Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 32:2 - ಕನ್ನಡ ಸಮಕಾಲಿಕ ಅನುವಾದ

2 ಯಾಕೋಬನು ಅವರನ್ನು ನೋಡಿದಾಗ, “ಇದು ದೇವರ ಸೈನ್ಯ,” ಎಂದು ಹೇಳಿ, ಆ ಸ್ಥಳಕ್ಕೆ ಮಹನಯಿಮ್ ಎಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಯಾಕೋಬನು ಅವರನ್ನು ನೋಡಿದಾಗ, “ಇದು ದೇವರ ಸೇನಾನಿವೇಶ” ಎಂದು ಹೇಳಿ ಆ ಸ್ಥಳಕ್ಕೆ “ಮಹನಯಿಮ್” ಎಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ದೇವದೂತರು ಅವನೆದುರಿಗೆ ಬಂದರು. ಯಕೋಬನು ಅವರನ್ನು ನೋಡಿ, “ಇದು ದೇವರ ಪಾಳೆಯ,” ಏಂದು ಹೇಳಿ ಆ ಸ್ಥಳಕ್ಕೆ ‘ಮಹನಯಿಮ್’ ಎಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಅವನು ಅವರನ್ನು ನೋಡಿದಾಗ - ಅದು ದೇವರ ಪಾಳೆಯ ಎಂದು ಹೇಳಿ ಆ ಸ್ಥಳಕ್ಕೆ ಮಹನಯಿಮ್ ಎಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಆದ್ದರಿಂದ ಅವನು, “ಇದು ದೇವರ ಪಾಳೆಯ” ಎಂದು ಹೇಳಿ “ಮಹನಯಿಮ್” ಎಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 32:2
17 ತಿಳಿವುಗಳ ಹೋಲಿಕೆ  

ಸೌಲನ ಸೈನ್ಯಾಧಿಪತಿಯಾದ ನೇರನ ಮಗನಾಗಿರುವ ಅಬ್ನೇರನು ಸೌಲನ ಮಗ ಈಷ್ಬೋಶೆತನನ್ನು ಮಹನಯಿಮಿಗೆ ಕರೆದುಕೊಂಡು ಹೋದನು.


ಗಾದ್ಯರ ಗೋತ್ರದಲ್ಲಿ, ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಗಿಲ್ಯಾದಿನ ರಾಮೋತನ್ನೂ, ಮಹನಯಿಮನ್ನೂ,


ಅದಕ್ಕೆ ಆತನು, “ನಾನು ಅಂಥವನಲ್ಲ, ಯೆಹೋವ ದೇವರ ಸೈನ್ಯದ ಅಧಿಪತಿಯಾಗಿ ಈಗ ನಾನು ಬಂದಿದ್ದೇನೆ,” ಎಂದನು. ಆಗ ಯೆಹೋಶುವನು ಬೋರಲು ಬಿದ್ದು ಆತನನ್ನು ಆರಾಧಿಸಿ, ಆತನಿಗೆ, “ನನ್ನ ಒಡೆಯಾ, ತಮ್ಮ ಸೇವಕನಿಗೆ ಹೇಳಬೇಕಾಗಿರುವ ಸಂದೇಶವೇನು?” ಎಂದನು.


ತಕ್ಷಣವೇ ಆ ದೂತನ ಸಂಗಡ ಇದ್ದ ಪರಲೋಕ ಸೈನ್ಯದ ಸಮೂಹವು ದೇವರನ್ನು ಕೊಂಡಾಡುತ್ತಾ ಹೀಗೆ ಹೇಳಿದರು:


ದೇವರ ದೂತರುಗಳೇ, ದೇವರನ್ನು ಸ್ತುತಿಸಿರಿ; ದೇವರ ಪರಲೋಕದ ಎಲ್ಲಾ ಸೈನ್ಯಗಳೇ, ದೇವರನ್ನು ಸ್ತುತಿಸಿರಿ.


ದೇವರಿಗೆ ಭಯಪಡುವವರ ಸುತ್ತಲೂ ಯೆಹೋವ ದೇವರ ದೂತನು ಇಳಿದುಕೊಂಡು ಅವರನ್ನು ಕಾಪಾಡುತ್ತಾನೆ.


“ಇದಲ್ಲದೆ ನಾನು ಮಹನಯಿಮಿಗೆ ಹೋಗುವ ದಿನದಲ್ಲಿ ಘೋರವಾದ ಶಾಪದಿಂದ ನನ್ನನ್ನು ಶಪಿಸಿದ ಬಹುರೀಮಿನ ಬೆನ್ಯಾಮೀನನಾದ ಗೇರನ ಮಗನಾಗಿರುವ ಶಿಮ್ಮಿಯು ನಿನ್ನ ಬಳಿಯಲ್ಲಿದ್ದಾನೆ. ಅವನು ಯೊರ್ದನ್ ನದಿ ಬಳಿಯಲ್ಲಿ ನನ್ನನ್ನು ಎದುರುಗೊಳ್ಳಲು ಬಂದದ್ದರಿಂದ, ‘ನಾನು ನಿನ್ನನ್ನು ಖಡ್ಗದಿಂದ ಕೊಲ್ಲುವುದಿಲ್ಲ,’ ಎಂದು ಯೆಹೋವ ದೇವರ ಹೆಸರಿನಲ್ಲಿ ಆಣೆಯಿಟ್ಟೆನು.


ದಾವೀದನು ಮಹನಯಿಮಿಗೆ ಬಂದನು. ಇದಲ್ಲದೆ ಅಬ್ಷಾಲೋಮನೂ, ಅವನ ಸಂಗಡ ಇಸ್ರಾಯೇಲ್ ಮನುಷ್ಯರೂ ಯೊರ್ದನನ್ನು ದಾಟಿದರು.


ಅವನು, “ನಾನು ನಿನ್ನ ಹತ್ತಿರ ಬಂದ ಕಾರಣವು ನಿನಗೆ ತಿಳಿಯಿತೇ. ಈಗ ನಾನು ಪಾರಸಿಯದ ರಾಜಪುತ್ರನ ಸಂಗಡ ಯುದ್ಧಮಾಡಲು ಹಿಂದಿರುಗಬೇಕು. ನಾನು ಹೋದ ಮೇಲೆ, ಗ್ರೀಕಿನ ರಾಜಕುಮಾರನು ಬರುವನು.


ತಿರುಗಿ ಬಾ, ತಿರುಗಿ ಬಾ, ಶೂಲಮ್ ಊರಿನವಳೇ, ನಾವು ನಿನ್ನನ್ನು ನೋಡುವಂತೆ ತಿರುಗಿ ಬಾ, ತಿರುಗಿ ಬಾ! ಎರಡು ಗುಂಪಿನ ನರ್ತಕಿಯರ ನಡುವೆ ಕುಣಿಯುತ್ತಿರುವ, ಶೂಲಮ್ ಊರಿನವಳನ್ನು ನೀವು ನೋಡುವುದೇಕೆ?


ದೇವರ ಇಷ್ಟವನ್ನು ನಡೆಸುವ ಸೇವಕರೇ, ಅವರ ಎಲ್ಲಾ ಸೈನ್ಯಗಳೇ, ಯೆಹೋವ ದೇವರನ್ನು ಸ್ತುತಿಸಿರಿ.


ಆಗ ಎಲೀಷನು, “ಯೆಹೋವ ದೇವರೇ, ನೀವು ದಯಮಾಡಿ ಇವನು ಕಾಣುವ ಹಾಗೆ ಇವನ ಕಣ್ಣುಗಳನ್ನು ತೆರೆಯಿರಿ,” ಎಂದು ಪ್ರಾರ್ಥಿಸಿದನು. ಯೆಹೋವ ದೇವರು ಆ ಯುವ ಸೇವಕನ ಕಣ್ಣುಗಳನ್ನು ತೆರೆದಾಗ, ಎಲೀಷನ ಸುತ್ತಲೂ ಬೆಟ್ಟದಲ್ಲಿ ಬೆಂಕಿಯ ರಥಗಳೂ, ಕುದುರೆಗಳೂ ತುಂಬಿರುವುದನ್ನು ಅವನು ಕಂಡನು.


ಇದ್ದೋ ಎಂಬವನ ಮಗನಾದ ಅಹೀನಾದಾಬ್ ಮಹನಯಿಮ್ ಎಂಬ ಸ್ಥಳಕ್ಕೆ ಅಧಿಕಾರಿ.


ನೇರನ ಮಗನಾಗಿರುವ ಅಬ್ನೇರನೂ, ಸೌಲನ ಮಗ ಈಷ್ಬೋಶೆತನ ಸೇವಕರೂ ಮಹನಯಿಮಿನಿಂದ ಹೊರಟು ಗಿಬ್ಯೋನಿಗೆ ಬಂದನು.


ಅದೇ ಕಾಲದಲ್ಲಿ ದಿನೇ ದಿನೇ ದೊಡ್ಡ ಸೈನ್ಯವು ದೇವರ ಸೈನ್ಯದ ಹಾಗೆ ಆಗುವವರೆಗೆ, ದಾವೀದನಿಗೆ ಸಹಾಯ ಕೊಡುವುದಕ್ಕೆ ಅವನ ಕಡೆಗೆ ಬರುತ್ತಿದ್ದರು.


ಮಹಿಮೆಯ ಅರಸ ಯಾರು? ಸೇನಾಧೀಶ್ವರ ಯೆಹೋವ ದೇವರೇ ಆಗಿರುತ್ತಾರೆ. ಇವರೇ ಮಹಿಮೆಯ ಅರಸರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು