ಆದಿಕಾಂಡ 41:42 - ಕನ್ನಡ ಸಮಕಾಲಿಕ ಅನುವಾದ42 ಫರೋಹನು ತನ್ನ ಕೈಯೊಳಗಿನ ಉಂಗುರವನ್ನು ತೆಗೆದು ಯೋಸೇಫನ ಕೈಯಲ್ಲಿಟ್ಟು, ನಾರುಮಡಿಯ ವಸ್ತ್ರವನ್ನು ತೊಡಿಸಿ, ಚಿನ್ನದ ಸರಪಣಿಯನ್ನು ಅವನ ಕೊರಳಿಗೆ ಹಾಕಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201942 ಫರೋಹನು ತನ್ನ ಕೈಯಿಂದ ಉಂಗುರವನ್ನು ತೆಗೆದು ಯೋಸೇಫನ ಬೆರಳಿಗೆ ತೊಡಿಸಿ ಅವನಿಗೆ ನಾರುಮಡಿಯನ್ನು ಹೊದಿಸಿ ಅವನ ಕೊರಳಿಗೆ ಚಿನ್ನದ ಸರವನ್ನು ಹಾಕಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)42 ತನ್ನ ಬೆರಳಿನಿಂದ ಮುದ್ರಿಕೆಯನ್ನು ತೆಗೆದು ಜೋಸೆಫನ ಬೆರಳಿಗೆ ಇಟ್ಟನು. ಅವನಿಗೆ ಮೌಲ್ಯವಾದ ವಸ್ತ್ರಗಳನ್ನು ಹೊದಿಸಿದನು. ಕೊರಳಿಗೆ ಚಿನ್ನದ ಸರವನ್ನು ಹಾಕಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)42 ತನ್ನ ಕೈಯಿಂದ ಮುದ್ರಿಕೆಯನ್ನು ತೆಗೆದು ಯೋಸೇಫನ ಕೈಗೆ ಇಟ್ಟು ಅವನಿಗೆ ನಾರುಮಡಿಯನ್ನು ಹೊದಿಸಿ ಅವನ ಕೊರಳಿಗೆ ಚಿನ್ನದ ಸರಪಣಿಯನ್ನು ಹಾಕಿಸಿ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್42 ರಾಜಮುದ್ರೆಯನ್ನು ಹೊಂದಿದ್ದ ತನ್ನ ಉಂಗುರವನ್ನು ಕೊಟ್ಟನು; ಧರಿಸಿಕೊಳ್ಳಲು ಒಳ್ಳೆಯ ನಾರುಬಟ್ಟೆಯ ನಿಲುವಂಗಿಯನ್ನು ಕೊಟ್ಟನು; ಕೊರಳಿಗೆ ಚಿನ್ನದ ಸರವನ್ನು ಹಾಕಿದನು. ಅಧ್ಯಾಯವನ್ನು ನೋಡಿ |
ಈಗ ನೀನು ಅರ್ಥಗಳನ್ನು ವಿವರಿಸಿ, ಕಷ್ಟಕರವಾದ ಸಮಸ್ಯೆಗಳನ್ನು ಬಗೆಹರಿಸಲು ಸಮರ್ಥನೆಂದು ನಾನು ನಿನ್ನ ವಿಷಯವಾಗಿ ಕೇಳಿದ್ದೇನೆ. ಹೀಗಾದರೆ ಈ ಬರಹವನ್ನು ಓದುವುದಕ್ಕೂ, ಅದರ ಅರ್ಥವನ್ನು ತಿಳಿಸುವುದಕ್ಕೂ ನಿನ್ನಿಂದ ಸಾಧ್ಯವಾದರೆ, ನಿನಗೆ ಧೂಮ್ರವಸ್ತ್ರವನ್ನು ಹೊದಿಸಿ, ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ರಾಜ್ಯದ ಮೂರನೆಯ ಅಧಿಕಾರಿಯನ್ನಾಗಿ ನೇಮಿಸುವೆನು,” ಎಂದು ಹೇಳಿದನು.
ಮೊದಲನೆಯ ತಿಂಗಳ ಹದಿಮೂರನೆಯ ದಿವಸದಲ್ಲಿ ಅರಸನ ಲೇಖಕರನ್ನು ಕರೆಸಲಾಯಿತು. ಹಾಮಾನನು ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಪ್ರತಿ ಪ್ರಾಂತದ ಮೇಲಿರುವ ಅರಸನ ಕೈ ಕೆಳಗಿನ ಉಪ ರಾಜರುಗಳಿಗೂ ಅಧಿಪತಿಗಳಿಗೂ ಪ್ರತಿ ಪ್ರಾಂತದಲ್ಲಿ ಜನರ ಮೇಲಿರುವ ಅಧಿಕಾರಿಗೂ ಅವರವರ ಸ್ವದೇಶಿ ಲಿಪಿಗಳಲ್ಲಿಯೂ, ಭಾಷೆಗಳಲ್ಲಿಯೂ ಪತ್ರಗಳನ್ನು ಬರೆದರು. ಅರಸನಾದ ಅಹಷ್ವೇರೋಷನ ಹೆಸರಿನಲ್ಲಿಯೇ ಲಿಖಿತವಾದ ಈ ಪತ್ರಗಳು ಅರಸನ ಉಂಗುರದಿಂದ ಅಧಿಕೃತ ರಾಜಮುದ್ರೆಯನ್ನು ಹೊಂದಿದ್ದವು.