ನಮಗೂ ನಿಮಗೂ ನಮ್ಮ ತರುವಾಯ ನಮ್ಮ ಸಂತತಿಯವರಿಗೂ ಮಧ್ಯದಲ್ಲಿ ಒಂದು ಸಾಕ್ಷಿ ಉಂಟಾಗಿರುವಂತೆಯೂ ನಾವು ಯೆಹೋವ ದೇವರ ಸನ್ನಿಧಿಯಲ್ಲಿ ದಹನಬಲಿ, ಸಮಾಧಾನದ ಬಲಿ ಮುಂತಾದವುಗಳನ್ನು ಅರ್ಪಿಸಿ ಆರಾಧಿಸುವುದಕ್ಕೆ ನಿಮಗೆ ಗುರುತಾಗಿರುವಂತೆಯೂ, ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ, ‘ಯೆಹೋವ ದೇವರಲ್ಲಿ ನಿಮಗೆ ಭಾಗವಿಲ್ಲ,’ ಎಂದು ಹೇಳದೆ ಇರುವಂತೆಯೂ ಸಾಕ್ಷಿಗಾಗಿ ಕಟ್ಟಿದ್ದೇವೆ ಅಷ್ಟೇ.
ಬಹಳ ಕೇಡುಗಳೂ ವಿಪತ್ತುಗಳೂ ಅವರಿಗೆ ಸಂಭವಿಸುವಾಗ, ಈ ಹಾಡು ಅವರಿಗೆ ವಿರೋಧ ಸಾಕ್ಷಿಯಾಗಿ ಉತ್ತರಕೊಡುವುದು. ಏಕೆಂದರೆ ಅದು ಅವರ ಸಂತತಿಯ ಬಾಯಿಯಲ್ಲಿಂದ ಮರೆತು ಹೋಗುವುದಿಲ್ಲ. ನಾನು ಪ್ರಮಾಣ ಮಾಡಿದ ದೇಶದಲ್ಲಿ ಅವರನ್ನು ತರುವುದಕ್ಕಿಂತ ಮುಂಚೆ ಅವರು ಈ ಹೊತ್ತು ಮಾಡುವ ದುರಾಲೋಚನೆಗಳನ್ನು ನಾನು ಬಲ್ಲೆನು.”