Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 4:26 - ಕನ್ನಡ ಸಮಕಾಲಿಕ ಅನುವಾದ

26 ಸೇತನಿಗೆ ಒಬ್ಬ ಮಗನು ಹುಟ್ಟಿದನು. ಅವನಿಗೆ ಎನೋಷ್ ಎಂದು ಹೆಸರಿಟ್ಟನು. ಆ ಕಾಲದಲ್ಲಿ ಜನರು, ಯೆಹೋವ ಎಂಬ ಹೆಸರನ್ನು ಆರಾಧಿಸುವುದಕ್ಕೆ ಪ್ರಾರಂಭಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ತರುವಾಯ ಸೇತನು ಮಗನನ್ನು ಪಡೆದು ಅವನಿಗೆ, “ಎನೋಷ್” ಎಂದು ಹೆಸರಿಟ್ಟನು. ಜನರು, “ಯೆಹೋವ” ಎಂಬ ಹೆಸರನ್ನು ಹೇಳಿಕೊಂಡು ಆರಾಧಿಸುವುದಕ್ಕೆ ಅಂದಿನಿಂದ ಪ್ರಾರಂಭಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ತರುವಾಯ ಸೇತನು ಸಹ ಒಬ್ಬ ಮಗನನ್ನು ಪಡೆದು ಅವನಿಗೆ “ಏನೋಷ್” ಎಂದು ಹೆಸರಿಟ್ಟನು. ಜನರು “ಸರ್ವೇಶ್ವರ” ಎಂಬ ಹೆಸರನ್ನು ಆರಾಧಿಸುವುದಕ್ಕೆ ಪ್ರಾರಂಭಿಸಿದ್ದು ಆ ಕಾಲದಲ್ಲಿಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ತರುವಾಯ ಸೇತನು ಸಹ ಮಗನನ್ನು ಪಡೆದು ಅವನಿಗೆ ಎನೋಷ್ ಎಂಬ ಹೆಸರಿಟ್ಟನು; ಆ ಕಾಲದಲ್ಲಿ ಯೆಹೋವ ಎಂಬ ಹೆಸರನ್ನು ಹೇಳಿಕೊಂಡು ಆರಾಧಿಸುವದಕ್ಕೆ ಪ್ರಾರಂಭವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಸೇತನು ಒಬ್ಬ ಮಗನನ್ನು ಪಡೆದನು. ಆ ಮಗುವಿಗೆ ಅವನು ಎನೋಷ್ ಎಂದು ಹೆಸರಿಟ್ಟನು. ಆ ಕಾಲದಲ್ಲಿ ಜನರು ಯೆಹೋವನ ಮೇಲೆ ಭರವಸೆ ಇಡಲಾರಂಭಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 4:26
17 ತಿಳಿವುಗಳ ಹೋಲಿಕೆ  

ನಾನು ನಿಮಗೆ ಕೃತಜ್ಞತೆಯ ಬಲಿಯನ್ನು ಅರ್ಪಿಸುವೆನು; ಯೆಹೋವ ದೇವರ ಹೆಸರನ್ನು ಕರೆಯುವೆನು.


ನೀವು ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ; ಅನಂತರ ನಾನು ಯೆಹೋವ ದೇವರ ಹೆಸರು ಹೇಳಿ ಪ್ರಾರ್ಥಿಸುವೆನು. ಅವರಿಬ್ಬರಲ್ಲಿ ಯಾರು ಆಲಿಸಿ, ಬೆಂಕಿಯನ್ನು ಕಳುಹಿಸುವರೋ, ಅವರೇ ದೇವರೆಂದು ನಿಶ್ಚಯಿಸೋಣ,” ಎಂದನು. ಅದಕ್ಕೆ ಜನರೆಲ್ಲರು ಉತ್ತರವಾಗಿ, “ಈ ಮಾತು ಸರಿ,” ಎಂದರು.


“ಆಗ ನಾನು ಜನರ ತುಟಿಗಳನ್ನು ಶುದ್ಧೀಕರಿಸುವೆನು. ಅವರೆಲ್ಲರೂ ಯೆಹೋವ ದೇವರ ಹೆಸರಿನಿಂದ ಮೊರೆಯಿಡುವರು. ಏಕಮನಸ್ಸಿನಿಂದ ಆತನಿಗೆ ಸೇವೆಮಾಡುವರು.


ಯೆಹೋವ ದೇವರ ಹೆಸರನ್ನು ಕರೆಯುವವರೆಲ್ಲರಿಗೆ ರಕ್ಷಣೆ ಆಗುವುದು. ಏಕೆಂದರೆ ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ ಅನೇಕರಿಗೆ ಮುಕ್ತಿ ದೊರಕುವುದು. ಯೆಹೋವ ದೇವರು ಹೇಳಿದ ಪ್ರಕಾರ ಯೆಹೋವ ದೇವರ ಕರೆಹೊಂದಿ ಉಳಿದವರಲ್ಲಿಯೂ ಬಿಡುಗಡೆ ಇರುವುದು.


ಅಲ್ಲಿಂದ ಅವರು ಬೇತೇಲಿನ ಪೂರ್ವದ ಬೆಟ್ಟಕ್ಕೆ ಹೋಗಿ, ಪಶ್ಚಿಮಕ್ಕೆ ಬೇತೇಲ್, ಪೂರ್ವಕ್ಕೆ ಆಯಿ ಎಂಬ ಊರೂ ಇರುವ ಹಾಗೆ ತನ್ನ ಗುಡಾರವನ್ನು ಹಾಕಿಕೊಂಡನು. ಅಲ್ಲಿ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿ, ಯೆಹೋವ ದೇವರ ಹೆಸರನ್ನು ಆರಾಧಿಸಿದನು.


ಕಯಿನಾನನು ಎನೋಷನ ಮಗನು, ಎನೋಷನು ಸೇಥನ ಮಗನು, ಸೇತನು ಆದಾಮನ ಮಗನು, ಆದಾಮನು ದೇವರ ಮಗನು.


ಆಗ ಯೆಹೂದ್ಯರು ಸುರಕ್ಷಿತರಾಗಿರುವರು. ಯೆರೂಸಲೇಮಿನವರು ನೆಮ್ಮದಿಯಿಂದ ವಾಸಿಸುವರು. ಯೆಹೋವ ಚಿದ್ಕೇನು ಅಂದರೆ ಯೆಹೋವ ದೇವರೇ ನಮ್ಮ ಸದ್ಧರ್ಮ ಎಂಬ ಹೆಸರು ಈ ನಗರಕ್ಕೆ ಸಲ್ಲುವುದು.’


ಆಗ ಇಸಾಕನು ಅಲ್ಲಿ ಬಲಿಪೀಠವನ್ನು ಕಟ್ಟಿ, ಯೆಹೋವ ದೇವರ ಹೆಸರನ್ನು ಹೇಳಿಕೊಂಡು, ತನ್ನ ಗುಡಾರವನ್ನು ಹಾಕಿದನು. ಆಗ ಇಸಾಕನ ಸೇವಕರು ಅಲ್ಲಿ ಒಂದು ಬಾವಿಯನ್ನು ಅಗೆದರು.


ಕ್ರಿಸ್ತ ಯೇಸುವಿನಲ್ಲಿ ಪ್ರತ್ಯೇಕವಾಗಿ, ಪವಿತ್ರರಾಗುವುದಕ್ಕೆ ಕರೆಹೊಂದಿದ ಕೊರಿಂಥದಲ್ಲಿರುವ ದೇವರ ಸಭೆಗೆ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ನಾಮದಲ್ಲಿ ವಿಶ್ವಾಸವಿಟ್ಟ ಸಕಲ ಜನರಿಗೂ ಬರೆಯುವ ಪತ್ರ:


ಏಕೆಂದರೆ, “ಕರ್ತನ ಹೆಸರನ್ನು ಕರೆಯುವವರೆಲ್ಲರಿಗೆ ರಕ್ಷಣೆ ಆಗುವುದು.”


ಅಲ್ಲಿ ಸೌಲನನ್ನು ಭೇಟಿಯಾಗಿ, ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಅನಂತರ ಇಡೀ ಒಂದು ವರ್ಷಕಾಲ ಬಾರ್ನಬನು, ಸೌಲನು ಅಲ್ಲಿ ಸಭೆಯವರೊಂದಿಗೆ ಇದ್ದುಕೊಂಡು ಬಹಳ ಜನರಿಗೆ ಬೋಧನೆ ಮಾಡಿದರು. ಶಿಷ್ಯರಿಗೆ ಪ್ರಥಮ ಬಾರಿ “ಕ್ರೈಸ್ತರು” ಎಂಬ ಹೆಸರು ಬಂದದ್ದು ಅಂತಿಯೋಕ್ಯದಲ್ಲಿಯೇ.


ಆಗ ಕರ್ತದೇವರ ಹೆಸರನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆ ಆಗುವುದು.’


ನಾವು ಆದಿಯಿಂದಲೂ ನಿಮ್ಮವರಾಗಿದ್ದೇವೆ. ಅವರ ಮೇಲೆ ನೀವು ದೊರೆತನ ಮಾಡಲಿಲ್ಲ. ಅವರು ನಿಮ್ಮ ಹೆಸರನ್ನು ಧರಿಸಲೂ ಇಲ್ಲ.


“ಇಸ್ರಾಯೇಲ್ ಎಂಬ ಹೆಸರಿನವರೂ, ಯೆಹೂದವೆಂಬ ಒರತೆಯಿಂದ ಬಂದವರೂ ಆದ ಯಾಕೋಬನ ಮನೆತನದವರೇ, ಇದನ್ನು ಕೇಳಿರಿ: ಯೆಹೋವ ದೇವರ ಹೆಸರಿನ ಮೇಲೆ ಆಣೆ ಇಟ್ಟು, ಇಸ್ರಾಯೇಲಿನ ದೇವರನ್ನು ಸ್ಮರಿಸುತ್ತೀರಿ. ಆದರೆ ಸತ್ಯದಿಂದಲೂ ಅಥವಾ ನೀತಿಯಿಂದಲೂ ಅಲ್ಲ.


ಒಬ್ಬನು, ‘ನಾನು ಯೆಹೋವನವನು,’ ಅನ್ನುವನು, ಇನ್ನೊಬ್ಬನು ನಾನು, ‘ಯಾಕೋಬನ ಹೆಸರಿನವನು,’ ಎಂದು ಹೇಳಿಕೊಳ್ಳುವನು. ಮತ್ತೊಬ್ಬನು ತನ್ನ ಕೈಯ ಮೇಲೆ, ‘ಯೆಹೋವ ದೇವರಿಗೆ ಸ್ವಂತ,’ ಎಂದು ಬರೆಯಿಸಿಕೊಂಡು, ತನ್ನಷ್ಟಕ್ಕೆ ತಾನೇ ಇಸ್ರಾಯೇಲಿನ ಅಡ್ಡಹೆಸರನ್ನು ಇಟ್ಟುಕೊಳ್ಳುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು