐದು ಶ್ರೇಷ್ಠ ವಸ್ತ್ರಗಳನ್ನೂ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಅದೂ ಅಲ್ಲದೆ, ಪ್ರತಿಯೊಬ್ಬನಿಗೂ ಶ್ರೇಷ್ಠವಾದ ಹೊಸ ಬಟ್ಟೆಗಳನ್ನು ಕೊಟ್ಟನು. ಬೆನ್ಯಾಮೀನನಿಗಾದರೋ ಮುನ್ನೂರು ಬೆಳ್ಳಿನಾಣ್ಯಗಳನ್ನು ಹಾಗು ಐದು ಶ್ರೇಷ್ಠವಾದ ಹೊಸಬಟ್ಟೆಗಳನ್ನು ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಇದಲ್ಲದೆ ಪ್ರತಿಯೊಬ್ಬನಿಗೂ ಶ್ರೇಷ್ಠ ವಸ್ತ್ರಗಳನ್ನೂ ಕೊಟ್ಟನು; ಬೆನ್ಯಾಮೀನನಿಗೋ ಮುನ್ನೂರು ರೂಪಾಯಿಗಳನ್ನೂ ಐದು ಶ್ರೇಷ್ಠ ವಸ್ತ್ರಗಳನ್ನೂ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಯೋಸೇಫನು ಪ್ರತಿಯೊಬ್ಬ ಸಹೋದರನಿಗೂ ಒಂದೊಂದು ಜೊತೆ ಸುಂದರವಾದ ಉಡುಪುಗಳನ್ನು ಕೊಟ್ಟನು. ಆದರೆ ಬೆನ್ಯಾಮೀನನಿಗೆ ಮಾತ್ರ ಐದು ಜೊತೆ ಸುಂದರವಾದ ಉಡುಪುಗಳನ್ನೂ ಮುನ್ನೂರು ಬೆಳ್ಳಿಯ ನಾಣ್ಯಗಳನ್ನೂ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 45:22
7 ತಿಳಿವುಗಳ ಹೋಲಿಕೆ  

ಯೋಸೇಫನು ತನ್ನ ಮುಂದಿಟ್ಟಿದ್ದ ಆಹಾರವನ್ನು ಕಳುಹಿಸಿದಾಗ, ಬೆನ್ಯಾಮೀನನಿಗೆ ಕಳುಹಿಸಿದ ಆಹಾರವು ಅವರೆಲ್ಲರ ಆಹಾರಗಳಿಗಿಂತ ಐದರಷ್ಟು ಹೆಚ್ಚಾಗಿತ್ತು ಮತ್ತು ಅವರು ಅವನ ಸಂಗಡ ಕುಡಿದು ಸಂತೋಷದಿಂದಿದ್ದರು.


ಅರಾಮ್ಯರ ಅರಸನು, “ನೀನು ಹೋಗಿ ಬಾ. ನಾನು ಇಸ್ರಾಯೇಲಿನ ಅರಸನಿಗೆ ಪತ್ರವನ್ನು ಕಳುಹಿಸುವೆನು,” ಎಂದನು. ಅದರಂತೆ ನಾಮಾನನು 340 ಕಿಲೋಗ್ರಾಂ ಬೆಳ್ಳಿ, 64 ಕಿಲೋಗ್ರಾಂ ಬಂಗಾರ, ಹತ್ತು ಜೊತೆ ಬಟ್ಟೆಗಳನ್ನೂ ತೆಗೆದುಕೊಂಡು ಹೋದನು.


ಅವರಿಗೆ ಸಂಸೋನನು, “ನಾನು ನಿಮಗೆ ಒಂದು ಒಗಟನ್ನು ಹೇಳುವೆನು; ನೀವು ಅದನ್ನು ಔತಣದ ಈ ಏಳು ದಿವಸಗಳಲ್ಲಿ ಗ್ರಹಿಸಿಕೊಂಡು ಹೇಳಿದರೆ, ನಾನು ನಿಮಗೆ ಮೂವತ್ತು ದುಪ್ಪಟಿಗಳನ್ನು, ಮೂವತ್ತು ಜೊತೆ ಬಟ್ಟೆಗಳನ್ನು ಕೊಡುವೆನು.


ಆಗ ಅವರಲ್ಲಿ ಪ್ರತಿಯೊಬ್ಬನಿಗೆ ಬಿಳೀ ನಿಲುವಂಗಿಯು ಕೊಡಲಾಗಿತ್ತು. ಇನ್ನು ಸ್ವಲ್ಪಕಾಲ ಅವರಂತೆಯೇ ವಧಿಸಲಾಗಬೇಕಾಗಿರುವ ಅವರ ಜೊತೆ ಸೇವಕರ ಮತ್ತು ಸಹೋದರರ ಸಂಖ್ಯೆ ಪೂರ್ಣಗೊಳ್ಳುವ ತನಕ ಕಾದಿರಬೇಕೆಂದು ಅವರಿಗೆ ಹೇಳಲಾಯಿತು.


ಯೆಹೋವ ದೇವರ ಆತ್ಮ ಅವನ ಮೇಲೆ ಬಂದದ್ದರಿಂದ, ಅವನು ಅಷ್ಕೆಲೋನಿಗೆ ಹೋಗಿ, ಆ ಊರಿನಲ್ಲಿ ಮೂವತ್ತು ಜನರನ್ನು ವಧಿಸಿ, ಸುಲಿದುಕೊಂಡು ಒಗಟನ್ನು ತಿಳಿಸಿದವರಿಗೆ ದುಸ್ತು ವಸ್ತ್ರಗಳನ್ನು ಕೊಟ್ಟನು.


ಇದಲ್ಲದೆ ಅವನು ತನ್ನ ತಂದೆಗೆ ಹತ್ತು ಕತ್ತೆಗಳು ಹೊರುವಷ್ಟು ಈಜಿಪ್ಟಿನ ಶ್ರೇಷ್ಠವಾದವುಗಳನ್ನೂ, ಪ್ರಯಾಣಕ್ಕೋಸ್ಕರ ತಂದೆಗೆ ಹತ್ತು ಹೆಣ್ಣು ಕತ್ತೆಗಳು ಹೊರುವಷ್ಟು ಗೋಧಿ, ರೊಟ್ಟಿ, ಆಹಾರಗಳನ್ನೂ ಕಳುಹಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು