ಆದಿಕಾಂಡ 42:36 - ಕನ್ನಡ ಸಮಕಾಲಿಕ ಅನುವಾದ36 ಆಗ ಅವರ ತಂದೆ ಯಾಕೋಬನು ಅವರಿಗೆ, “ನನ್ನನ್ನು ಮಕ್ಕಳಿಲ್ಲದವನನ್ನಾಗಿ ಮಾಡಿದ್ದೀರಿ. ಯೋಸೇಫನೂ ಇಲ್ಲ, ಸಿಮೆಯೋನನೂ ಇಲ್ಲ, ಬೆನ್ಯಾಮೀನನನ್ನೂ ಕರೆದುಕೊಂಡು ಹೋಗುವುದರಲ್ಲಿದ್ದೀರಿ. ಇವುಗಳೆಲ್ಲಾ ನನಗೆ ವಿರೋಧವಾಗಿವೆ,” ಎಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201936 ಆಗ ಅವರ ತಂದೆಯಾದ ಯಾಕೋಬನು, “ಅವರಿಗೆ ನನ್ನನ್ನು ಮಕ್ಕಳಿಲ್ಲದವನಂತೆ ಮಾಡಿದ್ದೀರಿ. ಯೋಸೇಫನು ಇಲ್ಲ, ಸಿಮೆಯೋನನು ಇಲ್ಲ. ಬೆನ್ಯಾಮೀನನ್ನೂ ಕರೆದುಕೊಂಡು ಹೋಗಬೇಕೆಂದಿದ್ದೀರಿ. ಈ ಕಷ್ಟವೆಲ್ಲಾ ನನ್ನ ಮೇಲೆಯೇ ಬಂದಿತಲ್ಲಾ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)36 ಆಗ ಅವರ ತಂದೆ ಯಕೋಬನು ಅವರಿಗೆ, “ನನ್ನನ್ನು ಮಕ್ಕಳಿಲ್ಲದವನಂತೆ ಮಾಡಿದ್ದೀರಿ; ಜೋಸೆಫನು ಇಲ್ಲ, ಸಿಮೆಯೋನನೂ ಇಲ್ಲ, ಬೆನ್ಯಾಮೀನನನ್ನೂ ಕರೆದುಕೊಂಡು ಹೋಗಬೇಕೆಂದಿದ್ದೀರಿ. ಈ ಕಷ್ಟದುಃಖವೆಲ್ಲ ನನ್ನ ತಲೆಯ ಮೇಲೆ ಬಂದೆರಗಿದೆ!” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)36 ಆಗ ಅವರ ತಂದೆಯಾದ ಯಾಕೋಬನು ಅವರಿಗೆ - ನನ್ನನ್ನು ಮಕ್ಕಳಿಲ್ಲದವನಂತೆ ಮಾಡಿದ್ದೀರಿ; ಯೋಸೇಫನೂ ಇಲ್ಲ, ಸಿಮೆಯೋನನೂ ಇಲ್ಲ; ಬೆನ್ಯಾಮೀನನನ್ನೂ ಕರಕೊಂಡು ಹೋಗಬೇಕೆಂದಿದ್ದೀರಿ, ಈ ಕಷ್ಟವೆಲ್ಲಾ ನನ್ನ ಮೇಲೆಯೇ ಬಂತು ಎಂದು ಹೇಳಲು ರೂಬೇನನು ಅವನಿಗೆ - ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್36 ಯಾಕೋಬನು ಅವರಿಗೆ, “ನಾನು ನನ್ನ ಮಕ್ಕಳನ್ನೆಲ್ಲ ಕಳೆದುಕೊಳ್ಳಬೇಕೆಂಬುದು ನಿಮಗೆ ಇಷ್ಟವೇ? ಯೋಸೇಫನು ಇಲ್ಲವಾದನು. ಸಿಮೆಯೋನನೂ ಇಲ್ಲವಾದನು. ಈಗ ಬೆನ್ಯಾಮೀನನನ್ನು ತೆಗೆದುಕೊಂಡು ಹೋಗಬೇಕೆಂದಿರುವಿರಿ” ಎಂದು ಹೇಳಿದನು. ಅಧ್ಯಾಯವನ್ನು ನೋಡಿ |