Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 43:9 - ಕನ್ನಡ ಸಮಕಾಲಿಕ ಅನುವಾದ

9 ನಾನು ಅವನಿಗೋಸ್ಕರ ಹೊಣೆಯಾಗಿರುವೆನು. ನೀನು ಅವನ ವಿಷಯದಲ್ಲಿ ನನ್ನನ್ನೇ ಕೇಳಬಹುದು. ನಾನು ಅವನನ್ನು ನಿನ್ನ ಬಳಿಗೆ ತಂದು ನಿನ್ನೆದುರಿಗೆ ನಿಲ್ಲಿಸದಿದ್ದರೆ, ಎಂದೆಂದಿಗೂ ನಾನು ಅಪರಾಧವನ್ನು ಹೊರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ನಾನು ಅವನಿಗೋಸ್ಕರ ಹೊಣೆಯಾಗಿರುವೆನು. ಅವನ ವಿಷಯ ನನ್ನನ್ನೇ ಕೇಳಬಹುದು. ನಾನು ಅವನನ್ನು ತಿರುಗಿ ಕರೆದುಕೊಂಡು ಬಂದು ನಿನ್ನೆದುರಿನಲ್ಲಿ ನಿಲ್ಲಿಸದೆ ಹೋದರೆ ಆ ಅಪರಾಧ ಎಂದೆಂದಿಗೂ ನನ್ನ ಮೇಲೆ ಇರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಅವನಿಗೆ ನಾನೇ ಹೊಣೆ; ಅವನ ವಿಷಯ ನನಗೆ ಬಿಡಿ. ನಾನು ಅವನನ್ನು ಮತ್ತೆ ಕರೆದುಕೊಂಡು ಬಂದು ನಿಮ್ಮ ಎದುರಿನಲ್ಲಿ ನಿಲ್ಲಿಸದೆಹೋದರೆ ಆ ದೋಷ ಸದಾಕಾಲ ನನ್ನ ಮೇಲೆ ಇರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ನಾನೇ ಅವನಿಗೆ ಹೊಣೆ; ಅವನ ವಿಷಯ ನನ್ನನ್ನೇ ಕೇಳಬಹುದು. ನಾನು ಅವನನ್ನು ತಿರಿಗಿ ಕರಕೊಂಡು ಬಂದು ನಿನ್ನೆದುರಿನಲ್ಲಿ ನಿಲ್ಲಿಸದೆ ಹೋದರೆ ಆ ದೋಷ ಎಂದೆಂದಿಗೂ ನನ್ನ ಮೇಲೆ ಇರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಅವನು ಸುರಕ್ಷಿತವಾಗಿರುವಂತೆ ನಾನು ನೋಡಿಕೊಳ್ಳುವೆನು. ನಾನು ಅವನಿಗೆ ಜವಾಬ್ದಾರನಾಗಿರುತ್ತೇನೆ. ನಾನು ಅವನನ್ನು ನಿನ್ನ ಬಳಿಗೆ ಮತ್ತೆ ಕರೆದುಕೊಂಡು ಬರದಿದ್ದರೆ, ನೀನು ಸದಾಕಾಲ ನನ್ನನ್ನು ದೂಷಿಸಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 43:9
16 ತಿಳಿವುಗಳ ಹೋಲಿಕೆ  

ರೂಬೇನನು ತನ್ನ ತಂದೆಗೆ, “ನಾನು ಅವನನ್ನು ನಿನ್ನ ಬಳಿಗೆ ತಾರದೆ ಹೋದರೆ, ನನ್ನ ಇಬ್ಬರು ಪುತ್ರರನ್ನು ಕೊಂದುಬಿಡು. ನೀನು ಬೆನ್ಯಾಮೀನನನ್ನು ನನ್ನ ಕೈಯಲ್ಲಿ ಒಪ್ಪಿಸು. ನಾನು ಅವನನ್ನು ನಿನ್ನ ಬಳಿಗೆ ತಿರುಗಿ ತರುವೆನು,” ಎಂದನು.


ಇದರಿಂದಲೇ ಯೇಸು ಎಷ್ಟೋ ಉತ್ತಮವಾದ ಒಡಂಬಡಿಕೆಗೆ ಹೊಣೆಗಾರರಾದರು.


ಯಾವಾಗ ನಾನು ದುಷ್ಟನಿಗೆ, ‘ದುಷ್ಟ ಮನುಷ್ಯನೇ, ನೀನು ನಿಶ್ಚಯವಾಗಿ ಸಾಯುವೆ,’ ಎಂದು ಹೇಳುವಾಗ ಒಂದು ವೇಳೆ ನೀನು ಅವನೊಂದಿಗೆ ಮಾತನಾಡದೆ ಅವನ ದುರ್ಮಾರ್ಗಗಳಿಂದ ತಪ್ಪಿಸಲು ಅವನನ್ನು ಎಚ್ಚರಿಸದಿದ್ದರೆ ಆ ದುಷ್ಟ ಮನುಷ್ಯನು ತನ್ನ ಪಾಪಗಳಿಂದಲೇ ಸಾಯಬೇಕಾಗುವದು; ಆದರೆ ಅವನ ಸಾವಿಗೆ ನಿನ್ನನ್ನೇ ಹೊಣೆಮಾಡುವೆನು.


ಆದರೆ ಕಾವಲುಗಾರನು ಬರುವ ಖಡ್ಗವನ್ನು ನೋಡಿ, ಒಂದು ವೇಳೆ ಕೊಂಬನ್ನು ಊದದೆ ಜನರನ್ನೂ ಎಚ್ಚರಿಸದೆ ಹೋದರೆ, ಆಗ ಖಡ್ಗವು ಬಿದ್ದು ಆ ಜನರೊಳಗೆ ಯಾರನ್ನಾದರೂ ನಾಶಮಾಡಿದರೆ, ಅವನು ತನ್ನ ಪಾಪದಲ್ಲಿಯೇ ನಾಶವಾಗುವನು. ಆದರೆ ನಾನು ಅವನ ಸಾವಿಗೆ ಕಾವಲುಗಾರನನ್ನೇ ಹೊಣೆಮಾಡುವೆನು.’


“ಯಾವಾಗ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡುವನೋ, ಆಗ ನಾನು ಅವನ ಮುಂದೆ ಅಡತಡೆಯನ್ನು ಇಡುವೆನು, ಅವನು ಸಾಯುವನು. ನೀನು ಅವನನ್ನು ಎಚ್ಚರಿಸದೆ ಇದ್ದುದರಿಂದಲೇ ಅವನು ತನ್ನ ಪಾಪದಲ್ಲಿ ಸಾಯುವನು. ಅವನು ಮಾಡಿರುವ ಸುಕೃತ್ಯಗಳು ಲೆಕ್ಕಕ್ಕೆ ಬರುವುದಿಲ್ಲ. ಆದರೆ ಅವನ ಸಾವಿಗೆ ನೀನೇ ಹೊಣೆಯಾಗುವೆ.


ನಾನು ದುಷ್ಟನಿಗೆ, ‘ನೀನು ನಿಶ್ಚಯವಾಗಿ ಸಾಯುವೆ,’ ಎಂದು ಹೇಳುವಾಗ, ನೀನು ಅವನನ್ನು ಎಚ್ಚರಿಸದೆ, ಅವನು ತನ್ನ ದುರ್ಮಾರ್ಗಗಳನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ ನೀನು ಅವನಿಗೆ ಬುದ್ಧಿಹೇಳದೆ ಹೋದರೆ, ಆ ದುಷ್ಟ ಮನುಷ್ಯನು ತನ್ನ ಪಾಪಗಳಿಂದಲೇ ಸಾಯಬೇಕಾಗುವದು; ಆದರೆ ಅವನ ಸಾವಿಗೆ ನಿನ್ನನ್ನೇ ಹೊಣೆಮಾಡುವೆನು.


ನಿಮ್ಮ ಸೇವಕನ ಕ್ಷೇಮವನ್ನು ದೃಢಪಡಿಸಿರಿ; ಅಹಂಕಾರಿಗಳು ನನ್ನನ್ನು ಬಾಧಿಸದಿರಲಿ.


“ದೇವರೇ, ನೀವು ಹಕ್ಕಾಗಿ ಕೇಳುವ ಈಡನ್ನು ನೀವೇ ನನಗೆ ಕೊಡಿರಿ; ನಿಮ್ಮನ್ನು ಬಿಟ್ಟು ಯಾರು ನನಗೆ ಭದ್ರತೆಯನ್ನು ಕೊಡುವವರು?


ಇಲ್ಲದಿದ್ದರೆ ನನ್ನ ಒಡೆಯನೂ ಅರಸನೂ ತನ್ನ ಪಿತೃಗಳ ಸಂಗಡ ಸಮಾಧಿ ಸೇರಿದಾಗ, ನಾನೂ, ನನ್ನ ಮಗ ಸೊಲೊಮೋನನೂ ಅಪರಾಧಿಗಳಾಗಿ ಎಣಿಕೆಯಾಗುವೆವು,” ಎಂದಳು.


ಮೃಗಗಳಿಂದ ಘಾಯವಾದವುಗಳನ್ನು ನಿನ್ನ ಬಳಿಗೆ ತಾರದೆ, ಅವುಗಳ ನಷ್ಟವನ್ನು ನಾನೇ ಹೊತ್ತೆನು. ಹಗಲಲ್ಲಿ ಕದ್ದದ್ದನ್ನೂ, ರಾತ್ರಿಯಲ್ಲಿ ಕದ್ದದ್ದನ್ನೂ ನನ್ನಿಂದಲೇ ತೆಗೆದುಕೊಂಡೆ.


ನಿಮ್ಮ ರಕ್ತ ಸುರಿಸಿ, ಪ್ರಾಣ ತೆಗೆಯುವವರಿಗೆ, ಮುಯ್ಯಿತೀರಿಸುವೆನು, ಮೃಗವಾಗಿದ್ದರೆ ಅದಕ್ಕೂ ಮುಯ್ಯಿತೀರಿಸುವೆನು. ಮನುಷ್ಯನಾಗಿದ್ದರೆ, ಹತನಾದವನು ಇನ್ನೊಬ್ಬ ಮನುಷ್ಯನಾದುದರಿಂದ ಹತಿಸಿದವನಿಗೂ ಮುಯ್ಯಿತೀರಿಸುವೆನು.


ಹೀಗೆ ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೆ ಈ ಸಂತತಿಯು ಲೆಕ್ಕ ಕೊಡಬೇಕಾಗಿರುವುದು,


ಏಕೆಂದರೆ ನಾವು ತಡಮಾಡದೆ ಇದ್ದಿದ್ದರೆ, ಇಷ್ಟರಲ್ಲಿ ಎರಡು ಸಾರಿ ಹೋಗಿ ಬರಬಹುದಾಗಿತ್ತು,” ಎಂದನು.


ಆದರೆ ತೆಕೋವದ ಸ್ತ್ರೀಯು ಅರಸನಿಗೆ, “ಅರಸನಾದ ನನ್ನ ಒಡೆಯನೇ, ಆ ಅಕ್ರಮವು ನನ್ನ ಮೇಲೆಯೂ, ನನ್ನ ತಂದೆಯ ಮನೆಯ ಮೇಲೆಯೂ ಇರಲಿ. ಅರಸನೂ, ಅವನ ಸಿಂಹಾಸನವೂ ನಿರಪರಾಧವಾಗಿರಲಿ,” ಎಂದಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು