Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 3:5 - ಕನ್ನಡ ಸಮಕಾಲಿಕ ಅನುವಾದ

5 ನೀವು ಇದನ್ನು ತಿಂದ ದಿನದಲ್ಲಿ ನಿಮ್ಮ ಕಣ್ಣುಗಳು ತೆರೆಯುವುವು, ನೀವು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಅರಿತವರಾಗಿ ದೇವರ ಹಾಗೆ ಇರುವಿರಿ. ಇದು ದೇವರಿಗೆ ತಿಳಿದಿದೆ,” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ನೀವು ಇದರ ಹಣ್ಣನ್ನು ತಿಂದ ಕ್ಷಣವೇ ನಿಮ್ಮ ಕಣ್ಣುಗಳು ತೆರೆಯುವವು, ನೀವು ದೇವರುಗಳಂತೆ ಆಗಿ ಒಳ್ಳೆಯದರ ಮತ್ತು ಕೆಟ್ಟದ್ದರ ಬೇಧವನ್ನು ತಿಳಿಯುವಿರಿ, ಇದು ದೇವರಿಗೆ ಚೆನ್ನಾಗಿ ಗೊತ್ತು” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಇದರ ಹಣ್ಣನ್ನು ತಿಂದ ಕೂಡಲೆ ನಿಮ್ಮ ಕಣ್ಣುಗಳು ತೆರೆಯುವುವು, ನೀವು ದೇವರಂತೆ ಆಗಿ ಒಳಿತು - ಕೆಡಕುಗಳನ್ನರಿತ ಜ್ಞಾನಿಗಳು ಆಗಿಬಿಡುವಿರಿ. ಇದು ದೇವರಿಗೆ ಚೆನ್ನಾಗಿ ಗೊತ್ತುಂಟು,” ಎಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು ಅಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ನೀವು ಆ ಮರದ ಹಣ್ಣನ್ನು ತಿಂದರೆ ನಿಮಗೆ ಒಳ್ಳೆಯದರ ಮತ್ತು ಕೆಟ್ಟದ್ದರ ಬಗ್ಗೆ ಜ್ಞಾನ ಬರುತ್ತದೆಯೆಂದು ದೇವರಿಗೆ ಗೊತ್ತಿದೆ. ಅಲ್ಲದೆ ನೀವು ದೇವರಿಗೆ ಸರಿಸಮಾನರಾಗುವಿರಿ” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 3:5
31 ತಿಳಿವುಗಳ ಹೋಲಿಕೆ  

“ಮನುಷ್ಯಪುತ್ರನೇ, ಟೈರಿನ ಆಡಳಿತ ಅಧಿಕಾರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ನೀನು ಗರ್ವದಿಂದ, “ನಾನು ಒಬ್ಬ ದೇವರು ದೇವರ ಸ್ಥಾನದಲ್ಲಿ ಸಮುದ್ರಗಳ ಮಧ್ಯದಲ್ಲಿ ಕುಳಿತುಕೊಂಡಿರುವೆನು,” ಎಂದು ಹೇಳಿಕೊಂಡಿದ್ದೀ. ಆದರೆ ನೀನು ದೇವರಲ್ಲ, ಮನುಷ್ಯನೇ, ಆದರೂ ನಿನ್ನನ್ನು ನೀನೇ ದೇವರಿಗೆ ಸಮನೆಂದು ಭಾವಿಸಿದೆ.


ದೇವರೆಣಿಸಿಕೊಳ್ಳುವ ಎಲ್ಲವನ್ನೂ ಆರಾಧಿಸಲಾಗುವ ಪ್ರತಿಯೊಂದನ್ನೂ ಅವನು ವಿರೋಧಿಸಿ ನಿಲ್ಲುವನು. ದೇವರಿಗೆ ಸಂಬಂಧಿಸಿದ ಇವೆಲ್ಲವುಗಳ ಮೇಲೆ ತನ್ನನ್ನು ಹೆಚ್ಚಿಸಿಕೊಳ್ಳುವನು. ತಾನೇ ದೇವರೆಂದು ಘೋಷಿಸಿ ದೇವರ ಆಲಯದಲ್ಲಿ ಕೂತುಕೊಳ್ಳುವನು.


ಆದರೆ ಒಳ್ಳೆಯದರ, ಕೆಟ್ಟದ್ದರ ತಿಳುವಳಿಕೆಯ ಮರದ ಹಣ್ಣನ್ನು ನೀನು ತಿನ್ನಬಾರದು. ಏಕೆಂದರೆ, ನೀನು ಅದನ್ನು ತಿಂದ ದಿನವೇ ಸಾಯುವಿ,” ಎಂದು ಹೇಳಿದರು.


ಆದರೆ ಹವ್ವಳು ಸರ್ಪದ ಕುಯುಕ್ತಿಗೆ ಸಿಕ್ಕಿಬಿದ್ದು, ಹೇಗೆ ಮೋಸ ಹೋದಳೋ, ಹಾಗೆಯೇ ನಿಮ್ಮ ಮನಸ್ಸು ಕ್ರಿಸ್ತ ಯೇಸುವಿನ ಮೇಲಿರಬೇಕಾದ ಯಥಾರ್ಥತೆಯನ್ನೂ ಶುದ್ಧ ಭಕ್ತಿಯನ್ನೂ ಬಿಟ್ಟುಹೋದೀತೆಂಬ ಭಯ ನನಗುಂಟು.


ಈ ಲೋಕದ ದೇವರು ನಂಬದವರ ಮನಸ್ಸನ್ನು ಕುರುಡುಮಾಡಿರುತ್ತಾನೆ. ಆದ್ದರಿಂದ ದೇವರ ಸ್ವರೂಪವಾಗಿರುವ ಕ್ರಿಸ್ತ ಯೇಸುವಿನ ಸುವಾರ್ತೆಯ ಮಹಿಮೆಯ ಬೆಳಕನ್ನು ಅವರು ಕಾಣಲಾರರು.


ನೀನು ಅವರ ಕಣ್ಣುಗಳನ್ನು ತೆರೆದು, ಅವರನ್ನು ಕತ್ತಲೆಯಿಂದ ಬೆಳಕಿಗೂ ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಸಿ ಪಾಪಕ್ಷಮಾಪಣೆಯನ್ನು ಪಡೆಯುವಂತೆ ಮಾಡಿ, ನನ್ನಲ್ಲಿ ವಿಶ್ವಾಸವಿದ್ದು ಶುದ್ಧೀಕರಣ ಹೊಂದಿದವರ ಮಧ್ಯದಲ್ಲಿ ಹಕ್ಕುಬಾಧ್ಯತೆಯನ್ನು ಪಡೆಯುವಂತೆ ಮಾಡಬೇಕೆಂದು ನಿನ್ನನ್ನು ಕಳುಹಿಸುತ್ತಿದ್ದೇನೆ,’ ಎಂದರು.


ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವೆಲ್ಲಾ ಕತ್ತಲಾಗಿರುವುದು. ನಿನ್ನಲ್ಲಿರುವ ಬೆಳಕೇ ಕತ್ತಲಾಗಿರುವುದಾದರೆ ಅದು ಎಂತಹ ಕಾರ್ಗತ್ತಲಲ್ಲವೇ!


ಯೆಹೋವ ದೇವರು, “ಇಗೋ, ಮನುಷ್ಯನು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ತಿಳಿದು, ನಮ್ಮಲ್ಲಿ ಒಬ್ಬನಂತಾದನಲ್ಲಾ. ಈಗ ಅವನು ಕೈಚಾಚಿ, ಜೀವವೃಕ್ಷದ ಹಣ್ಣನ್ನು ಸಹ ತಿಂದು, ಶಾಶ್ವತವಾಗಿ ಬದುಕುವವನಾಗಬಾರದು,” ಎಂದರು.


ಅದಕ್ಕೆ ಅವನು, “ನಿನ್ನ ಶಬ್ದವನ್ನು ನಾನು ತೋಟದಲ್ಲಿ ಕೇಳಿದೆ. ನಾನು ಬೆತ್ತಲೆಯಾಗಿರುವುದರಿಂದ ಭಯಪಟ್ಟು ಅಡಗಿಕೊಂಡೆನು,” ಎಂದನು.


ಆಗ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತಲೆಯಾಗಿದ್ದೇವೆಂದು ತಿಳಿದು, ಅವರು ಅಂಜೂರದ ಎಲೆಗಳನ್ನು ತೆಗೆದುಕೊಂಡು ತಮಗೆ ತಾವೇ ಉಡುಪುಗಳನ್ನು ಮಾಡಿಕೊಂಡರು.


ಆ ಮೊದಲನೆಯ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡುವ ಅಧಿಕಾರವನ್ನು ಕೊಡಲಾಗಿದ್ದರಿಂದ ಭೂನಿವಾಸಿಗಳನ್ನು ಮೋಸಗೊಳಿಸುತ್ತದೆ. ಭೂಮಿಯ ಮೇಲೆ ವಾಸಿಸುವವರು, ಕತ್ತಿಯಿಂದ ಗಾಯಹೊಂದಿ, ಸಾಯದೆ ಬದುಕಿದ ಮೃಗದ ವಿಗ್ರಹವನ್ನು ಮಾಡಿಸಿಕೊಳ್ಳಬೇಕೆಂದು ಹೇಳುತ್ತದೆ.


ಜನರು ಘಟಸರ್ಪನು ಆ ಮೃಗಕ್ಕೆ ಅಧಿಕಾರವನ್ನು ಕೊಟ್ಟಿದ್ದರಿಂದ, ಆ ಘಟಸರ್ಪನನ್ನು ಆರಾಧಿಸಿದರು. ಇದಲ್ಲದೆ ಆ ಮೃಗವನ್ನೂ ಆರಾಧಿಸಿ, “ಈ ಮೃಗಕ್ಕೆ ಸಮಾನರು ಯಾರು? ಇದರೊಡನೆ ಯುದ್ಧಮಾಡಬಲ್ಲವರು ಯಾರು?” ಎಂದರು.


ಆಗ ಅರಸನು, “ನಾನು ನನ್ನ ಪರಾಕ್ರಮದ ಬಲದಿಂದಲೂ, ನನ್ನ ಮಹಿಮೆಯ ಕೀರ್ತಿಗಾಗಿಯೂ ಕಟ್ಟಿಸಿದ ಮಹಾ ಬಾಬಿಲೋನು ಇದಲ್ಲವೇ?” ಎಂದನು.


ಉನ್ನತವಾದ ಮೇಘ ಮಂಡಲದ ಮೇಲೆ ಏರಿ, ಮಹೋನ್ನತರಿಗೆ ಸಮಾನನಾಗುವೆನು.”


ಆಗ ಇಸ್ರಾಯೇಲಿನ ಅರಸನು ಹೆಚ್ಚು ಕಡಿಮೆ ನಾನೂರು ಮಂದಿ ಪ್ರವಾದಿಗಳನ್ನು ಕೂಡಿಸಿ, ಅವರಿಗೆ, “ನಾನು ಗಿಲ್ಯಾದಿನ ರಾಮೋತಿನ ಮೇಲೆ ಯುದ್ಧಕ್ಕೆ ಹೋಗಬಹುದೋ, ಬೇಡವೋ?” ಎಂದು ಕೇಳಿದನು. ಅದಕ್ಕವರು, “ಹೋಗು, ಯೆಹೋವ ದೇವರು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದರು.


ನಿನ್ನ ದೇವರಾದ ಯೆಹೋವ ದೇವರ ಹೆಸರನ್ನು ದುರುಪಯೋಗಮಾಡಬಾರದು. ಏಕೆಂದರೆ ಯೆಹೋವ ದೇವರು ತಮ್ಮ ಹೆಸರನ್ನು ದುರುಪಯೋಗಮಾಡುವವರನ್ನು ಶಿಕ್ಷಿಸದೆ ಬಿಡುವುದಿಲ್ಲ.


ಆಗ ಫರೋಹನು, “ನಾನು ಆತನ ಮಾತಿಗೆ ವಿಧೇಯನಾಗಿ ಇಸ್ರಾಯೇಲರನ್ನು ಕಳುಹಿಸಿಬಿಡುವಂತೆ ಆ ಯೆಹೋವ ಯಾರು? ಆ ಯೆಹೋವ ದೇವರನ್ನು ನಾನರಿಯೆನು. ಇಸ್ರಾಯೇಲರನ್ನೂ ಕಳುಹಿಸುವುದಿಲ್ಲ,” ಎಂದನು.


ರಾಜ್ಯದ ಎಲ್ಲಾ ದೇಶಾಧಿಪತಿಗಳೂ, ರಾಜ್ಯಪಾಲರೂ, ನಾಯಕರೂ, ಉಪರಾಜರೂ, ಆಲೋಚನೆಗಾರರೂ ಒಟ್ಟುಗೂಡಿ ಆಲೋಚಿಸಿದ್ದೇನೆಂದರೆ ಅರಸನೇ, ಯಾರಾದರೂ ಮೂವತ್ತು ದಿವಸಗಳವರೆಗೂ ನಿನ್ನನ್ನು ಬಿಟ್ಟು ಬೇರೆ ಯಾವ ದೇವರಿಗಾಗಲಿ, ಮನುಷ್ಯರಿಗಾಗಲಿ ಪ್ರಾರ್ಥನೆ ಮಾಡಿದ್ದಾದರೆ ಅಂಥವರು ಸಿಂಹಗಳ ಗವಿಗೆ ಹಾಕಲಾಗುವುದು ಎಂಬ ರಾಜಾಜ್ಞೆಯನ್ನು ವಿಧಿಸಿ, ಸ್ಥಿರ ಕಟ್ಟಳೆಯನ್ನು ಕೊಡತಕ್ಕದ್ದು.


ನಿನ್ನನ್ನು ಕೊಲ್ಲಲು ಬರುವವನ ಮುಂದೆ ಇನ್ನು, “ನಾನು ದೇವರು,” ಎಂದು ಹೇಳುವೆಯೋ? ನಿನ್ನನ್ನು ಕೊಲ್ಲುವವನ ಕೈಯಲ್ಲಿ ನೀನು ದೇವರಲ್ಲ ನರಪ್ರಾಣಿಯೇ;


ಏಕೆಂದರೆ ನಾನು ಯಾವನನ್ನು ದುಃಖಪಡಿಸಲಿಲ್ಲವೋ, ಆ ನೀತಿವಂತರ ಹೃದಯಕ್ಕೆ ನೀವು ಸುಳ್ಳಾಡಿ ದುಃಖಪಡಿಸಿದ್ದೀರಿ; ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು, ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವರನ್ನು ಪ್ರೋತ್ಸಾಹಿಸಿದ್ದೀರಿ.


ಅವರು ಹೀಗೆನ್ನುತ್ತಾರೆ, “ನಾವು ನಮ್ಮ ನಾಲಿಗೆಯಿಂದ ಜಯಿಸುವೆವು; ನಮ್ಮ ತುಟಿಗಳೇ ನಮಗೆ ಸಂರಕ್ಷಣೆ ನಮ್ಮ ಮೇಲೆ ಒಡೆಯನು ಯಾರು?”


ಆದ್ದರಿಂದ ಹಿಜ್ಕೀಯನು ನಿಮ್ಮನ್ನು ವಂಚಿಸಿ ನಿಮ್ಮನ್ನು ದಾರಿತಪ್ಪಿಸಲು ಬಿಡಬೇಡಿರಿ. ಅವನ ಮಾತು ನಂಬಬೇಡಿರಿ. ನನ್ನ ಕೈಯೊಳಗಿಂದಲೂ, ನನ್ನ ಪಿತೃಗಳ ಕೈಯೊಳಗಿಂದಲೂ ತಮ್ಮ ಜನರನ್ನು ಬಿಡಿಸಲು ಸಕಲ ಜನಾಂಗ, ರಾಜ್ಯಗಳ ದೇವರುಗಳಲ್ಲಿ ಸಾಮರ್ಥ್ಯವುಳ್ಳ ದೇವರು ಒಂದೂ ಇಲ್ಲ. ನನ್ನ ಕೈಯಿಂದ ನಿಮ್ಮನ್ನು ಬಿಡಿಸಲು ನಿಮ್ಮ ದೇವರು ಎಷ್ಟರವನು? ಅನ್ನುತ್ತಾನೆ,” ಎಂದು ಹೇಳಿದರು.


ನೀನು ಮಾತನಾಡಿ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಈಜಿಪ್ಟಿನ ಅರಸನಾದ ಫರೋಹನೇ, ತನ್ನ ನದಿಗಳ ಮಧ್ಯದಲ್ಲಿ ಮಲಗಿಕೊಂಡು ಈ ನೈಲ್ ನದಿ ನನ್ನದು, ನಾನೇ ಅದನ್ನು ನನಗೋಸ್ಕರ ಮಾಡಿಕೊಂಡಿದ್ದೇನೆಂದು ಹೇಳಿಕೊಂಡ ದೊಡ್ಡ ಘಟಸರ್ಪವೇ, ಇಗೋ, ನಾನು ನಿನಗೆ ವಿರುದ್ಧವಾಗಿದ್ದೇನೆ.


“ಮನುಷ್ಯಪುತ್ರನೇ, ಟೈರಿನ ಅರಸನ ವಿಷಯದಲ್ಲಿ ಶೋಕಗೀತೆಯನ್ನೆತ್ತಿ ಅವನಿಗೆ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ನೀನು ಸರ್ವಸುಲಕ್ಷಣ ಶಿರೋಮಣಿ. ಸಂಪೂರ್ಣಜ್ಞಾನಿ, ಪರಿಪೂರ್ಣ ಸುಂದರವಾದ ನೀನು ಲೆಕ್ಕವನ್ನು ಮುದ್ರಿಸುತ್ತೀ.


ಯೆಹೋವ ದೇವರು ನೋಟಕ್ಕೆ ರಮ್ಯವೂ ಊಟಕ್ಕೆ ಒಳ್ಳೆಯವೂ ಆದ ಎಲ್ಲಾ ಮರಗಳನ್ನೂ ಭೂಮಿಯಲ್ಲಿ ಬೆಳೆಯುವಂತೆ ಮಾಡಿದರು. ತೋಟದ ಮಧ್ಯದಲ್ಲಿ ಜೀವದ ಮರವನ್ನೂ ಒಳ್ಳೆಯದರ ಮತ್ತು ಕೆಟ್ಟದ್ದರ ತಿಳುವಳಿಕೆಯ ಮರವನ್ನೂ ಬೆಳೆಯುವಂತೆ ಮಾಡಿದರು.


ಮೊದಲು ಯುದ್ಧವನ್ನು ಅರಿಯದೆ ಇದ್ದ ಇಸ್ರಾಯೇಲಿನ ಸಂತತಿಗಳವರು ಅದನ್ನು ಕೂಡ ಕಲಿತುಕೊಳ್ಳುವುದಕ್ಕೂ ಯೆಹೋವ ದೇವರು ಉಳಿಸಿದ ಜನಾಂಗಗಳು ಯಾವುವೆಂದರೆ:


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು