Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 44:31 - ಕನ್ನಡ ಸಮಕಾಲಿಕ ಅನುವಾದ

31 ಹುಡುಗನು ನಮ್ಮ ಸಂಗಡ ಇಲ್ಲದಿರುವುದನ್ನು ಕಂಡಾಗಲೇ ಅವನು ಸಾಯುವನು. ನಿನ್ನ ದಾಸನಾಗಿರುವ ನಮ್ಮ ತಂದೆಯ ಮುದಿ ತಲೆಯನ್ನು ದುಃಖದಿಂದ ಸಮಾಧಿಗೆ ನಿನ್ನ ದಾಸರು ಇಳಿಯುವಂತೆ ಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಈ ಹುಡುಗನು ನಮ್ಮ ಸಂಗಡ ಇಲ್ಲದೆ ಇರುವುದನ್ನು ತಿಳಿದ ಕೂಡಲೇ ನಮ್ಮ ತಂದೆಯು ಸಾಯುವನು. ತಮ್ಮ ಸೇವಕರಾದ ನಾವು ನಮ್ಮ ಮುಪ್ಪಾದ ತಂದೆ ದುಃಖದಿಂದಲೇ ಸಮಾಧಿಗೆ ಸೇರಲು ಕಾರಣರಾಗುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಆಗ ತಮ್ಮ ಸೇವಕರಾದ ನಾವು, ತಮ್ಮ ಸೇವಕ ಹಾಗು ನರೆಕೂದಲಿನ ಮುದುಕ ಆದ ನಮ್ಮ ತಂದೆ ಸಂಕಟದಿಂದಲೆ ಸಮಾಧಿ ಸೇರಲು ಕಾರಣರಾಗುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಹೀಗೆ ಸ್ವಾವಿುಯ ಸೇವಕರಾದ ನಾವು ನಿನ್ನ ಸೇವಕನಾದ ನಮ್ಮ ತಂದೆಯ ಮುದಿತಲೆ ದುಃಖದಿಂದಲೇ ಪಾತಾಳಕ್ಕೆ ಸೇರಲು ಕಾರಣರಾಗುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ನಮ್ಮ ತಂದೆಯೂ ಆ ಕೂಡಲೇ ಸತ್ತುಹೋಗುವನು; ನಮ್ಮ ತಂದೆ ದುಃಖದಿಂದ ಸಾಯಲು ನಾವೇ ಕಾರಣರಾಗುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 44:31
8 ತಿಳಿವುಗಳ ಹೋಲಿಕೆ  

ಈಗ ಇವನನ್ನೂ ನನ್ನ ಬಳಿಯಿಂದ ತೆಗೆದುಕೊಂಡು ಹೋಗಬೇಕೆಂದಿದ್ದೀರಿ. ಅವನಿಗೂ ಕೇಡು ಬಂದರೆ, ನನ್ನ ಮುದಿ ತಲೆಯು ದುಃಖದಿಂದ ಸಮಾಧಿಗೆ ಇಳಿಯುವಂತೆ ಮಾಡುವಿರಿ,’ ಎಂದು ಹೇಳಿದನು.


ಅವನ ಪುತ್ರಪುತ್ರಿಯರೆಲ್ಲಾ ಅವನನ್ನು ಆದರಿಸಿದರೂ ಅವನು ಆದರಣೆ ಹೊಂದಲೊಲ್ಲದೆ, “ನನ್ನ ಮಗನಿರುವ ಸಮಾಧಿಗೆ ದುಃಖದಿಂದಲೇ ಇಳಿದು ಹೋಗುವೆನು,” ಎಂದನು. ಹೀಗೆ ಅವನ ತಂದೆ ಅವನಿಗೋಸ್ಕರ ಅತ್ತನು.


ಪ್ರಿಯರೇ, ನೀವು ನಿರೀಕ್ಷೆಯಿಲ್ಲದೆ ಗೋಳಾಡುವವರಂತೆ ಮರಣ ಹೊಂದಿದ ವಿಶ್ವಾಸಿಗಳ ಬಗ್ಗೆ ಅಜ್ಞಾನಿಗಳಾಗಿರಬಾರದೆಂದು ನಾವು ಅಪೇಕ್ಷಿಸುತ್ತೇವೆ.


ದೈವಿಕ ದುಃಖವು ಪಶ್ಚಾತ್ತಾಪವನ್ನು ತಂದು ರಕ್ಷಣೆಗೆ ನಡೆಸುತ್ತದೆ. ಆ ಪಶ್ಚಾತ್ತಾಪದಲ್ಲಿ ವಿಷಾಧವಿರುವುದಿಲ್ಲ. ಆದರೆ ಪ್ರಾಪಂಚಿಕ ದುಃಖವು ಮರಣಕ್ಕೆ ನಡೆಸುತ್ತದೆ.


ಆಗ ದಾವೀದನು ಅಬಿಯಾತರನಿಗೆ, “ಎದೋಮ್ಯನಾದ ದೋಯೇಗನು ಅಲ್ಲಿ ಇದ್ದುದರಿಂದ ಅವನು ಸೌಲನಿಗೆ ನಿಶ್ಚಯವಾಗಿ ತಿಳಿಸುವನೆಂದು ನಾನು ಆ ದಿನವೇ ನೆನೆಸಿಕೊಂಡೆ. ನಿನ್ನ ತಂದೆಯ ಮನೆಯ ಸಮಸ್ತರ ಪ್ರಾಣಹತ್ಯೆಗೆ ಕಾರಣನಾದವನು ನಾನೇ.


ಆದರೆ ಯಾಕೋಬನು, “ನನ್ನ ಮಗನು ನಿಮ್ಮ ಸಂಗಡ ಹೋಗಬಾರದು, ಅವನ ಅಣ್ಣ ಸತ್ತು ಹೋಗಿ, ಇವನೊಬ್ಬನೇ ಉಳಿದಿದ್ದಾನೆ. ನೀವು ಹೋಗುವ ಮಾರ್ಗದಲ್ಲಿ ಇವನಿಗೆ ಕೇಡು ಬಂದರೆ, ನನ್ನ ಮುದಿ ತಲೆಯನ್ನು ದುಃಖದಿಂದ ಸಮಾಧಿಗೆ ಇಳಿಸುವಿರಿ,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು