Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 34:9 - ಕನ್ನಡ ಸಮಕಾಲಿಕ ಅನುವಾದ

9 ನೀವು ನಮ್ಮೊಂದಿಗೆ ಮದುವೆ ಸಂಬಂಧ ಮಾಡಿಕೊಳ್ಳಿರಿ. ನಿಮ್ಮ ಪುತ್ರಿಯರನ್ನು ನಮಗೆ ಕೊಡಿರಿ, ನಮ್ಮ ಪುತ್ರಿಯರನ್ನು ನೀವು ಮದುವೆಯಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಇದಲ್ಲದೆ ನೀವು ನಮ್ಮಲ್ಲೇ ವಾಸವಾಗಿದ್ದು ನಿಮ್ಮ ಹೆಣ್ಣು ಮಕ್ಕಳನ್ನು ನಮಗೆ ಕೊಡುತ್ತಾ ನಮ್ಮ ಹೆಣ್ಣುಮಕ್ಕಳನ್ನು ನೀವು ತೆಗೆದುಕೊಳ್ಳುತ್ತಾ ನಮ್ಮೊಂದಿಗೆ ಬೀಗರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಅಲ್ಲದೆ ನೀವು ನಮ್ಮಲ್ಲೇ ವಾಸವಾಗಿರಬಹುದು; ನಿಮ್ಮ ಹೆಣ್ಣುಮಕ್ಕಳನ್ನು ನಮಗೆ ಕೊಡಬೇಕು; ನಮ್ಮ ಹೆಣ್ಣು ಮಕ್ಕಳನ್ನು ನೀವು ತೆಗೆದುಕೊಳ್ಳಬೇಕು; ನಾವು ಬೀಗರಾಗಿ ಬಾಳಬೇಕು, ನಾಡೆಲ್ಲಾ ನಿಮ್ಮ ಮುಂದೆ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಇದಲ್ಲದೆ ನೀವು ನಮ್ಮಲ್ಲೇ ವಾಸವಾಗಿದ್ದು ನಿಮ್ಮ ಹೆಣ್ಣು ಮಕ್ಕಳನ್ನು ನಮಗೆ ಕೊಡುತ್ತಾ ನಮ್ಮ ಹೆಣ್ಣುಮಕ್ಕಳನ್ನು ನೀವು ತೆಗೆದುಕೊಳ್ಳುತ್ತಾ ಬೀಗರಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಈ ಮದುವೆಯು ನಮಗಾಗಿರುವ ಒಂದು ವಿಶೇಷ ಒಪ್ಪಂದವನ್ನು ತೋರಿಸುತ್ತದೆ. ಅದೇನೆಂದರೆ, ನಮ್ಮ ಗಂಡಸರು ನಿಮ್ಮ ಸ್ತ್ರೀಯರನ್ನು ಮದುವೆಯಾಗಬಹುದು ಮತ್ತು ನಿಮ್ಮ ಗಂಡಸರು ನಮ್ಮ ಸ್ತ್ರೀಯರನ್ನು ಮದುವೆಯಾಗಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 34:9
9 ತಿಳಿವುಗಳ ಹೋಲಿಕೆ  

ಅವರ ಸಂಗಡ ಮದುವೆ ಮಾಡಿಕೊಳ್ಳಬಾರದು. ನಿಮ್ಮ ಪುತ್ರಿಯರನ್ನು ಅವರ ಮಕ್ಕಳಿಗೆ ಕೊಡಬಾರದು. ನಿಮ್ಮ ಪುತ್ರರಿಗೆ ಅವರ ಪುತ್ರಿಯರನ್ನು ತೆಗೆದುಕೊಳ್ಳಬಾರದು.


ರೆಬೆಕ್ಕಳು ಇಸಾಕನಿಗೆ, “ಹಿತ್ತಿಯ ಸ್ತ್ರೀಯರ ದೆಸೆಯಿಂದ ನನ್ನ ಜೀವ ನನಗೆ ಬೇಸರವಾಗಿದೆ. ಇಂಥ ಹಿತ್ತಿಯ ಸ್ತ್ರೀಯರಲ್ಲಿ ಒಬ್ಬಳನ್ನು ತನ್ನ ಹೆಂಡತಿಯಾಗಿ ಯಾಕೋಬನು ಮದುವೆ ಮಾಡಿಕೊಂಡರೆ, ನಾನು ಬದುಕಿರುವುದು ವ್ಯರ್ಥ,” ಎಂದಳು.


ನೀನು ನನ್ನ ಸುತ್ತಲೂ ವಾಸವಾಗಿರುವ ಕಾನಾನ್ಯರ ಪುತ್ರಿಯರೊಳಗಿಂದ ನನ್ನ ಮಗನಿಗೆ ಹೆಂಡತಿಯನ್ನು ತೆಗೆದುಕೊಳ್ಳಬಾರದು.


ಆಗ ಲೋಟನು ಹೊರಟುಹೋಗಿ, ತನ್ನ ಪುತ್ರಿಯರನ್ನು ಗೊತ್ತುಮಾಡಿದ್ದ ಅಳಿಯಂದಿರ ಸಂಗಡ ಮಾತನಾಡಿ, “ಎದ್ದು ಈ ಸ್ಥಳದಿಂದ ಹೊರಡಿರಿ. ಏಕೆಂದರೆ ಯೆಹೋವ ದೇವರು ಈ ಪಟ್ಟಣವನ್ನು ನಾಶಮಾಡುವುದಕ್ಕಿದ್ದಾರೆ,” ಎಂದನು. ಆದರೆ ಅವನು ತನ್ನ ಅಳಿಯಂದಿರಿಗೆ ಪರಿಹಾಸ್ಯಮಾಡುವಂತೆ ಕಾಣಿಸಿದನು.


ಆಗ ದೇವಪುತ್ರರು, ಮನುಷ್ಯ ಪುತ್ರಿಯರ ಸೌಂದರ್ಯವನ್ನು ಕಂಡು ಅವರನ್ನು ಆರಿಸಿಕೊಂಡು, ತಮಗೆ ಹೆಂಡತಿಯರನ್ನಾಗಿ ಮಾಡಿಕೊಂಡರು.


ಹಮೋರನು ಅವರಿಗೆ, “ನನ್ನ ಮಗ ಶೆಕೆಮನ ಮನಸ್ಸು ನಿಮ್ಮ ಮಗಳನ್ನು ಆಶಿಸುತ್ತದೆ. ಆಕೆಯನ್ನು ಅವನಿಗೆ ಹೆಂಡತಿಯಾಗಿ ಕೊಡಿರಿ, ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ.


ಇದಲ್ಲದೆ ನೀವು ನಮ್ಮ ಸಂಗಡ ವಾಸಮಾಡಿರಿ. ದೇಶವು ನಿಮ್ಮ ಮುಂದೆ ಇದೆ. ನೀವು ಅದರಲ್ಲಿ ವಾಸಿಸಿ, ಅದರಲ್ಲಿ ವ್ಯಾಪಾರಮಾಡಿ, ಅದರಿಂದ ಆಸ್ತಿಯನ್ನು ಮಾಡಿಕೊಳ್ಳಿರಿ,” ಎಂದನು.


ನಾವು ನಿಮ್ಮ ಆಜ್ಞೆಗಳನ್ನು ಪುನಃ ಮೀರಿ ಅಸಹ್ಯ ಅಭ್ಯಾಸಕರಾದ ಈ ಜನರ ಸಂಗಡ ವಿವಾಹ ಸಂಬಂಧ ಮಾಡಬಹುದೇ? ಹಾಗೆ ಮಾಡಿದರೆ, ಉಳಿದವರೂ ತಪ್ಪಿಸಿಕೊಂಡವರೂ ಇಲ್ಲದಂತೆ ದಂಡಿಸಲು, ನೀವು ನಮ್ಮ ಮೇಲೆ ಕೋಪಗೊಳ್ಳುವುದು ಯೋಗ್ಯವೇ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು