ಆದಿಕಾಂಡ 44:22 - ಕನ್ನಡ ಸಮಕಾಲಿಕ ಅನುವಾದ22 ನಾವು ನಮ್ಮ ಒಡೆಯನಿಗೆ, ‘ಆ ಹುಡುಗನು ನಮ್ಮ ತಂದೆಯನ್ನು ಬಿಡಕೂಡದು. ಅವನು ತಂದೆಯನ್ನು ಬಿಟ್ಟರೆ, ಅವನು ಸಾಯುವನು,’ ಎಂದು ಹೇಳಿದೆವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ನಾವು ಸ್ವಾಮಿಯವರಿಗೆ, ‘ಆ ಹುಡುಗನು ತನ್ನ ತಂದೆಯನ್ನು ಬಿಟ್ಟು ಬರುವುದಿಲ್ಲ. ಅವನು ತಂದೆಯನ್ನು ಅಗಲಿದರೆ ತಂದೆಯು ಸಾಯುವನು’ ಎಂದು ಹೇಳಿದೆವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ನಾವು, ‘ಆ ಹುಡುಗನು ತಂದೆಯನ್ನು ಬಿಟ್ಟು ಅಗಲುವುದಕ್ಕಾಗುವುದಿಲ್ಲ; ಅಗಲಿದರೆ ತಂದೆ ಸತ್ತುಹೋದಾರು,’ ಎಂದು ಒಡೆಯರಾದ ತಮಗೆ ತಿಳಿಸಿದೆವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ನಾವು ಸ್ವಾವಿುಯವರಿಗೆ - ಆ ಹುಡುಗನು ತನ್ನ ತಂದೆಯನ್ನು ಅಗಲುವದಕ್ಕಾಗುವದಿಲ್ಲ; ಅಗಲಿದರೆ ತಂದೆ ಸತ್ತಾನು ಅಂದೆವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್22 ನಾವು ನಿಮಗೆ ‘ಆ ಯುವಕನು ಬರಲಾರನು. ಅವನು ತನ್ನ ತಂದೆಯನ್ನು ಬಿಟ್ಟುಬರಲಾಗದು. ಅವನ ತಂದೆ ಅವನನ್ನು ಕಳೆದುಕೊಂಡರೆ ತುಂಬ ದುಃಖದಿಂದ ಸತ್ತುಹೋಗುವನು’ ಎಂದು ಹೇಳಿದೆವು. ಅಧ್ಯಾಯವನ್ನು ನೋಡಿ |