Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 43:23 - ಕನ್ನಡ ಸಮಕಾಲಿಕ ಅನುವಾದ

23 ಅದಕ್ಕವನು, “ನಿಮಗೆ ಸಮಾಧಾನವಿರಲಿ, ಭಯಪಡಬೇಡಿರಿ. ನಿಮ್ಮ ದೇವರೂ ನಿಮ್ಮ ತಂದೆಯ ದೇವರೂ ನಿಮ್ಮ ಚೀಲಗಳಲ್ಲಿ ನಿಮಗೆ ನಿಕ್ಷೇಪವನ್ನು ಕೊಟ್ಟಿದ್ದಾರೆ. ನಿಮ್ಮ ಹಣವು ನನಗೆ ಮುಟ್ಟಿದೆ,” ಎಂದು ಹೇಳಿ ಸಿಮೆಯೋನನನ್ನು ಅವರ ಬಳಿಗೆ ತಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಅದಕ್ಕೆ ಅವನು, “ನೀವು ಸಮಾಧಾನವಾಗಿರಿ. ನೀವೇನೂ ಭಯಪಡಬೇಡಿರಿ ನಿಮಗೂ ನಿಮ್ಮ ತಂದೆಗೂ ದೇವರಾಗಿರುವಾತನು ನಿಮ್ಮ ಚೀಲಗಳಲ್ಲಿ ಹಣವನ್ನು ಇಟ್ಟಿರಬೇಕು. ನಿಮ್ಮ ಹಣವು ನನಗೆ ಮುಟ್ಟಿತು” ಎಂದು ಹೇಳಿ, ಅವನು ಸಿಮೆಯೋನನನ್ನು ಅವರ ಬಳಿಗೆ ಕರೆದುಕೊಂಡು ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಅದಕ್ಕೆ ಆ ಗೃಹನಿರ್ವಾಹಕ, “ಸಮಾಧಾನದಿಂದಿರಿ, ಹೆದರಬೇಡಿ. ನಿಮ್ಮ ತಂದೆಗೂ ನಿಮಗೂ ದೇವರಾದವರು ನಿಮ್ಮ ಚೀಲಗಳಲ್ಲಿಯೇ ನಿಧಿ ನಿಕ್ಷೇಪ ದೊರಕುವಂತೆ ಅನುಗ್ರಹಿಸಿದ್ದಾರೆ; ನೀವು ಕೊಟ್ಟ ಹಣ ನನಗೆ ಮುಟ್ಟಿದೆ,” ಎಂದು ಹೇಳಿ ಸಿಮೆಯೋನನನ್ನು ಅವರ ಬಳಿಗೆ ಕರೆದುಕೊಂಡು ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಅದಕ್ಕೆ ಅವನು - ಸಮಾಧಾನವಾಗಿರ್ರಿ. ನೀವೇನೂ ಹೆದರಬೇಡಿರಿ; ನಿಮ್ಮ ತಂದೆಗೂ ನಿಮಗೂ ದೇವರಾಗಿರುವಾತನು ನಿಮ್ಮ ಚೀಲಗಳಲ್ಲಿಯೇ ನಿಕ್ಷೇಪ ಸಿಕ್ಕುವಂತೆ ಅನುಗ್ರಹಿಸಿದ್ದಾನೆ; ನಿಮ್ಮ ಹಣವು ನನಗೆ ಮುಟ್ಟಿತು ಎಂದು ಹೇಳಿ ಸಿಮೆಯೋನನನ್ನು ಅವರ ಬಳಿಗೆ ಕರೆದುಕೊಂಡು ಬಂದು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಅದಕ್ಕೆ ಸೇವಕನು, “ಭಯಪಡಬೇಡಿ, ಚಿಂತಿಸಬೇಡಿ. ನಿಮ್ಮ ದೇವರೂ ನಿಮ್ಮ ತಂದೆಯ ದೇವರೂ ಹಣವನ್ನು ಉಡುಗೊರೆಯಾಗಿ ನಿಮ್ಮ ಚೀಲಗಳಲ್ಲಿ ಇಟ್ಟಿದ್ದಿರಬೇಕು. ಕಳೆದ ಸಲ ನೀವು ದವಸಧಾನ್ಯಗಳಿಗಾಗಿ ಹಣ ಪಾವತಿ ಮಾಡಿದ್ದು ನನಗೆ ನೆನಪಿದೆ” ಎಂದು ಹೇಳಿದನು. ಬಳಿಕ ಆ ಸೇವಕನು ಸಿಮೆಯೋನನನ್ನು ಸೆರೆಮನೆಯಿಂದ ಕರೆತಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 43:23
17 ತಿಳಿವುಗಳ ಹೋಲಿಕೆ  

ಅನಂತರ ಯೋಸೇಫನು ಅವರ ಬಳಿಯಿಂದ ಹೊರಟುಹೋಗಿ ಅತ್ತನು. ಮತ್ತೆ ಅವರ ಬಳಿಗೆ ಬಂದು, ಅವರ ಸಂಗಡ ಮಾತನಾಡಿ ಅವರೊಂದಿಗೆ ಸಿಮೆಯೋನನನ್ನು ತಂದು, ಅವರ ಕಣ್ಣೆದುರಿನಲ್ಲಿ ಬಂಧಿಸಿ ಸೆರೆಯಲ್ಲಿ ಹಾಕಿದನು.


ಎಂಟು ದಿವಸಗಳಾದ ಮೇಲೆ ಯೇಸುವಿನ ಶಿಷ್ಯರು ಪುನಃ ಮನೆಯ ಒಳಗಿದ್ದಾಗ ತೋಮನೂ ಅವರ ಸಂಗಡ ಇದ್ದನು. ಆಗ ಬಾಗಿಲುಗಳು ಮುಚ್ಚಿರಲಾಗಿ ಯೇಸು ಬಂದು ಮಧ್ಯದಲ್ಲಿ ನಿಂತು, “ನಿಮಗೆ ಸಮಾಧಾನವಾಗಲಿ!” ಎಂದರು.


ನಾನು ಸಮಾಧಾನವನ್ನು ನಿಮಗೆ ಬಿಟ್ಟು ಹೋಗುತ್ತೇನೆ. ನನ್ನ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ. ಲೋಕವು ಕೊಡುವಂತೆ ನಾನು ನಿಮಗೆ ಕೊಡುವುದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಅಂಜದಿರಲಿ.


ಯೇಸು ತಿರುಗಿ ಅವರಿಗೆ, “ನಿಮಗೆ ಸಮಾಧಾನವಾಗಲಿ, ತಂದೆಯು ನನ್ನನ್ನು ಕಳುಹಿಸಿದಂತೆಯೇ ನಾನು ನಿಮ್ಮನ್ನು ಕಳುಹಿಸಿಕೊಡುತ್ತೇನೆ,” ಎಂದರು.


ಅದೇ ಭಾನುವಾರದ ಸಾಯಂಕಾಲದಲ್ಲಿ ಯೆಹೂದ್ಯರ ಭಯದಿಂದ ಶಿಷ್ಯರು ಕೂಡಿದ್ದ ಮನೆಯ ಬಾಗಿಲುಗಳು ಮುಚ್ಚಿದ್ದವು. ಆಗ ಯೇಸು ಬಂದು ಅವರ ಮಧ್ಯೆ ನಿಂತು, “ನಿಮಗೆ ಸಮಾಧಾನವಾಗಲಿ!” ಎಂದು ಅವರಿಗೆ ಹೇಳಿದರು.


ಅವರೆಲ್ಲರೂ ಹೀಗೆ ಮಾತನಾಡುತ್ತಿರುವಾಗ, ಯೇಸು ತಾವೇ ಅವರ ನಡುವೆ ನಿಂತು ಅವರಿಗೆ, “ನಿಮಗೆ ಸಮಾಧಾನವಾಗಲಿ,” ಎಂದರು.


“ನೀವು ಯಾವ ಮನೆಯನ್ನಾದರೂ ಪ್ರವೇಶಿಸುವಾಗ ಮೊದಲು, ‘ಈ ಮನೆಗೆ ಸಮಾಧಾನವಾಗಲಿ,’ ಎಂದು ಹೇಳಿರಿ.


ಅವನು ತನ್ನ ಸಹೋದರರಿಗೆ, “ನನ್ನ ಹಣವನ್ನು ಹಿಂದಕ್ಕೆ ಕೊಟ್ಟಿದ್ದಾರೆ, ಅದು ನನ್ನ ಚೀಲದಲ್ಲಿದೆ,” ಎಂದು ಹೇಳಿದ. ಅವರಿಗೆ ಹೃದಯ ಕಂಪನವಾದಂತಾಗಿ ಹೆದರಿ ಒಬ್ಬರಿಗೊಬ್ಬರು, “ದೇವರು ನಮಗೆ ಮಾಡಿದ್ದೇನು?” ಎಂದರು.


ಈ ಪತ್ರಕ್ಕೆ ಅರಸನು ಅವರಿಗೆ ಕೊಟ್ಟ ಉತ್ತರ: ದೇಶಾಧಿಪತಿಯಾದ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ ಅವರಿಗೂ, ಸಮಾರ್ಯದಲ್ಲಿರುವವರಿಗೂ ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಇತರರಿಗೂ, ಕ್ಷೇಮಾಭಿಲಾಶೆಗಳು.


ಆಗ ಆತ್ಮವು ಮೂವತ್ತು ಮಂದಿ ಅಧಿಪತಿಗಳ ಮುಖ್ಯಸ್ಥನಾದ ಅಮಾಸೈಯ ಮೇಲೆ ಬಂತು. ಅವನು ಹೀಗೆ ಹೇಳಿದನು, “ದಾವೀದನೇ, ನಾವು ನಿನ್ನವರು. ಇಷಯನ ಮಗನೇ, ನಾವು ನಿನ್ನ ಜೊತೆಯಿದ್ದೇವೆ; ಜಯವು ನಿನ್ನದೇ, ನಿನಗೆ ಸಹಾಯ ಮಾಡುವವರಿಗೆ ಜಯವು; ಏಕೆಂದರೆ ನಿನ್ನ ದೇವರು ನಿನಗೆ ಸಹಾಯ ಮಾಡುತ್ತಾರೆ.” ಆಗ ದಾವೀದನು ಅವರನ್ನು ಅಂಗೀಕರಿಸಿ, ಅವರನ್ನು ದಂಡಿನ ಅಧಿಪತಿಗಳಾಗಿ ಮಾಡಿದನು.


‘ನಿನಗೆ ಸಮಾಧಾನವೂ, ನಿನ್ನ ಮನೆಗೆ ಸಮಾಧಾನವೂ ನಿನ್ನ ಸರ್ವಸಂಪತ್ತಿಗೂ ಸಮಾಧಾನವೂ ಆಗಲಿ.


ಆಗ ಆ ಮುದುಕನು, “ನಿನಗೆ ಶುಭವಾಗಲಿ, ನಿನ್ನ ಕೊರತೆಯೆಲ್ಲಾ ನನ್ನ ಮೇಲೆ ಇರಲಿ, ಹೇಗಾದರೂ ಬೀದಿಯೊಳಗೆ ಇಳಿದುಕೊಳ್ಳಬೇಡ,” ಎಂದು ಹೇಳಿ


ಆದರೆ ಯೆಹೋವ ದೇವರು ಅವನಿಗೆ, “ನಿನಗೆ ಸಮಾಧಾನವಾಗಲಿ; ಭಯಪಡಬೇಡ, ನೀನು ಸಾಯುವುದಿಲ್ಲ,” ಎಂದರು.


ಸರ್ವಶಕ್ತ ದೇವರು ನಿಮ್ಮ ಮತ್ತೊಬ್ಬ ಸಹೋದರನನ್ನೂ ಬೆನ್ಯಾಮೀನನನ್ನೂ ಕಳುಹಿಸಿಕೊಡುವ ಹಾಗೆ, ಆ ಮನುಷ್ಯನು ನಿಮ್ಮ ಮೇಲೆ ಕರುಣೆ ತೋರಿಸುವಂತೆ ಮಾಡಲಿ. ನಾನಂತೂ ಮಕ್ಕಳನ್ನು ಕಳೆದುಕೊಂಡವನಾಗಿರಬೇಕಾದರೆ ಹಾಗೆಯೇ ಆಗಲಿ,” ಎಂದನು.


ಆಗ ಅವರ ತಂದೆ ಯಾಕೋಬನು ಅವರಿಗೆ, “ನನ್ನನ್ನು ಮಕ್ಕಳಿಲ್ಲದವನನ್ನಾಗಿ ಮಾಡಿದ್ದೀರಿ. ಯೋಸೇಫನೂ ಇಲ್ಲ, ಸಿಮೆಯೋನನೂ ಇಲ್ಲ, ಬೆನ್ಯಾಮೀನನನ್ನೂ ಕರೆದುಕೊಂಡು ಹೋಗುವುದರಲ್ಲಿದ್ದೀರಿ. ಇವುಗಳೆಲ್ಲಾ ನನಗೆ ವಿರೋಧವಾಗಿವೆ,” ಎಂದನು.


ಇದಲ್ಲದೆ ಆಹಾರವನ್ನು ಕೊಂಡುಕೊಳ್ಳುವುದಕ್ಕೆ ಬೇರೆ ಹಣವನ್ನೂ ತಂದಿದ್ದೇವೆ. ಈ ಹಣವನ್ನು ನಮ್ಮ ಚೀಲಗಳಲ್ಲಿ ಯಾರು ಇಟ್ಟರೆಂದು ನಮಗೆ ತಿಳಿಯದು,” ಎಂದರು.


ದಾವೀದನು ಸೌಲನ ಮೇಲೆ ಯುದ್ಧಮಾಡಲು ಫಿಲಿಷ್ಟಿಯರ ಸಂಗಡ ಬರುತ್ತಿರುವಾಗ, ಮನಸ್ಸೆಯವರಲ್ಲಿ ಕೆಲವರು ದಾವೀದನ ಕಡೆಗೆ ಸೇರಿದರು. ಆದರೆ ಇವರು ಅವರಿಗೆ ಸಹಾಯ ಕೊಡದೆ ಇದ್ದರು. ಏಕೆಂದರೆ ಫಿಲಿಷ್ಟಿಯರ ಅಧಿಪತಿಗಳು ಯೋಚನೆ ಮಾಡಿದ ತರುವಾಯ, “ಅವನು ನಮಗೆ ಮೋಸಮಾಡಿ, ತನ್ನ ಯಜಮಾನನಾದ ಸೌಲನ ಕಡೆಗೆ ಸೇರಿದರೆ, ನಮ್ಮ ತಲೆಗಳು ಬಿದ್ದು ಹೋಗುವುವು,” ಎಂದು ಹೇಳಿ ಅವನನ್ನು ಕಳುಹಿಸಿಬಿಟ್ಟರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು