Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 45:1 - ಕನ್ನಡ ಸಮಕಾಲಿಕ ಅನುವಾದ

1 ಆಗ ಯೋಸೇಫನು ತನ್ನ ಸುತ್ತಲೂ ನಿಂತಿದ್ದವರ ಮುಂದೆ ಮನಸ್ಸನ್ನು ಬಿಗಿಹಿಡಿದುಕೊಳ್ಳಲು ಆಗಲಿಲ್ಲ. “ಎಲ್ಲರನ್ನೂ ತನ್ನ ಬಳಿಯಿಂದ ಹೊರಗೆ ಹೋಗುವಂತೆ ಮಾಡಿರಿ,” ಎಂದು ಕೂಗಿದನು. ಯೋಸೇಫನು ತನ್ನ ಸಹೋದರರಿಗೆ ತನ್ನನ್ನು ಪರಿಚಯಿಸಿಕೊಳ್ಳಲು ಹೋದಾಗ, ಅಲ್ಲಿ ಬೇರೆ ಯಾರೂ ಇರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಯೋಸೇಫನು ಇದನ್ನು ಕೇಳಿ ತನ್ನ ಎದುರಿನಲ್ಲಿ ನಿಂತಿದ್ದವರ ಮುಂದೆ ದುಃಖವನ್ನು ತಾಳಲಾರದೆ, “ಎಲ್ಲರನ್ನು ನನ್ನ ಬಳಿಯಿಂದ ಹೊರಗೆ ಕಳುಹಿಸಿರಿ” ಎಂದು ಕೂಗಿದನು. ಯೋಸೇಫನು ತನ್ನ ಅಣ್ಣತಮ್ಮಂದಿರಿಗೆ ತನ್ನ ಗುರುತು ಸಿಕ್ಕುವಂತೆ ಮಾಡುವ ವೇಳೆಯಲ್ಲಿ ಬೇರೆ ಯಾರೂ ಹತ್ತಿರ ಇರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಇದನ್ನು ಕೇಳಿದ ಮೇಲೆ ತನ್ನ ಪರಿವಾರದವರ ಮುಂದೆ, ತನ್ನನ್ನೇ ಇನ್ನು ತಡೆಹಿಡಿದುಕೊಳ್ಳಲು ಜೋಸೆಫನಿಂದ ಆಗಲಿಲ್ಲ. “ಇಲ್ಲಿಂದ ಎಲ್ಲರನ್ನು ಆಚೆ ಕಳಿಸಿರಿ,” ಎಂದು ಬಾಯ್ತೆರೆದು ಹೇಳಿದ. ಜೋಸೆಫನ ಅಣ್ಣತಮ್ಮಂದಿರಿಗೆ ತನ್ನ ಪರಿಚಯ ಸಿಗುವಂತೆ ಮಾಡುವಾಗ ಇತರರು ಯಾರೂ ಹತ್ತಿರ ಇರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಯೋಸೇಫನು ಇದನ್ನು ಕೇಳಿ ತನ್ನ ಎದುರಿನಲ್ಲಿದ್ದವರ ಮುಂದೆ ತಾಳಲಾರದೆ - ನನ್ನ ಬಳಿಯಿಂದ ಎಲ್ಲರನ್ನೂ ಆಚೆಗೆ ಕಳುಹಿಸಿರಿ ಎಂದು ಬಾಯಿಬಿಟ್ಟು ಹೇಳಿದನು. ಯೋಸೇಫನು ಅಣ್ಣತಮ್ಮಂದಿರಿಗೆ ತನ್ನ ಗುರುತು ಸಿಕ್ಕುವಂತೆ ಮಾಡುವ ವೇಳೆಯಲ್ಲಿ ಇತರರು ಯಾರೂ ಹತ್ತರ ಇರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಯೋಸೇಫನು ಇದನ್ನು ಕೇಳಿ ತನ್ನ ಎದುರಿನಲ್ಲಿದ್ದವರ ಮುಂದೆ ತಾಳಿಕೊಳ್ಳಲಾರದೆ, “ಇಲ್ಲಿರುವ ಎಲ್ಲರನ್ನೂ ಹೊರಗೆ ಕಳುಹಿಸಿರಿ” ಎಂದು ಅಪ್ಪಣೆಕೊಟ್ಟನು. ಅಲ್ಲಿದ್ದವರು ಹೊರಗೆ ಹೋದರು; ಸಹೋದರರು ಮಾತ್ರ ಯೋಸೇಫನೊಡನೆ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 45:1
12 ತಿಳಿವುಗಳ ಹೋಲಿಕೆ  

“ನಿನ್ನ ಸಹೋದರ ಅಥವಾ ಸಹೋದರಿ ಪಾಪಮಾಡಿದರೆ, ನೀವಿಬ್ಬರೇ ಇರುವಾಗ ಹೋಗಿ ಅವರನ್ನು ಖಂಡಿಸು. ಅವರು ನಿನಗೆ ಕಿವಿಗೊಟ್ಟರೆ ನೀನು ನಿನ್ನ ಸಹೋದರ ಅಥವಾ ಸಹೋದರಿಯನ್ನು ಗೆದ್ದುಕೊಂಡಿರುವೆ.


ಪ್ರೀತಿಯು ಇತರರನ್ನು ಅವಮಾನಪಡಿಸುವುದಿಲ್ಲ, ಸ್ವಹಿತವನ್ನೇ ಹುಡುಕುವುದಿಲ್ಲ, ಸುಲಭವಾಗಿ ಸಿಟ್ಟುಗೊಳ್ಳುವುದಿಲ್ಲ, ಅಪಕಾರವನ್ನು ಎಣಿಸುವುದಿಲ್ಲ,


ಯೇಸುವನ್ನು ಎಲ್ಲರೂ ನೋಡಲಿಲ್ಲ. ಆದರೆ ದೇವರು ಮೊದಲೇ ನೇಮಿಸಿಕೊಂಡ ಸಾಕ್ಷಿಗಳಾಗಿರುವ ನಮಗೆ ಕಾಣಿಸಿಕೊಂಡರು. ಯೇಸು ಸತ್ತವರೊಳಗಿಂದ ಜೀವಂತವಾಗಿ ಎದ್ದು ಬಂದ ತರುವಾಯ ಅವರೊಡನೆ ಊಟ, ಪಾನಮಾಡಿದ ನಮಗೆ ಕಾಣಿಸಿಕೊಂಡರು.


“ಆಗ ನಾನು ಆತನನ್ನು ಕುರಿತು ಏನೂ ಹೇಳುವುದಿಲ್ಲ. ಆತನ ಹೆಸರಿನಲ್ಲಿ ಇನ್ನು ಮಾತನಾಡುವುದೇ ಇಲ್ಲ,” ಎಂದು ಅಂದುಕೊಂಡೆನು. ಆದರೆ ಆತನ ವಾಕ್ಯವು ನನ್ನ ಎಲುಬುಗಳಲ್ಲಿ ಮುಚ್ಚಲಾಗಿರುವ ಸುಡುವ ಬೆಂಕಿಯ ಹಾಗೆ ನನ್ನ ಹೃದಯದಲ್ಲಿ ಇತ್ತು. ಬಿಗಿ ಹಿಡಿದು ದಣಿದೆನು. ನನ್ನಿಂದ ಆಗದೆ ಹೋಯಿತು.


“ಬಹುಕಾಲದಿಂದ ಸುಮ್ಮನೆ ಮೌನವಾಗಿ ನನ್ನನ್ನು ಬಿಗಿಹಿಡಿದಿದ್ದೆನು. ಈಗ ನಾನು ಹೆರುವವಳಂತೆ ಕೂಗುವೆನು. ನಾನು ನಾಶಮಾಡಿ, ಒಂದೇ ಸಾರಿ ನುಂಗಿಬಿಡುವೆನು.


“ಗತ್ ಊರಿನಲ್ಲಿ ಇದನ್ನು ತಿಳಿಸಬೇಡಿರಿ. ಅಷ್ಕೆಲೋನಿನ ಬೀದಿಗಳಲ್ಲಿ ಸಾರಬೇಡಿರಿ. ಫಿಲಿಷ್ಟಿಯರ ಪುತ್ರಿಯರು ಸಂತೋಷಪಡಬಾರದು; ಸುನ್ನತಿ ಇಲ್ಲದವರ ಪುತ್ರಿಯರು ಉತ್ಸಾಹಪಡಬಾರದು.


ಅವರು ಎರಡನೆಯ ಸಾರಿ ಅಲ್ಲಿಗೆ ಹೋದಾಗ, ಯೋಸೇಫನು ತಾನು ಯಾರೆಂಬುದನ್ನು ತನ್ನ ಸಹೋದರರಿಗೆ ತಿಳಿಸಿದನು. ಆಗ ಯೋಸೇಫನ ಕುಟುಂಬದ ಬಗ್ಗೆ ಫರೋಹನಿಗೆ ಗೊತ್ತಾಯಿತು.


ಹುಡುಗನು ನನ್ನ ಬಳಿಯಲ್ಲಿರದೆ, ನಾನು ಹೇಗೆ ನನ್ನ ತಂದೆಯ ಬಳಿಗೆ ಹೋಗಲಿ? ಹೋದರೆ ನನ್ನ ತಂದೆಗೆ ಬರುವ ಕೇಡನ್ನು ನಾನು ನೋಡಬೇಕಾದೀತು,” ಎಂದನು.


ಪಾತ್ರೆ ತೆಗೆದುಕೊಂಡು ಅವನ ಮುಂದೆ ಇಟ್ಟಳು. ಆದರೆ ಅಮ್ನೋನನು, “ನಾನು ಉಣ್ಣುವುದಿಲ್ಲ,” ಎಂದು ಹೇಳಿ, “ನನ್ನ ಬಳಿಯಿಂದ ಎಲ್ಲಾ ಮನುಷ್ಯರನ್ನು ಕಳುಹಿಸಿಬಿಡಿರಿ,” ಎಂದನು. ಹಾಗೆಯೇ ಎಲ್ಲರು ಅವನನ್ನು ಬಿಟ್ಟುಹೋದರು.


ಅನಂತರ ಯೋಸೇಫನು ಅವರ ಬಳಿಯಿಂದ ಹೊರಟುಹೋಗಿ ಅತ್ತನು. ಮತ್ತೆ ಅವರ ಬಳಿಗೆ ಬಂದು, ಅವರ ಸಂಗಡ ಮಾತನಾಡಿ ಅವರೊಂದಿಗೆ ಸಿಮೆಯೋನನನ್ನು ತಂದು, ಅವರ ಕಣ್ಣೆದುರಿನಲ್ಲಿ ಬಂಧಿಸಿ ಸೆರೆಯಲ್ಲಿ ಹಾಕಿದನು.


“ದಾವೀದನ ಮನೆತನದವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಕೃಪೆಯ ಆತ್ಮವನ್ನು ಮತ್ತು ಮೊರೆಯಿಡುವ ಮನೋಭಾವವನ್ನು ಸುರಿಸುವೆನು. ತಾವು ಇರಿದವನನ್ನು ಅವರು ದೃಷ್ಟಿಸಿನೋಡುವರು. ಒಬ್ಬನೇ ಮಗನ ನಿಮಿತ್ತ ಗೋಳಾಡುವವನ ಹಾಗೆ, ಆತನ ನಿಮಿತ್ತ ಗೋಳಾಡುವರು. ಚೊಚ್ಚಲ ಮಗನ ನಿಮಿತ್ತ ವ್ಯಥೆಪಡುವವನ ಹಾಗೆ ಆತನ ನಿಮಿತ್ತ ವ್ಯಥೆ ಪಡುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು