Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 37:25 - ಕನ್ನಡ ಸಮಕಾಲಿಕ ಅನುವಾದ

25 ಅವರು ಊಟಕ್ಕೆ ಕುಳಿತುಕೊಂಡಾಗ, ತಮ್ಮ ಕಣ್ಣುಗಳನ್ನೆತ್ತಿ ನೋಡಲಾಗಿ, ಇಷ್ಮಾಯೇಲರ ಗುಂಪು ಗಿಲ್ಯಾದಿನಿಂದ ಬರುತ್ತಿತ್ತು. ಅವರ ಒಂಟೆಗಳು ಸಾಂಬ್ರಾಣಿ, ಸುಗಂಧ ತೈಲ, ರಕ್ತಬೋಳಗಳನ್ನು ಹೊರುತ್ತಿದ್ದವು. ಅವರು ಅವುಗಳನ್ನು ಈಜಿಪ್ಟಿಗೆ ತೆಗೆದುಕೊಂಡು ಹೋಗುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಆ ಮೇಲೆ ಅವರು ಊಟಕ್ಕೆ ಕುಳಿತುಕೊಂಡಾಗ ಅವರು ತಮ್ಮ ಕಣ್ಣುಗಳನ್ನೆತ್ತಿ ನೋಡಲಾಗಿ, ಇಷ್ಮಾಯೇಲರ ಗುಂಪು ಒಂಟೆಗಳ ಮೇಲೆ ಪರಿಮಳ ದ್ರವ್ಯ, ಸುಗಂಧ ತೈಲ, ರಕ್ತಬೋಳ, ಇವುಗಳನ್ನು ಹೇರಿಕೊಂಡು ಗಿಲ್ಯಾದಿನಿಂದ ಐಗುಪ್ತದೇಶಕ್ಕೆ ಪ್ರಯಾಣಮಾಡುತ್ತಾ ಬರುವುದನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ತರುವಾಯ ಅವರು ಊಟಕ್ಕೆ ಕುಳಿತುಕೊಂಡರು. ಅಷ್ಟರಲ್ಲಿ, ಇಷ್ಮಾಯೇಲರ ಗುಂಪೊಂದು ಗಿಲ್ಯಾದಿನಿಂದ ಬರುವುದು ಅವರ ಕಣ್ಣಿಗೆ ಕಾಣಿಸಿತು. ಇವರು ತಮ್ಮ ಒಂಟೆಗಳ ಮೇಲೆ ಪರಿಮಳ ಪದಾರ್ಥ, ಸುಗಂಧ ತೈಲ, ರಸಗಂಧ ಇವುಗಳನ್ನು ಹೇರಿಕೊಂಡು, ಈಜಿಪ್ಟಿಗೆ ಪ್ರಯಾಣಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಆಮೇಲೆ ಅವರು ಊಟಕ್ಕೆ ಕೂತುಕೊಂಡರು. ಅಷ್ಟರಲ್ಲಿ ಅವರು ಕಣ್ಣೆತ್ತಿ ನೋಡಿ ಇಷ್ಮಾಯೇಲ್ಯರ ಗುಂಪು ಒಂಟೆಗಳ ಮೇಲೆ ಹಾಲುಮಡ್ಡಿ, ಸುಗಂಧತೈಲ, ರಕ್ತಬೋಳ ಇವುಗಳನ್ನು ಹೇರಿಕೊಂಡು ಗಿಲ್ಯಾದಿನಿಂದ ಐಗುಪ್ತದೇಶಕ್ಕೆ ಪ್ರಯಾಣಮಾಡುತ್ತಾ ಬರುವದನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಯೋಸೇಫನು ಬಾವಿಯೊಳಗಿದ್ದಾಗ, ಅವನ ಅಣ್ಣಂದಿರು ಊಟಕ್ಕೆ ಕುಳಿತುಕೊಂಡರು. ಅವರು ಕಣ್ಣೆತ್ತಿ ನೋಡಿದಾಗ ಗಿಲ್ಯಾದಿನಿಂದ ಈಜಿಪ್ಟಿಗೆ ಹೋಗುತ್ತಿದ್ದ ವ್ಯಾಪಾರಿಗಳನ್ನು ಕಂಡರು. ಅವರ ಒಂಟೆಗಳು ಅನೇಕ ಬಗೆಯ ಸಾಂಬಾರ ಪದಾರ್ಥಗಳನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ಹೊತ್ತುಕೊಂಡು ಹೋಗುತ್ತಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 37:25
22 ತಿಳಿವುಗಳ ಹೋಲಿಕೆ  

ಆಗ ಅವರ ತಂದೆ ಇಸ್ರಾಯೇಲನು ಅವರಿಗೆ, “ಹಾಗಿದ್ದರೆ ನೀವು ಹೀಗೆ ಮಾಡಿರಿ. ಈ ದೇಶದಲ್ಲಿ ದೊರಕುವ ಶ್ರೇಷ್ಠವಾದ ಫಲಗಳನ್ನು ನಿಮ್ಮೊಂದಿಗೆ ಇಟ್ಟುಕೊಂಡು, ಆ ಮನುಷ್ಯನಿಗೆ ಕಾಣಿಕೆ ತೆಗೆದುಕೊಂಡು ಹೋಗಿರಿ. ಅಂದರೆ, ಸ್ವಲ್ಪ ತೈಲ, ಸ್ವಲ್ಪ ಜೇನು, ಸುಗಂಧದ್ರವ್ಯ, ರಕ್ತಬೋಳ, ಆಕ್ರೋಡು ಮತ್ತು ಬಾದಾಮಿ ಇವುಗಳನ್ನು ತೆಗೆದುಕೊಂಡು ಹೋಗಿರಿ.


ಈ ಪ್ರಕಾರ ಮಿದ್ಯಾನ್ಯರ ವರ್ತಕರು ಹಾದುಹೋಗುತ್ತಿದ್ದಾಗ, ಅವರು ಯೋಸೇಫನನ್ನು ಗುಂಡಿಯಿಂದ ಮೇಲೆತ್ತಿ, ಇಷ್ಮಾಯೇಲರಿಗೆ ಅವನನ್ನು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಿದರು. ಅವರು ಯೋಸೇಫನನ್ನು ಈಜಿಪ್ಟಿಗೆ ಕರೆದುಕೊಂಡು ಹೋದರು.


ಗಿಲ್ಯಾದಿನಲ್ಲಿ ಮುಲಾಮು ಇಲ್ಲವೋ? ಅಲ್ಲಿ ವೈದ್ಯನಿಲ್ಲವೋ? ಹಾಗಾದರೆ ನನ್ನ ಜನರ ಗಾಯಕ್ಕೆ ಏಕೆ ಸ್ವಸ್ಥತೆ ಇಲ್ಲ?


ಇದರೊಂದಿಗೆ, ಆ ಮಿದ್ಯಾನ್ಯರು ಯೋಸೇಫನನ್ನು ಈಜಿಪ್ಟ್ ದೇಶಕ್ಕೆ ತೆಗೆದುಕೊಂಡುಹೋಗಿ ಪೋಟೀಫರನಿಗೆ ಮಾರಿದರು. ಇವನು ಫರೋಹನ ಉದ್ಯೋಗಸ್ಥನೂ ಮೈಗಾವಲಿನ ದಳಪತಿಯೂ ಆಗಿದ್ದನು.


ನೀವು ತುಂಬಿದ ಪಾತ್ರೆಗಳಲ್ಲಿ ದ್ರಾಕ್ಷಾರಸವನ್ನು ಕುಡಿಯುತ್ತೀರಿ, ಶ್ರೇಷ್ಠವಾದ ಎಣ್ಣೆಗಳಿಂದ ನಿಮ್ಮನ್ನು ಅಭಿಷೇಕಿಸಿಕೊಳ್ಳುತ್ತೀರಿ. ಆದರೆ ಯೋಸೇಫನ ನಷ್ಟಕ್ಕೆ ವ್ಯಸನ ಪಡುವುದಿಲ್ಲ.


“ಈಜಿಪ್ಟಿನ ಮಗಳಾದ ಕನ್ನಿಕೆಯೇ, ಗಿಲ್ಯಾದಿಗೆ ಹೋಗಿ ತೈಲವನ್ನು ತೆಗೆದುಕೋ. ನೀನು ಬಹಳ ಔಷಧವನ್ನು ತೆಗೆದುಕೊಳ್ಳುವುದು ವ್ಯರ್ಥವಾಗಿದೆ. ಏಕೆಂದರೆ ನಿನಗೆ ಗುಣವಾಗುವುದಿಲ್ಲ!


“ಜಾರಸ್ತ್ರೀಯ ನಡತೆಯು ಹೀಗಿದೆ: ಅವಳು ತಿಂದು, ತನ್ನ ಬಾಯನ್ನು ಒರೆಸಿಕೊಂಡು ‘ನಾನು ಯಾವುದೇ ತಪ್ಪು ಮಾಡಿಲ್ಲ,’ ಎಂದು ಹೇಳುತ್ತಾಳೆ.


ದುಷ್ಟತ್ವವನ್ನು ನಡೆಸುವವರಿಗೆ ಏನೂ ತಿಳಿಯುವುದಿಲ್ಲವೋ? ಅವರು ನನ್ನ ಜನರನ್ನು ರೊಟ್ಟಿಯಂತೆ ತಿಂದು ಬಿಡುತ್ತಾರೆಯೋ? ಆದರೆ ಅವರು ಯೆಹೋವ ದೇವರಿಗೆ ಎಂದೂ ಮೊರೆಯಿಡುವುದಿಲ್ಲ.


ಯೋಸೇಫನನ್ನು ಕರೆದುಕೊಂಡುಹೋದ ಇಷ್ಮಾಯೇಲರು ಈಜಿಪ್ಟಿಗೆ ಸೇರಿದಾಗ ಅವನನ್ನು ಈಜಿಪ್ಟಿನ ಪೋಟೀಫರ್ ಎಂಬವನಿಗೆ ಮಾರಿಬಿಟ್ಟರು. ಪೋಟೀಫರನು ಫರೋಹನ ಉದ್ಯೋಗಸ್ಥನೂ ಮೈಗಾವಲಿನ ದಳಪತಿಯೂ ಆಗಿದ್ದನು.


ಆಗ ಅವನು ತನ್ನ ಬಂಧುಗಳನ್ನು ಕರೆದುಕೊಂಡು, ಅವನನ್ನು ಬೆನ್ನಟ್ಟಿ, ಏಳು ದಿನ ಪ್ರಯಾಣಮಾಡಿ, ಗಿಲ್ಯಾದ್ ಪರ್ವತದಲ್ಲಿ ಅವನನ್ನು ಸಂಧಿಸಿದನು.


ಎದೋಮ್ಯರ ಮತ್ತು ಇಷ್ಮಾಯೇಲ್ಯರ ಪಾಳೆಯದವರು ಮೋವಾಬ್ಯರು, ಹಗ್ರೀಯರು,


ಅಂಚೆಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು. ಶೂಷನಿನ ಅರಮನೆಯಲ್ಲಿಂದ ಆ ಆಜ್ಞೆಯು ಹೊರಡಿತು. ಅರಸನೂ ಹಾಮಾನನೂ ಮದ್ಯಪಾನ ಮಾಡಲು ಕುಳಿತುಕೊಂಡರು. ಆದರೆ ಶೂಷನ್ ಪಟ್ಟಣವೋ ತಳಮಳಗೊಂಡಿತ್ತು.


ಅವನು ತನಗಿದ್ದದ್ದನ್ನೆಲ್ಲಾ ತೆಗೆದುಕೊಂಡು ಓಡಿಹೋದನು. ಅವನು ಎದ್ದು ಗಿಲ್ಯಾದ್ ಪರ್ವತಕ್ಕೆ ಅಭಿಮುಖವಾಗಿ ಯೂಫ್ರೇಟೀಸ್ ನದಿಯನ್ನು ದಾಟಿದನು.


ಅವನನ್ನು ತೆಗೆದುಕೊಂಡು ಗುಂಡಿಯಲ್ಲಿ ಹಾಕಿದರು. ಆ ಗುಂಡಿ ನೀರಿಲ್ಲದೆ ಬರಿದಾಗಿತ್ತು.


ಅದರೊಂದಿಗೆ ಗಿಲ್ಯಾದ್, ಗೆಷೂರ್ಯರ, ಮಾಕಾತೀಯರ ಮೇರೆಯೂ ಹೆರ್ಮೋನ್ ಪರ್ವತವೆಲ್ಲವೂ ಸಲೆಕಾವರೆಗೆ ಇರುವ ಇಡೀ ಬಾಷಾನ್ ಪೂರ್ತಿಯಾಗಿ.


ಯೆಹೋವ ದೇವರು ಯೆಹೂದದ ಅರಸನ ಅರಮನೆಗೆ ಹೀಗೆ ಹೇಳುತ್ತಾರೆ: “ನೀನು ನನಗೆ ಗಿಲ್ಯಾದೂ, ಲೆಬನೋನಿನ ಗಿರಿಶೃಂಗ ಆಗಿದ್ದೀ. ಆದರೂ ನಿಶ್ಚಯವಾಗಿ ನಿನ್ನನ್ನು ಮರುಭೂಮಿಯಾಗಿಯೂ, ನಿವಾಸಿಗಳಿಲ್ಲದ ಪಟ್ಟಣಗಳನ್ನಾಗಿಯೂ ಮಾಡುವೆನು.


ಪೂರ್ವದಲ್ಲಿ ಹವ್ರಾನ್, ದಮಸ್ಕ, ಗಿಲ್ಯಾದ್ ಇವುಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯೆ ಯೊರ್ದನ್ ಹೊಳೆಯ ಮೇರೆಯಿಂದ ಲವಣ ಸಮುದ್ರದಿಂದ ಮತ್ತು ತಾಮರ್ ನೀವು ಅಳೆಯಬೇಕು. ಇದೇ ಪೂರ್ವದಿಕ್ಕಿನ ಮೇರೆಯಾಗಿದೆ.


ನನ್ನ ಪ್ರಿಯಳೇ, ನನ್ನ ವಧುವೇ, ನಾನು ನನ್ನ ತೋಟಕ್ಕೆ ಬಂದಿರುವೆ. ನನ್ನ ರಕ್ತಬೋಳ ಸುಗಂಧಗಳನ್ನೂ ಕೂಡಿಸಿರುವೆ. ನನ್ನ ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿರುವೆ. ನನ್ನ ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿದ್ದೇನೆ. ಸ್ನೇಹಿತರೇ, ಊಟಮಾಡಿರಿ, ಕುಡಿಯಿರಿ. ಹೌದು ಪ್ರಿಯರೇ, ಸಮೃದ್ಧಿಯಾಗಿ ಪಾನಮಾಡಿರಿ.


ದಂತದ ಮಂಚಗಳ ಮೇಲೆ ಮಲಗಿಕೊಳ್ಳುತ್ತೀರಿ. ತಮ್ಮ ಹಾಸಿಗೆಗಳ ಮೇಲೆ ಹಾಯಾಗಿ ಒರಗಿಕೊಳ್ಳುತ್ತೀರಿ. ಮಂದೆಯೊಳಗಿಂದ ಕುರಿಮರಿಗಳನ್ನೂ ಹಟ್ಟಿಯ ಮಂದೆಯೊಳಗಿಂದ ಕರುಗಳನ್ನೂ ತಿನ್ನುತ್ತೀರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು