Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 41:16 - ಕನ್ನಡ ಸಮಕಾಲಿಕ ಅನುವಾದ

16 ಯೋಸೇಫನು ಫರೋಹನಿಗೆ ಉತ್ತರವಾಗಿ, “ಅದನ್ನು ನಾನು ಹೇಳಲಾರೆ, ಆದರೆ ದೇವರು ಫರೋಹನಿಗೆ ಮೆಚ್ಚಿಕೆಯಾದ ಉತ್ತರವನ್ನು ಕೊಡುವರು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಅದಕ್ಕೆ ಯೋಸೇಫನು, “ನನ್ನಲ್ಲಿ ಅಂಥ ಸಾಮರ್ಥ್ಯವೇನೂ ಇಲ್ಲ. ಆದರೆ ದೇವರು ಫರೋಹನಿಗೆ ಶುಭಕರವಾದ ಉತ್ತರವನ್ನೂ ಕೊಡುವನು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಜೋಸೆಫನು, “ನನ್ನಲ್ಲಿ ಅಂಥ ಸಾಮರ್ಥ್ಯವೇನೂ ಇಲ್ಲ; ಆದರೆ ದೇವರು, ಫರೋಹ ಆದ ನಿಮಗೆ ತೃಪ್ತಿಕರವಾದ ಉತ್ತರಕೊಡಬಲ್ಲರು,” ಎಂದು ಹೇಳಿದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಯೋಸೇಫನು - ನನ್ನಲ್ಲಿ ಅಂಥ ಸಾಮರ್ಥ್ಯವೇನೂ ಇಲ್ಲ; ಆದರೆ ದೇವರು ಫರೋಹನಿಗೆ ಶುಭಕರವಾದ ಉತ್ತರವನ್ನು ಕೊಡಬಲ್ಲನೆಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಯೋಸೇಫನು, “ಕನಸುಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ನನ್ನಲ್ಲಿಲ್ಲ. ಆ ಶಕ್ತಿಯನ್ನು ಹೊಂದಿರುವವನು ದೇವರೊಬ್ಬನೇ. ಆದರೆ ದೇವರು ಫರೋಹನಿಗೋಸ್ಕರ ಅರ್ಥವನ್ನು ತಿಳಿಸುವನು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 41:16
19 ತಿಳಿವುಗಳ ಹೋಲಿಕೆ  

ನಮ್ಮಿಂದಲೇ ಉಂಟಾಯಿತು ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಯಾವ ಸಾಮರ್ಥ್ಯವೂ ಇಲ್ಲ. ನಮ್ಮ ಸಾಮರ್ಥ್ಯವು ದೇವರಿಂದಲೇ ಬರುತ್ತದೆ.


ಅವರು ಯೋಸೇಫನಿಗೆ, “ನಾವು ಕನಸನ್ನು ಕಂಡಿದ್ದೇವೆ, ಆದರೆ ಅದರ ಅರ್ಥವನ್ನು ನಮಗೆ ಹೇಳುವವರಿಲ್ಲ,” ಎಂದರು. ಯೋಸೇಫನು ಅವರಿಗೆ, “ಅರ್ಥ ಹೇಳುವುದು ದೇವರದಲ್ಲವೋ? ಎಂದು ಹೇಳಿ, ಅವುಗಳನ್ನು ನನಗೆ ಹೇಳಿರಿ,” ಎಂದನು.


ಅರಸನು ದಾನಿಯೇಲನಿಗೆ ಉತ್ತರವಾಗಿ, “ನೀನು ಈ ರಹಸ್ಯವನ್ನು ಪ್ರಕಟಮಾಡಲು ಸಮರ್ಥನಾದ್ದರಿಂದ ನಿಶ್ಚಯವಾಗಿ ನಿಮ್ಮ ದೇವರು ದೇವರುಗಳಿಗೆ ದೇವರಾಗಿಯೂ, ಅರಸುಗಳ ಒಡೆಯರಾಗಿಯೂ, ರಹಸ್ಯಗಳನ್ನು ಪ್ರಕಟ ಮಾಡುವವರಾಗಿಯೂ ಇದ್ದಾರೆ,” ಎಂದನು.


ಜನರನ್ನು ಕಂಡು ಪೇತ್ರನು ಅವರಿಗೆ ಹೇಳಿದ ಮಾತುಗಳಿವು: “ಇಸ್ರಾಯೇಲಿನ ಜನರೇ, ಈ ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನಮ್ಮ ಸ್ವಂತ ಬಲದಿಂದಾಗಲಿ, ಭಕ್ತಿಯಿಂದಾಗಲಿ ಈ ಮನುಷ್ಯನನ್ನು ನಡೆಯುವಂತೆ ಮಾಡಿದೆವೆಂದು ಭಾವಿಸಿ ನಮ್ಮ ಕಡೆಗೆ ಏಕೆ ನೋಡುತ್ತಿರುವಿರಿ?


ಯೆಹೋವ ದೇವರು ಅವರಿಗೆ ಹೀಗೆ ಹೇಳಿದನು, “ನನ್ನ ಮಾತುಗಳನ್ನು ಈಗ ಕೇಳಿರಿ: “ನಿಮ್ಮಲ್ಲಿ ಒಬ್ಬ ಪ್ರವಾದಿ ಇದ್ದರೆ ಯೆಹೋವ ದೇವರಾದ ನಾನು ದರ್ಶನದಲ್ಲಿ ಪ್ರಕಟಿಸುವೆನು, ಇಲ್ಲವೆ ಕನಸಿನಲ್ಲಿಯೂ ನಾನು ಅವನೊಡನೆ ಮಾತನಾಡುವೆನು.


ಆದರೆ ನಾನು ಎಂಥವನಾಗಿದ್ದೇನೋ, ಅದು ದೇವರ ಕೃಪೆಯಿಂದಲೇ ಆಗಿರುತ್ತದೆ. ನನಗುಂಟಾದ ದೇವರ ಕೃಪೆಯು ನಿಷ್ಫಲವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಎಷ್ಟೋ ಹೆಚ್ಚಾಗಿ ಪ್ರಯಾಸಪಟ್ಟೆನು. ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿದ್ದ ದೇವರ ಕೃಪೆಯೇ.


ಬಲಗೈ ಹಿಡಿದೆಬ್ಬಿಸಿದಾಗ ಕೂಡಲೇ ಆ ಮನುಷ್ಯನ ಪಾದ ಮತ್ತು ಹರಡುಗಳು ಬಲಗೊಂಡವು.


“ನೀನು ಇಂದಾದರೂ ನಿನ್ನ ಸಮಾಧಾನದ ವಿಷಯಗಳನ್ನು ಅರಿತುಕೊಂಡಿದ್ದರೆ, ಚೆನ್ನಾಗಿತ್ತು. ಆದರೆ ಈಗ ಅದು ನಿನ್ನ ಕಣ್ಣಿಗೆ ಮರೆಯಾಗಿದೆ.


ಮಹೋನ್ನತ ದೇವರು ನನ್ನ ವಿಷಯದಲ್ಲಿ ನಡೆಸಿರುವ ಸೂಚಕಕಾರ್ಯಗಳನ್ನೂ, ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂದು ನನಗೆ ವಿಹಿತವಾಗಿ ತೋರಿ ಬಂದಿದೆ.


ಅದಕ್ಕವನು, “ಯೆಹೋವ ದೇವರು ನಿನಗೆ ಸಹಾಯ ಮಾಡದೆ ಹೋದರೆ, ನಾನು ಎಲ್ಲಿಂದ ನಿನಗೆ ಸಹಾಯ ಮಾಡಲಿ? ಕಣದಿಂದಲೋ, ದ್ರಾಕ್ಷಿ ಆಲೆಯಿಂದಲೋ?” ಎಂದನು.


ಯಾಕೋಬನು ಅವನಿಗೆ, “ಹೋಗಿ ನಿನ್ನ ಸಹೋದರರ ಕ್ಷೇಮಸಮಾಚಾರವನ್ನೂ, ಮಂದೆಗಳ ಕ್ಷೇಮಸಮಾಚಾರವನ್ನೂ ತಿಳಿದುಕೊಂಡು ಬಂದು ನನಗೆ ತಿಳಿಸು,” ಎಂದು ಹೇಳಿ ಹೆಬ್ರೋನ್ ಕಣಿವೆಯಿಂದ ಕಳುಹಿಸಿದನು. ಯೋಸೇಫನು ಶೆಕೆಮಿಗೆ ಬಂದಾಗ,


ಅದಕ್ಕೆ ಫರೋಹನು ಯೋಸೇಫನಿಗೆ, “ನನ್ನ ಕನಸಿನಲ್ಲಿ, ನಾನು ನೈಲ್ ನದಿಯ ತೀರದಲ್ಲಿ ನಿಂತುಕೊಂಡಿದ್ದೆನು.


ಆಗ ಯೋಸೇಫನು ಫರೋಹನಿಗೆ, “ಫರೋಹನ ಎರಡು ಕನಸುಗಳ ವಿಷಯ ಒಂದೇ, ದೇವರು ಮಾಡಲಿರುವುದನ್ನು ಫರೋಹನಿಗೆ ತಿಳಿಸಿದ್ದಾರೆ.


“ನಾನು ಫರೋಹನಿಗೆ ಹೇಳಿದ ಮಾತಿನಂತೆ ದೇವರು ಮಾಡಲಿರುವುದನ್ನು ಫರೋಹನಿಗೆ ತೋರಿಸಿದ್ದಾರೆ.


ರಹಸ್ಯಗಳು ನಮ್ಮ ದೇವರಾದ ಯೆಹೋವ ದೇವರಿಗೆ ಸೇರಿದ್ದು, ಆದರೆ ಪ್ರಕಟವಾದ ಈ ನಿಯಮದ ಮಾತುಗಳನ್ನೆಲ್ಲಾ ನಾವು ಕೈಕೊಳ್ಳುವ ಹಾಗೆ ನಮಗೂ, ನಮ್ಮ ಮಕ್ಕಳಿಗೂ ನಿತ್ಯವಾಗಿ ಇರುತ್ತವೆ.


ಆಗ ಅವನು, “ಜೆರುಬ್ಬಾಬೆಲನಿಗೆ ಯೆಹೋವ ದೇವರ ವಾಕ್ಯವು ಇದೇ: ‘ಪರಾಕ್ರಮದಿಂದಲ್ಲ, ಶಕ್ತಿಯಿಂದಲ್ಲ, ನನ್ನ ಆತ್ಮದಿಂದಲೇ,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು